ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

By Suvarna News  |  First Published Jul 5, 2020, 3:38 PM IST

ಸ್ವಭಾವದ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಇಷ್ಟ. ವ್ಯಕ್ತಿಗೆ ತನ್ನ ಗುಣ ಏನು ಎಂಬುದು ಗೊತ್ತಿದ್ದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಜುಲೈ ತಿಂಗಳಿನಲ್ಲಿ ಜನಿಸಿದವರ ಗುಣ, ಸ್ವಭಾವಗಳು ಹೇಗಿರುತ್ತವೆ? ಅವರಿಗೆ ಯಾವ ರೀತಿಯ ಜಯ ಸಿಗುತ್ತದೆ? ಅಥವಾ ಸಮಸ್ಯೆಗಳಾಗುತ್ತವೆಯೇ? ಅವರು ಎಲ್ಲರಿಗಿಂತ ಹೇಗೆ ಭಿನ್ನವಾಗಿರುತ್ತಾರೆ ಎಂಬಿತ್ಯಾದಿ ಅಂಶಗಳೇ ಬಗ್ಗೆ ತಿಳಿಯೋಣ...


ಪ್ರತಿಯೊಬ್ಬರ ಗುಣ ಸ್ವಭಾವಗಳಲ್ಲಿ ವ್ಯತ್ಯಾಸಗಳಿರುತ್ತವೆ. ಅವಳಿ-ಜವಳಿ ಮಕ್ಕಳಲ್ಲೇ ಒಂದೇ ಗುಣಗಳಿರುವುದಿಲ್ಲ, ಹಾಗಾಗಿ ಬೇರೆ ಬೇರೆ ವರ್ಷ, ತಿಂಗಳು ವಾರಗಳಲ್ಲಿ ಹುಟ್ಟಿದವರ ಸ್ವಭಾವಗಳು ಸಹಜವಾಗಿಯೇ ಭಿನ್ನವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಹುಟ್ಟಿದ ದಿನಾಂಕ, ಸಮಯ, ವಾರ ಎಲ್ಲವನ್ನೂ ನೋಡಿ ಭವಿಷ್ಯದ ವಿಚಾರವನ್ನು ತಿಳಿಸಲಾಗುತ್ತದೆ.

ಒಂದೇ ದಿನ ಹುಟ್ಟಿದ್ದರೂ ಸ್ವಭಾವ ಭಿನ್ನವಾಗಿರುವಂತೆ ಬೇರೆ ಬೇರೆ ಮಾಸಗಳಲ್ಲಿ ಹುಟ್ಟಿದವರ ಗುಣ, ಲಕ್ಷಣಗಳು ಬೇರೆಯಾಗಿರುತ್ತದೆ. ಹಾಗೆಯೇ ಪ್ರತಿಯೊಬ್ಬರಿಗೂ ಅವರು ಹುಟ್ಟಿದ ತಿಂಗಳಿನ ಮಹತ್ವವನ್ನು ತಿಳಿಯುವ ಕುತೂಹಲವಿರುತ್ತದೆ. 



ಆದರೆ, ಇಲ್ಲಿ ಇರುವ 12 ತಿಂಗಳಿನಲ್ಲಿ ಪ್ರತಿ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವವು ತುಸು ಭಿನ್ನವಾಗಿರುತ್ತದೆ. ಅವರ ಹಾವಭಾವ, ನಡವಳಿಕೆ, ಬದುಕನ್ನು ನೋಡುವ ರೀತಿ, ಉತ್ಸಾಹ ಇಲ್ಲವೇ ಸೋಮಾರಿತನ ಹೀಗೆ ಹತ್ತು ಹಲವು ಗುಣಗಳನ್ನು ಆಯಾ ತಿಂಗಳಲ್ಲಿ ಜನಿಸಿದವರು ಹೊಂದಿರುತ್ತಾರೆ. ಹೀಗಾಗಿ ಈಗ ಜುಲೈನಲ್ಲಿ ಹುಟ್ಟಿದವರ ಸ್ವಭಾವಗಳನ್ನು ತಿಳಿಯೋಣ.

