ಜನ್ಮರಾಶಿಗೂ ನಿಮ್ಮ ಆಹಾರಕ್ಕೂ, ನಿಮ್ಮ ಆರೋಗ್ಯಕ್ಕೂ ಸಂಬಂಧ ಇದೆ ಅಂದ್ರೆ ನಂಬ್ತೀರಾ? ಹೌದು. ನಿಮಗೇನು ಆರೋಗ್ಯಕರ ಅಂತ ತಿಳಿಯೋಣ ಬನ್ನಿ.
ಮೇಷ ರಾಶಿ
ನಿಮ್ಮ ಗುಣ ಬೆಂಕಿ. ಹೀಗಾಗಿ ಬೇಯಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಹಸಿಯಾದ ಆಹಾರವನ್ನು ಅಷ್ಟೊಂದು ಸೇವಿಸುವುದು ನಿಮಗೆ ಆರೋಗ್ಯಕರ ಅಲ್ಲ. ಆದರೆ ಸೌತೆಕಾಯಿ, ಮೊಸರು ಇತ್ಯಾದಿಗಳನ್ನು ಆಗಾಗ ಸೇವಿಸುತ್ತಿರಬೇಕು. ಇದು ಅತಿಯಾಗಬಾರದು. ಬೆಳ್ಳುಳ್ಳಿಯನ್ನು ಹುರಿದು ತಿನ್ನಿರಿ.
ವೃಷಭ ರಾಶಿ
ನಿಮ್ಮ ಗುಣ ಭೂಮಿ. ಭೂಮಿಯ ಒಳಗೆ ಬೆಳೆಯುವ ಗಡ್ಡೆ ಗೆಣಸುಗಳು ನಿಮಗೆ ಇಷ್ಟ. ಉದಾಹರಣೆಗೆ ಆಲೂಗಡ್ಡೆ, ಕ್ಯಾರೆಟ್ ಇತ್ಯಾದಿ. ಆದರೆ ಮಳೆಗಾಲದಲ್ಲಿ ಇವುಗಳನ್ನು ಸೇವಿಸುವುದು ವಿಹಿತವಲ್ಲ. ಯಾಕೆಂದರೆ ಇವುಗಳ ಗುಣ ತೀರಾ ತಂಪು. ಹೆಚ್ಚು ಸೇವಿಸಿದರೆ ನೆಗಡಿ, ಶೀತ, ಕೆಮ್ಮು ಉಂಟಾಗಬಹುದು. ಆಗಾಗ ಒಂದಿಷ್ಟು ನೀರುಳ್ಳಿ ಸೇವಿಸಿ.
ಮಿಥುನ ರಾಶಿ
ನಿಮ್ಮ ಗುಣ ಗಾಳಿ. ನೀವು ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಇಷ್ಟಪಡುತ್ತೀರಿ. ಇದು ಆರೋಗ್ಯಕರ ಕೂಡ. ಇವುಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಚೆನ್ನಾಗಿ ಮೇಂಟೇನ್ ಮಾಡಬಹುದು. ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಿ ಪ್ರೊಟೀನ್ ದೇಹಕ್ಕೆ ಸಿಗಲಿ.
ಕಟಕ ರಾಶಿ
ನಿಮ್ಮ ಗುಣ ನೀರು. ನೀರಿನ ಆಹಾರವನ್ನು ಹೆಚ್ಚಾಗಿ ಇಷ್ಟಪಡಬಹುದು. ಮಾಂಸಾಹಾರಿಗಳಾಗಿದ್ದರೆ ಮೀನಿನ ಆಹಾರ ನಿಮಗಿಷ್ಟ. ಹಾಗೇ ಇತರ ನೀರಿನ ಅಂಶ ಹೆಚ್ಚಾಗಿ ಇರುವ ಜ್ಯೂಸ್ ಇತ್ಯಾದಿ, ಹಣ್ಣುಗಳು ನಿಮಗೆ ಇಷ್ಟ. ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಅದರಲ್ಲೂ ದಾಳಿಂಬೆ ನಿಮ್ಮನ್ನು ಆರೋಗ್ಯವಾಗಿಟ್ಟಿರುತ್ತದೆ.
