ಜೀವಿಸಲು ಆಹಾರ ಬಹಳ ಮುಖ್ಯ. ಮೂರು ಹೊತ್ತು ಸರಿಯಾದ ಆಹಾರ ನಮಗೆ ಸಿಗ್ತಿದೆ ಅಂದ್ರೆ ಅನ್ನಪೂರ್ಣೆ ಆಶೀರ್ವಾದ ನಮ್ಮ ಮೇಲಿದೆ ಎಂದೇ ಅರ್ಥ. ಆದ್ರೆ ನಾವು ಮಾಡುವ ಕೆಲ ಕೆಲಸಗಳಿಂದ ತಾಯಿ ಮುನಿಸಿಕೊಳ್ತಾಳೆ.
ಹಿಂದೂ ಧರ್ಮದಲ್ಲಿ ಅನ್ನಪೂರ್ಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತಾಯಿ ಸ್ಥಾನದಲ್ಲಿ ಅನ್ನಪೂರ್ಣೆಯನ್ನು ನೋಡಲಾಗುತ್ತದೆ. ಅನ್ನಪೂರ್ಣೆಯನ್ನು ಸಂಪತ್ತು ಮತ್ತು ಧಾನ್ಯದ ದೇವತೆ ಎಂದೇ ನಂಬಲಾಗಿದೆ. ಅನ್ನಪೂರ್ಣೆ ತೃಪ್ತಳಾದ್ರೆ ಮನೆಯಲ್ಲಿ ಯಾವಾಗ್ಲೂ ಧಾನ್ಯಗಳು ತುಂಬಿರುತ್ತವೆ. ಹೊಟ್ಟೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹಿಂದುಗಳು ನಂಬಿದ್ದಾರೆ.
ಅನೇಕರ ಅಡುಗೆ ಮನೆ (Kitchen) ಯಲ್ಲಿ ನೀವು ಅನ್ನಪೂರ್ಣೆ (Annapurna) ಯ ಫೋಟೋ (Photo) ವನ್ನು ನೋಡಬಹುದು. ಅಡುಗೆ ಮನೆ ಅಥವಾ ಮನೆಯಲ್ಲಿ ಅನ್ನಪೂರ್ಣೆ ಫೋಟೋ ಇಡುವುದು ಮಂಗಳಕರ. ಅನ್ನಪೂರ್ಣೆ ಫೋಟೋ ಇರುವ ಮನೆಯಲ್ಲಿ ಯಾವಾಗಲೂ ಆಹಾರ (Food) ಧಾನ್ಯಗಳಿಗೆ ಕೊರತೆಯಾಗುವುದಿಲ್ಲ. ಆದ್ರೆ ನೀವು ಅನ್ನಪೂರ್ಣೆ ಫೋಟೋ ಇಡುವಾಗ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ತಪ್ಪಾದ ಸ್ಥಾನದಲ್ಲಿ ತಾಯಿ ಫೋಟೋ ಇಟ್ಟರೆ ಸಮಸ್ಯೆ ಎದುರಿಸಬೇಕಾಗುತ್ತದೆ. ನಾವಿಂದು ತಾಯಿ ಅನ್ನಪೂರ್ಣೆ ಫೋಟೋವನ್ನು ಅಡುಗೆ ಮನೆಯಲ್ಲಿ ಎಲ್ಲಿ ಇಡಬೇಕು ಎನ್ನುವ ಬಗ್ಗೆ ನಿಮಗೆ ಹೇಳ್ತೆವೆ.
ಅಡುಗೆ ಮನೆಯಲ್ಲಿರಲಿ ಅನ್ನಪೂರ್ಣೆ ಫೋಟೋ :
ಈ ಸ್ಥಳದಲ್ಲಿ ತಾಯಿ ಫೋಟೋ ಹಾಕಿ : ಅನ್ನಪೂರ್ಣೆಯ ಫೋಟೋವನ್ನು ಅಡುಗೆಮನೆಯಲ್ಲಿ ಬೆಂಕಿಯ ಕೋನದಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಅಡುಗೆ ಮಾಡಲು ಅಗ್ನಿ ಅವಶ್ಯಕ. ಬೆಂಕಿಯಿಲ್ಲದೆ ಅಡುಗೆ ಮಾಡಲು ಸಾಧ್ಯವಿಲ್ಲ. ಅನ್ನಪೂರ್ಣೆ ಫೋಟೋವನ್ನು ಅಗ್ನಿಯ ಕೋನದಲ್ಲಿ ಇಟ್ಟರೆ, ಆಕೆ ಸಂತೋಷ, ಅದೃಷ್ಟ ಮತ್ತು ಸಮೃದ್ಧಿ ನೀಡುತ್ತಾಳೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಧಾನ್ಯಗಳ ಪಾತ್ರದ ಬಳಿ ಫೋಟೋ ಇಡಿ : ಆಗ್ನೇಯ ದಿಕ್ಕಿನಲ್ಲಿ ಮಾತ್ರವಲ್ಲದೆ ಅಡುಗೆ ಮನೆಯ ಇನ್ನು ಕೆಲ ಜಾಗದಲ್ಲಿ ತಾಯಿ ಅನ್ನಪೂರ್ಣೆ ಫೋಟೋವನ್ನು ಇಡಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಅನ್ನಪೂರ್ಣೆ ಅದೃಷ್ಟ, ಆಹಾರ ಮತ್ತು ಸಂಪತ್ತು ನೀಡಬೇಕೆಂದ್ರೆ ನೀವು ನಿಮ್ಮ ಅಡುಗೆ ಮನೆಯ ಧಾನ್ಯಗಳನ್ನು ಇಡುವ ಜಾಗದಲ್ಲಿ ಅನ್ನಪೂರ್ಣೆ ಫೋಟೋ ಹಾಕಬೇಕು. ಇದ್ರಿಂದ ನಿಮ್ಮ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುವ ಜೊತೆಗೆ ಕುಟುಂಬಸ್ಥರ ಆರೋಗ್ಯದಲ್ಲಿ ಚೇತರಿಕೆಯನ್ನು ನೀವು ಕಾಣಬಹುದಾಗಿದೆ.
