ಇಡೀ ಮೈ ಒದ್ದೆ ಆಗುವಷ್ಟು ಪರ್ಫ್ಯೂಮ್ ಹೊಯ್ದುಕೊಳ್ಳೋರನ್ನು ನೀವು ನೋಡಿರಬಹುದು. ಮತ್ತೆ ಕೆಲವರು ರಾತ್ರಿ ಬೆವರಿನ ವಾಸನೆ ಬರಬಾರದು ಅಂತಾ ಸೆಂಟ್ ಹಾಕಿಕೊಳ್ತಾರೆ. ಇದು ನಿಮಗೆ ಹಿತವೆನ್ನಿಸಿದ್ರೂ ಅದ್ರಿಂದಾಗುವ ನಷ್ಟ ಅಪಾರ.
ನಮ್ಮಲ್ಲಿ ಪರ್ಫ್ಯೂಮ್ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಕೆಲ ವ್ಯಕ್ತಿಗಳು ಹತ್ತಿರಕ್ಕೆ ಬರುವ ಮೊದಲೇ ಅವರ ಪರ್ಫ್ಯೂಮ್ ಪರಿಮಳ ಮೂಗಿಗೆ ಬಡಿದಿರುತ್ತದೆ. ಯಾರು ಬಂದ್ರು ಎಂಬುದನ್ನು ಅವರ ಸುಂಗಧ ದ್ರವ್ಯದಿಂದಲೇ ಪತ್ತೆ ಮಾಡ್ಬಹುದು. ಬೆಳಿಗ್ಗೆ ಎದ್ದು ಸ್ನಾನ ಮಾಡ್ಲಿ ಬಿಡಲಿ ಮೈಗೊಂದಿಷ್ಟು ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳೋದನ್ನು ಜನರು ಮರೆಯೋದಿಲ್ಲ. ಮನೆಯಿಂದ ಹೊರಗೆ ಹೋಗುವಾಗ ಸುಗಂಧ ದ್ರವ್ಯ ದೇಹಕ್ಕೆ ತಾಗಿರಬೇಕು. ಈಗ ಪರ್ಸ್ ನಲ್ಲಿಡಬಹುದಾದ ಅನೇಕ ಪರ್ಫ್ಯೂಮ್ ಲಭ್ಯವಿದ್ದು ಜನರು ಅಗತ್ಯ ಎನ್ನಿಸಿದಾಗೆಲ್ಲ ಅದನ್ನು ಹಾಕಿಕೊಳ್ತಾರೆ.
ದಿನಕ್ಕೆ ಮೂರ್ನಾಲ್ಕು ಬಾರಿ ಸೆಂಟ್ ಹೊಡೆದುಕೊಳ್ಳುವ ಜನರಿದ್ದಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಪರ್ಫ್ಯೂಮ್ (Perfume ) ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಈ ಪರ್ಫ್ಯೂಮ್ ನಮ್ಮ ದೇಹದಿಂದ ಬರುವ ಬೆವರಿನ ವಾಸನೆಯನ್ನು ಹೋಗಲಾಡಿಸುವುದಲ್ಲದೆ ತಾಜಾತನವನ್ನು ನೀಡುತ್ತದೆ. ಪರ್ಫ್ಯೂಮ್ ಬಳಸುವ ವ್ಯಕ್ತಿಗೆ ಅದನ್ನು ಯಾವಾಗ ಬಳಕೆ ಮಾಡಬೇಕು ಎಂಬುದು ಗೊತ್ತಿರಬೇಕು. ನೀವು ದಿನದ ಎಲ್ಲ ಸಮಯದಲ್ಲಿ ಪರ್ಫ್ಯೂಮ್ ಬಳಸೋದು ಒಳ್ಳೆಯದಲ್ಲ. ಅನೇಕರಿಗೆ ಇದ್ರ ಬಗ್ಗೆ ಮಾಹಿತಿ ಇಲ್ಲ. ಜನರು ಹೊತ್ತಲ್ಲದ ಹೊತ್ತಲ್ಲಿ ಪ್ರಫ್ಯೂಮ್ ಹಾಕಿಕೊಳ್ಳುತ್ತಾರೆ. ಇದು ನಿಮಗೆ ತಾಜಾತನ ನೀಡಬಹುದು. ಆದ್ರೆ ದುಷ್ಟಶಕ್ತಿ (Evil Spirit) ಯನ್ನು ಆಹ್ವಾನಿಸುತ್ತದೆ. ನಮ್ಮ ಶಾಸ್ತ್ರ (Shastra ) ದಲ್ಲಿ ಪರ್ಫ್ಯೂಮ್ ಯಾವಾಗ ಬಳಸಬಾರದು ಹಾಗೂ ಅದಕ್ಕೆ ಕಾರಣವೇನು ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ.
ಅಂಗೈ ಮತ್ತು ಪಾದ ತುರಿಸಿದರೆ ಏನರ್ಥ ಗೊತ್ತಾ..? ಅದೃಷ್ಟವೋ..? ದುರಾದೃಷ್ಟವೋ..?
