Latest Videos

ಪರ್ಸಲ್ಲಿ ದುಡ್ಡು ಜಾಸ್ತಿ ಆಗ್ಬೇಕಾ? ಕೆಟ್ಟ ದೃ‍ಷ್ಠಿ ದೂರ ಅಗ್ಬೇಕಾ?; ಮಿಸ್‌ ಮಾಡದೆ ಈ ಒಂದು ವಸ್ತುನ ಮೊದಲು ಖರೀದಿಸಿ

By Vaishnavi ChandrashekarFirst Published Jun 14, 2024, 11:04 AM IST
Highlights

ಅಬ್ಬಬ್ಬಾ ಕೆಟ್ಟ ಕಣ್ಣು ಮೊದಲು ದೂರ ಆಗ್ಬೇಕು ನೆಮ್ಮದಿಯಿಂದ ಜೀವನ ಮಾಡ್ಬೇಕು ಅಂದ್ರೆ ಮೊದಲು ಇವಿಲ್‌ ಐ ಖರೀದಿಸಬೇಕು ಅಂತಾರೆ ಶ್ರುತಿ....
 

ಇತ್ತೀಚಿನ ದಿನಗಳಲ್ಲಿ ಎಲ್ಲೇ ಹೋದರು ಇವಿಲ್‌ ಐ ಅಂದ್ರೆ ನೀಲಿ ಬಣ್ಣದ ಕಣ್ಣುಗಳನ್ನು ನೋಡಬಹುದು. ಕೆಲವರು ಮನೆಯಲ್ಲಿ ಇಟ್ಟಿರುತ್ತಾರೆ ಕೆಲವರು ಬಾಲ್ಕಾನಿಯಲ್ಲಿ ಇಟ್ಟಿರುತ್ತಾರೆ ಇನ್ನೂ ಕೆಲವರು ಕಾರಿಗೆ ಹಾಕಿರುತ್ತಾರೆ ಅಥವಾ ಕೈ ಕಾಲುಗಳಿಗೆ ಕಪ್ಪು ದಾರಗಳ ಜೊತೆ ಕಟ್ಟಿಕೊಂಡಿರುತ್ತಾರೆ. ಇದ್ದಕ್ಕಿದ್ದಂತೆ ಇವಿಲ್ ಐ ಪ್ರಾಮುಖ್ಯತೆ ಹೆಚ್ಚಾಗಲು ಕಾರಣವೇನು? ಇದು ಹೇಗೆ ಸಹಾಯ ಮಾಡುತ್ತದೆ?

'ಬೇರೆ ಬೇರೆ ಸಂಪ್ರದಾಯದಲ್ಲಿ ಇದೇ ರೀತಿಯ ಇವಿಲ್ ಐ ಬಳಸುತ್ತಾರಾ ಅಂದ್ರೆ 99% ಹೌದು. ಇಸ್ಲಾಂ, ಕ್ರಿಶ್ಚಿಯಾನಿಟಿ, ಬುದ್ಧಿಸಂ, ಹಿಂದು ....ಪ್ರತಿಯೊಂದರಲ್ಲೂ ಇವಿಲ್ ಐ ನೋಡುತ್ತೀರಾ. 3 ಸಾವಿರ ವರ್ಷಗಳ ಹಿಂದೆ ರೋಮ್‌ನಲ್ಲಿ ಇವಿಲ್ ಐ ಕಥೆಗಳು ಶುರುವಾಗಿದ್ದಂತೆ ಅಲ್ಲಿಂದ ದೇಶದ ಬೇರೆ ಬೇರೆ ಜಾಗಗಳಿಗೆ ಪ್ರಯಾಣ ಮಾಡಿದೆ. ಸಾಮಾನ್ಯವಾಗಿ ದೃಷ್ಠಿ ಆಗಬಾರದು ಎಂದು ಕಣ್ಣುಕಪ್ಪಿನಲ್ಲಿ ಬೊಟ್ಟು ಇಡುತ್ತಾರೆ ಇಲ್ಲವಾದರೆ ಕೈ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ. ಅದಕ್ಕೂ ಮೀರಿ ದೃಷ್ಟಿ ದೂರ ಮಾಡಬೇಕು ಅಂದ್ರೆ ಇವಿಲ್ ಐ ಬಳಸುತ್ತಾರೆ' ಎಂದು ಪಟಾಕಿ ಶ್ರುತಿ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಅಹಂ ಭಾವ ಹಠ ಬೇಕಂದ್ರೆ ಹಾಡುವುದರಲ್ಲಿ ತೋರಿಸಿ; ರಿಯಾಲಿಟಿ ಶೋ ಗಾಯಕಿರುವ ಸುಮಾ ಶಾಸ್ತ್ರಿ ಬುದ್ಧಿ ಮಾತು

