ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

By Suvarna NewsFirst Published Jun 21, 2020, 5:03 PM IST
Highlights

ಖಿನ್ನತೆಗೆ ಮನಸ್ಸು ಮತ್ತು ಮೆದುಳು ನೇರವಾಗಿ ಸಂಬಂಧಿಸಿರುತ್ತದೆ. ಖಿನ್ನತೆಯಲ್ಲಿ ಬಳಲುತ್ತಿರುವ ವ್ಯಕ್ತಿ ನಿರಾಶೆ, ಹತಾಶೆ, ಒಂಟಿ ಎಂಬ ಭಾವನೆಯಿಂದ ಒದ್ದಾಡುತ್ತಾ, ಸಮಾಜದಿಂದ ವಿಮುಖನಾಗಲು ಯತ್ನಿಸುತ್ತಾನೆ. ಖಿನ್ನತೆಯು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕವನ್ನು ನೋಡಿ, ಅದರಲ್ಲಿರುವ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ಪರೀಕ್ಷಿಸಿ ಖಿನ್ನತೆಗೆ ಕಾರಣ ಮತ್ತು ಅದಕ್ಕೆ ಮಾಡಬಹುದಾದ ಪರಿಹಾರವನ್ನು ತಿಳಿಯಬಹುದು. ಕೆಲವು ಪರಿಹಾರ ಮತ್ತು ಖಿನ್ನತೆಗೆ ಕಾರಣಗಳನ್ನು ತಿಳಿದುಕೊಳ್ಳೋಣ.

ಆಧುನಿಕ ಯುಗದಲ್ಲಿ ಎಲ್ಲದಕ್ಕೂ ಅವಸರ, ಎಲ್ಲರೊಂದಿಗೆ ಹೆಜ್ಜೆ ಹಾಕಬೇಕೆಂದರೆ ಓಡುವುದು ಅನಿವಾರ್ಯ. ಒತ್ತಡದ ಜೀವನ, ಹಣ ಇದೆ, ಆದರೆ ನೆಮ್ಮದಿ ಇಲ್ಲ. ಎಲ್ಲವನ್ನು ಮತ್ತು ಎಲ್ಲರನ್ನು ಹೊಂದಿದ್ದರೂ ಒಂಟಿ ಎನ್ನುವ ಭಾವನೆ. ಜಗತ್ತಿನೊಂದಿಗೆ ಸರಿಯಾಗಿ ಹೊಂದಿಕೊಳ್ಳಲಾಗದೇ ಚಡಪಡಿಸುವುದು, ಕೊನೆಗೆ ಬದುಕುವುದಕ್ಕಿಂತ ಸಾವೇ ಸುಖ ಎನಿಸುವ ಸಂದರ್ಭ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಈ ರೀತಿಯ ಭಾವನೆಗಳೇ ಖಿನ್ನತೆಯ ಸೂಚನೆಗಳು.

ಖಿನ್ನತೆ ಇಂದು ಸರ್ವೇ ಸಾಮಾನ್ಯವಾಗಿದೆ. ಶೇಕಡಾ 60 ರಿಂದ 70 ಜನಕ್ಕೆ ಒತ್ತಡ ಮತ್ತು ಖಿನ್ನತೆ ಇದೆ. ನೋಡಲು ಎಲ್ಲವೂ ಸಹಜವಾಗಿಯೇ ಕಂಡರೂ ಒಳಗೊಳಗೇ ಹೇಳಿಕೊಳ್ಳಲಾಗದ ತಳಮಳ, ಭಯ. ಅಸಫಲತೆಯ ಕಹಿಯನ್ನು ಪದೇ ಪದೆ ಉಂಡವರಿಗೆ ಈ ರೀತಿ ಆಗುವುದು ಸಹಜವೆನಿಸಬಹುದು, ಆದರೆ ಯಶಸ್ಸಿನ ಎತ್ತರಕ್ಕೇರಿರುವ ಹಲವರು ಖಿನ್ನತೆಯಿಂದ ಬಳಲುವುದನ್ನು ಕೇಳಿದ್ದೇವೆ. ಹಲವು ಜನರು ಇಂತಹ ಸನ್ನಿವೇಶಗಳನ್ನು ದಾಟಿ ಮುಂದೆ ಬರುತ್ತಾರೆ. ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ. ಇದಕ್ಕೇನು ಕಾರಣವಿರಬಹುದು? 

ಗ್ರಹಗಳ ಸ್ಥಾನ ಮತ್ತು ಸ್ಥಿತಿ ಈ ಸಮಸ್ಯೆಗೆ ಕಾರಣವಾಗುತ್ತದೆ. ಖಿನ್ನತೆಯ ಪ್ರಮಾಣಕ್ಕೂ ಗ್ರಹಗಳಿಗೂ ಹತ್ತಿರದ ಸಂಬಂಧವಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. 

