ನಮ್ಮ ಧರ್ಮ ಗ್ರಂಥದಲ್ಲಿ ಸಂಸಾರಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಿವೆ. ಒಂದು ದಂಪತಿ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಹೇಳಲಾಗಿದೆ. ಅದನ್ನು ತಿಳಿದು ನಡೆದ್ರೆ ಸಂಸಾರದಲ್ಲಿ ಸುಖ ಸಿಗುವುದಲ್ಲದೆ ಸ್ವರ್ಗ ಪ್ರಾಪ್ತಿಯಾಗುತ್ತದೆ.
ಒಂದು ಸಂಸಾರದಲ್ಲಿ ಪತಿ – ಪತ್ನಿಗೆ ಸಮಪಾಲಿದೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ನಮ್ಮ ಹಿಂದೂ ಧರ್ಮದಲ್ಲಿ ಮನೆಯ ಒಡತಿಯನ್ನು ಗೌರವದಿಂದ ಕಾಣಬೇಕು ಎಂಬ ನಂಬಿಕೆ ಇದೆ. ಮನೆಯ ಮಗಳು, ತಾಯಿ, ಸೊಸೆ ಎಲ್ಲರನ್ನೂ ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಮನೆಯಲ್ಲಿರುವ ಮಹಿಳೆಯರನ್ನು ಯಾವಾಗಲೂ ಅವಮಾನಿಸಬಾರದು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಎಲ್ಲಿ ಮಹಿಳೆಯನ್ನು ಪೂಜೆ ಮಾಡಲಾಗುತ್ತದೆಯೋ ಅಲ್ಲಿ ದೇವತೆ ನೆಲೆಸಿರುತ್ತಾಳೆ ಎಂಬ ಮಾತಿದೆ. ಆದ್ರೆ ಎಲ್ಲ ಮನೆಯಲ್ಲಿ ಮಹಿಳೆಗೆ ಈ ಗೌರವ ಸಿಗೋದಿಲ್ಲ. ದುಡಿದು ಬರುವ ಪತಿಗೆ, ಮಕ್ಕಳಿಗೆ ಸೇವೆ ಮಾಡುವ ಕೆಲಸದ ಆಳುವಿನಂತೆ ಅನೇಕ ಕಡೆ ಮಹಿಳೆಯನ್ನು ನಡೆಸಿಕೊಳ್ಳಲಾಗುತ್ತದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಭಾರತದಲ್ಲಿ ಇನ್ನೂ ಕಡಿಮೆಯಾಗಿಲ್ಲ. ಕುಟುಂಬದಲ್ಲಿ ನಡೆಯುವ ಈ ಪತಿ – ಪತ್ನಿ ಗಲಾಟೆ ಸಂಸಾರದಲ್ಲಿ ನೆಮ್ಮದಿ ಹಾಳು ಮಾಡುವುದಲ್ಲದೆ ಪತಿಯ ಏಳ್ಗೆಗೆ ಕುತ್ತು ತರುತ್ತದೆ. ಯಾವುದೇ ಪುರುಷ ತನ್ನ ಪತ್ನಿಗೆ ಕೈ ಮಾಡಿದ್ರೆ ಭರಿಸಲಾಗದ ನಷ್ಟ ಅನುಭವಿಸುತ್ತಾನೆ. ನಾವಿಂದು ಪತಿ ಪತ್ನಿಗೆ ಹೊಡೆದ್ರೆ ಅಥವಾ ಪತ್ನಿ ಪತಿಗೆ ಹೊಡೆದ್ರೆ ಯಾವೆಲ್ಲ ಸಮಸ್ಯೆ ಎದುರಿಸಬೇಕು ಎಂಬುದನ್ನು ತಿಳಿಯೋಣ.
ಪತ್ನಿ (Wife) ಗೆ ಹೊಡೆದ್ರೆ ಪತಿಗಾಗುತ್ತೆ ಈ ನಷ್ಟ :
ಧನ ನಷ್ಟ : ಮೊದಲೇ ಹೇಳಿದಂತೆ ಮನೆಯಲ್ಲಿರುವ ಮಹಿಳೆಯರು ಲಕ್ಷ್ಮಿ (Lakshmi) ರೂಪ. ಪತ್ನಿ ಕೂಡ ಲಕ್ಷ್ಮಿಯ ರೂಪ. ಮನೆಯಲ್ಲಿರುವ ಪತ್ನಿಗೆ ಹೊಡೆದ್ರೆ ಲಕ್ಷ್ಮಿ ದೇವಿಗೆ ಏಟು ನೀಡಿದಂತೆ. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ. ನಿಮ್ಮ ದುರಾದೃಷ್ಟ (Bad Luck) ಕ್ಕೆ ಕಾರಣವಾಗ್ತಾಳೆ. ಎಂದೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸೋದಿಲ್ಲ. ಸದಾ ಮನೆಯಲ್ಲಿ ಲಕ್ಷ್ಮಿ ಶಾಂತವಾಗಿ, ಸಂತೋಷವಾಗಿರಬೇಕೆಂದ್ರೆ ಅಪ್ಪಿತಪ್ಪಿಯೂ ಪತ್ನಿ ಮೇಲೆ ಕೈ ಎತ್ತಬೇಡಿ.
ಶುಕ್ರ ಗೋಚರ,ಈ ರಾಶಿಯವರಿಗೆ ಕಷ್ಟ ಕಾಲ,ಎಚ್ಚರದಿಂದಿರಿ!