'ಮನೆಯಲ್ಲಿ ಇರುವ ಇವಿಲ್ ಐ ಮುರಿದು ಬಿಟ್ಟರೆ ಅಥವಾ ಕ್ರಾಕ್‌ ಆಗಿದ್ದರೆ ನಿಮ್ಮ ಮೇಲೆ ಬೀರುತ್ತಿರುವ ಕೆಟ್ಟ ಕಣ್ಣು ಕೆಟ್ಟ ದೃಷ್ಠಿ ಅಥವಾ ಆ ಕೆಟ್ಟ ಸಮಯ ಮುಗಿದಿದೆ ಎಂದು. ಯಾರಾದರೂ ನಮಗೆ ಇವಿಲ್ ಐ ಕೊಟ್ಟರೆ ಅಥವಾ ನಾವು ಖರೀದಿ ಮಾಡಿದರೆ ಮೊದಲು ಅದನ್ನು ಕ್ಲೀನ್/ ಕ್ಲೆನ್ಸ್‌ ಮಾಡಬೇಕು. ಉಪ್ಪು ನೀರಿನಿಂದ ಇವಿಲ್ ಐ ತೊಳೆಯಬೇಕು, ಒಂದು ವೇಳೆ ನೀವು ಖರೀದಿ ಮಾಡಿರುವ ಇವಿಲ್‌ ಐ ತೊಳೆಯುವುದಕ್ಕೆ ಆಗಲ್ಲ ಅಂದ್ರೆ ಅದರ ಪಕ್ಕ ಗಂಟೆ ಶಬ್ಧ ಮಾಡಬೇಕು. ಗಂಟೆಯ ಶಬ್ಧ ನೆಗೆಟಿವ್ ಎನರ್ಜಿ ಎನ್ನು ದೂರ ಮಾಡುತ್ತದೆ' ಎಂದು ಪಟಾಕಿ ಶ್ರುತಿ ಹೇಳಿದ್ದಾರೆ. 

ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ

'ಎಲ್ಲರ ಕಣ್ಣು ಬೀಳುವ ಜಾಗದಲ್ಲಿ ಇವಿಲ್‌ ಐ ಇಡಬೇಕು. ಯಾರಾದರೂ ಬಂದ್ರೆ ಮೊದಲು ಅವರ ಕಣ್ಣು ಇವಿಲ್ ಐ ಮೇಲೆ ಬೀಳಬೇಕು ಏಕೆಂದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಇರುವ ನಕರಾತ್ಮಕ ಭಾವನೆಯನ್ನು ಇವಿಲ್ ಐ ಹೀರಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಇರುವ ನೆಗೆಟಿವ್ ಜನರ್ಜಿ ಎಳೆದುಕೊಳ್ಳಬೇಕು ಅಂದ್ರೆ ಅವರ ಕಣ್ಣು ಇದರ ಮೇಲೆ ಬೀಳಬೇಕು. ಮೂರು ದಿನಕ್ಕೊಮ್ಮೆ ಮನೆಯಲ್ಲಿ ಇರುವ ಇವಿಲ್‌ ಐ ತೊಳೆಯಬೇಕು. ಯಾರಿಗಾದರೂ ಗಿಫ್ಟ್‌ ಕೊಡುವ ಆಲೋಚನೆ ಇದ್ದರೆ ಇವಿಲ್ ಇ ಕೊಡಬಹುದು. ನೋಡಲು ಸಿಂಪಲ್ ಆಗಿದ್ದರೂ ಒಳ್ಳೆ ಕೆಲಸ ಮಾಡುತ್ತದೆ. ಆದಷ್ಟು ಇವಿಲ್ ಐ ಧರಿಸುವುದಕ್ಕೆ ಪ್ರಯತ್ನ ಪಡಿ. ಬೇರೆ ಅವರ ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ಕಾಪಾಡಲು ಇವಿಲ್ ಐ ಬಳಸಬೇಕು' ಎಂದಿದ್ದಾರೆ ಶ್ರುತಿ. 

click me!