ಊಟ ಮಾಡುವಾಗ ರೂಲ್ಸ್ ಫಾಲೋ ಮಾಡಿದ್ರೆ ನಿರೋಗಿ ಆಗ್ತಿರಾ..

By Suvarna News  |  First Published Jan 11, 2023, 3:01 PM IST

ಹಸಿವಾಗಿದೆ ಅಂತಾ ಸಿಕ್ಕಿದ್ದನ್ನು ತಿಂದಿರ್ತೇವೆ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಆಹಾರ ಸೇವನೆ ಮಾಡೋದು ಒಳ್ಳೆಯದಲ್ಲ. ಊಟ ಮಾಡೋಕೆ ಕೆಲ ನಿಯಮವಿದೆ. ಅದನ್ನು ಪಾಲಿಸಿದ್ರೆ ನಿಮಗೆ ಯಾವುದೇ ಸಮಸ್ಯೆ ಕಾಡೋದಿಲ್ಲ.
 


ಶಾಸ್ತ್ರಗಳಲ್ಲಿ ನಿತ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಶಾಸ್ತ್ರವನ್ನು ಸುಖಾಸುಮ್ಮನೆ ಮಾಡಿಲ್ಲ. ಪ್ರತಿಯೊಂದು ಶಾಸ್ತ್ರಕ್ಕೂ ಅದರದೆ ಆದ ಅರ್ಥ, ಮಹತ್ವ ಹಾಗೂ ಕಾರಣವಿದೆ. ಸಂಜೆ ಸಮಯದಲ್ಲಿ ಮಲಗಬಾರದು, ಗುರುವಾರ ತಲೆ ಸ್ನಾನ ಮಾಡಬಾರದು ಎಂಬುದ್ರಿಂದ ಹಿಡಿದು ಮನೆಗೆ ಬಂದ ತಕ್ಷಣ ಕೈ ಕಾಲುಗಳನ್ನು ತೊಳೆದು ಒಳಗೆ ಹೋಗಬೇಕು ಎನ್ನುವವರೆಗೆ ಪ್ರತಿಯೊಂದು ಶಾಸ್ತ್ರವೂ ಮಹತ್ವ ಪಡೆದಿದೆ. ನಮ್ಮ ನಿತ್ಯ ಜೀವನದಲ್ಲಿ ಈ ಶಾಸ್ತ್ರಗಳನ್ನು ನಾವು ಪಾಲಿಸಿದ್ರೆ ಸಾಕಷ್ಟು ಲಾಭವನ್ನು ಪಡೆಯಬಹುದು.

ಬಾಯಿಗೆ ರುಚಿ ಎನ್ನುವ ಕಾರಣಕ್ಕೆ ಮಾತ್ರ ನಾವು ಆಹಾರ (Food) ಸೇವನೆ ಮಾಡೋದಿಲ್ಲ. ತಿಂದ ಆಹಾರ ನಮ್ಮ ದೇಹ (Body) ಕ್ಕೆ ಹಾಗೂ ಮನಸ್ಸಿ (Mind ) ಗೆ ಪ್ರಯೋಜನ ನೀಡಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಗ್ರಂಥಗಳಲ್ಲಿ ಆಹಾರಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಮಾಡಲಾಗಿದೆ. ಊಟ (Lunch)ದ ಸಮಯದಲ್ಲಿ ಆ ನಿಯಮಗಳನ್ನು ಪಾಲನೆ ಮಾಡಿದ್ರೆ ನಾವು ತಿಂದ ಆಹಾರ ನಮಗೆ ಪ್ರಯೋಜನ ನೀಡುತ್ತದೆ. ನಾವಿಂದು ಊಟದ ಸಮಯದಲ್ಲಿ ನಾವು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.

ರಸ್ಕ್ ಟೇಸ್ಟಿ ಅಂತ ನೀವೂ ತಿಂದು ಮಕ್ಕಳಿಗೂ ಕೊಡುತ್ತೀರಾ? ಆರೋಗ್ಯಿದು ಅಪಾಯ

Latest Videos

undefined

ಊಟಕ್ಕಿಂತ ಮೊದಲು ಈ ಶಾಸ್ತ್ರ ಪಾಲನೆ ಮಾಡಿ :
ಆಹಾರ ಸೇವನೆ ಮೊದಲು ಮಂತ್ರ ಪಠಣ :
ಊಟ ಸೇವಿಸುವ ಮೊದಲು ಭೋಜನ ಮಂತ್ರವನ್ನು ಪಠಿಸಬೇಕು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಯಾಕೆ ಮಂತ್ರ ಹೇಳಿ ನಂತ್ರ ಊಟ ಮಾಡ್ಬೇಕು ಎಂದು ಕೆಲವರು ಪ್ರಶ್ನೆ ಮಾಡ್ತಾರೆ. ಭೋಜನ ಮಂತ್ರವನ್ನು ಪಠಿಸಿ  ನಂತರ ಆಹಾರ ಸೇವನೆ ಶುರು ಮಾಡಿದ್ರೆ ತಿಂದ ಆಹಾರ ಮನಸ್ಸಿನ ಆರೋಗ್ಯವನ್ನು ವೃದ್ಧಿಸುತ್ತದೆ. ಮೆದುಳಿಗೆ ಇದು ಪ್ರಯೋಜನಕಾರಿಯಾಗಿದೆ. ಆಹಾರದಲ್ಲಿರುವ ಯಾವುದೇ ನಕಾರಾತ್ಮಕ ಅಂಶವು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ದೇವರ ಕೃಪೆಯಿಂದ ನಮಗೆ ಆಹಾರ ಸಿಗ್ತಿದೆ. ದೇವರಲ್ಲಿ ಕ್ಷಮೆ ಕೇಳಲು ಭೋಜನ ಮಂತ್ರವನ್ನು ಪಠಿಸಬೇಕು ಎನ್ನಲಾಗುತ್ತದೆ. ಹಾಗಾಗಿ ಪ್ರತಿ ಬಾರಿ ಭೋಜನ ಸೇವನೆ ಮಾಡುವಾಗ್ಲೂ ನೀವು ಭೋಜನ ಮಂತ್ರವನ್ನು ಪಠಿಸಿ.

