Chitradurga: ಗಣೇಶನ ಮೂರ್ತಿಗಳ ಮಧ್ಯೆ ಕಂಗೊಳಿಸುತ್ತಿರುವ ಅಪ್ಪು ಪ್ರತಿಮೆ

By Govindaraj S  |  First Published Aug 25, 2022, 4:23 PM IST

ಗಣೇಶ ಚತುರ್ಥಿ ಹಬ್ಬ ಬಂತು ಅಂದ್ರೆ ಸಾಕು ಹಿಂದೂ ಯುವಕರಿಗೆ ಸಂಭ್ರಮಾಚರಣೆ. ಆದ್ರೆ ಈ ಬಾರಿಯ ಗಣೇಶ ಹಬ್ಬದ ಆಚರಣೆಗೆ ವಿಶೇಷತೆ ಎಂಬಂತೆ ಎಲ್ಲರೂ ಅಪ್ಪು ಪ್ರತಿಮೆ ಬೇಕು ಎಂದು ಕೇಳ್ತಿರುವುದೇ ವಿಭಿನ್ನವಾಗಿದೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.25): ಗಣೇಶ ಚತುರ್ಥಿ ಹಬ್ಬ ಬಂತು ಅಂದ್ರೆ ಸಾಕು ಹಿಂದೂ ಯುವಕರಿಗೆ ಸಂಭ್ರಮಾಚರಣೆ. ಆದ್ರೆ ಈ ಬಾರಿಯ ಗಣೇಶ ಹಬ್ಬದ ಆಚರಣೆಗೆ ವಿಶೇಷತೆ ಎಂಬಂತೆ ಎಲ್ಲರೂ ಅಪ್ಪು ಪ್ರತಿಮೆ ಬೇಕು ಎಂದು ಕೇಳ್ತಿರುವುದೇ ವಿಭಿನ್ನವಾಗಿದೆ. ಇದಕ್ಕೆ ಪೂರಕವೆಂಬಂತೆ ಕೋಟೆನಾಡಿನಲ್ಲಿಯೂ ಗಣೇಶನ ಮೂರ್ತಿಗಳ ಮುಂದೆ ಅಪ್ಪು ಪ್ರತಿಮೆ ಕಂಗೊಳಿಸ್ತಿರೋದು ಎಲ್ಲಾ ಅಭಿಮಾನಿಗಳಲ್ಲಿ ಇನ್ನಷ್ಟು ಸಂತೋಷ ಹಿಮ್ಮಡಿಗೊಳಿಸಿದೆ. ಈ ಕುರಿತು ಒಂದು ಸ್ಪೆಷಲ್ ವರದಿ ಇಲ್ಲಿದೆ ನೋಡಿ. 

Tap to resize

Latest Videos

ಇನ್ನೇನು ಕೆಲವೇ ದಿನಗಳು ಬಂತಂದ್ರೆ ಸಾಕು ನಾ ಮುಂದು ತಾನು ಮುಂದು ಎಂದು ಗಣೇಶನ ಮೂರ್ತಿಗಳನ್ನು ಕೊಂಡೊಯ್ದು ತಮ್ಮ ತಮ್ಮ ಏರಿಯಾ ಹಾಗೂ ಮನೆಗಳಲ್ಲಿ ಕೂರಿಸಿ ಹಬ್ಬ ಆಚರಿಸ್ತಾರೆ. ಅದಕ್ಕೆ ಪೂರಕವಾಗಿ ಹೀಗೆ ಗಣೇಶನ ಮೂರ್ತಿಗಳನ್ನು ತಯಾರು ಮಾಡ್ತಿರೋ ತಯಾರಕ. ಅದೇ ರೀತಿ ಕನ್ನಡ ಚಿತ್ರರಂಗದ ಮೇರು ನಟ, ಅಜಾತಶತ್ರು, ಅಭಿಮಾನಿಗಳ ದೇವರು ಅಪ್ಪು ಪ್ರತಿಮೆ ಮಾಡಿರೋದು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ದೊಡ್ಡಪೇಟೆ ಏರಿಯಾದಲ್ಲಿ. ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಕಾರಣಗಳಿಗಾಗಿ ಗಣೇಶನ ಪ್ರತಿಮೆ ಮಾಡುವ ತಯಾರಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. 