ಇದನ್ನು ಓದಿ: ಗಂಡ-ಹೆಂಡತಿ ಸದಾ ಜಗಳವಾಡುತ್ತಿದ್ದರೆ ದಾರಿದ್ರ್ಯ ಗ್ಯಾರಂಟಿ

ಬುದ್ಧಿಗಿಂತ ಹೃದಯದ ಮಾತು ಕೇಳುವವರು
ಜುಲೈನಲ್ಲಿ ಜನಿಸಿದವರು ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವವರು. ಯಾವುದೇ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಬುದ್ಧಿಗಿಂತ ಹೆಚ್ಚು ಹೃದಯದ ಮಾತನ್ನು ಕೇಳುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ವಿಷಯಕ್ಕೆ ಬಂದರೆ ಕೊಂಚ ತಡಬಡಿಸುವ ಸ್ವಭಾವ ಇವರದ್ದು. ಸರಳ ಮತ್ತು ನಿರ್ಮಲ ಹೃದಯ ಇವರದ್ದಾದ್ದರಿಂದ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಾರೆ.

ಉತ್ಸಾಹ ಹೆಚ್ಚು, ಆದರೆ ಸ್ವಲ್ಪ ರಿಸ್ಕ್
ಯಾವುದೇ ಕೆಲಸವನ್ನು ಮಾಡಬೇಕೆಂದು ಮನಸ್ಸು ಮಾಡಿದರೆಂದಾದರೆ ಅದನ್ನು ಮುಗಿಸುವವರೆಗೂ ಇವರಿಗೆ ಸಮಾಧಾನವಿರುವುದಿಲ್ಲ. ಬೇರೆ ತಿಂಗಳಿನಲ್ಲಿ ಜನಿಸಿದವರಿಗೆ ಹೋಲಿಕೆ ಮಾಡಿದರೆ ಉತ್ಸಾಹ ಮತ್ತು ಶಕ್ತಿ ಇವರಲ್ಲಿ ಹೆಚ್ಚು. ಅತಿ ಉತ್ಸಾಹದ ಕಾರಣದಿಂದಲೇ ಕೆಲವು ಬಾರಿ ಉತ್ತಮ ಅವಕಾಶಗಳು ಕೈ ತಪ್ಪಿ ಹೋಗುತ್ತವೆ.

ಆರ್ಥಿಕ ಸಮಸ್ಯೆ ಇಲ್ಲ, ರುಚಿ ಪ್ರಿಯರು
ಆಹಾರದ ವಿಷಯದಲ್ಲಿ ಹೆಚ್ಚು ರುಚಿಯಾದದನ್ನು ಬಯಸುತ್ತಾರೆ. ಹಣದ ವಿಚಾರಕ್ಕೆ ಹೆಚ್ಚು ಯೋಚಿಸದೇ ಖರ್ಚು ಮಾಡುತ್ತಾರೆ. ಆದರೂ ಇವರಿಗೆ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಉತ್ತಮ ಆಹಾರವನ್ನು, ದೊಡ್ಡ ಬಂಗಲೆಯಲ್ಲಿರಲು ಹೆಚ್ಚು ಇಷ್ಟ ಪಡುತ್ತಾರೆ.

Tap to resize

Latest Videos



ಸ್ನೇಹ ಸಂಬಂಧಕ್ಕೆ ಹೆಚ್ಚಿನ ಒತ್ತು
ಜುಲೈನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸ್ನೇಹಿತರ ಗುಂಪಿನಲ್ಲಿ ಇವರೇ ಪ್ರಮುಖರು. ಸ್ನೇಹ ಮತ್ತು ಸಂಬಂಧಗಳಿಗೆ ಹೆಚ್ಚು ಗೌರವ ನೀಡುತ್ತಾರೆ. ಜೊತೆಗೆ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. ವ್ಯಕ್ತಿಯ ವ್ಯಕ್ತಿತ್ವವನ್ನು ಬೇಗ ಗುರುತಿಸುವ ಕಲೆ ಇವರಲ್ಲಿರುತ್ತದೆ.

