Zodiac Sign: ಎಲ್ಲರಿಂದ್ಲೂ ಗುಟ್ಟು ಮರೆಮಾಚುವಲ್ಲಿ ಈ ರಾಶಿಯವರುದ್ದು ಎತ್ತಿದ ಕೈ

Published : Jun 03, 2023, 04:38 PM ISTUpdated : Jun 03, 2023, 05:04 PM IST
Zodiac Sign: ಎಲ್ಲರಿಂದ್ಲೂ ಗುಟ್ಟು ಮರೆಮಾಚುವಲ್ಲಿ ಈ ರಾಶಿಯವರುದ್ದು ಎತ್ತಿದ ಕೈ

ಸಾರಾಂಶ

ಸಂಬಂಧ, ಕುಟುಂಬ, ಒಡಹುಟ್ಟಿದವರ ನಡುವೆ ಅನೇಕ ಗುಟ್ಟುಗಳಿರುತ್ತವೆ. ಸಂಗಾತಿಗೆ ಸಂಬಂಧಿಸಿಯೂ ಹಲವು ಹೇಳಬಾರದ ವಿಚಾರಗಳಿರುತ್ತವೆ. ಆದರೆ, ಎಲ್ಲರೂ ಅವುಗಳನ್ನು ಗುಟ್ಟಾಗಿ ಇಟ್ಟುಕೊಳ್ಳುವುದಿಲ್ಲ. ಕೆಲವೇ ರಾಶಿಗಳ ಜನರಲ್ಲಿ ಮಾತ್ರ ಈ ಗುಣ ಸಹಜವಾಗಿ ಕಂಡುಬರುತ್ತದೆ.   

ಮನೆಯಲ್ಲಿ ಏನಾದರೂ ಘಟನೆಗಳು, ಮನಸ್ತಾಪ, ಪ್ರಮಾದಗಳು ಜರುಗುತ್ತಿರುತ್ತವೆ. ಕೆಲವರು ಇಂತಹ ಘಟನೆಗಳನ್ನು ಗೌಪ್ಯವಾಗಿ ಇಡುತ್ತಾರೆ. ಕೆಲವರು ಇದರ ಬಗ್ಗೆ ಸಮೀಪದವರಲ್ಲಿ ಹೇಳಿಕೊಂಡು ಹಗುರಾತ್ತಾರೆ. ತಮ್ಮದೇ ಮನೆಯ ಗುಟ್ಟುಗಳ ಬಗ್ಗೆ ಕೆಲ ರಾಶಿಗಳ ಜನ ಭಾರೀ ಎಚ್ಚರಿಕೆ ವಹಿಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಪ್ರೀತಿಪಾತ್ರರು ಮಾಡುವ ತಪ್ಪುಗಳನ್ನು ಸಾಕಷ್ಟು ಮುಚ್ಚಿಡುತ್ತಾರೆ. ಈ ಮೂಲಕ ಸಂಗಾತಿಯನ್ನು ಹಲವು ಮುಜುಗರದಿಂದ ಪಾರು ಮಾಡುತ್ತಾರೆ ಹಾಗೂ ಅತ್ಯಂತ ವಿಶ್ವಾಸಾರ್ಹ ಸಂಗಾತಿ ಎನಿಸಿಕೊಳ್ಳುತ್ತಾರೆ. ಅತಿ ಕಠಿಣ ಪರಿಸ್ಥಿತಿಯಲ್ಲೂ ಸಹ ಇವರು ಮನೆಯ ಗುಟ್ಟನ್ನು ಕಾಪಾಡುತ್ತಾರೆ. ಪ್ರೀತಿಪಾತ್ರರ ವಿಶ್ವಾಸ ಕಳೆದುಕೊಳ್ಳಲು ಬಯಸದ ಇವರು, ಇದೇ ಕಾರಣಕ್ಕಾಗಿ ಗೌರವ ಮತ್ತು ಹೆಮ್ಮೆಗೆ ಪಾತ್ರವಾಗುತ್ತಾರೆ. ಜನರು ಆರಾಮವಾಗಿರುವುದಕ್ಕೆ ಪ್ರಯತ್ನಿಸುವ ಇವರು, ಎಷ್ಟೇ ಕಷ್ಟವಾದರೂ ಇನ್ನೊಬ್ಬರಲ್ಲಿ ಹೇಳಿಕೊಳ್ಳುವುದಿಲ್ಲ. ತಮ್ಮ ಪ್ರೀತಿಪಾತ್ರರ ದೌರ್ಬಲ್ಯ, ತಪ್ಪುಗಳನ್ನು ಸಾರ್ವಜನಿಕಗೊಳಿಸುವುದಿಲ್ಲ. ತಾಳ್ಮೆಯಿಂದ ಎಲ್ಲವನ್ನೂ ಆಲಿಸುತ್ತಾರೆ. ಅಷ್ಟೇ ಏಕೆ? ತಮ್ಮ ತವರು ಮನೆಯ ಅಥವಾ ಸ್ನೇಹಿತರ ಗುಟ್ಟುಗಳನ್ನು ಸಂಗಾತಿಯಿಂದಲೂ ಮುಚ್ಚಿಡುತ್ತಾರೆ. ಒಟ್ಟಿನಲ್ಲಿ ಕುಟುಂಬದ ಯಾವುದೇ ಜಗಳ, ಮನಸ್ತಾಪಗಳು ಇವರಿಂದ ಹೊರಗೆ ಹೋಗುವುದಿಲ್ಲ. ಅಂತಹ ರಾಶಿಗಳು ಇವು.