undefined
ಸಿಂಹ ರಾಶಿ
ನಿಮ್ಮ ಗುಣ ಬೆಂಕಿ. ಕಾಂಟಿನೆಂಟಲ್ ಫುಡ್ ನಿಮಗೆ ಇಷ್ಟವಾಗಿದ್ದೀತು. ಆಗಾಗ ಹೊರಗೆ ಹೋಗಿ ಡೈನಿಂಗ್ ಮಾಡಿ ಬರುವುದು ನಿಮಗಿಷ್ಟ. ಆದರೆ ಮನೆಗೆ ಬಂದ ಕೂಡಲೇ ಶುಂಠಿ, ಬೆಳ್ಳುಳ್ಳಿ, ಅಮೃತಬಳ್ಳೀ ಮುಂತಾದ ಕಷಾಯ ಮಾಡಿ ಕುಡಿಯಿರಿ. ಇದು ಆರೋಗ್ಯದ ಬ್ಯಾಲೆನ್ಸ್ ಮಾಡುತ್ತದೆ.
ಕನ್ಯಾ ರಾಶಿ
ನಿಮ್ಮ ಗುಣ ಭೂಮಿ. ನೀವು ಮೊಟ್ಟೆಯನ್ನು ಇಷ್ಟಪಡುತ್ತೀರಿ. ಮೊಟ್ಟೆಯನ್ನು ಬೇಯಿಸಿ ತಿನ್ನುವುದರಿಂದ ಅದರ ಹಳದಿಯಲ್ಲಿರುವ ವಿಟಮಿನ್ ಡಿ ಸಿಗುತ್ತದೆ. ಹಾಗೆಯೇ ಸೊಪ್ಪು ತರಕಾರಿ ಕೂಡ ಸೇವಿಸುತ್ತಾ ಇರಿ. ಚಿಕ್ಕು ಹಣ್ಣೂ ತಿನ್ನುವುದರಿಂದ ಕಬ್ಬಿಣದ ಅಂಶ ಹೆಚ್ಚು ಪಡಯುತ್ತೀರಿ.
ತುಲಾ ರಾಶಿ
ನಿಮ್ಮ ಗುಣ ಗಾಳಿ. ವಾಯು ಅಂಶ ಅಧಿಕವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಡಿ, ಕರಿದ ಪದಾರ್ಥಗಳನ್ನು ನೀವು ತುಂಬಾ ಇಷ್ಟಪಡುತ್ತೀರಿ ಎಂಬುದು ಗೊತ್ತು. ಆದರೆ ಅದಕ್ಕೆ ತಕ್ಕಂತೆ ಇತರ ಪೌಷ್ಟಿಕ ಆಹಾರಗಳನ್ನೂ ಸೇವಿಸಿಕೊಂಡು ಆರೋಗ್ಯ ಮೇಂಟೇನ್ ಮಾಡಿ.
ಜಾತಕದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಎದುರಾಗುವ ತೊಂದರೆ, ಪಾರಾಗುವ ಬಗೆ ತಿಳಿಯಿರಿ! ...
ವೃಶ್ಚಿಕ ರಾಶಿ
ನೀವು ಬಹಳ ಬೋಲ್ಡ್ ಆಗಿರುವುದರಿಂದ ಹೊಸ ಹೊಸ ಆಹಾರಗಳನ್ನು ತಿಂಡಿಗಳನ್ನು ಟ್ರೈ ಮಾಡುತ್ತೀರಿ. ಇಮಗೆ ತಿಳಿಯದ ಆಹಾರಗಳನ್ನೂ ರುಚಿ ನೋಡುವ ಚಪಲ ನಿಮಗಿದೆ. ಆದರೆ ಇದರಿಂದ ಬೊಜ್ಜಿನ ಸಮಸ್ಯೆ ಎದುರಿಸಬೇಕಾದೀತು. ಅಕ್ಕಿ, ಉದ್ದಿನ ಆಹಾರಗಳನ್ನು ಅವಾಯ್ಡ್ ಮಾಡಿ.
