ನಾಡದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ಶಾಶ್ವತ ದೀಪಾಲಂಕಾರ ಮಾಡುವಂತೆ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಸಲಹೆ ನೀಡಿದರು.
ಮೈಸೂರು (ಅ.16): ನಾಡದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ಶಾಶ್ವತ ದೀಪಾಲಂಕಾರ ಮಾಡುವಂತೆ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಸಲಹೆ ನೀಡಿದರು. ಚಾಮುಂಡಿಬೆಟ್ಟದಲ್ಲಿ ಭಾನುವಾರ ದಸರಾ ಉದ್ಘಾಟಿಸಿದ ಮಾತನಾಡಿದ ಅವರು, ಮೈಸೂರಿಗೆ ಕಳಶಪ್ರಾಯವಾದ ಚಾಮುಂಡಿಬೆಟ್ಟದಲ್ಲಿ ಶಾಶ್ವತ ದೀಪಾಲಂಕಾರ ಮಾಡಿದರೆ ವಿಮಾನ ನಿಲ್ದಾಣದಲ್ಲಿ ನಿಂತು ನೋಡಿದರೂ ಕಾಣುತ್ತದೆ ಎಂದು ಹೇಳಿದರು. ಹಂಸಲೇಖ ಹೇಳಿದ ಅಂಬಾರಿ ಆನೆ ಅಭಿಮನ್ಯು ವಿವೇಕದ ಕಥೆ… ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಅಭಿಮನ್ಯು ಆನೆಯ ವಿವೇಕದ ಕಥೆಯೊಂದನ್ನು ಹಂಸಲೇಖ ಹೇಳಿದರು.
ಕಾಡಿನಲ್ಲಿ ಕೆಲಸ ಮಾಡುವ ವೇಳೆ ಲಾರಿಗೆ ಮರದ ದಿಮ್ಮಿಗಳನ್ನು ತುಂಬುವ ಕೆಲಸ ಮಾಡುತ್ತಿದ್ದ ಅಭಿಮನ್ಯು ಮಾವುತ ಹೇಳಿದಂತೆ ಕೇಳುತ್ತಿತ್ತು. ಆದರೆ ಅಂದು ಕೊನೆಗೆ ಎರಡು ದಿಮ್ಮಿಗಳನ್ನು ಲಾರಿಗೆ ಏರಿಸದೇ ಹಾಗೆ ಉಳಿಸುತ್ತದೆ. ಮಾವುತ ಎಷ್ಟು ಹೇಳಿದರೂ ಕೇಳುವುದಿಲ್ಲ. ಕೊನೆಗೆ ಅಧಿಕಾರಿಗಳ ಆದೇಶದ ಮೇರೆಗೆ ಮಾವುತನ ಸೂಚನೆಯಂತೆ ಒಂದು ದಿಮ್ಮಿಯನ್ನು ಏರಿಸಿದಾಗ ಲಾರಿಯಲ್ಲಿ ತುಂಬಿದ್ದ ಎಲ್ಲ ದಿಮ್ಮಿಗಳು ಕೆಳಗುರುಳುತ್ತವೆ. ಲಾರಿಯ ಸಾಮರ್ಥ್ಯ ಮೀರಿದ್ದರಿಂದ ಎಲ್ಲ ದಿಮ್ಮಿಗಳು ಕೆಳಗೆ ಉರುಳುತ್ತವೆ. ಆ ಲಾರಿಯ ಸಾಮರ್ಥ್ಯದ ಅರಿವು ಅಭಿಮನ್ಯು ಆನೆಗೆ ಇರುತ್ತದೆ. ಆ ಆನೆಗೆ ಗೊತ್ತಿರುವ ವಿವೇಕ ನಮ್ಮ ಹಿರಿಯರಿಗೆ ಬೇಡವೇ.? ಬದುಕನ್ನು ಎಲ್ಲರೂ ಆನಂದಿಸಬೇಕು. ಅದನ್ನು ಕಸಿದುಕೊಳ್ಳುವ ಕೆಲಸ ಮಾಡಬಾರದು ಎಂದರು.
undefined
ಸಮಸ್ತ ಕನ್ನಡಿಗರ ಪ್ರತಿನಿಧಿಯಾಗಿ ದಸರಾ ಮಹೋತ್ಸವ ಉದ್ಘಾಟಿಸುತ್ತಿದ್ದೇನೆ: ಹಂಸಲೇಖ
ಸುತ್ತೂರು ಮಠಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಭೇಟಿ: ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಭೇಟಿ ಶ್ರೀ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಅ. 15 ರಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಈ ಬಾರಿಯ ದಸರಾ ಉದ್ಘಾಟಿಸಲಿರುವ ಅವರು, ಅದಕ್ಕೂ ಮುನ್ನಾ ಸುತ್ತೂರು ಮಠಕ್ಕೆ ಪತ್ನಿ ಲತಾ ಹಂಸಲೇಖ ಅವರೊಂದಿಗೆ ಭೇಟಿ ನೀಡಿ, ಮಠದ ಗದ್ದುಗೆಗೆ ತೆರಳಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆರ್ಶೀವಾದ ಪಡೆದು, ಕೆಲವು ಸಮಯ ಶ್ರೀಗಳ ಜೊತೆ ಮಾತುಕತೆ ನಡೆಸಿದರು. ನಂತರ ಹಂಸಲೇಖ ಅವರು ಕೀಬೋರ್ಡ್ ನುಡಿಸಿದರೆ, ಅವರ ಪತ್ನಿ ಗಾಯನ ಪ್ರಸ್ತುತಪಡಿಸಿದರು. ಶ್ರಿ ಮಠದ ವತಿಯಿಂದ ಹಂಸಲೇಖ ಅವರಿಗೆ ಮಂಗಳವಾದ್ಯದೊಂದಿಗೆ ಜೆಎಸ್ ಎಸ್ ಕಾಲೇಜಿನ ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.