ಸಿದ್ದರಾಮಯ್ಯಗಿಂತ ಯಡಿಯೂರಪ್ಪ ತುಂಬಾ ಹಠಮಾರಿ: ಎಂ.ಬಿ ಪಾಟೀಲ್

ಆದ್ರೆ ಈ ಬಾರಿ ಯಾವುದೇ ನಿರ್ಬಂಧಗಳು ಇಲ್ಲದ ಹಿನ್ನೆಲೆ, ಎಲ್ಲಾ ಏರಿಯಾಗಳಲ್ಲೂ ಯುವಕರು ಈ ಬಾರಿಯ ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ. ಆದ್ದರಿಂದ ಈ ಬಾರಿಯ ವಿಶೇಷತೆ ಏನಂದ್ರೆ, ಎಲ್ಲಾ ಏರಿಯಾಗಳಲ್ಲಿ ಗಣೇಶ ಮೂರ್ತಿಗಳ ಮುಂದೆ ಅಪ್ಪು ಪ್ರತಿಮೆ ಇಟ್ಟು ಪೂಜೆ ಮಾಡುವ ಮೂಲಕ ಅಭಿಮಾನಿಗಳು ತಮ್ಮ ಪ್ರೀತಿಯನ್ನು ತೋರಿಸಲು ಮುಂದಾಗಿದ್ದಾರೆ. ಇದರೊಟ್ಟಿಗೆ ಅಪ್ಪು ಹೆಸರಲ್ಲಿ ನಾವು ರಕ್ತದಾನ, ಅನ್ನದಾನ ಮಾಡುವ ಮೂಲಕ ಅಪ್ಪು ಅವರಿಗೆ ಗೌರವ ಸಲ್ಲಿಸಲು ಮುಂದಾಗಿದ್ದೀವಿ. ಇಡೀ ರಾಜ್ಯಕ್ಕೆ ಕೊಟ್ಟು ಅಪ್ಪು ಅವರು ಮಾಡಿರೋ ದಾನ ಧರ್ಮಗಳು ಏನು ಅಂತ. 

ಹಾಗಾಗಿ ನಮಗೆಲ್ಲಾ ಅಪ್ಪು ಕೂಡ ದೇವರಿದ್ದಂತೆ. ಹಾಗಾಗಿ ಈ ಬಾರಿ ನಾವು ಗಣೇಶನ ಹಬ್ಬ ನಮಗೆ ವಿಶೇಷ ಅಂತಾರೆ ಅಪ್ಪು ಅಭಿಮಾನಿಗಳು. ಇನ್ನೂ ಈ ಬಾರಿಯ ಗಣೇಶಗಳು ಎಷ್ಟರ ಮಟ್ಟಿಗೆ ವ್ಯಾಪಾರ ಆಗ್ತಾಯಿವೆ ಎಂಬುದನ್ನ ತಯಾರಕರನ್ನೇ ವಿಚಾರಿಸಿದ್ರೆ, ಪ್ರತೀ ಬಾರಿಗಿಂತ ಈ ಬಾರಿ ಗಣೇಶನ ಚತುರ್ಥಿ ಹಬ್ಬ ಆಚರಣೆ ವಿಶೇಷವಾಗಿದೆ. ಯಾಕಪ್ಪ ಅಂದ್ರೆ ಎಲ್ಲಾ ಅಪ್ಪು ಅಭಿಮಾನಿಗಳು ನಮಗೆ ಅಪ್ಪು ಪ್ರತಿಮೆ ಬೇಕು. ನಾವು ಈ ಬಾರಿಯ ಗಣೇಶ ಹಬ್ಬದಲ್ಲಿ ಗಣೇಶ ಮೂರ್ತಿಯ ಮುಂದೆ ಅಪ್ಪು ಪ್ರತಿಮೆ ಇಟ್ಟು ಪೂಜೆ ಮಾಡ್ತೀವಿ ಮಾಡಿ‌ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. 

ಸಿದ್ದು ಸುಲ್ತಾನ್‌ ಎಂದ ಸಂಸದ ಪ್ರತಾಪ್ ಸಿಂಹ ಗೆ ಎಂ.ಬಿ ಪಾಟೀಲ್ ಟಾಂಗ್

ಅದರಂತೆ ಈಗಾಗಲೇ 10ಕ್ಕೂ ಅಧಿಕ ಅಪ್ಪು ಪ್ರತಿಮೆಗಳನ್ನು ಮಾಡಲಾಗಿದೆ. ಅದನ್ನು ಹೊರತು ಪಡಿಸಿದ್ರೆ, ಗಣೇಶನ ವ್ಯಾಪಾರವೂ ಕೂಡ ಈ ಬಾರಿ ಸ್ವಲ್ಪ ಹೆಚ್ಚಾಗಿದೆ ಅಂತಾರೆ ತಯಾರಕರು. ಒಟ್ಟಾರೆಯಾಗಿ ಇನ್ನೇನು ಕೆಲವೇ ದಿನಗಳು ಗಣೇಶ ಹಬ್ಬ ಆಚರಣೆಗೆ ಬಾಕಿ ಇರುವಾಗಲೇ, ಎಲ್ಲಾ ಏರಿಯಾದಲ್ಲೊ ಯುವಕರು ಗಣೇಶ ಮೂರ್ತಿ ಮುಂದೆ ಅಪ್ಪು ಪ್ರತಿಮೆ ಹಾಗೂ ಅಪ್ಪು ಪೊಟೋ ಇಟ್ಟು ಪೂಜಿಸಲು ಮುಂದಾಗಿರೋದು ತುಂಬಾ ಹೆಮ್ಮೆಯ ಸಂಗತಿ.

click me!