ಗುರು ಪೂರ್ಣಿಮಾ 2022: ಗುರುವಿನ ಎದುರು ಮರೆತೂ ಈ 7 ತಪ್ಪುಗಳನ್ನು ಮಾಡ್ಬೇಡಿ

By Suvarna News  |  First Published Jul 11, 2022, 12:14 PM IST

ಗುರು ಪೂರ್ಣಿಮಾ ಹಬ್ಬದಂದು ಕಲಿಸಿದ ಗುರುಗಳನ್ನು ಗೌರವಿಸಲಾಗುತ್ತದೆ. ಅಂದ ಹಾಗೆ ಗುರುವಿನ ಎದುರಲ್ಲಿ ನೀವು ಮಾಡಬಾರದ ಏಳು ತಪ್ಪುಗಳು ಯಾವೆಲ್ಲ ಗೊತ್ತಾ?


ಹಿಂದೂ ಧರ್ಮದಲ್ಲಿ ಗುರುವಿಗೆ ವಿಶೇಷ ಮಹತ್ವವಿದೆ. ಗುರುವನ್ನು ದೇವರಿಗಿಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಗುರುವಿನ ಮಹತ್ವವನ್ನು ವಿವರಿಸಲು, ಗುರು ಪೂರ್ಣಿಮಾ 2022(Guru Purnima 2022)ರ ಹಬ್ಬವನ್ನು ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.

ಈ ದಿನದಂದು ಗುರುವಿನ ಆಶೀರ್ವಾದ ಪಡೆದವರ ಜೀವನ ಯಶಸ್ವಿಯಾಗುತ್ತದೆ. ಈ ಬಾರಿ ಗುರು ಪೂರ್ಣಿಮೆಯ ಹಬ್ಬವನ್ನು ಜುಲೈ 13, ಬುಧವಾರದಂದು ಆಚರಿಸಲಾಗುವುದು. ಗುರು ಪೂರ್ಣಿಮಾ ಹಬ್ಬವನ್ನು ಮಹರ್ಷಿ ವೇದ ವ್ಯಾಸ(Veda Vyas)ರಿಗೆ ಸಮರ್ಪಿಸಲಾಗಿದೆ. ದೇವಗುರು ಬೃಹಸ್ಪತಿಯನ್ನು ಕೂಡ ಈ ದಿನ ವಿಶೇಷವಾಗಿ ಪೂಜಿಸಲಾಗುತ್ತದೆ. ಗುರುವಿಗೆ ಸಂಬಂಧಿಸಿದ ನಮ್ಮ ಗ್ರಂಥಗಳಲ್ಲಿ ಗುರುವನ್ನು ಭೇಟಿಯಾಗಲು ಹೋದರೆ, ಅವರೊಂದಿಗೆ ಹೇಗೆ ವರ್ತಿಸಬೇಕು ಎಂಬಿತ್ಯಾದಿ ಹಲವು ನಿಯಮಗಳನ್ನು ನೀಡಲಾಗಿದೆ. ಗುರು ಪೂರ್ಣಿಮೆಯ ಸಂದರ್ಭದಲ್ಲಿ ನೀವು ಗುರುವಿನ ಮುಂದೆ ಹೋದರೆ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ. ಅವರ ಎದುರು ಈ ತಪ್ಪುಗಳನ್ನು(Mistakes) ತಪ್ಪಿಯೂ ಮಾಡಬೇಡಿ. 

Tap to resize

Latest Videos

1. ಧಾರ್ಮಿಕ ಗ್ರಂಥಗಳ ಪ್ರಕಾರ, ಶಿಷ್ಯನು ಗುರುವಿನ ಎದುರು ಒಂದೇ ರೀತಿಯ ಆಸನದಲ್ಲಿ ಕುಳಿತುಕೊಳ್ಳಬಾರದು. ಗುರುಗಳು ಕುರ್ಚಿಯ ಮೇಲೆ ಕುಳಿತಿದ್ದರೆ, ನಾವು ಕುರ್ಚಿಯ ಮೇಲೆ ಕುಳಿತುಕೊಳ್ಳಬಾರದು. ಬದಲಿಗೆ ಕೆಳಗೆ ಬಟ್ಟೆ ಹಾಸಿಕೊಂಡು ಕೂರಬಹುದು. ಗುರು ನೆಲದ ಮೇಲೆ ಕುಳಿತರೆ ಶಿಷ್ಯನೂ ನೆಲದ ಮೇಲೆ ಕುಳಿತುಕೊಳ್ಳಬಹುದು. ಗುರುವು ನಿಂತಿದ್ದಾಗ ಶಿಷ್ಯ ಕುಳಿತಿರುವುದು ಸಭ್ಯತೆಯಲ್ಲ. ಅವರು ನಿಂತಾಗ ನೀವೂ ನಿಂತು ಅವರಿಗೆ ಕೂರಲು ಹೇಳಬೇಕು. 

