ಹೆಂಗಸರಿಗೆ ಬಲಗಣ್ಣು ಅದುರಿದರೆ ಅದೃಷ್ಟವೋ ದುರದೃಷ್ಟವೋ?

By Suvarna NewsFirst Published May 19, 2022, 11:45 AM IST
Highlights

ಇದ್ದಕ್ಕಿದ್ದಂತೆ ಕಣ್ಣು ಅದುರಲು ಪ್ರಾರಂಭವಾದರೆ ಕೆಲವರು ಅದೃಷ್ಟ ಎನ್ನುತ್ತಾರೆ, ಮತ್ತೆ ಕೆಲವರು ದುರದೃಷ್ಟ ಎನ್ನುತ್ತಾರೆ. ಯಾವ ಕಣ್ಣು ಅದುರಿದರೆ ಅದೃಷ್ಟ? ದೇಹದ ಇತರೆ ಭಾಗಗಳು ಅದುರಿದರೆ ಏನರ್ಥ ತಿಳಿಯಿರಿ.

ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಣ್ಣು(eyes) ಅದುರೋಕೆ ಶುರುವಾಗುತ್ತೆ. ಮತ್ತೆ ಕೆಲವೊಮ್ಮೆ ತುಟಿ ಅದುರುತ್ತೆ. ಇನ್ನು ಕೆಲವೊಮ್ಮೆ ಸುಮ್ಮನೆ ಕುಳಿತಾಗ ಬೆರಳು ನಿಮ್ಮ ಪ್ರಯತ್ನವೇ ಇಲ್ಲದೆ ಎದ್ದೆದ್ದು ಹಾರಿದಂತೆ ಭಾಸವಾಗಬಹುದು. ಈ ಎಲ್ಲ ದೈಹಿಕ ಬದಲಾವಣೆ(twitching of body parts)ಯನ್ನೂ ಭವಿಷ್ಯದ ಸೂಚನೆಯಾಗಿ ನೋಡುತ್ತದೆ ಸಾಮುದ್ರಿಕಾ ಶಾಸ್ತ್ರ. ಈ ಸಾಮುದ್ರಿಕಾ ಶಾಸ್ತ್ರವೇ ಆಡು ಮಾತಿನಲ್ಲಿ ಹರಿದು ಆಗಾಗ ಜನರು ಕಣ್ಣು ಅದುರಿದಾಗ ಅದು ಅದೃಷ್ಟವೆಂದೋ ದುರದೃಷ್ಟವೆಂದೋ ಹೇಳುವುದನ್ನು ನೀವೂ ಕೇಳಿರಬಹುದು. ಸಾಮುದ್ರಿಕಾ ಶಾಸ್ತ್ರವು ದೇಹದ ಮಚ್ಚೆಗಳು, ಅಂಗೈ ರೇಖೆ, ಅದುರುವಿಕೆ ಸೇರಿದಂತೆ ದೈಹಿಕ ಲಕ್ಷಣಗಳ ಆಧಾರದ ಮೇಲೆ ಭವಿಷ್ಯ ಹೇಳುತ್ತದೆ. ಈ ಲಕ್ಷಣ ಶಾಸ್ತ್ರ(Oceanography)ದ ಪ್ರಕಾರ ದೇಹದ ಯಾವ ಅಂಗ ಅದುರಿದರೆ ಏನರ ಸಂಕೇತ ಅದು ನೋಡೋಣ. 

ಬಲಗಣ್ಣು ಅದುರಿದರೆ
ಹೆಂಗಸರಿಗೆ ಬಲಗಣ್ಣು ಅದುರಿದರೆ ದುರದೃಷ್ಟ(bad luck)ವೆಂದೂ, ಗಂಡಸರಿಗಾದರೆ ಅದೃಷ್ಟ(good luck)ವು ಕಾದಿದೆ ಎಂದರ್ಥ. ಸದ್ಯದಲ್ಲೇ ಶುಭ ಸುದ್ದಿಯೊಂದು ಕಿವಿಗೆ ಬೀಳಲಿದೆ ಎಂದರ್ಥ. ಅಂತೆಯೇ ಗಂಡಸರಿಗೆ ಎಡಗಣ್ಣು ಅದುರಿದರೆ ದುರದೃಷ್ಟವೂ, ಹೆಂಗಸರಿಗೆ ಎಡಗಣ್ಣು ಅದುರಿದರೆ ಅದೃಷ್ಟವೂ ಎಂದರ್ಥ. ಹಾಗಂಥ ಹೀಗೆ ಕಣ್ಣು ದೀರ್ಘ ಕಾಲದವರೆಗೆ ಅದುರುತ್ತಿದ್ದರೆ ಯಾವುದೋ ಆರೋಗ್ಯ ಸಮಸ್ಯೆ ಇರುತ್ತದೆ. ಕೂಡಲೇ ವೈದ್ಯರಿಗೆ ತೋರಿಸಿಕೊಳ್ಳಿ. 

ಮುಸ್ಲಿಮರು ವಾಹನ ಸಂಖ್ಯೆ 786 ಬೇಕು ಎನ್ನುವುದೇಕೆ?

ಕಿವಿ(ears) ಅದುರಿದರೆ
ವ್ಯಕ್ತಿಯ ಎಡಗಿವಿ ಅದುರಿದರೆ ಅವರ ಗೆಳೆಯರ್ಯಾರೋ ಬಹಳ ನೆನಸಿಕೊಳ್ಳುತ್ತಿದ್ದಾರೆ ಎಂದರ್ಥ. ವ್ಯಕ್ತಿಯ ಬಲಗಿವಿ ಅದುರಲಾರಂಭಿಸಿದರೆ ವೃತ್ತಿ ಕ್ಷೇತ್ರದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ ಎಂದರ್ಥ. ಇದ್ದಕ್ಕಿದ್ದಂತೆ ಎಡಗಿವಿ ಗುಯ್ ಎನ್ನುತ್ತಿದ್ದರೆ ಯಾವುದೋ ಕೆಟ್ಟ ಸುದ್ದಿ ಕೇಳಬೇಕಾಗಿದೆ ಎಂದರ್ಥ. 

