ಸಣ್ಣಪುಟ್ಟದ್ದಕ್ಕೂ ನೋಯುವ, ಸಿಟ್ಟಾಗುವ, ಅಳುವ ರಾಶಿಚಕ್ರಗಳಿವು..

By Suvarna News  |  First Published Jul 11, 2022, 4:57 PM IST

ಈ ನಾಲ್ಕು ರಾಶಿಯವರು ಸಣ್ಣ ಪುಟ್ಟ ಮಾತಿಗೂ ನೋಯುವವರು, ಸಿಟ್ಟಾಗುವವರು, ಅಳುವವರು.. ಹಿಂಗ್ ಹೇಳಿದ್ವಿ ಅಂತ ಅದಕ್ಕೂ ಅಳ್ಬೇಡಿ ಮತ್ತೆ!


ಕೆಲವರು ತುಂಬಾ ಒರಟು ಮತ್ತು ಕಠಿಣ ಸ್ವಭಾವದವರಾಗಿದ್ದರೆ ಕೆಲವರು ತುಂಬಾ ಭಾವನಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ. ಅವರು ತುಂಬಾ ಸೂಕ್ಷ್ಮವಾಗಿರುತ್ತಾರೆ, ಬಹಳ ಸಣ್ಣ ವಿಷಯಕ್ಕೂ ತುಂಬಾ ನೋಯುತ್ತಾರೆ. ಸಣ್ಣಪುಟ್ಟ ವಿಚಾರಕ್ಕೆ ಭಾವುಕರಾಗುತ್ತಾರೆ. ಜ್ಯೋತಿಷ್ಯದಲ್ಲಿ, ಅಂಥ 4 ರಾಶಿಚಕ್ರ ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ. ಕೆಲವೊಮ್ಮೆ ಭಾವನಾತ್ಮಕತೆಯ ಅತಿಯಾದ ಹೆಚ್ಚಳವು ಈ ಜನರಿಗೆ ಹಾನಿ ಮಾಡುತ್ತದೆ. ಅವರು ಸದಾ ಒಂದಿಲ್ಲೊಂದು ವಿಚಾರಕ್ಕೆ ಕೊರಗುತ್ತಾ, ನೋಯುತ್ತಾ, ಹಿಂಸೆ ಅನುಭವಿಸುತ್ತಿರುತ್ತಾರೆ. ಮಾನಸಿಕವಾಗಿ ಬೇಗ ಜರ್ಝರಿತವಾಗುತ್ತಾರೆ. ಖಿನ್ನತೆ, ಆತಂಕ ಅನುಭವಿಸುತ್ತಾರೆ. ಸೂಕ್ಷ್ಮ ಜನರು ಹೆಚ್ಚಿನ ಭಾವನೆಗಳನ್ನು ಹೊಂದಿರುವುದರಿಂದ, ಅವರು ಇತರರಿಗಿಂತ ಹೆಚ್ಚಾಗಿ ಅಳುವುದನ್ನು ಕಾಣಬಹುದು. ಇದೆಲ್ಲ ಕೇಳಿದಾಗ ಎಲ್ಲಾ ಸೂಕ್ಷ್ಮ ಜನರು ಅಂತರ್ಮುಖಿಗಳಾಗಿರುತ್ತಾರೆ ಎಂದು ನೀವು ಊಹಿಸಬಹುದು. ಆದರೆ ಸಾಕಷ್ಟು ಔಟ್‌ಗೋಯಿಂಗ್ ಆಗಿರುವವರು ಕೂಡಾ ಸಂವೇದನಾಶೀಲರಾಗಿರುವ ಸಾಮಾಜಿಕ ಜನರಿದ್ದಾರೆ. 

ಅವರು ವಿಷಯಗಳನ್ನು ಇತರರಿಗಿಂತ ಹೆಚ್ಚು ಆಳವಾಗಿ ಅನುಭವಿಸುವುದರಿಂದ, ಅವರು ಕೆಟ್ಟ ಅನುಭವಗಳಿಗೆ ಸಂಬಂಧಿಸಿದ ಅನೇಕ ನಕಾರಾತ್ಮಕ ಭಾವನೆಗಳನ್ನು ಆಂತರಿಕಗೊಳಿಸುತ್ತಾರೆ ಮತ್ತು ಅಂತಿಮವಾಗಿ, ಆ ಭಾವನೆಗಳು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಂಥ ಹೀಗೆ ಸೂಕ್ಷ್ಮವಾಗಿರುವವರಿಗೆ ಮತ್ತೊಬ್ಬರನ್ನು ಸಾಂತ್ವನಗೊಳಿಸುವ ಶಕ್ತಿಯೂ ಹೆಚ್ಚು ಎಂಬುದು ಉತ್ತಮ ವಿಷಯವಾಗಿದೆ.

Tap to resize

Latest Videos

ಯಾವ ರಾಶಿಯವರಲ್ಲಿ ಇಂಥ ಅತಿಯಾದ ಭಾವುಕತೆ ಹೆಚ್ಚು ನೋಡೋಣ. 