ಆಹಾರ ಸೇವನೆ ಮಾಡುವ ಜಾಗ : ಆಹಾರವನ್ನು ಎಲ್ಲಿ ಕುಳಿತು ಸೇವನೆ ಮಾಡ್ಬೇಕು ಎನ್ನುವ ಬಗ್ಗೆಯೂ ಗ್ರಂಥಗಳಲ್ಲಿ ಹೇಳಲಾಗಿದೆ. ಆಹಾರವನ್ನು ನಾವು ನೆಲದ ಮೇಲೆ ಕುಳಿತು ಸೇವನೆ ಮಾಡ್ಬೇಕು. ದೇಹವು ನೇರವಾಗಿ ಭೂಮಿಯ ಸಂಪರ್ಕಕ್ಕೆ ಬಂದಾಗ, ಭೂಮಿಯ ಅಲೆಗಳು ಕಾಲ್ಬೆರಳುಗಳ ಮೂಲಕ ಇಡೀ ದೇಹಕ್ಕೆ ಹರಡುತ್ತವೆ. ಈ ಅಲೆಗಳು ನಿಮ್ಮ ಆಹಾರದ ಜೊತೆಗೆ ದೇಹಕ್ಕೆ ಧನಾತ್ಮಕ ಶಕ್ತಿಯನ್ನು ನೀಡುತ್ತವೆ.

ಆಹಾರದ ತಟ್ಟೆಯಲ್ಲಿ ಒಟ್ಟಿಗೆ ಇಷ್ಟು ಚಪಾತಿ ಇಡಬೇಡಿ : ನೀವು ಆಹಾರದ ಪ್ಲೇಟ್ ನಲ್ಲಿ ಎಷ್ಟು ಚಪಾತಿಯನ್ನು ಒಟ್ಟಿಗೆ ಇಡಬೇಕು ಎನ್ನುವುದನ್ನು ಕೂಡ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಸ್ತ್ರಗಳ ಪ್ರಕಾರ ನೀವು ಮೂರು ಚಪಾತಿ ಅಥವಾ ರೊಟ್ಟಿಯನ್ನು ಅಥವಾ ದೋಸೆಯನ್ನು ಒಟ್ಟಿಗೆ ಇಡಬಾರದು. ಆಹಾರ ಶುಭ ಸಂಕೇತವಾಗಿದೆ. ಆದ್ರೆ ಮೂರು ಅಶುಭ ಸಂಕೇತವಾಗಿದೆ. ಆಹಾರ ನಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬೇಕೆಂದ್ರೆ ಮೂರು ಚಪಾತಿಯನ್ನು ಒಂದೇ ಬಾರಿ ಪ್ಲೇಟ್ ನಲ್ಲಿ ಹಾಕಿ ತಿನ್ನಬೇಡಿ.

ZODIAC SIGNS: ದೀರ್ಘ ಕಾಲದ ಬಾಂಧವ್ಯದಿಂದ ದೂರ ಓಡುವ ರಾಶಿಗಳು ಯಾವುವು?

ಹಳಸಿದ ಆಹಾರ : ನೀವು ಊಟ ಮಾಡುವ ಪ್ಲೇಟ್ ನಲ್ಲಿ ಹಳಸಿದ ಆಹಾರ ಅಥವಾ ಹಾಳಾದ ಆಹಾರವನ್ನು ಹಾಕಬೇಡಿ. ಇದು ಲಕ್ಷ್ಮಿಯ ಮುನಿಸಿಗೆ ಕಾರಣವಾಗುತ್ತದೆ. ಹಳಸಿದ ಆಹಾರ ಆರೋಗ್ಯಕ್ಕೂ ಹಾನಿಕರ. ಹಾಗೆಯೇ ನೀವು ತಿನ್ನುವಷ್ಟೇ ಆಹಾರವನ್ನು ತಟ್ಟೆಗೆ ಹಾಕಿಕೊಳ್ಳಿ. ಹೆಚ್ಚು ಎನ್ನುವ ಕಾರಣಕ್ಕೆ ಆಹಾರವನ್ನು ಕಸಕ್ಕೆ ಎಸೆದ್ರೆ ಅನ್ನಪೂರ್ಣೆಗೆ ಅವಮಾನ ಮಾಡಿದಂತೆ. 
 

click me!