Zodiacs And Relationship: ಈ ಎರ್ಡು ರಾಶಿಯವ್ರು ಒಂದಾದ್ರೆ ಬ್ರೇಕಪ್ ಮಾತೇ ಇಲ್ಲ..

By Suvarna NewsFirst Published Dec 29, 2021, 2:28 PM IST
Highlights

ರಾಶಿಗಳ ಆಧಾರದ ಮೇಲೆ ನೋಡಿದರೆ, ಕೆಲ ರಾಶಿಯವರಿಗೆ ಕೆಲ ನಿರ್ದಿಷ್ಟ ರಾಶಿಯವರು ಮಾತ್ರ ಜನುಮದ ಜೋಡಿಯಾಗಲು ಸಾಧ್ಯ. ಹಾಗೆ ಯಾವೆಲ್ಲ ರಾಶಿಯ ಕಾಂಬಿನೇಶನ್ ಹೆಚ್ಚು ವರ್ಕ್ ಆಗುತ್ತದೆ ನೋಡೋಣ.

ಎಲ್ಲ ಮದುವೆಗಳೂ ಹ್ಯಾಪಿ ಎಂಡಿಂಗ್ ಆಗಿರುವುದಿಲ್ಲ. ಬಹಳಷ್ಟು ಜೋಡಿಗಳು ವಿವಾಹದ ಬಳಿಕ ಜಗಳವಾಡುತ್ತ ಬದುಕುವುದನ್ನೇ ರೂಢಿ ಮಾಡಿಕೊಂಡರೆ, ಮತ್ತೆ ಕೆಲ ಜೋಡಿಗಳು ಬೇಗ ಬ್ರೇಕಪ್ ಆಗುತ್ತವೆ. ಇನ್ನೂ ಅದೆಷ್ಟೋ ಜೋಡಿಗಳು ಮದುವೆ ಹಂತಕ್ಕೆ ಹೋಗುವ ಮುಂಚೆಯೇ ಬ್ರೇಕಪ್ ಆಗುವುದೂ ಸಾಮಾನ್ಯ. ಹಾಗಂಥ ಅವರೆಲ್ಲ ಕೆಟ್ಟವರೇನಲ್ಲ. ಒಬ್ಬೊಬ್ಬರ ಸ್ವಭಾವ ಒಬ್ಬೊಬ್ಬರಿಗೆ ಹೊಂದುತ್ತದೆ, ಮತ್ತೆ ಕೆಲವರಿಗೆ ಹೊಂದುವುದಿಲ್ಲ ಅಷ್ಟೇ. ಹಾಗೆ ಯಾರಿಗೆ ಯಾರು ಹೆಚ್ಚು ಹೊಂದುತ್ತಾರೆ ಎಂಬುದನ್ನು ರಾಶಿಗಳ ಆಧಾರದ ಮೇಲೆ ಹೇಳಬಹುದು. 

ಮೇಷ ಮತ್ತು ಮೀನ(Aries and Pisces)
ಮೇಷ ರಾಶಿಯವರು ಸ್ವಲ್ಪ ಒರಟರು ಹಾಗೂ ಹೆಚ್ಚು ಛಲ ಉಳ್ಳವರು. ಮೀನ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು, ಅರ್ಥ ಮಾಡಿಕೊಳ್ಳಲಾಗದ ಸಂಕೀರ್ಣ ಸ್ವಭಾವ, ಇವರ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತದೆ. ಮೇಷದವರಲ್ಲಿ ಏನು ಕೊರತೆ ಇದೆಯೋ ಅದನ್ನಿವರು ಚೆನ್ನಾಗಿ ತುಂಬಬಲ್ಲರು. ಹಾಗಾಗಿ, ಮೇಷವು ಮೀನ ರಾಶಿಗೆ ಕಲ್ಲಿನಂತೆ ಗಟ್ಟಿ ಭದ್ರತೆ ಕಲ್ಪಿಸಿದರೆ, ಮೀನ ರಾಶಿಯವರು ಮೇಷದ ಆಸೆಗಳಿಗೆಲ್ಲ ಒತ್ತಾಸೆಯಾಗಿ ನಿಲ್ಲುತ್ತಾರೆ. ಭಾವನಾತ್ಮಕ ಬೆಂಬಲ ನೀಡುತ್ತಾರೆ. 

Dreams And Meaning : ಪಬ್ಲಿಕ್ ಪ್ಲೇಸಲ್ಲಿ ನೇಕೆಡ್ ಆಗಿ ಓಡಾಡಿದಂತೆ ಕನಸು ಬಿತ್ತಾ? ಅರ್ಥ ಇಲ್ಲಿದೆ..

ಸಿಂಹ ಹಾಗೂ ತುಲಾ(Leo and Libra)
ತುಲಾ ರಾಶಿಯವರು ತುಂಬಾ ಸ್ನೇಹಪರರು(friendly), ಬಹಿರ್ಮುಖಿಗಳು ಹಾಗೂ ಎಲ್ಲರೂ ಇಷ್ಟಪಡುವಂಥ ಸ್ವಭಾವದವರು. ಸಿಂಹ ರಾಶಿಯವರು ಸಮಾಜಮುಖಿಗಳು ಹಾಗೂ ಹೋದಲ್ಲೆಲ್ಲ ಗಮನ ಸೆಳೆಯುವಂಥವರು. ಇವರಿಬ್ಬರೂ ಒಟ್ಟಾದರೆ ಎಂಥವರ ದೃಷ್ಟಿಯೂ ಬೀಳಬೇಕು, ಅಷ್ಟು ಮುದ್ದಾದ ಜೋಡಿಯಾಗುತ್ತಾರೆ. ಇವರಿಬ್ಬರ ಬಳಿ ಮಾತಾಡಲು ವಿಷಯಗಳಿಗೆ ಬರವೇ ಇರುವುದಿಲ್ಲ. ಹೊರಗೆಲ್ಲ ಒಟ್ಟಿಗೇ ಎಷ್ಟೇ ಸುತ್ತಿದರೂ ಇಬ್ಬರಿಗೂ ಬೇಜಾರು ಬರುವುದಿಲ್ಲ. 

