ಗ್ರಹಗಳ ಅಶುಭ ಪ್ರಭಾವವನ್ನುಈ ಸಂಕೇತಗಳಿಂದ ತಿಳಿಯಿರಿ...!!

By Suvarna News  |  First Published Oct 22, 2021, 4:41 PM IST

ಗ್ರಹಗಳ ಅಶುಭ ಪ್ರಭಾವವು ವ್ಯಕ್ತಿಯ ಜೀವನದ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು ಬೀರುತ್ತವೆ. ಕೆಲವು ಗ್ರಹಗಳ ಪ್ರಭಾವ ಶುಭವಾಗಿದ್ದರೆ, ಮತ್ತೆ ಕೆಲವು ಗ್ರಹಗಳ ಪ್ರಭಾವ ಅಶುಭವಾಗಿರುತ್ತದೆ. ಇವುಗಳ ಬಗ್ಗೆ ಕೆಲವು ಸಂಕೇತಗಳಿಂದ ತಿಳಿಯಬಹುದಾಗಿದೆ. ಜಾತಕವನ್ನು ನೋಡದೆಯೇ ಗ್ರಹಗಳ ಅಶುಭ ಪ್ರಭಾವಗಳ ಬಗ್ಗೆ ಹೀಗೆ ತಿಳಿಯಬಹುದಾಗಿದೆ.
 


ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಗ್ರಹಗಳಿಗೆ (Planets) ವಿಶೇಷ ಮಹತ್ವವಿದೆ. ಗ್ರಹಗಳ ಪ್ರಭಾವ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲಾಗುತ್ತದೆ. ಜೀವನದಲ್ಲಿ (Life) ನಡೆಯುವ ಘಟನೆಗಳು, ಒಳಿತು – ಕೆಡುಕುಗಳಿಗೆ ಗ್ರಹಗಳ ಪ್ರಭಾವವು (Effects) ಒಂದು ಕಾರಣವಾಗಿರುತ್ತದೆ. 

ಕೆಲವು ಗ್ರಹಗಳು ಶುಭ ಫಲವನ್ನು ನೀಡಿದರೆ, ಮತ್ತೆ ಕೆಲವು ಗ್ರಹಗಳು ಅಶುಭ (Bad) ಪ್ರಭಾವವನ್ನು ನೀಡುತ್ತವೆ. ಹಾಗಾಗಿ ಗ್ರಹಗಳ ಸ್ಥಿತಿ-ಗತಿಗಳು ಹೇಗಿದೆ ಎಂಬುದು ಜೀವನದಲ್ಲಿ ಹೆಚ್ಚು ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೆ ಜಾತಕವನ್ನು ನೋಡದೆಯೇ ಕೆಲವು ಸಂಕೇತಗಳಿಂದ ಯಾವ ಗ್ರಹದ ಅಶುಭ ಪ್ರಭಾವ ಕಾಡುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿಯೋಣ...

ಸೂರ್ಯ ಗ್ರಹ  (Sun)
ಜಾತಕದಲ್ಲಿ ಸೂರ್ಯ ಗ್ರಹದ ಸ್ಥಿತಿ ನೀಚವಾಗಿದ್ದರೆ ಅಂತಹ ವ್ಯಕ್ತಿಗಳಿಗೆ ತಂದೆಯ (Father) ಜೊತೆಗಿನ ಬಾಂಧವ್ಯ (Bonding) ಅಷ್ಟು ಚೆನ್ನಾಗಿರುವುದಿಲ್ಲ. ಅಷ್ಟೇ ಅಲ್ಲದೆ ಚರ್ಮ (Skin) ಸಂಬಂಧಿ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ.

ಚಂದ್ರ ಗ್ರಹ (Moon)
ಚಂದ್ರ ಗ್ರಹದ ಸ್ಥಿತಿ ಜಾತಕದಲ್ಲಿ (horoscope) ಉತ್ತಮವಾಗಿಲ್ಲದಿದ್ದರೆ ಅಂತಹ ವ್ಯಕ್ತಿಗಳ ತಾಯಿಯ (Mother) ಆರೋಗ್ಯ ( Health) ಸದಾ ಏರು-ಪೇರಾಗುತ್ತಿರುತ್ತದೆ. ಈ ವ್ಯಕ್ತಿಗಳ ಕಲ್ಪನಾ ಶಕ್ತಿಯು ಮಂದವಾಗಿರುತ್ತದೆ. 

ಇದನ್ನು ಓದಿ: ಈ 4 ರಾಶಿಯವರಿಗೆ ಹಣ ಬೇಕಾದಷ್ಟಿದೆ, ಆದ್ರೆ ಲವ್ ಲೈಫ್ ಮಾತ್ರ ಹೀಗೆ

ಮಂಗಳ ಗ್ರಹ (Mars)
ಜಾತಕದಲ್ಲಿ ಮಂಗಳ ಗ್ರಹದ ಸ್ಥಾನ ನೀಚ ಸ್ಥಿತಿಯಲ್ಲಿದ್ದರೆ ಅಂತಹ ವ್ಯಕ್ತಿಗಳ ಸ್ವಭಾವ ಕ್ರೂರವಾಗಿರುತ್ತದೆ (Cruel). ಅಷ್ಟೇ ಅಲ್ಲದೆ ಹಿಂಸಿಸುವ (Violence) ಸ್ವಭಾವ ಇವರದ್ದಾಗಿರುತ್ತದೆ. ಈ ವ್ಯಕ್ತಿಗಳಿಗೆ ಆತ್ಮವಿಶ್ವಾಸದ (Confidence) ಕೊರತೆ ಹೆಚ್ಚಾಗಿ ಕಾಡುತ್ತದೆ.