ಧನು ರಾಶಿ
ನೀವು ಕೇಕ್, ಚಾಕಲೇಟ್ ಮುಂತಾದವುಗಳನ್ನು ಹೆಚ್ಚು ಇಷ್ಟಪಡುತ್ತೀರಿ. ಆದರೆ ಇವುಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಾಳಿಕೊಳ್ಳುವ ಸೂಕ್ತ ರೋಗ ನಿರೋಧಕ ಶಕ್ತಿ ನಿಮ್ಮಲ್ಲಿ ಇರುವುದಿಲ್ಲ. ಆದ್ದರಿಂದ ಮೊಟ್ಟೆ, ಮೊಳಕೆ ಕಾಳು. ಈರುಳ್ಳೀ ಮುಂತಾದವನ್ನು ಹೆಚ್ಚು ತಿನ್ನಿ.
ಚಾತುರ್ಮಾಸದಲ್ಲಿ ವಿಶೇಷ ಪುಣ್ಯಫಲ ಪಡೆಯಲು ಹೀಗೆ ಮಾಡಿ! ...
ಮಕರ ರಾಶಿ
ನೀವು ನಿಮಗೆ ಅನಿಸಿದ್ದನ್ನು ತಿನ್ನಬಹುದು. ಆದರೆ ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಿ ಅದನ್ನು ಕರಗಿಸಬೇಕು. ಇಲ್ಲವಾದರೆ ಮಧ್ಯ ವಯಸ್ಸಿನಲ್ಲಿ ಬೊಜ್ಜಿನ ಸಮಸ್ಯೆ ನಿಮಗೆ ಎದುರಾದೀತು. ಇದನ್ನು ತಡೆಗಟ್ಟಲು ನೀರನ್ನು ಸರಿಯಾಗಿ. ಸ್ವಲ್ಪ ಹೆಚ್ಚೇ ಆದರೂ ಪರವಾಗಿಲ್ಲ ಕುಡಿಯಿರಿ.
ಕುಂಭ ರಾಶಿ
ಪಾಸ್ತಾ, ಪಿಜ್ಜಾ ಮುಂತಾದವುಗಳನ್ನು ಹೆಚ್ಚು ಇಷ್ಟಪಡುತ್ತೀರಿ. ಅಂದರೆ ಸಾಂಪ್ರದಾಯಿಕ ತಿನಿಸುಗಳಿಗಿಂತ ಹೊರಗಿನ ತಿನಿಸುಗಳು, ಹೊಸಬಗೆಯ ತಿನಿಸುಗಳು ನಿಮಗೆ ಇಷ್ಟ. ಇದರ ಜೊತೆಗೆ ಹಸಿರು ತರಕಾರಿ, ಹಣ್ಣು ಬ್ಯಾಲೆನ್ಸ್ ಮಾಡಲು ಕಲಿಯಬೇಕಿದೆ.
ಗಂಡ-ಹೆಂಡತಿ ಸದಾ ಜಗಳವಾಡುತ್ತಿದ್ದರೆ ದಾರಿದ್ರ್ಯ ಗ್ಯಾರಂಟಿ.. ...
ಮೀನ ರಾಶಿ
ಸ್ಪೈಸೀ ಫುಡ್ ನಿಮಗೆ ಇಷ್ಟವೆಂದು ನಿಮಗೆ ಗೊತ್ತು. ಇದು ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ. ಅತಿಯಾದ ಮಸಾಲೆಯುಕ್ತ ಪದಾರ್ಥ ಆರೋಗ್ಯಕ್ಕೆ ಹಾನಿಕರ. ತುಸು ಉಷ್ಣದೇಹದವರಾದ ನೀವು ಎಳನೀರು. ಜೀರಿಗೆ ನೀರು, ಮೆಂತ್ಯ ಇತ್ಯಾದಿಗಳನ್ನು ಹೆಚ್ಚು ಸೇವಿಸಿ.