ರಾಹು – ಕೇತು ದೋಷಕ್ಕೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ

Published : Aug 29, 2022, 01:32 PM IST
ರಾಹು – ಕೇತು ದೋಷಕ್ಕೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ

ಸಾರಾಂಶ

ಜಾತಕದಲ್ಲಿ ರಾಹು – ಕೇತು ಪ್ರಭಾವ ಹೆಚ್ಚಾದ್ರೆ ಸಾವಿನ ಮನೆಯವರೆಗೆ ಹೋಗಿ ಬರುವವರಿದ್ದಾರೆ. ಅವರ ಆಟಕ್ಕೆ ಜನರು ತತ್ತರಿಸಿ ಹೋಗ್ತಾರೆ. ರಾಹು ಮತ್ತು ಕೇತು ಒಂದೇ ಮನೆಯಲ್ಲಿದ್ರೆ ಕಥೆ ಮುಗಿದಂತೆ. ಈ ಎರಡು ಅಶುಭ ಗ್ರಹಗಳ ದೋಷದಿಂದ ಮುಕ್ತಿ ಹೊಂದಲು ಸುಲಭ ಉಪಾಯಗಳಿವೆ.   

ಸದಾ ತೊಂದರೆ, ದುಃಖ, ಅಸಫಲತೆ ಎದುರಾಗ್ತಿದೆ ಎಂದ್ರೆ ಜಾತಕದಲ್ಲಿ ರಾಹು ಮತ್ತು ಕೇತುಗಳ ಪ್ರಭಾವವಿದೆ ಎಂದೇ ಅರ್ಥ. ಜಾತಕದಲ್ಲಿ ರಾಹು – ಕೇತುವಿನ ಪ್ರಭಾವವಿದ್ರೆ ವ್ಯಕ್ತಿ ಸಾಕಷ್ಟು ನೋವುಗಳನ್ನು ಎದುರಿಸಬೇಕಾಗುತ್ತದೆ. ಒಂದಲ್ಲ ಒಂದು ಸಮಸ್ಯೆ ನಿಮ್ಮನ್ನು ಕಾಡ್ತಿರುತ್ತದೆ. ರಾಹು ಹಾಗೂ ಕೇತು ಈ ಎರಡೂ ಗ್ರಹಗಳನ್ನು ಅಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಈ ಗ್ರಹಗಳ ದೋಷವಿದ್ರೆ ಅದಕ್ಕೆ ಪರಿಹಾರವಿದೆ. ಕೆಲವು ಉಪಾಯಗಳ ಮೂಲಕ ರಾಹು ಹಾಗೂ ಕೇತುವಿನಿಂದ ಮುಕ್ತಿ ಪಡೆಯಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ರಾಹು ಮತ್ತು ಕೇತು ಗ್ರಹವನ್ನು ಛಾಯಾ ಗ್ರಹ (Planet) ಎಂದೂ ಕರೆಯುತ್ತಾರೆ. ಈ ಗ್ರಹಕ್ಕೆ ತಮ್ಮದೆ ಆದ ಅಸ್ಥಿತ್ವವಿಲ್ಲ. ಅವು ಯಾವ ಗ್ರಹದಲ್ಲಿ ವಾಸಿಸುತ್ತೋ ಆ ಗ್ರಹಕ್ಕೆ ಅನುಗುಣವಾಗಿ ತನ್ನ ಪ್ರಭಾವ ತೋರುತ್ತದೆ. ಕೆಲ ಸಂದರ್ಭದಲ್ಲಿ ಈ ಗ್ರಹಗಳು ಶುಭ ಫಲ ನೀಡುವುದಿದೆ. 

ಕೇತು (Ketu) ದೋಷ : ನಿಮ್ಮ ಜಾತಕದಲ್ಲಿ ಕೇತು ದೋಷವಿದ್ರೆ  ವ್ಯಕ್ತಿ ಚರ್ಮ ರೋಗಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಕಿವಿಗೆ ಸಂಬಂಧಿಸಿದ ಕಾಯಿಲೆ ಕಾಡುತ್ತದೆ.  ವ್ಯಕ್ತಿಯ ಆಲೋಚನಾ ಶಕ್ತಿ ಕಡಿಮೆಯಾಗುತ್ತದೆ. ಕಿವಿ, ಬೆನ್ನುಮೂಳೆ, ಮೊಣಕಾಲುಗಳು, ಕೀಲುಗಳು ಸೇರಿದಂತೆ ಖಾಸಗಿ ಅಂಗದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ರಾಹು ದೋಷ : ರಾಹು ದೋಷದಿಂದ ಬಳಲುತ್ತಿರುವವರು ಕೂಡ ಕೆಲ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿದ್ರಾಹೀನತೆ, ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಜೊತೆ ಮೂಳೆ ಮತ್ತು ಚರ್ಮದ ಕಾಯಿಲೆಗಳು ಸಹ ಇವರಿಗೆ ಕಾಡುವ ಸಾಧ್ಯತೆಗಳಿರುತ್ತವೆ. ಜಾತಕದಲ್ಲಿ ರಾಹು ದೋಷವಿದ್ರೆ ಸೋಮಾರಿತನ ಕಾಡುತ್ತದೆ. ರಾಹು ಪ್ರಭಾವದಿಂದ ಮುಕ್ತಿ ಸಿಗಬೇಕೆಂದ್ರೆ ಮೊದಲು ಕೆಟ್ಟ ಚಟಗಳಿಂದ ದೂರವಿರಬೇಕು. 

