ಜನ್ಮಾಷ್ಟಮಿಯ ಮಂಗಳಕರ ಹಬ್ಬ ಬಂದಿದೆ. ಪ್ರಪಂಚದಾದ್ಯಂತ ಕೃಷ್ಣ ಭಕ್ತರು ಈ ದಿನ ಉಪವಾಸವನ್ನು ಆಚರಿಸುತ್ತಾರೆ. ಜನ್ಮಾಷ್ಟಮಿಯಂದು ಉಪವಾಸ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ನಿಯಮಗಳಿವೆ.
ಭಗವಾನ್ ಕೃಷ್ಣನ ಜನ್ಮ ವಾರ್ಷಿಕೋತ್ಸವವನ್ನು ಪ್ರಪಂಚದಾದ್ಯಂತ ಕೃಷ್ಣ ಭಕ್ತರು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ ಉಪವಾಸ ಕೈಗೊಳ್ಳುವುದು, ಸ್ವಾಮಿಯ ಸೇವೆಯಲ್ಲಿ ತೊಡಗುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಭಕ್ತರು 24 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ ಮತ್ತು ಭಗವಾನ್ ಕೃಷ್ಣನಿಗೆ ತಯಾರಿಸಿದ ಭೋಗ್ ಅನ್ನು ಸೇವಿಸುವ ಮೂಲಕ ಅದನ್ನು ಮುರಿಯುತ್ತಾರೆ. ಶ್ರೀ ಕೃಷ್ಣನು ಮಧ್ಯರಾತ್ರಿಯ ಸಮಯದಲ್ಲಿ ಜನಿಸಿದ ಎಂಬ ಕಾರಣಕ್ಕೆ ಮಧ್ಯರಾತ್ರಿಯಲ್ಲಿ ಉಪವಾಸವನ್ನು ಮುರಿಯಲಾಗುತ್ತದೆ.
ಜನ್ಮಾಷ್ಟಮಿ ಉಪವಾಸವನ್ನು ಆಚರಿಸುವ ಪ್ರತಿಯೊಬ್ಬರೂ ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಪ್ರಯೋಜನ ಪಡೆಯುತ್ತಾರೆ. ಕೃಷ್ಣ ಜನ್ಮಾಷ್ಟಮಿ ಉಪವಾಸವನ್ನು ಆಚರಿಸುವವರು ಯಾವಾಗಲೂ ಸಮೃದ್ಧಿ ಮತ್ತು ಸಂಪತ್ತನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ. ಕೃಷ್ಣ ಜನ್ಮಾಷ್ಟಮಿ ಉಪವಾಸವು ಮೋಕ್ಷವನ್ನು ಸಾಧಿಸಲು ಸಂಬಂಧಿಸಿದೆ, ಇದನ್ನು ನಿರ್ವಾಣ ಎಂದೂ ಕರೆಯುತ್ತಾರೆ. ಅಂದರೆ ಕರ್ಮದ ಚಕ್ರಗಳಿಂದ ತಪ್ಪಿಸಿಕೊಳ್ಳುವುದು. ಜನ್ಮಾಷ್ಟಮಿಯಂದು ಉಪವಾಸ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ನಿಯಮಗಳಿವೆ.
1. ಬೇಗ ಎದ್ದೇಳಿ(Wake up early)
ನಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಸುಧಾರಿಸಲು ಜನ್ಮಾಷ್ಟಮಿಯಂದು ಬೇಗ ಎದ್ದೇಳಬೇಕು. ಇದು ದಿನವನ್ನು ಸರಿಯಾಗಿ ಪ್ರಾರಂಭಿಸಲು ನಮಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ದೈನಂದಿನ ಕಾರ್ಯಗಳನ್ನು ಮುಂಚಿತವಾಗಿ ನಿಗದಿಪಡಿಸಲು ಅನುಕೂಲ ಮಾಡಿಕೊಡುತ್ತದೆ. ಮುಹೂರ್ತದಲ್ಲಿ ಪೂಜೆ ಮತ್ತು ಆಚರಣೆಗಳನ್ನು ಮಾಡಲು, ಬೇಗನೆ ಏಳಲು ಸಲಹೆ ನೀಡಲಾಗುತ್ತದೆ.
2. ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಿ(Donate food and clothes)
ಅನ್ನದಾನ, ವಸ್ತ್ರದಾನ ಮಾಡುವುದು ಉದಾತ್ತ ಕಾರ್ಯ. ಇದು ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ತರುತ್ತದೆ. ಭಗವಾನ್ ಕೃಷ್ಣನು ಭಗವಾನ್ ವಿಷ್ಣುವಿನ 8ನೇ ಅವತಾರವಾಗಿದ್ದಾನೆ. ಅವನ ಬಾಲ್ಯದ ಕಥೆಗಳ ಆಧಾರದ ಮೇಲೆ ಹೇಳುವುದಾದರೆ ಅವನು ಎಂದಿಗೂ ಸಾಮಾಜಿಕ ಪೂರ್ವಾಗ್ರಹದ ಆಧಾರದ ಮೇಲೆ ತಾರತಮ್ಯ ಮಾಡಲಿಲ್ಲ ಮತ್ತು ಯಾವಾಗಲೂ ಜನರಿಗೆ ಸಹಾಯ ಮಾಡುತ್ತಾನೆ. ಆದ್ದರಿಂದ, ಜನ್ಮಾಷ್ಟಮಿ ಸಂದರ್ಭದಲ್ಲಿ ಜನರು ಅಗತ್ಯವಿರುವವರಿಗೆ ದಾನ ಮಾಡಬೇಕು.