•    ಮೀನ (Pisces)
ಅತ್ಯಂತ ಸೂಕ್ಷ್ಮವಾಗಿರುವ (Sensitive) ಮಾಹಿತಿಯನ್ನು (Information) ನಂಬಿಕೆಯಿಂದ ಹಂಚಿಕೊಳ್ಳಬಹುದಾದ ಜನ ಎಂದರೆ ಮೀನ ರಾಶಿಯವರು. ಇವರಿಂದ ಏನಾದರೂ ಸಲಹೆ ಕೇಳಿದರೂ ಸಹ ಉತ್ತಮ ಸಲಹೆ ನೀಡಬಲ್ಲರು. ಪ್ರೀತಿಪಾತ್ರರು ನೀಡಿದ ಪ್ರತಿಕ್ರಿಯೆಗಳ ಬಗ್ಗೆ ಅವರು ಎಂದಿಗೂ ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಕುಟುಂಬದ ಕುರಿತು ಸಂಗಾತಿ (Partner) ಗುಟ್ಟಾಗಿ ನೀಡಿರುವ ಮಾಹಿತಿಯನ್ನಂತೂ ಎಂದಿಗೂ ರಟ್ಟು (Reveal) ಮಾಡುವುದಿಲ್ಲ. ಉತ್ತಮ ಕೇಳುಗರಾಗಿರುತ್ತಾರೆ. ತಂದೆ-ತಾಯಿಗೆ ಸಂಬಂಧಿಸಿದ ಹಣಕಾಸು ಮಾಹಿತಿಗಳನ್ನು ಮರೆ ಮಾಚುವುದರಲ್ಲಿ (Conceal) ಭಾರೀ ಜಾಣತನ ತೋರುತ್ತಾರೆ. ಸ್ನೇಹಿತರು, ಸಂಬಂಧಿಗಳು (Relatives) ಹಂಚಿಕೊಳ್ಳುವ ಸೂಕ್ಷ್ಮ ವಿಚಾರಗಳನ್ನು ತಮ್ಮ ಸಂಗಾತಿಗೂ ಬಿಟ್ಟುಕೊಡುವುದಿಲ್ಲ. 

ಈ 5 ರಾಶಿಗಳ ಜನರು ಸಂಬಂಧಗಳನ್ನು ಹೂವಿನಂತೆ ಪ್ರೀತಿಸುತ್ತಾರೆ... ನಿಮ್ಮ ರಾಶಿ ಯಾವುದು?

•    ಕರ್ಕಾಟಕ (Cancer)
ಯಾವುದೇ ಸಂಬಂಧದಲ್ಲಿ ಕೆಲವಾದರೂ ಸೂಕ್ಷ್ಮ ವಿಚಾರಗಳಿರುತ್ತವೆ, ಗುಟ್ಟು (Secret) ಗಳಿರುತ್ತವೆ. ಇವುಗಳನ್ನು ಈ ರಾಶಿಯ ಜನ ಎಂದಿಗೂ ಬಹಿರಂಗಪಡಿಸುವುದಿಲ್ಲ. ಕರ್ಕಾಟಕ ರಾಶಿಯ ಜನ ಗಾಸಿಪ್ (Gossip) ಇಷ್ಟಪಡುವುದಿಲ್ಲ. ತಮಗೆ ಸಂಬಂಧಿಸಿಲ್ಲದ ವಿಚಾರಗಳ ಬಗ್ಗೆ ಯಾರೊಂದಿಗೂ ಚರ್ಚಿಸಲು (Discuss) ಹೋಗುವುದಿಲ್ಲ. ಕೆಲವು ಸಂಗತಿಗಳನ್ನು ಗುಟ್ಟಾಗಿ ಇಡುವಂತೆ ಪಾಲಕರು ಸೂಚಿಸಿದರೆ ಅದನ್ನು ಎಂದಿಗೂ ಪಾಲಿಸುತ್ತಾರೆ. 

