Astrology Tips: ಇನ್ನಾರು ತಿಂಗಳಲ್ಲಿ ಶ್ರೀಮಂತರಾಗ್ತಾರೆ ಈ ರಾಶಿಯವರು

By Suvarna NewsFirst Published Jul 9, 2022, 3:47 PM IST
Highlights

ಗ್ರಹ ತನ್ನ ರಾಶಿ ಬದಲಿಸಿದಂತೆ ಪ್ರತಿಯೊಂದು ರಾಶಿ ಮೇಲೂ ಪರಿಣಾಮ ಬೀರುತ್ತದೆ. ಶನಿ ಹೆಸರು ಕೇಳ್ತಿದ್ದಂತೆ ಜನರು ಹೆದರ್ತಾರೆ. ಈ ಬಾರಿ ರಾಶಿ ಬದಲಿಸುವ ಶನಿ ಮೂರು ರಾಶಿಯವರಿಗೆ ಖುಷಿ ನೀಡ್ತಿದ್ದಾನೆ.
 

ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ (Planet). ಹಾಗಾಗಿಯೇ ಶನಿ ಗ್ರಹಕ್ಕೆ ಎಲ್ಲಾ 12 ರಾಶಿಯನ್ನು ದಾಟಲು 30 ವರ್ಷಗಳು ಬೇಕಾಗುತ್ತವೆ. ಸದ್ಯ ಶನಿ ಕುಂಭ ರಾಶಿ (Aquarius) ಯಲ್ಲಿ ಹಿಮ್ಮುಖ ಸ್ಥಾನದಲ್ಲಿದ್ದಾನೆ. ಏಪ್ರಿಲ್ 29 ರಂದು ಶನಿಯು 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಜುಲೈ 12 ರಂದು ಶನಿ, ಮಕರ ರಾಶಿ (Capricorn) ಯನ್ನು ಪ್ರವೇಶಿಲಿದ್ದಾನೆ. ಶನಿಯ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಯವರ ಮೇಲೆ ಆಗಲಿದೆ. ಶನಿಯು ಮಕರ ರಾಶಿ ಪ್ರವೇಶ ಮಾಡ್ತಿದ್ದಂತೆ ಮೂರು ರಾಶಿಯವರ ಮುಖದಲ್ಲಿ ನಗು ಮೂಡಲಿದೆ. ಮೂರು ರಾಶಿಯವರು ವಿಶೇಷ ಫಲವನ್ನು ಪಡೆಯಲಿದ್ದಾರೆ. ಹೆಚ್ಚಿನ ಪ್ರಯೋಜನ ಮೂರು ರಾಶಿಯವರಿಗೆ ಸಿಗಲಿದೆ. ಶನಿ ಮಕರ ರಾಶಿಯಲ್ಲಿ 6 ತಿಂಗಳು ನೆಲೆಸಲಿದ್ದಾನೆ. ಈ ಆರು ತಿಂಗಳು ಯಾವೆಲ್ಲ ರಾಶಿಗೆ ಪ್ರಯೋಜವಾಗಲಿದೆ ಎಂಬುದನ್ನು ನಾವಿಂದು ಹೇಳ್ತೇವೆ. 

ಶನಿ ಮಕರ ರಾಶಿಗೆ ಪ್ರವೇಶಿಸುತ್ತಿದ್ದಂತೆ ಈ ರಾಶಿಯವರಿಗಾಗಲಿದೆ ಲಾಭ: 

Latest Videos

ವೃಷಭ ರಾಶಿ (Taurus): ಶನಿಯ ಹಿಮ್ಮುಖ ಸಂಚಾರವು ವೃಷಭ ರಾಶಿಯವರಿಗೆ ಹೆಚ್ಚು ಲಾಭವಾಗಲಿದೆ. ವೃಷಭ ರಾಶಿಯವರ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಗತಿ ಆಗಲಿದೆ. ಉದ್ಯೋಗ (Employment) ದಲ್ಲಿರುವ ವೃಷಭ ರಾಶಿಯವರಿಗೆ ದೊಡ್ಡ ಹುದ್ದೆ ಲಭಿಸಲಿದೆ. ಹೊಸ ಉದ್ಯೋಗ ಸಿಗುವ ಸಾಧ್ಯತೆಯೂ ಈ ಆರು ತಿಂಗಳಲ್ಲಿ ಹೆಚ್ಚಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಈ ಸಮಯ  ತುಂಬಾ ಒಳ್ಳೆಯದು. ನ್ಯಾಯ ದೇವತೆ ಶನಿಯು ಸದ್ಯ ಸ್ಥಗಿತಗೊಂಡಿರುವ ವೃಷಭ ರಾಶಿಯವರ ಕೆಲಸವನ್ನು ಪೂರ್ಣಗೊಳಿಸಲಿದ್ದಾನೆ. ಈ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಹಣದ ಹೊಳೆಯಾಗಲಿದೆ. ಆದಾಯದಲ್ಲಿ ಭಾರಿ ಹೆಚ್ಚಳ ಕಂಡುಬರಲಿದೆ. ವೃಷಭ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗಲಿವೆ. ಖಾಲಿಯಾಗಿದ್ದ ಬ್ಯಾಂಕ್ ಬ್ಯಾಲೆನ್ಸ್ ತುಂಬಲಿದೆ. ಒಟ್ಟಿನಲ್ಲಿ ಮುಂದಿನ ಆರು ತಿಂಗಳು ವೃಷಭ ರಾಶಿಯವರ ಆರ್ಥಿಕ ಜೀವನ ಊಹಿಸಲಾರದಷ್ಟರ ಮಟ್ಟಿಗೆ ಸುಧಾರಿಸಲಿದೆ.