Janmashtami 2022 : ಜನ್ಮಾಷ್ಟಮಿಯಂದು ತಾಯಿ ಲಕ್ಷ್ಮಿ ಒಲಿಸಿಕೊಳ್ಳೋದು ಹೇಗೆ?
3. 'ಸಾತ್ವಿಕ ಭೋಜನ' ಸೇವಿಸಿ(Consume 'Satvik Bhojan')
ಜನ್ಮಾಷ್ಟಮಿಯಂದು ಸಾತ್ವಿಕ ಭೋಜನವನ್ನು ಮಾತ್ರ ಸೇವಿಸಬೇಕು. ಈ ದಿನದಂದು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಆಹಾರದಲ್ಲಿ ಬಳಸಬಾರದು, ಏಕೆಂದರೆ ಬೆಳ್ಳುಳ್ಳಿ ಈರುಳ್ಳಿಯನ್ನು ತಾಮಸಿಕ ವರ್ಗದಲ್ಲಿ ಇರಿಸಲಾಗುತ್ತದೆ. ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು.
4. ಪ್ರಾಣಿಗಳನ್ನು ನೋಯಿಸಬೇಡಿ(Don't hurt animals)
ಶ್ರೀಕೃಷ್ಣನು ಪ್ರಾಣಿಗಳನ್ನು ಪ್ರೀತಿಸುತ್ತಾನೆ. ಆತ ಹಸು ಮೇಯಿಸುತ್ತಿದ್ದ ಮತ್ತು ಅವುಗಳ ಬಗ್ಗೆ ವಿಶೇಷ ಅಕ್ಕರೆ ಹೊಂದಿದ್ದ. ಆದ್ದರಿಂದ, ಜನ್ಮಾಷ್ಟಮಿಯಂದು ಪ್ರಾಣಿಗಳನ್ನು ನೋಯಿಸುವುದನ್ನು ಮೆಚ್ಚನಾ ಪರಮಾತ್ಮನು. ಎಲ್ಲ ಜೀವಿಗಳನ್ನು ಗೌರವದಿಂದ ಕಾಣಿ. ಜನ್ಮಾಷ್ಟಮಿಯ ದಿನದಂದು ಪ್ರಾಣಿಗಳಿಗೆ ಆಹಾರ ನೀಡಿ ಮತ್ತು ಪಕ್ಷಿಗಳಿಗೆ ನೀರು ಇಡಿ.
5. ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ
ಉಪವಾಸದ ಸಮಯದಲ್ಲಿ, ದೇಹವನ್ನು ಸಕ್ರಿಯವಾಗಿಡಲು ಅನೇಕ ಜನರು ಚಹಾ ಅಥವಾ ಕಾಫಿ ಸೇವಿಸುತ್ತಾರೆ. ತಜ್ಞರ ಪ್ರಕಾರ, ಎರಡೂ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಅವು ಆಮ್ಲೀಯತೆಗೆ ಕಾರಣವಾಗುತ್ತವೆ ಮತ್ತು ಉಪವಾಸದ ಸಮಯದಲ್ಲಿ ಅಸ್ವಸ್ಥತೆ, ಭಾರ ಮತ್ತು ತಲೆನೋವು ಉಂಟು ಮಾಡಬಹುದು. ನಿಮ್ಮ ಆಹಾರದಲ್ಲಿ ತಾಜಾ ಜ್ಯೂಸ್ ಅಥವಾ ತೆಂಗಿನ ನೀರನ್ನು ಹೊಂದಲು ಆದ್ಯತೆ ನೀಡಿ.
ತುಲಾ ರಾಶಿಯಲ್ಲಾಗ್ತಿದೆ ಅಪರೂಪದ ಬದಲಾವಣೆ, ಯಾರಿಗೆ ಲಾಭ, ಯಾರಿಗೆ ನಷ್ಟ?
6. ಮಾಂಸಾಹಾರಿ ಆಹಾರವನ್ನು ತಪ್ಪಿಸಿ(Avoid non-veg food)
ಹೆಚ್ಚಿನ ಹಿಂದೂ ಹಬ್ಬಗಳಲ್ಲಿ ಹಣ್ಣುಗಳು ಮತ್ತು ಸಸ್ಯಾಹಾರವನ್ನು ಮಾತ್ರ ಸೇವಿಸಲಾಗುತ್ತದೆ. ಉಪವಾಸದ ಸಮಯದಲ್ಲಿ, ಮಾಂಸ ಅಥವಾ ಇತರ ಮಾಂಸಾಹಾರಿ ಆಹಾರವನ್ನು ತಿನ್ನುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
7. ಹಾಲು ಮತ್ತು ಮೊಸರು(Milk and curd)
ಜನ್ಮಾಷ್ಟಮಿ ಆಚರಣೆಗೆ ಹಾಲು ಮತ್ತು ಮೊಸರು ಸೇವನೆ ಅತ್ಯಗತ್ಯ. ಅದಿಲ್ಲದೇ ಹಬ್ಬ ಅಪೂರ್ಣ. ಉಪವಾಸದ ಸಮಯದಲ್ಲಿ ನೀವು ತಾಜಾ ಹಣ್ಣಿನ ಶೇಕ್ ಸೇವಿಸಬಹುದು ಅಥವಾ ನೀವು ಸಿಹಿಯಾದ ಲಸ್ಸಿ, ಮಜ್ಜಿಗೆ ಅಥವಾ ಗುಲಾಬಿ ಹಾಲನ್ನು ಹೀರಬಹುದು.