Hindu Religion : ಮಹಿಳೆ ಜನಿವಾರ ಧರಿಸಬಾರಾದಾ?
ತಾಯಿಗೆ ಪ್ರಿಯವಾದ ವಸ್ತುವಿನ ಬಳಿ ಇಡಿ ಫೋಟೋ : ತಾಯಿ ಅನ್ನಪೂರ್ಣೆಗೆ ಹೆಸರು ಬೇಳೆ ತುಂಬಾ ಪ್ರಿಯ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ನೀವು ಅನ್ನಪೂರ್ಣೆ ಫೋಟೋ ಬಳಿ ಹೆಸರು ಬೇಳೆಯನ್ನು ಇಡಬಹುದು. ಇದಲ್ಲದೆ ಅನ್ನಪೂರ್ಣೆಯ ಫೋಟೋದ ಮುಂದೆ ಬೆಂಡೆಕಾಯಿ ತುಂಬಿದ ಬಟ್ಟಲನ್ನು ಇಟ್ಟು, ನಂತರ ಅದನ್ನು ಹಸುವಿಗೆ ಆಹಾರವಾಗಿ ನೀಡಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ತಾಯಿಯ ಆಶೀರ್ವಾದ ಮನೆಯ ಮೇಲಿರುತ್ತದೆ. ಕುಟುಂಬದ ಪ್ರತಿಯೊಬ್ಬರ ಮೇಲೆ ತಾಯಿಯ ಕೃಪೆಯಿರುತ್ತದೆ.
ಅಡುಗೆ ಮನೆಯ ಈ ಸ್ಥಳದಲ್ಲಿ ಅನ್ನಪೂರ್ಣೆ ಫೋಟೋ ಬೇಡ : ಅನ್ನಪೂರ್ಣೆ ಫೋಟೋವನ್ನು ಅಡುಗೆ ಮನೆಯಲ್ಲಿಟ್ಟರೆ ಶುಭ ಎನ್ನುವ ಕಾರಣಕ್ಕೆ ಎಲ್ಲೆಂದರಲ್ಲಿ ಇಡುವುದು ಸೂಕ್ತವಲ್ಲ. ಮುರಿದ, ಹಾಳಾದ ಪಾತ್ರೆ ಮುಂದೆ ಅಥವಾ ಅಕ್ಕಪಕ್ಕ ಅನ್ನಪೂರ್ಣೆ ಫೋಟೋವನ್ನು ಇಡಬೇಡಿ. ಹಾಗೆಯೇ ಬೇಸಿನ್ ಬಳಿಯೂ ಫೋಟೋ ಇಡಬೇಡಿ. ಎಂಜಲಾದ ಬಟ್ಟಲು, ಹಳಸಿದ ಆಹಾರ, ಕೊಳಕು ಜಾಗದಲ್ಲಿ ಅನ್ನಪೂರ್ಣೆ ಫೋಟೋ ಇಟ್ಟರೆ ಅಶುಭ ಫಲ ನಿಮಗೆ ಸಿಗುತ್ತದೆ. ಎಂದಿಗೂ ಇಂಥ ಸ್ಥಳದಲ್ಲಿ ಅನ್ನಪೂರ್ಣೆ ಫೋಟೋ ಇಡಬೇಡಿ.
ಪೂಜೆ ಮಾಡೋ ಜಾಗದಲ್ಲಿ ಇವನ್ನೆಲ್ಲ ಇಡ್ಬೇಡಿ, ಮೆಚ್ಚೋಲ್ಲ ದೇವರು!
ಅನ್ನಪೂರ್ಣೆ ಫೋಟೋ ಮುಂದೆ ಇದನ್ನಿಡಿ : ನಿಮ್ಮ ಅಡುಗೆ ಮನೆಯಲ್ಲಿ ಅನ್ನಪೂರ್ಣೆ ಫೋಟೋ ಕೆಟ್ಟ ಸ್ಥಳದಲ್ಲಿದ್ದರೆ ಅದನ್ನು ಇಂದೇ ಬದಲಿಸಿ. ಹಾಗೆಯೇ ಪ್ರತಿ ದಿನ ಅನ್ನಪೂರ್ಣೆ ಫೋಟೋಕ್ಕೆ ಪೂಜೆ ಮಾಡಿ. ಸಾಧ್ಯವಿಲ್ಲವೆಂದಾದ್ರೆ ಅನ್ನಪೂರ್ಣೆ ಫೋಟೋ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.