ಖಿನ್ನತೆಗೆ ಕಾರಣವಾಗುವ ಗ್ರಹಗಳು

ಚಂದ್ರ, ಬುಧ ಮತ್ತು ಸೂರ್ಯಗ್ರಹಗಳು ಖಿನ್ನತೆಗೆ ಕಾರಣವಾಗುತ್ತವೆ. ನಮ್ಮ ಮನಸ್ಸು, ಬುದ್ಧಿ ಮತ್ತು ಆತ್ಮವನ್ನು ಆಳುವ ಗ್ರಹಗಳಿವು. ಈ ಮೂರೂ ಗ್ರಹಗಳು ನೀಚ ಸ್ಥಿತಿಯ ಮನೆಯಲ್ಲಿ ಸ್ಥಿತವಾಗಿದ್ದರೆ, ಅಂದರೆ ಆರು, ಎಂಟು ಮತ್ತು ಹನ್ನೆರಡನೆ ಮನೆಯು ನಕಾರಾತ್ಮಕ ಯೋಚನೆಗಳನ್ನು ಉತ್ಪತ್ತಿ ಮಾಡುತ್ತವೆ, ಇದರಿಂದ ಖಿನ್ನತೆ ಆರಂಭವಾಗುತ್ತದೆ.
ಅಶುಭ ಗ್ರಹಗಳಾದ ಶನಿ, ಮಂಗಳ, ಸೂರ್ಯ, ರಾಹು ಮತ್ತು ಕೇತು ಗ್ರಹವು ಚಂದ್ರನೊಂದಿಗೆ ಸಂಬಂಧ ಅಥವಾ ಸಂಯೋಗವಿದ್ದಾಗ ಖಿನ್ನತೆ ಉಂಟಾಗುತ್ತದೆ. ವಿಶೇಷವಾಗಿ ಈ ಗ್ರಹಗಳ ದಶೆ ನಡೆಯುತ್ತಿದ್ದಾಗ ಇದರ ಪ್ರಮಾಣ ಹೆಚ್ಚುತ್ತದೆ.



ಇದನ್ನು ಓದಿ:  ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಖಿನ್ನತೆಗೆ ಮುಖ್ಯ ಕಾರಣ ಚಂದ್ರಗ್ರಹ
ವೇದದಲ್ಲಿ ಹೇಳಿರುವಂತೆ ಚಂದ್ರಮಾ ಮನಸೋ ಜಾತಃ. ಇದರ ಅರ್ಥ ಚಂದ್ರನು ಮನಸ್ಸಿಗೆ ಕಾರಕನಾಗಿದ್ದಾನೆ. ನಮ್ಮ ಭಾವನೆಗಳಿಗೆ, ಆಕಾಂಕ್ಷೆಗಳಿಗೆ, ವಿಷಯಗಳನ್ನು ಅನುಭವಿಸುವ ಬಗೆಗೆ ಮತ್ತು ಯೋಚನೆಗಳಿಗೆ ಚಂದ್ರನು ಕಾರಣನಾಗಿರುತ್ತಾನೆ. ಅಶುಭ ಗ್ರಹಗಳಾದ ಶನಿ, ಮಂಗಳ ಅಥವಾ ರಾಹುಕೇತುವಿನ ಪ್ರಭಾವದಲ್ಲಿದ್ದಾಗ ಚಂದ್ರನು ಅಶುಭ ಫಲವನ್ನು ನೀಡುತ್ತಾನೆ. ಈ ಸಂದರ್ಭದಲ್ಲಿ  ಜೀವನದ ಖುಷಿಯನ್ನು ಅನುಭವಿಸುವ ಮನಃಸ್ಥಿತಿ ಇರುವುದಿಲ್ಲ, ಅಷ್ಟೇ ಅಲ್ಲ ಆತ್ಮವಿಶ್ವಾಸದ ಕೊರತೆ ಮತ್ತು ಅಸುರಕ್ಷಿತ ಭಾವ ಬಹಳವಾಗಿ ಕಾಡುತ್ತದೆ. ನೀಚ ಸ್ಥಿತಿಯಲ್ಲಿರುವ ಚಂದ್ರನು ಅನೇಕ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಗೆ ಕಾರಣನಾಗುತ್ತಾನೆ. ಇದು ಮುಂದುವೆರೆದು ನಮ್ಮ ಶರೀರವನ್ನು ಅಶಕ್ತಗೊಳಿಸುತ್ತದೆ.

ಜಾತಕದ ಯಾವ ಮನೆ ಖಿನ್ನತೆಗೆ ಕಾರಣವಾಗುತ್ತದೆ?