ಇದನ್ನು ಓದಿ: ಚಾತುರ್ಮಾಸದಲ್ಲಿ ವಿಶೇಷ ಪುಣ್ಯಫಲ ಪಡೆಯಲು ಹೀಗೆ ಮಾಡಿ!

ಷೇರು ವಹಿವಾಟಲ್ಲಿ ಇವರೇ ಬೆಸ್ಟ್
ಸಾಮಾನ್ಯವಾಗಿ ಜುಲೈನಲ್ಲಿ ಜನಿಸಿದವರು ಗಣಿತದಲ್ಲಿ ಹೆಚ್ಚು ಚುರುಕಿಲ್ಲದಿದ್ದರೂ ಬ್ಯುಸಿನೆಸ್, ಮಾರ್ಕೆಟಿಂಗ್‌ ಮತ್ತು ಷೇರು ವಹಿವಾಟಿನಲ್ಲಿ ನಿಸ್ಸೀಮರಾಗಿರುತ್ತಾರೆ. ಈ ಕ್ಷೇತ್ರಗಳು ಆಗಿ ಬರುತ್ತದೆ. ಅಲ್ಲದೆ, ಪತ್ರಿಕಾ ವೃತ್ತಿ, ಆಟ, ಸಂಗೀತ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ.

ಮೃದು ಮಾತು, ವಿವಾದಾತೀತರು
ಈ ತಿಂಗಳಲ್ಲಿ ಜನಿಸಿದವರು ಸುಮ್ಮನೆ ಯಾವ ವಿವಾದಗಳಿಗೂ ಸಿಲುಕುವುದಿಲ್ಲ. ಕಾರ್ಯ ಕುಶಲತೆ ಮತ್ತು ಮೃದು ಮಾತಿನಿಂದ ಎಲ್ಲವನ್ನೂ ಸರಿಪಡಿಸಿಕೊಳ್ಳುವ ಚಾಕಚಕ್ಯತೆ ಹೊಂದಿರುತ್ತಾರೆ.

ಆಲೋಚನೆ ಸದಾ ಸಕಾರಾತ್ಮಕ
ಪರಿಸ್ಥಿತಿ ಯಾವುದೇ ಇದ್ದರೂ, ಎಲ್ಲ ಸಂದರ್ಭಗಳಲ್ಲೂ ಸಕಾರಾತ್ಮಕವಾಗಿ ಯೋಚನೆ ಮಾಡುವ ಗುಣದವರು. ಎಲ್ಲರೂ ಇಷ್ಟಪಡುವಂಥ ವ್ಯಕ್ತಿತ್ವ ಇವರದ್ದು. ಬದುಕಿನಲ್ಲಿ ದೊಡ್ಡ ಕನಸುಗಳನ್ನು ಕಾಣುವವರು ಇವರಾಗಿರುತ್ತಾರೆ.

ಇದನ್ನು ಓದಿ: ಜಾತಕದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಎದುರಾಗುವ ತೊಂದರೆ, ಪಾರಾಗುವ ಬಗೆ ತಿಳಿಯಿರಿ!

ಸ್ವನಿಯಂತ್ರಣ ಇವರ ಪ್ಲಸ್, ಕುಟುಂಬವೇ ಜಗತ್ತು
ಭಾವನಾ ಜೀವಿಯಾಗಿರುವ ಇವರಿಗೆ ಕುಟುಂಬವೇ ಎಲ್ಲ. ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವ ಕಲೆ ಇವರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಯಾವುದೇ ವಿಷಯಕ್ಕೂ ಉದ್ವೇಗಕ್ಕೆ ಒಳಗಾಗದೇ ಸಮಾಧಾನದಿಂದ ಬಗೆಹರಿಸುವ ಚಾಣಾಕ್ಷತನ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ.

click me!