ಇದನ್ನೂ ಓದಿ: Morning Habits: ಕೈ ನೋಡಿ ಲಕ್ಷ್ಮೀನ ನೆನೆಯಿರಿ, ಶುಭವಾಗುತ್ತೆ

ಧನು ರಾಶಿ (Sagittarius) : ಶನಿಯ ಈ ರಾಶಿ ಬದಲಾವಣೆ ಧನು ರಾಶಿಯವರಿಗೆ ಅದೃಷ್ಟ ತರಲಿದೆ. ಈ ರಾಶಿಯವರ ಜೇಬು ತುಂಬಲಿದೆ. ಧನು ರಾಶಿಯವರ ಆರ್ಥಿಕ ಸ್ಥಿತಿ (Financial Status ) ಉತ್ತಮವಾಗಲಿದೆ. ಹಲವು ಕಡೆಯಿಂದ ಹಣ ಹರಿದು ಬರಲಿದೆ. ಈ ಆರು ತಿಂಗಳಲ್ಲಿ ಧನು ರಾಶಿಯವರು ಹೂಡಿಕೆ ಮಾಡ್ಬಹುದು. ಹೂಡಿಕೆಯಿಂದ ಅವರಿಗೆ ಲಾಭ ಸಿಗಲಿದೆ. ಕೆಲವರು ನಿರೀಕ್ಷೆಗಿಂತ ಹೆಚ್ಚಿನ ಆದಾಯವನ್ನು ಪಡೆಯಲಿದ್ದಾರೆ. ಎಲ್ಲೋ ಸಿಕ್ಕಿಬಿದ್ದ ಹಣ ಮರಳಿ ಇವರ ಕೈಗೆ ಸಿಗಲಿದೆ. ಧನು ರಾಶಿಯ ಉದ್ಯಮಿಗಳಿಗೂ ಈ ಸಮಯದಲ್ಲಿ ಲಾಭವಾಗಲಿದೆ. ಅವರು ವ್ಯಾಪಾರವನ್ನು  ಹೆಚ್ಚಿನ ಹೂಡಿಕೆ ಮಾಡಲು ಇದು ಸರಿಯಾದ ಸಮಯ.

ಇದನ್ನೂ ಓದಿ: ಪತಿ – ಪತ್ನಿಯ ನಡುವಲ್ಲಿದ್ದರೆ ಮನಸ್ತಾಪ ಧರಿಸಿ ಈ ರತ್ನ

ಮೀನ ರಾಶಿ : ಹಿಮ್ಮುಖ ಶನಿಯ ಸಂಚಾರದ ಲಾಭ ಪಡೆಯಲಿರುವ ಇನ್ನೊಂದು ರಾಶಿ ಮೀನ. ಮೀನ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ. ಉದ್ಯೋಗ - ವ್ಯವಹಾರದಲ್ಲಿ ಲಾಭ ಪಡೆಯಲಿದ್ದಾರೆ. ಮೀನ ರಾಶಿಯವರ ಆದಾಯ ಹೆಚ್ಚಾಗಲಿದೆ. ಹೊಸ ಮೂಲಗಳಿಂದ ಆದಾಯ ಹರಿದು ಬರಲಿದೆ. ಈ ಆರು ತಿಂಗಳಲ್ಲಿ ಮೀನ ರಾಶಿಯವರ  ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಕಂಡು ಬರಲಿದೆ. ವ್ಯಾಪಾರಿಗಳಿಗೆ ದೊಡ್ಡ ವ್ಯವಹಾರ ಶುರು ಮಾಡಲು ಇದು ಒಳ್ಳೆಯ ಅವಕಾಶವಾಗಿದೆ.  ಮೀನ ರಾಶಿಯವರಿಗೆ ಈ ಸಮಯದಲ್ಲಿ ಬಡ್ತಿ, ಹಣ, ಪ್ರತಿಷ್ಠೆ ಎಲ್ಲವೂ ಪ್ರಾಪ್ತಿಯಾಗಲಿದೆ. ಈವರೆಗೆ ನಿಂತಿದ್ದ ಕೆಲಸ ಪೂರ್ಣಗೊಳ್ಳಲಿದೆ. ಎಲ್ಲ ವಿವಾದಗಳು ಬಗೆಹರಿದು ಜೀವನದಲ್ಲಿ ನೆಮ್ಮದಿ ಪ್ರಾಪ್ತಿಯಾಗಲಿದೆ.

click me!