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ದೋಷಕ್ಕೆ ಪರಿಹಾರವನ್ನೂ ಹೇಳಲಾಗಿದೆ. ಜಾತಕದಲ್ಲಿ ರಾಹು ಮತ್ತು ಕೇತು ಇಬ್ಬರೂ ಒಟ್ಟಿಗೆ ಬಂದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಅಂಥವರು ಈ ಕೆಳಗಿನ ಉಪಾಯಗಳನ್ನು ಪಾಲನೆ ಮಾಡ್ಬೇಕು.

ಗಣೇಶ ಚತುರ್ಥಿ 2022: ಪೂಜೆಯಲ್ಲಿ ವಿಘ್ನ ನಿವಾರಕನ 108 ಹೆಸರುಗಳನ್ನು ಜಪಿಸಿ

ದುರ್ಗೆಯ ಆರಾಧನೆ : ರಾಹು ಮತ್ತು ಕೇತು ಎರಡೂ ಗ್ರಹಗಳ ಪ್ರಭಾವದಿಂದ ತೊಂದರೆಗೊಳಗಾಗಿದ್ದರೆ ದುರ್ಗೆಯ ಪೂಜೆಯನ್ನು ಮಾಡ್ಬೇಕು. ತಾಯಿ ದುರ್ಗೆ ಪೂಜೆ ಮಾಡಿದ್ರೆ ಈ ಎರಡೂ ಗ್ರಹಗಳ ಕಾಟದಿಂದ ಮುಕ್ತಿ ಪಡೆಯಬಹುದು. ದುರ್ಗೆ ಕೃಪೆ ನಿಮ್ಮ ಮೇಲೆ ಆದ್ರೆ ರಾಹು ಹಾಗೂ ಕೇತು ಗ್ರಹಗಳ ಪ್ರಭಾವ ಕಡಿಮೆಯಾಗುತ್ತದೆ. 

ಈ ಮಂತ್ರದಲ್ಲಿದೆ ಅಪಾರ ಶಕ್ತಿ : ರಾಹು – ಕೇತು ಪ್ರಭಾವದಿಂದ ಬೇಸತ್ತಿದ್ದರೆ ನೀವು ಒಂದು ಮಂತ್ರ ಪಠಿಸುವ ಮೂಲಕ ಇವುಗಳಿಂದ ನೆಮ್ಮದಿ ಪಡೆಯಬಹುದು. ನಾಗರ ಹಾವಿನ ಮೇಲೆ ಶ್ರೀಕೃಷ್ಣ ನೃತ್ಯ ಮಾಡ್ತಿರುವ ಫೋಟೋವನ್ನು ಪೂಜೆ ಮಾಡುವ ಜೊತೆಗೆ ಅದ್ರ ಮುಂದೆ ಕುಳಿತು ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಬೇಕು.  .

ದಾನದಲ್ಲಿದೆ (Donation) ನೆಮ್ಮದಿ : ಜಾತಕದಲ್ಲ ರಾಹು- ಕೇತು ದೋಷವಿದೆ ಎಂದಾದ್ರೆ ನೀವು ಅವುಗಳಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬಹುದು. ಇದಲ್ಲದೆ ಬಡವರಿಗೆ ದಾನ ಮಾಡುವುದ್ರಿಂದಲೂ ಉತ್ತಮ ಫಲ ಸಿಗುತ್ತದೆ. ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ ಅಥವಾ ಗೋದಾನದಿಂದಲೂ ನಿಮಗೆ ದೋಷ ಪರಿಹಾರ ಸಿಗುತ್ತದೆ.

ಬೀಜ ಮಂತ್ರದಿಂದ ಪರಿಹಾರ : ಬೀಜ ಮಂತ್ರ ಪಠಿಸುವುದ್ರಿಂದಲೂ ನೀವು ನೆಮ್ಮದಿ ಕಾಣಬಹುದು. ರಾಹು ಹಾಗೂ ಕೇತುವಿನ ಬೀಜ ಮಂತ್ರವನ್ನು ನೀವು ಜಪಿಸಬಹುದು. ಇಲ್ಲವೆ ಪ್ರತಿ ದಿನ ಶಿವನ ಸಹಸ್ರನಾಮ ಅಥವಾ ಹನುಮಂತನ ಸಹಸ್ರನಾಮ ಹೇಳುವು ಮೂಲಕ ನೆಮ್ಮದಿ ಕಾಣಬಹುದಾಗಿದೆ.    

ವಾಸ್ತು ಶಾಸ್ತ್ರ: ಮನೆಯಲ್ಲಿ ಮದರಂಗಿ ಸಸ್ಯ ನೆಡೋದ್ರಿಂದ ಕೆಟ್ಟದಾಗುತ್ತಾ?

ದೋಷಕ್ಕನುಗುಣವಾಗಿ ಬಟ್ಟೆ : ಜಾತಕದಲ್ಲಿ ರಾಹು ದೋಷವಿದ್ದರೆ ತಿಳಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಕೇತು ದೋಷವಿದ್ದರೆ ತಿಳಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದೇ ಬಣ್ಣದ ಬಟ್ಟೆಗಳನ್ನು ನೀವು ದಾನ ಕೂಡ ಮಾಡಬಹುದು.  
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