ಶುಕ್ರ ಶನಿ ಗೋಚಾರ 2022: ಈ ಐದು ರಾಶಿಗಳಿಗೆ ಹಿಗ್ಗಿನ ಸುಗ್ಗಿ

2. ಗುರುಗಳ ಮುಂದೆ ಗೋಡೆ ಅಥವಾ ಇತರ ಯಾವುದೇ ಆಸರೆಯಲ್ಲಿ ಕುಳಿತುಕೊಳ್ಳಬೇಡಿ, ಅವರ ಮುಂದೆ ಕಾಲುಗಳನ್ನು ಚಾಚಿ ಕುಳಿತುಕೊಳ್ಳಬೇಡಿ. ಹಾಗೆ ಮಾಡುವುದು ಗುರುವನ್ನು ಅವಮಾನಿಸಿದಂತೆ. ಗುರುವಿನ ಎದುರು ಕುಳಿತಾಗ ಕಾಲಿನ ಮೇಲೆ ಕಾಲು ಹಾಕುವುದು, ಕಾಲು ಕುಣಿಸುವುದು ಮಾಡಬೇಡಿ. ಅವರೆದುರು ಕೊಂಚ ಬಾಗಿ ಗೌರವ ತೋರುವ ಹಾಗೆ ಕುಳಿತುಕೊಳ್ಳಬೇಕು.
3. ಕೆಲವರಿಗೆ ನಿಂದನೀಯ ಮಾತುಗಳನ್ನಾಡುವ ಅಭ್ಯಾಸವಿರುತ್ತದೆ, ಆದರೆ ಗುರುವಿನ ಮುಂದೆ ಅಪ್ಪಿತಪ್ಪಿಯೂ ಅಶ್ಲೀಲ ಪದಗಳನ್ನು ಬಳಸಬಾರದು. ಅಷ್ಟೇ ಅಲ್ಲ, ಯಾರನ್ನೂ ನಿಂದಿಸಕೂಡದು. 
4. ನೀವು ಗುರುಗಳನ್ನು ಭೇಟಿ ಮಾಡಲು ಹೋದಾಗ, ಖಾಲಿ ಕೈಯಲ್ಲಿ ಹೋಗಬೇಡಿ, ಏನಾದರೂ ಉಡುಗೊರೆಯನ್ನು ತೆಗೆದುಕೊಂಡು ಹೋಗಬೇಕು. ಯಾರಿಗಾದರೂ ಉಡುಗೊರೆ ನೀಡಲು ಸಾಧ್ಯವಾಗದಿದ್ದರೆ, ನೀವು ಅವರಿಗೆ ಮಾಲೆ ಹಾಕಿ ಗೌರವಿಸಬಹುದು.
5. ಗುರುವಿನ ಮುಂದೆ ಎಂದಿಗೂ ಹಣವನ್ನು ಪ್ರದರ್ಶಿಸಬೇಡಿ. ನೀವು ಎಷ್ಟೇ ಗಳಿಸಿದ್ದರೂ ಅದರಲ್ಲಿ ಕಲಿಸಿದ ಗುರುಗಳ ಪಾತ್ರವಿರುವುದನ್ನು ಮರೆಯಬೇಡಿ. ಹೀಗಾಗಿ, ಗುರುಗಳ ಎದುರು ಶ್ರೀಮಂತಿಕೆಯ ಪ್ರಧರ್ಶನ ಬೇಡ. ವಿನಯವಂತಿಕೆ ಬಿಡಬೇಡಿ. ಗುರುಗಳು ಯಾವುದೇ ಜ್ಞಾನದ ಬಗ್ಗೆ ಹೇಳುತ್ತಿರುವಾಗ, ಅದನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಿ. ಇದು ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ.

ಗುರುಪೂರ್ಣಿಮೆಯ ವಿಶೇಷತೆಯೇನು? ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ..

6. ಅಪ್ಪಿತಪ್ಪಿಯೂ ಗುರುವಿಗೆ ಕೆಟ್ಟದ್ದನ್ನು ಬಯಸಬೇಡಿ ಹಾಗೂ ಮಾಡಬೇಡಿ. ಹಾಗೆ ಮಾಡುವುದು ಮಹಾಪಾಪ. 
7. ನೀವು ಗುರುವಿನ ಹೆಸರನ್ನು ತೆಗೆದುಕೊಳ್ಳುವಾಗ, ಅವರ ಹೆಸರಿನ ಮುಂದೆ ಅತ್ಯಂತ ಗೌರವಾನ್ವಿತ, ಅತ್ಯಂತ ಪೂಜ್ಯ ಅಥವಾ ಪರಮ ಪೂಜ್ಯ ಪದಗಳನ್ನು ಬಳಸಿ. ಇದು ಗುರುವಿನ ಜೊತೆಗೆ ನಿಮ್ಮ ಗೌರವವನ್ನೂ ಹೆಚ್ಚಿಸುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!