Latest Videos


ಬುಧ ಗ್ರಹ (Mercury)
ಜಾತಕದಲ್ಲಿ ಬುಧ ಗ್ರಹ ನೀಚ ಸ್ಥಿತಿಯಲ್ಲಿದ್ದರೆ ಅಂತಹ ವ್ಯಕ್ತಿಗಳು ಜೂಜಾಟ ಮತ್ತು ಮದ್ಯಪಾನಗಳಂತ (Alcoholic) ಕೆಟ್ಟ ಚಟಗಳ (Bad Activities) ದಾಸರಾಗುತ್ತಾರೆಂದು ಹೇಳಲಾಗುತ್ತದೆ.

ಇದನ್ನು ಓದಿ: ಓಡುತ್ತಿರುವ ಕುದುರೆ ಪೇಂಟಿಂಗ್‌ನಲ್ಲಿದೆ ಈ ರಹಸ್ಯ...

ಗುರು ಗ್ರಹ (Jupiter)
ವಿವಾಹದಲ್ಲಿ (Marriage) ವಿಳಂಬ, ಶಿಕ್ಷಣದಲ್ಲಿ (Education) ಅಡೆ-ತಡೆಗಳು, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಹೆಚ್ಚು ಉದುರುವುದು ಈ ರೀತಿಯ ಸಮಸ್ಯೆಗಳು ಉಂಟಾದರೆ ಅಂತಹ ವ್ಯಕ್ತಿಗಳ ಜಾತಕದಲ್ಲಿ ಗುರು ಗ್ರಹ ನೀಚ ಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತದೆ.

ಶುಕ್ರ ಗ್ರಹ (Venus)
ಜಾತಕದಲ್ಲಿ ಶುಕ್ರ ಗ್ರಹ ನೀಚ ಸ್ಥಿತಿಯಲ್ಲಿದ್ದರೆ ಪ್ರೀತಿ - ಪ್ರೇಮಗಳಲ್ಲಿ ( Love life) ತೊಂದರೆ ಉಂಟಾಗುತ್ತದೆ. ಶುಕ್ರನ ಸ್ಥಿತಿ ಉತ್ತಮವಾಗಿರದಿದ್ದರೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ( Differences ) ಉಂಟಾಗುತ್ತದೆ. ಅಷ್ಟೇ ಅಲ್ಲದೆ ಚರ್ಮ ಸಂಬಂಧಿ ( Skin related ) ಸಮಸ್ಯೆಗಳು ಕಾಡುವ ಸಂಭವ ಸಹ ಇರುತ್ತದೆ.

ಶನಿ ಗ್ರಹ (Saturn)
ಜಾತಕದಲ್ಲಿ ಶನಿ ಗ್ರಹದ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ಎಷ್ಟೇ ಪ್ರಯತ್ನ (Effort) ಪಟ್ಟರೂ ಕೆಲಸ ಕಾರ್ಯಗಳಲ್ಲಿ ಸಫಲತೆ (Success) ದೊರಕುವುದಿಲ್ಲ. ಸಾಲದ (Loan) ಬಾಧೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ.

ರಾಹು (Rahu )
ರಾಹು ಗ್ರಹ ಸ್ಥಿತಿ ನೀಚವಾಗಿದ್ದರೆ ಅಂತಹ ವ್ಯಕ್ತಿಗಳು ಬುದ್ಧಿವಂತಿಕೆಯಿಂದ ಯಾವ ಕೆಲಸವನ್ನೂ ಮಾಡುವುದಿಲ್ಲ. ಈ ವ್ಯಕ್ತಿಗಳು ಶ್ವಾನ (Dog) ಪಾಲನೆ ಮಾಡುತ್ತಿದ್ದರೆ ಬೇಗ ಸಾವು (Death) ಸಂಭವಿಸುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ: ರಾಶಿ ಚಕ್ರಗಳಲ್ಲಿ ಅಡಗಿರೋ ರಹಸ್ಯ ಗೊತ್ತೇ..? ನಿಮ್ಮದ್ಯಾವ ರಾಶಿ?

ಕೇತು ಗ್ರಹ (Ketu)
ಕೇತು ಗ್ರಹ ನೀಚ ಸ್ಥಿತಿಯಲ್ಲಿದ್ದರೆ ಅಂತಹ ವ್ಯಕ್ತಿಗಳಿಗೆ ಸಂಧಿವಾತ (Joint pain), ಮಂಡಿ ನೋವು, ಮೂತ್ರ ಸಂಬಂಧಿ (Urinary infection) ಸಮಸ್ಯೆಗಳು ಹೆಚ್ಚು ಕಾಡುತ್ತವೆ.

click me!