- ಜಾತಕದ ಮೊದಲನೆ ಮನೆ ಆರೋಹಣ ಎಂದು ಹೇಳುತ್ತೇವೆ. ಇದು ಮೆದುಳು ಮತ್ತು ಮೆದುಳು ಆಲೋಚಿಸುವ ಬಗೆ ಮತ್ತು ಕಾರ್ಯ ನಿರ್ವಹಿಸುವ ರೀತಿಯನ್ನು ಹೇಳುತ್ತದೆ.

- ಜಾತಕದ ನಾಲ್ಕನೆ ಮನೆ ಮಾನಸಿಕ ನೆಮ್ಮದಿ, ಸಂತೋಷ ಮತ್ತು ಸಮಾಧಾನವನ್ನು ಪ್ರತಿನಿಧಿಸುತ್ತದೆ.



- ಐದನೇ ಮನೆಯು ಬುದ್ಧಿವಂತಿಕೆಯನ್ನು ಹೇಳುತ್ತದೆ. ಇದರಲ್ಲಿ ಏನಾದರೂ ತೊಂದರೆಯಾದರೆ ಅದು ಖಿನ್ನತೆಯನ್ನು ಸೂಚಿಸುತ್ತದೆ.

ಇದನ್ನು ಓದಿ: ಜ್ಯೋತಿಷ್ಯದಲ್ಲಿ ಗಣಗಳು ಹೇಳುತ್ತೆ ನಿಮ್ಮ ಗುಣ, ವಿವಾಹಕ್ಕೂ ಬೇಕು ಗಣ ಸಾಮ್ಯತೆ!

ಖಿನ್ನತೆಯಿಂದ ಮುಕ್ತಿ ಪಡೆಯಲು ಶಾಸ್ತ್ರ ಸೂಚಿಸಿರುವ ಉಪಾಯಗಳು

- ಚಂದ್ರನು ನೀಚ ಸ್ಥಿತಿಯಲ್ಲಿದ್ದರೆ ಅಥವ ನೀಚ ಸ್ಥಾನದಲ್ಲಿ ಸ್ಥಿತನಾಗಿದ್ದರೆ. ಚಂದ್ರನಿಗೆ ಸಂಬಂಧಪಟ್ಟ ಮಂತ್ರಗಳನ್ನು ಪಠಿಸಬೇಕು. ಯಂತ್ರ ಧರಿಸಬೇಕು ಮತ್ತು ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು.

- ಚಂದ್ರನು ಉಚ್ಛ ಸ್ಥಾನದ ಮನೆಯ ಸ್ವಾಮಿಯಾಗಿದ್ದು, ನೀಚ ಸ್ಥಿತಿಯಲ್ಲಿದ್ದರೆ ಆಗ ಹವಳ ಅಥವ ಚಂದ್ರನಿಗೆ ಸಂಬಂಧಿಸಿದ ಕಲ್ಲನ್ನು ಧರಿಸಬೇಕು.

- ನಾಲ್ಕನೆ ಮನೆ ನೀಚ ಸ್ಥಿತಿಯಲ್ಲಿದ್ದು, ಅದರ ಅಧಿಪತಿಯು ನೀಚಗ್ರಹದ ಪ್ರಭಾವದಲ್ಲಿದ್ದರೆ, ಆ ಮನೆಯನ್ನು ಉಚ್ಛಸ್ಥಿತಿಗೆ ತರಲು ಮಂತ್ರಗಳನ್ನು ಪಠಿಸಬೇಕು. ಯಂತ್ರ ಧರಿಸಬೇಕು ಮತ್ತು  ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು.

- ಬುಧ ಗ್ರಹವು ನೀಚ ಸ್ಥಿತಿಯಲ್ಲಿದ್ದು, ಉಚ್ಛ ಸ್ಥಾನದ ಅಧಿಪತಿಯಾಗಿದ್ದರೆ ರತ್ನ ಧಾರಣೆ ಮಾಡಬೇಕು.

ಇದನ್ನು ಓದಿ: ವಿವಾಹದ ಬಳಿಕ ಕುಜ ದೋಷವಿದ್ದದ್ದು ತಿಳಿದರೆ ಈ ರೀತಿ ಮಾಡಿ!

- ಖಿನ್ನತೆಗೆ ಕಾರಣವಾಗಿರುವ ಅಶುಭ ಗ್ರಹಗಳನ್ನು ಆರಾಧಿಸಬೇಕು.

- ಧ್ಯಾನ ಮತ್ತು ಪ್ರಾಣಾಯಾಮವನ್ನು ಪ್ರತಿದಿನ ಮಾಡಬೇಕು.

click me!