ನಾಳೆ ರಕ್ಷಾ ಬಂಧನದ ಆಚರಣೆ ಇದೆ. ಆದರೆ ಭದ್ರಕಾಲದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 31 ರಂದು ರಾಖಿ ಕಟ್ಟಲು ಶುಭ ಮುಹೂರ್ತವಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.
Raksha Bandhan ನಾಳೆ ರಕ್ಷಾ ಬಂಧನದ ಆಚರಣೆ ಇದೆ. ಆದರೆ ಭದ್ರಕಾಲದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 31 ರಂದು ರಾಖಿ ಕಟ್ಟಲು ಶುಭ ಮುಹೂರ್ತವಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ರಕ್ಷಾ ಬಂಧನವು ಶ್ರಾವಣ ಮಾಸದ ಹುಣ್ಣಿಮೆಯಂದು ನಡೆಯುತ್ತದೆ ಮತ್ತು ಈ ಬಾರಿ ಹುಣ್ಣಿಮೆಯನ್ನು ನಾಳೆ ಆಚರಿಸಲಾಗುತ್ತದೆ. ಆದರೆ ಆಗಸ್ಟ್ 30 ರಂದು ಭದ್ರಕಾಲದ ಉಪಸ್ಥಿತಿ ಇರಲಿದೆ. ಈ ವೇಳೆ ರಾಖಿಯನ್ನು ಕಟ್ಟಬಾರದು. ಹಾಗಾದರೆ ರಾಖಿ ಕಟ್ಟಲು ಸರಿಯಾದ ಸಮಯ ಯಾವುದು ಎಂದು ನಿಮ್ಮ ಮನಸ್ಸಿನಲ್ಲಿಯೂ ಪ್ರಶ್ನೆ ಉದ್ಭವಿಸಬಹುದು. ನಿಮ್ಮ ಈ ಅನುಮಾನಕ್ಕೆ ಇಲ್ಲಿದೆ ಉತ್ತರ.
ಯಾವಾಗ ರಾಖಿ ಕಟ್ಟಬೇಕು?
ಹೋಳಿ ದಹನ ಮತ್ತು ರಕ್ಷಾ ಬಂಧನ ಎರಡೂ ಹಬ್ಬಗಳಲ್ಲಿ ಭದ್ರಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಭದ್ರಕಾಲ ಮುಗಿದ ಬಳಿಕ, ಆಗಸ್ಟ್ 30ರ ಬುಧವಾರ ರಾತ್ರಿ 8:57ರಿಂದ ಆಗಸ್ಟ್ 31ರ ಗುರುವಾರ ಬೆಳಗ್ಗೆ 7:46ರವರೆಗೆ ರಾಖಿ ಕಟ್ಟಲು ಶುಭ ಸಮಯವಾಗಿರುತ್ತದೆ. 31ರಂದು ಶ್ರಾವಣಿ ಉಪ ಕರ್ಮದ ವಿಧಿವಿಧಾನ ನೆರವೇರಿಸುವುದು ಶುಭ. ಹುಣ್ಣಿಮೆಯ ದಿನಾಂಕವು ಆಗಸ್ಟ್ 30 ರಂದು ಬೆಳಿಗ್ಗೆ 10:13 ಕ್ಕೆ ಪ್ರಾರಂಭವಾಗುತ್ತದೆ. ಭದ್ರಕಾಲ ಬೆಳಗ್ಗೆ 10:13 ರಿಂದ ರಾತ್ರಿ 8:57ರವರೆಗೆ ಇರುತ್ತದೆ.
ಶನಿ ಮಾರ್ಗಿ; ಈ 3 ರಾಶಿಯವರಿಗೆ ದೂರಾಯ್ತು ಸಂಕಷ್ಟ, ಮುಟ್ಟಿದ್ದೆಲ್ಲಾ ಚಿನ್ನ..!
ಭದ್ರಾ ಕಾಲದಲ್ಲಿ ರಾಖಿ ಏಕೆ ಕಟ್ಟಬಾರದು?
ರಾಕ್ಷಸರನ್ನು ಕೊಲ್ಲಲು ಜನಿಸಿದವಳು ಭದ್ರ ಎಂದು ಹೇಳುತ್ತಾರೆ. ವಾಸ್ತವವಾಗಿ ಭದ್ರ ಸೂರ್ಯ ನಾರಾಯಣನ ಮಗಳು ಮತ್ತು ಅವನ ಹೆಂಡತಿ ಹಾಗೂ ಶನಿ ದೇವನ ಸಹೋದರಿಯ ನೆರಳು ಎಂದು ಪರಿಗಣಿಸಲಾಗುತ್ತದೆ. ಭದ್ರ ಹುಟ್ಟಿದಾಗಿನಿಂದ ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದಳು. ಆದ್ದರಿಂದ ಭದ್ರಕಾಲದಲ್ಲಿ ಕೆಲಸಗಳನ್ನು ನಿಷೇಧಿಸಲಾಗಿದೆ. ಪುರಾಣಗಳ ಪ್ರಕಾರ ಶೂರ್ಪನಖಾ ಭದ್ರ ಕಾಲದಲ್ಲಿಯೇ ತನ್ನ ಸಹೋದರ ರಾವಣನಿಗೆ ರಾಖಿ ಕಟ್ಟಿದ್ದಳು. ಅದರ ನಂತರ ಅವನ ಸಹೋದರ ರಾವಣನು ಸತ್ತನು. ಆದ್ದರಿಂದಲೇ ಜನರು ಭದ್ರಾ ಸಮಯದಲ್ಲಿ ಸಹೋದರನಿಗೆ ರಾಖಿ ಕಟ್ಟುವುದನ್ನು ತಪ್ಪಿಸುತ್ತಿದ್ದಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.