ಪರ್ಫ್ಯೂಮ್ ಬಳಕೆ ಬಗ್ಗೆ ಶಾಸ್ತ್ರ ಹೇಳೋದೇನು? : ಬೆಳಿಗ್ಗೆ ಸ್ನಾನ ಮಾಡಿ ಪರ್ಫ್ಯೂಮ್ ಹಾಕಿಕೊಳ್ಳುವ ಅಭ್ಯಾಸ ನಿಮಗಿದ್ದರೆ ಅದನ್ನು ಬದಲಿಸಬೇಕಾಗಿಲ್ಲ. ಅದೇ ನೀವು ರಾತ್ರಿ ಮನೆಯಿಂದ ಹೊರಗೆ ಹೋಗ್ತಿದ್ದೀರಿ ಎಂದಾಗ ಅಥವಾ ಮನೆಯಲ್ಲೇ ಸುಗಂಧ ದ್ರವ್ಯ ಹಾಕಿಕೊಳ್ಳುವ ಅಭ್ಯಾಸ ನಿಮಗಿದೆ ಎಂದ್ರೆ ಅದನ್ನು ಇಂದೇ ಬಿಟ್ಟುಬಿಡಿ.
ಧರ್ಮಗ್ರಂಥಗಳಲ್ಲಿ ರಾತ್ರಿ ಸುಗಂಧ ದ್ರವ್ಯ ಬಳಕೆಯನ್ನು ನಿಷೇಧಿಸಲಾಗಿದೆ. ರಾತ್ರಿ ಪರ್ಫ್ಯೂಮ್ ಹಾಕಿಕೊಳ್ಳೋದು ನಿಮಗೆ ನಷ್ಟವನ್ನುಂಟು ಮಾಡುತ್ತದೆ ಎಂದು ನಂಬಲಾಗಿದೆ. ನಕಾರಾತ್ಮಕ ಶಕ್ತಿಗಳು ರಾತ್ರಿಯಲ್ಲಿ ನಮ್ಮ ಸುತ್ತಲೂ ಸಕ್ರಿಯವಾಗುತ್ತವೆ. ಅವು ಯಾರನ್ನಾದ್ರೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ನಿಮ್ಮ ಸುಗಂಧ ದ್ರವ್ಯ ದೆವ್ವ, ಭೂತಗಳನ್ನು ಸೆಳೆಯಬಹುದು. ಇದ್ರಿಂದಾಗಿ ಅವರ ನಿಯಂತ್ರಣಕ್ಕೆ ನೀವು ಒಳಪಡುವ ಸಾಧ್ಯತೆ ಇರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಬರೀ ಸೆಂಟ್ ಮಾತ್ರವಲ್ಲ ಯಾವುದೇ ಸುಗಂಧ ಕೂಡ ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ನಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶ ಮಾಡಿದ್ರೆ ಸಕಾರಾತ್ಮಕ ಶಕ್ತಿ ನಾಶ ಆಗುತ್ತದೆ. ನಕಾರಾತ್ಮಕ ಶಕ್ತಿಯಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಆರ್ಥಿಕ ನಷ್ಟ ಸಂಭವಿಸುತ್ತದೆ. ಹಾಗಾಗಿಯೇ ಶಾಸ್ತ್ರಗಳಲ್ಲಿ ರಾತ್ರಿ ಪರ್ಫ್ಯೂಮ್ ಬಳಸದಂತೆ ಸಲಹೆ ನೀಡಲಾಗಿದೆ.
ಗುರು ದೆಸೆ ,ಈ 3 ರಾಶಿಯವರ ಲಕ್ ಜೊತೆ ಲೈಫೂ ಚೇಂಜ್!
ಪರ್ಫ್ಯೂಮ್ ಬಳಸುವ ಮುನ್ನ ಇದು ತಿಳಿದಿರಲಿ : ಪ್ರರ್ಫ್ಯೂಮ್ ನಮ್ಮ ದೇಹದ ವಾಸನೆ ತೆಗೆಯುತ್ತೆ ಎನ್ನುವ ಕಾರಣಕ್ಕೆ ಅದನ್ನು ಅತಿಯಾಗಿ ಬಳಸಿದ್ರೆ ಅಪಾಯ ಎದುರಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಮ್ಮನ್ನು ಕಾಡುತ್ತದೆ. ಚರ್ಮದ ಮೇಲೆ ದುದ್ದು, ಅಲರ್ಜಿ ಕಾಡುತ್ತದೆ. ಅನೇಕ ಪರ್ಫ್ಯೂಮ್ ನಲ್ಲಿ ಯೂರೋ ಟಾಕ್ಸಿನ್ ಇದ್ದು ಇದು ಸೆಂಟ್ರಲ್ ನರ್ವ್ಸ್ ಮೇಲೆ ಪರಿಣಾಮ ಬೀರುತ್ತದೆ.
ನೀವು ಬಳಸುವ ಸುಗಂಧ ದ್ರವ್ಯ ನಿಮ್ಮ ಹಾರ್ಮೋನ್ ಮೇಲೂ ಪರಿಣಾಮ ಬೀರುತ್ತದೆ. ಅದ್ರಲ್ಲಿ ಬಳಸುವ ರಾಸಾಯನಿಕಗಳು ಹಾರ್ಮೋನ್ ಏರುಪೇರಿಗೆ ಕಾರಣವಾಗುತ್ತವೆ. ಮಹಿಳೆಯರ ಮುಟ್ಟಿನ ಮೇಲೆ ಇದು ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಬೆವರು ದೇಹದಿಂದ ಹೊರಗೆ ಹೋಗೋದು ಒಳ್ಳೆಯದು. ಆದ್ರೆ ಕೆಲ ಪರ್ಫ್ಯೂಮ್, ಬೆವರನ್ನು ತಡೆ ಹಿಡಿಯುತ್ತದೆ. ಇದ್ರಿಂದ ಬೆವರು ದೇಹದಲ್ಲೆ ಸಂಗ್ರಹವಾಗಿ ದೇಹಕ್ಕೆ ಹಾನಿಯುಂಟು ಮಾಡುತ್ತದೆ.