ಕನ್ಯಾ ರಾಶಿ(Virgo)
ಸಿನಿಮಾ ನೋಡುತ್ತಾ ಜೋರಾಗಿ ಅಳುವವರನ್ನು ನೋಡಿರುತ್ತೀರಿ. ಅವರು ಹೆಚ್ಚಿನ ಪಕ್ಷ ಕನ್ಯಾ ರಾಶಿಗೆ ಸೇರಿರುತ್ತಾರೆ. ಏಕೆಂದರೆ ಈ ರಾಶಿಯವರು ಇತರರ ನೋವನ್ನು ನೋಡಿ ಅಳುವವರು, ಬೇರೊಬ್ಬರು ಕಷ್ಟ ಹೇಳಿಕೊಂಡಾಗ ತಮ್ಮ ಕಣ್ಣೀರನ್ನು ಒರೆಸಿಕೊಳ್ಳುವವರು. ಅವರು ಸಣ್ಣಸಣ್ಣ ವಿಷಯಗಳನ್ನೂ ಹೃದಯಕ್ಕೆ ತೆಗೆದುಕೊಳ್ಳುತ್ತಾರೆ ಮತ್ತು ಅವುಗಳಿಂದ ಬೇಗನೆ ಚೇತರಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಅವರ ಭಾವನಾತ್ಮಕತೆಯು ತುಂಬಾ ಹೆಚ್ಚಾಗುತ್ತದೆ, ಸ್ವಾರ್ಥಿಗಳು ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ.

ಗುರು ಪೂರ್ಣಿಮಾ 2022: ಗುರುವಿನ ಎದುರು ಮರೆತೂ ಈ 7 ತಪ್ಪುಗಳನ್ನು ಮಾಡ್ಬೇಡಿ

ಕರ್ಕಾಟಕ ರಾಶಿ(Cancer)
ಇವರು ಹೊರಗಿನಿಂದ ಎಷ್ಟೇ ಒರಟು ಮತ್ತು ಕಠಿಣ ವ್ಯಕ್ತಿಗಳಂತೆ ಕಾಣಿಸಬಹುದು, ಆದರೆ ಅವರು ಒಳಗಿನಿಂದ ಭಾವನಾತ್ಮಕವಾಗಿ ದುರ್ಬಲರಾಗಿರುತ್ತಾರೆ. ಇತರರ ದುಃಖವನ್ನು ತಮ್ಮದೆಂದು ಪರಿಗಣಿಸಿ, ಅವರಿಗೆ ಸಂಪೂರ್ಣವಾಗಿ ಸಹಾಯ ಮಾಡುತ್ತಾರೆ, ಆದರೆ ಯಾರಾದರೂ ಅವರನ್ನು ನೋಯಿಸಿದರೆ ಮಾತ್ರ ಪೂರ್ತಿ ಜರ್ಝರಿತವಾಗುತ್ತಾರೆ. ಪರಿಚಯದವರು ತಮ್ಮ ಬೆನ್ನಿನ ಹಿಂದೆ ಯಾವುದೇ ಕೆಟ್ಟದ್ದನ್ನು ಮಾಡಿದಾಗ, ಅದನ್ನು ಸಹಿಸಲು ಅವರಿಂದ ಸಾಧ್ಯವಾಗುವುದಿಲ್ಲ ಮತ್ತು ಅವರೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸುತ್ತಾರೆ.

ಮೇಷ ರಾಶಿ(Aries)
ಮೇಷ ರಾಶಿಯ ಜನರು ತಮ್ಮ ಸಂಬಂಧಗಳನ್ನು ಪೂರ್ಣ ಹೃದಯದಿಂದ ಒಪ್ಪಿಕೊಳ್ಳುತ್ತಾರೆ. ಹತ್ತಿರದವರನ್ನು ಪ್ರೀತಿಸುತ್ತಾರೆ. ಆದರೆ ಅವರು ಸುಳ್ಳುಗಾರರು, ಮೋಸಗಾರರನ್ನು ಇಷ್ಟಪಡುವುದಿಲ್ಲ. ಯಾರಾದರೂ ಪರಿಚಿತರು ಅವರಿಗೆ ಮೋಸ ಮಾಡಿದರೆ, ಅವರು ತೀವ್ರವಾಗಿ ಗಾಯಗೊಳ್ಳುತ್ತಾರೆ. ಇದು ಅವರಲ್ಲಿ ಒತ್ತಡ ಉಂಟು ಮಾಡುವ ಜೊತೆಗೆ, ಅವರ ಮಾನಸಿಕ ಸ್ಥಿತಿಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

ಶುಕ್ರ ಶನಿ ಗೋಚಾರ 2022: ಈ ಐದು ರಾಶಿಗಳಿಗೆ ಹಿಗ್ಗಿನ ಸುಗ್ಗಿ

ಮೀನ ರಾಶಿ(Pisces)
ರಾಶಿಚಕ್ರದಲ್ಲಿ ಮೀನವು ಅತ್ಯಂತ ಸೂಕ್ಷ್ಮ ಚಿಹ್ನೆ. ಇವರು ಅಲ್ಟ್ರಾ-ಇಂಟ್ಯೂಟಿವ್, ತುಂಬಾ ಲವ್ವಿ-ಡವ್ವಿ, ರೋಮ್ಯಾಂಟಿಕ್. ಹಗಲುಗನಸು ಕಾಣುತ್ತಿರುತ್ತಾರೆ. ಕನಸಿನ ಲೋಕವೇ ಸೊಗಸು ಎನಿಸುವುದರಿಂದ ವಾಸ್ತವವನ್ನು ಒಪ್ಪಿಕೊಳ್ಳುವುದು ಅವರಿಗೆ ಕಷ್ಟವಾಗುತ್ತದೆ. ಹೀಗಾಗಿ, ವಾಸ್ತವದ ಎಲ್ಲ ವಿಷಯಗಳಿಗೂ ಅವರು ಭಾವುಕರಾಗಿ ಪ್ರತಿಕ್ರಿಯಿಸುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!