ಧರ್ಮ ನಷ್ಟ : ಧರ್ಮದಿಂದ ನಡೆದುಕೊಳ್ಳುವುದು ಬಹಳ ಮುಖ್ಯ. ಪತ್ನಿಗೆ ಗೌರವ ನೀಡುವುದು, ಆಕೆಯ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋವಾಗದಂತೆ ನಡೆದುಕೊಳ್ಳುವುದು ಗೊತ್ತಿರಬೇಕು. ಪತ್ನಿಯನ್ನು ಧರ್ಮಪತ್ನಿ ಎಂದು ಕರೆಯಲಾಗುತ್ತದೆ. ನೀವು ಪತ್ನಿಗೆ ಹೊಡೆದ್ರೆ ಧರ್ಮನಷ್ಟವಾಗುತ್ತದೆ.
ಪುಣ್ಯದ ನಷ್ಟ : ನೀವು ದೇವರ ಆರಾದನೆ, ಪೂಜೆ, ಹೋಮ – ಹವನ ಏನೇ ಮಾಡಿ, ಪತ್ನಿಗೆ ಹೊಡೆಯುವ ವ್ಯಕ್ತಿಯಾಗಿದ್ದರೆ ನೀವು ಮಾಡಿದ ಪುಣ್ಯ ನಿಮಗೆ ಲಭಿಸೋದಿಲ್ಲ. ಪತ್ನಿಗೆ ಹೊಡೆದ್ರೆ ಪುಣ್ಯ ನಷ್ಟವಾಗುವುದಲ್ಲದೆ ಪಾಪ ಸುತ್ತಿಕೊಳ್ಳುತ್ತದೆ. ಇದ್ರಿಂದ ನಿಮಗೆ ಸ್ವರ್ಗದ ಬದಲು ನರಕ ಪ್ರಾಪ್ತಿಯಾಗುತ್ತದೆ.
Pitru Paksha: ಈ ಸಮಯದಲ್ಲಿ ಅಪ್ಪಿತಪ್ಪಿಯೂ ಮಹಿಳೆ ಈ ಕೆಲಸ ಮಾಡ್ಬಾರದು!
ಪತ್ನಿ ಪತಿಗೆ ಹೊಡೆದ್ರೆ ಏನಾಗುತ್ತೆ : ಗರುಡ ಪುರಾಣದಲ್ಲಿ ಪತಿ – ಪತ್ನಿ, ಸ್ವರ್ಗ – ನರಕಕ್ಕೆ ಸಂಬಂಧಿಸಿದ ಅನೇಕಾನೇಕ ಸಂಗತಿಗಳನ್ನು ಹೇಳಲಾಗಿದೆ. ಪತಿಯಿಂದ ಪತ್ನಿಗೆ ಮಾತ್ರವಲ್ಲ ಪತ್ನಿಯಿಂದ ಪತಿಗೆ ಹಿಂಸೆಯಾಗುವ ಜಾಗವೂ ಸಾಕಷ್ಟಿದೆ. ಪತ್ನಿಯಾದವಳು ತನ್ನ ಪತಿಗೆ ಹಿಂಸೆ ನೀಡಿದ್ರೆ ಆಕೆ ಕೂಡ ಅನೇಕ ಸಮಸ್ಯೆ ಎದುರಿಸಬೇಕು.
ಗರುಡ ಪುರಾಣದ ಪ್ರಕಾರ, ಯಾವ ಪತ್ನಿ ತನ್ನ ಪತಿಯ ಮೇಲೆ ಹಲ್ಲೆ ನಡೆಸುತ್ತಾಳೋ ಆಕೆ ನರಕಕ್ಕೆ ಹೋಗ್ತಾಳೆ. ಬರೀ ನರಕಕ್ಕೆ ಹೋಗೋದಲ್ಲ ಅಲ್ಲಿ ಚಿತ್ರಹಿಂಸೆ ಅನುಭವಿಸುತ್ತಾಳೆ. ಆಕೆ ಮೂರ್ಚೆ ಹೋಗುವವರೆಗೆ ನರಕದಲ್ಲಿ ಆಕೆಗೆ ಹೊಡೆಯಲಾಗುತ್ತದೆಯಂತೆ.
ಬರಿ ಹೊಡೆಯೋದು ಮಾತ್ರವಲ್ಲ ಪತಿ ಬಗ್ಗೆ ಸುಳ್ಳು ಆರೋಪ ಮಾಡುವ, ಹಣವಿದ್ದಾಗ ಪತಿ ಜೊತೆಗಿದ್ದು, ಆತನಿಗೆ ಬಡತನ ಬಂದಾಗ ಆತನನ್ನು ಕೈ ಬಿಡುವ, ಸುಳ್ಳು ವರದಕ್ಷಿಣೆ ಕಿರುಕುಳ ಆರೋಪ ಮಾಡಿ, ಪತಿಗೆ ಜೈಲು ಶಿಕ್ಷೆ ಕೊಡಿಸುವ ಮಹಿಳೆಗೆ ನರಕದಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತದೆ. ಆಕೆಯನ್ನು ಉಲ್ಟಾ ಕಟ್ಟಿಹಾಕಿ ಹಿಂಸೆ ನೀಡಲಾಗುತ್ತದೆ. ಇವರಿಗೆ ಮತ್ತೊಂದು ಜನ್ಮ ಸಿಗೋದು ಕಷ್ಟ ಎನ್ನುತ್ತದೆ ಗರುಡ ಪುರಾಣ.