•    ಕುಂಭ (Aquarius)
ಗುಟ್ಟುಗಳನ್ನು ಕಾಪಾಡುವಲ್ಲಿ ಕುಂಭ ರಾಶಿಯ ಜನ ಎತ್ತಿದ ಕೈ. ಇವರು ನೇರವಾದ ಹಾಗೂ ಅತ್ಯಂತ ಸಹಜ ಧೋರಣೆ (Down to Earth) ಹೊಂದಿರುವುದರಿಂದ  ಹಲವರು ಇವರಲ್ಲಿ ತಮ್ಮ ಗುಟ್ಟುಗಳನ್ನು ಹೇಳಿಕೊಳ್ಳಬಹುದು. ಆದರೆ, ಸ್ನೇಹಿತರ ಪ್ರೀತಿ-ಪ್ರೇಮದ (Affairs) ವಿಚಾರಗಳನ್ನು ಮಾತ್ರ ಕೆಲವೊಮ್ಮೆ ಇತರರ ಬಳಿ ಮಾತನಾಡುತ್ತಾರೆ. ಆದ್ದಾಗ್ಯೂ ಇವರು ಗುಟ್ಟುಗಳನ್ನು ಕಾಪಾಡುವಲ್ಲಿ ವಿಶ್ವಾಸಾರ್ಹ (Trust) ವ್ಯಕ್ತಿ.  ಒಡಹುಟ್ಟಿದವರು ತಮ್ಮ ಗುಟ್ಟುಗಳನ್ನು ಹೇಳಿದರೆ ಅದನ್ನು ಕಾಪಾಡುತ್ತಾರೆ. ಪಾಲಕರ ಭಾವನಾತ್ಮಕ ಗುಟ್ಟುಗಳನ್ನು ರಕ್ಷಿಸುತ್ತಾರೆ.  ಇಂಥ ವಿಚಾರಗಳನ್ನು ಅವರು ತಮ್ಮ ಸಂಗಾತಿ ಹಾಗೂ ಆಪ್ತ ಸ್ನೇಹಿತರಿಂದಲೂ ಮುಚ್ಚಿಡುತ್ತಾರೆ.

Vastu Tips: ರಾಶಿ ಪ್ರಕಾರ ನಿಮ್ಮ ಮನೆಯನ್ನು ಹೇಗೆ ಅಲಂಕರಿಸಬೇಕು?

•    ಸಿಂಹ (Leo)
ಸಮಸ್ಯೆಗಳನ್ನು (Problems) ಹೇಳಿಕೊಳ್ಳಲು ಮತ್ತು ಮನಃಪೂರ್ವಕವಾಗಿ ವಿಚಾರಗಳನ್ನು ಹಂಚಿಕೊಳ್ಳುವಲ್ಲಿ ಸಿಂಹ ರಾಶಿಯವರು ಅತ್ಯಂತ ಸೂಕ್ತವಾದ ಜನ. ಭಾವನಾತ್ಮಕ ಬೆಂಬಲ (Emotional Support) ನೀಡುತ್ತಾರೆ ಹಾಗೂ ಪ್ರೀತಿ-ಕಾಳಜಿ ವ್ಯಕ್ತಪಡಿಸುತ್ತಾರೆ. ಇವರೊಂದಿಗೆ ಯಾವುದೇ ಹಿಂಜರಿಕೆಯಿಲ್ಲದೆ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಕುಟುಂಬಕ್ಕೆ (Family) ಸಂಬಂಧಿಸಿದ ಗುಟ್ಟುಗಳನ್ನು ತಮ್ಮಲ್ಲಿಯೇ ಕಾಪಾಡುತ್ತಾರೆ. ಕುಟುಂಬದ ಸದಸ್ಯರಿಂದ ಭಾವನಾತ್ಮಕವಾಗಿ ನೋವು ಅಥವಾ ಮೋಸಕ್ಕೆ ಒಳಗಾಗುವರೆಗೂ ಇವರು ಅವರಿಗೆ ಬೆಂಬಲವಾಗಿರುತ್ತಾರೆ. ಇತರರ ವ್ಯಕ್ತಿತ್ವವನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ.   

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