Astrology And Personality Traits: ಈ ರಾಶಿಯವರು ಉತ್ತಮ ಸಲಹೆ ನೀಡೋದ್ರಲ್ಲಿ ನಿಸ್ಸೀಮರು!

ಧನಸ್ಸು ಹಾಗೂ ಮಿಥುನ(Sagittarius and Gemini)
ಇವೆರಡೂ ರಾಶಿಗಳೂ ಸ್ವತಂತ್ರ ಬಯಸುವವರು. ಇಬ್ಬರಿಗೂ ಸಾಹಸ(adventure)ವೆಂದರೆ ಅಚ್ಚುಮೆಚ್ಚು. ಹಾಗಾಗಿ, ಇವರಿಬ್ಬರೂ ಜೋಡಿಯಾದರೆ ಹಂಚಿಕೊಳ್ಳಲು ಸಾಕಷ್ಟಿರುತ್ತದೆ. ಇಬ್ಬರಿಗೂ  ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಏಕೆಂದರೆ ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬ ನೋಡಿಕೊಂಡಂತೆ ಸಂಗಾತಿ ಇರುತ್ತಾರೆ. ಖಾಲಿತನಕ್ಕೆ ಇವರಿಬ್ಬರ ನಡುವೆ ಸ್ಥಳವೇ ಇಲ್ಲ. 

ವೃಷಭ ಹಾಗೂ ಕನ್ಯಾ(Taurus and Virgo)
ಈ ಎರಡು ರಾಶಿಯವರು ಜೋಡಿಯಾದರೆ, ಅವರಿಬ್ಬರ ಸಂಬಂಧ ಜನ್ಮಾಂತರಗಳದ್ದು ಎನಿಸಿದರೂ ಆಶ್ಚರ್ಯವಿಲ್ಲ. ಕನ್ಯಾ ರಾಶಿ ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿಡ ಬಯಸುತ್ತದೆ. ವೃಷಭ ಕೊಂಚ ಅವಲಂಬನೆ ಸ್ವ ಭಾವದ್ದು. ಹಾಗಾಗಿ ಇವರಿಬ್ಬರೂ ಪರಸ್ಪರ ಅಂಟಿಕೊಂಡಿರಲು ಅಡ್ಡಿ ಆತಂಕಗಳಿಲ್ಲ. ಕನ್ಯಾ ರಾಶಿಯ ಸ್ವಭಾವ ವೃಷಭಕ್ಕೆ ಹಿಡಿತ ಎನಿಸುವುದಕ್ಕಿಂತ ಅಗತ್ಯ ಎನಿಸುತ್ತದೆ. 

ಮೀನ ಮತ್ತು ಕಟಕ(Pisces and Cancer)
ಇವೆರಡೂ ರಾಶಿಗಳೂ ಪ್ರೀತಿಸುವುದನ್ನು ಹಾಗೂ ಪ್ರೀತಿಸಲ್ಪಡುವುದನ್ನು ಇಷ್ಟ ಪಡುವವರು. ಭಾವಜೀವಿಗಳು. ಇದೇ ಕಾರಣಕ್ಕೆ ಇವರಿಬ್ಬರೂ ಜೋಡಿಯಾದಾಗ ಪ್ರೇಮಿಗಳಂತೆ ಕಾಣಿಸತ್ತಾರೆ. ಒಬ್ಬರಿಗೊಬ್ಬರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಎಲ್ಲಕ್ಕಿಂತ ಒಬ್ಬರು ಮತ್ತೊಬ್ಬರಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಒಬ್ಬರ ಮನಸ್ಸು ಮತ್ತೊಬ್ಬರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಭಾವನೆಗಳ ಹಾಯಿದೋಣಿಯಲ್ಲಿ ಜೀವನಪರ್ಯಂತ ತೇಲುತ್ತಾರೆ.

ಸಿಂಹ ಮತ್ತು ಕುಂಭ(Leo and Aquarius)
ಇಬ್ಬರಿಗೂ ಮಾನವೀಯತೆ ಹೆಚ್ಚು. ಕುಂಭ ರಾಶಿಯವರು ಜನರೊಂದಿಗೆ ಬೆರೆಯಲು ಕಷ್ಟ ಪಡುತ್ತಾರೆ. ಆದರೆ, ಸಿಂಹದ ಪ್ರೀತಿ ಸಿಕ್ಕಿಬಿಟ್ಟರೆ ಕುಂಭ ತಮ್ಮನ್ನೇ ಮರೆತು ಈ ರಾಶಿಯ ಜೊತೆ ಜೋಡಿಯಾಗಿ ಬೆರೆಯುತ್ತದೆ. ಇವೆರಡೂ ರಾಶಿಯವರು ಜೋಡಿಯಾದರೆ ಪ್ರಪಂಚವನ್ನೇ ಮರೆತು ತಮ್ಮಿಬ್ಬರ ಪ್ರೀತಿಯನ್ನು ಅನುಭವಿಸುತ್ತಾರೆ. ತನ್ನನ್ನು ಮೆಚ್ಚಿದವರು ಸಿಕ್ಕಾಪಟ್ಟೆ ಹಚ್ಚಿಕೊಳ್ಳುವ ಕುಂಭ ರಾಶಿಯ ಸ್ವಭಾವ ಸಿಂಹಕ್ಕೆ ವರವಾಗುತ್ತದೆ.

click me!