ತುಟಿಗಳು ಅದುರಿದರೆ(Lips twitching)
ಮೇಲಿನ ತುಟಿ ಮಾತ್ರ ಅದುರಿದರೆ ಶತ್ರುಗಳು ರಾಜಿ ಮಾಡಿಕೊಂಡು ಸಮಾಧಾನ ಹೊಂದಲಿದ್ದಾರೆ. ಅದೇ ಎರಡೂ ತುಟಿಗಳು ಬಡಿದುಕೊಂಡರೆ, ಎಲ್ಲಿಂದಲೋ ಸಿಹಿ ಸುದ್ದಿಯೊಂದು ನಿಮ್ಮನ್ನು ಅರಸಿ ಬರಲಿದೆ ಎಂದರ್ಥ. ಕೆಳತುಟಿ ಮಾತ್ರ ಅದುರಿದರೆ ಭೂರಿ ಭೋಜನ ತಿನ್ನುವ ಅವಕಾಶ ಅರಸಿ ಬರಲಿದೆ. 

Samudrika Shastra: ಈ 'ಲಕ್ಷಣಗಳಲ್ಲಿ' ಅರ್ಧದಷ್ಟು ಗುಣವಿದ್ದರೂ ಆತನನ್ನು ಕಣ್ಣು ಮುಚ್ಚಿ ವಿವಾಹವಾಗಿ!

ತಲೆ(head) ಅದುರಿದರೆ
ಪೂರ್ತಿ ತಲೆ ಅದುರಿದರೆ ಸಧ್ಯದಲ್ಲೇ ದೂರದ ಸ್ಥಳಕ್ಕೆ ಹೋಗಬೇಕಾಗುತ್ತದೆ ಎಂದರ್ಥ. ಅದೇ ಹಣೆಯ ಭಾಗ ಅದುರಿದರೆ ಆಸ್ತಿ ಭಾಗ್ಯವಿದೆ ಎಂದು ತಿಳಿಯಬಹುದು. ಹಣೆಯ ಮಧ್ಯ ಭಾಗ ಮಾತ್ರ ಅದುರಿದರೆ ವೃತ್ತಿಯಲ್ಲಿ ಬಡ್ತಿ, ಲಾಭದಾಯಕ ಪ್ರವಾಸ ಸಾಧ್ಯವಿದೆ. 

ಹುಬ್ಬುಗಳು(eyebrows)
ಹುಬ್ಬುಗಳು ಹಾರತೊಡಗಿದರೆ ಆ ವ್ಯಕ್ತಿಯ ಎಲ್ಲ ಕನಸುಗಳೂ ಈಡೇರುವ ಸಮಯ ಹತ್ತಿರ ಬಂದಿದೆ ಎಂದರ್ಥ. ಕೇವಲ ಒಂದು ಹುಬ್ಬು ಅದುರಿ ಮೇಲೆ ಹಾರಿದರೆ ಪ್ರೀತಿಯು ಅವರ ಹಾದಿಯಲ್ಲಿದೆ ಎಂದು ತಿಳಿಯಬಹುದು. 

ಮೂಗು(nose)
ವ್ಯಕ್ತಿಯ ಮೂಗಿನ ಹೊಳ್ಳೆಗಳು ಅದುರಿದರೆ ಯಾವುದೋ ಸಂದಿಗ್ಧಕ್ಕೆ ಸಿಲುಕಬೇಕಿದೆ ಎಂದು ತಿಳಿಯಬಹುದು. ಅದೇ ಮೂಗಿನಿಂದ ಇದ್ದಕ್ಕಿದ್ದಂತೆ ರಕ್ತ ಬಂದರೆ ಅಕ್ಕಪಕ್ಕದವರೊಡನೆ ಜಗಳ ಕಾದಿದೆ ಎನ್ನಲಾಗುತ್ತದೆ. ಅದೇ ಮೂಗಿನ ಒಳಗಿನ ಭಾಗವು ದಪ್ಪಗಾಗಿ ಹೊರ ಕಾಣಿಸುತ್ತಿದ್ದರೆ ವ್ಯಕ್ತಿಯು ಸಂತೋಷ ಹೊಂದುತ್ತಾನೆ.

Moles and Meaning: ಮಚ್ಚೆ ಇಲ್ಲಿದ್ರೆ ನಿಮ್ಮಷ್ಟು ಲಕ್ಕಿ ಮತ್ಯಾರಿಲ್ಲ..

ಅಂಗೈ(palm) ಅದುರಿದರೆ
ವ್ಯಕ್ತಿಯ ಇಡೀ ಅಂಗೈ ಹಾರಲಾರಂಭಿಸಿದರೆ, ಅದುರಿದರೆ ಹಣ ಹುಡುಕಿಕೊಂಡು ಬಂದು ಕೈ ತುಂಬುತ್ತದೆ ಎಂದರ್ಥ. ಅದೇ ಅಂಗೈಯ ಒಂದು ಭಾಗ ಮಾತ್ರ ಅದುರಿದರೆ ಯಾವುದೋ ಸಮಸ್ಯೆಯಲ್ಲಿ ಸಿಲುಕಬೇಕಾಗುತ್ತದೆ ಎಂದು ತಿಳಿಯಬಹುದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!