ಗಣೇಶ ಚತುರ್ಥಿ 2022: ಬೆಂಗಳೂರು ನಗರದ 10 ಸುಪ್ರಸಿದ್ಧ ಗಣಪತಿ ದೇವಾಲಯಗಳಿವು..

By Suvarna News  |  First Published Aug 29, 2022, 11:39 AM IST

ಗಣೇಶ ಚತುರ್ಥಿ 2022: ಹಬ್ಬದ ಈ ಸಮಯದಲ್ಲಿ ಬೆಂಗಳೂರಿನ ಈ ಪ್ರಸಿದ್ಧ ಗಣೇಶ ದೇವಾಲಯಗಳಿಗೆ ಭೇಟಿ ನೀಡಿ ಪಾವನರಾಗಿ..


ಬೆಂಗಳೂರು ನಗರ ಎಂದರೆ ಕೇವಲ ಟ್ರಾಫಿಕ್, ಪಾರ್ಟಿ, ಸಾಫ್ಟ್‌ವೇರ್ ಅಲ್ಲ, ಇಲ್ಲಿ ಪ್ರತಿ ರಸ್ತೆಗೂ ಉದ್ಯಾನವನ ಇದೆ. ಅಂತೆಯೇ ಪ್ರತಿ ಏರಿಯಾದಲ್ಲೂ ಕನಿಷ್ಠ ಒಂದಾದರೂ ಗಣೇಶನ ದೇವಾಲಯವಿದೆ. ಬೆಂಗಳೂರಿನ ಜನತೆಗೆ ಭಕ್ತಿಯೂ ಹೆಚ್ಚು ಎಂಬುದನ್ನು ಗಣೇಶ ಚತುರ್ಥಿಯಂಥ ಹಬ್ಬದ ಸಮಯದಲ್ಲಿ ಈ ದೇವಾಲಯಗಳಿಗೆ ಭೇಟಿ ನೀಡಿದರೆ ಖಂಡಿತಾ ಕಾಣಬಹುದು. ಏಕೆಂದರೆ ಎಲ್ಲ ದೇವಾಲಯಗಳೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತವೆ. ಈ ಬಾರಿ ಗಣೇಶ ಚತುರ್ಥಿಗೆ ಎಲ್ಲೆಡೆ ಮನೆಮನೆಗಳಲ್ಲಿ, ರಸ್ತೆರಸ್ತೆಗಳಲ್ಲಿ ಕೂರಿಸುವ ಗಣೇಶನ ಹೊರತಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಾಗಿ ಗಣೇಶ ದೇವಾಲಯಕ್ಕೆ ಭೇಟಿ ನೀಡಲು ನೀವು ಯೋಚಿಸುತ್ತಿದ್ದರೆ, ಇಲ್ಲಿವೆ ನೋಡಿ ಬೆಂಗಳೂರಿನ 10 ಜನಪ್ರಿಯ ಗಣೇಶನ ದೇವಾಲಯಗಳು..

ಬುಲ್ ಟೆಂಪಲ್(The Bull Temple)
ನಗರದ ದಕ್ಷಿಣ ಭಾಗದಲ್ಲಿರುವ, ದೊಡ್ಡ ಗಣೇಶನ ಗುಡಿ  ಹೆಸರು ಕೇಳದ ಬೆಂಗಳೂರಿಗರಿಲ್ಲ. ಬುಲ್ ಟೆಂಪಲ್ ಎಂದು ಹೆಸರಾಗಿರುವ ಇಲ್ಲಿ ವಿಶ್ವದ ಅತಿದೊಡ್ಡ ನಂದಿ ವಿಗ್ರಹ ಇದೆ. ಅಂತೆಯೇ ಇಲ್ಲಿ ಗಣೇಶನೂ ಹೆಸರಿಗೆ ಸರಿಯಾಗಿ ದೊಡ್ಡ ಗಾತ್ರದಲ್ಲಿದ್ದಾನೆ. ಇದು ಬೆಂಗಳೂರಿನ ಬಸವನಗುಡಿಯ ಬ್ಯೂಗಲ್ ರಾಕ್ ಗಾರ್ಡನ್‌ನಲ್ಲಿದೆ.

Tap to resize

Latest Videos

ಶಕ್ತಿ ಗಣಪತಿ ದೇವಾಲಯ
ಇದು ನಗರದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯ ಎಂದು ಹೇಳಲಾಗುತ್ತದೆ. ಜಯನಗರ 4ನೇ ಬ್ಲಾಕ್‌ನಲ್ಲಿ ಜೈನ ದೇವಾಲಯದ ಎದುರು ಇರುವ ಈ ದೇವಾಲಯವು ಅದರ ಸುತ್ತಲೂ ವಜ್ರದ ರಕ್ಷಾಕವಚವನ್ನು ಹೊಂದಿರುವ ವಿಗ್ರಹವನ್ನು ಹೊಂದಿದೆ.

ಪಂಚಮುಖಿ ಗಣೇಶ ದೇವಸ್ಥಾನ
ನಗರ ಕೇಂದ್ರದಿಂದ 20 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಪಂಚಮುಖಿ ಗಣೇಶ ದೇವಾಲಯವು ಐದು ಮುಖಗಳನ್ನು ಹೊಂದಿರುವ 30 ಅಡಿ ಎತ್ತರದ ಗಣೇಶನ ಪ್ರತಿಮೆಯನ್ನು ಹೊಂದಿದೆ. ದೇವಾಲಯದ ಒಳಗೆ 6 ಅಡಿ ಐದು ಮುಖದ ಗಣೇಶನ ವಿಗ್ರಹವಿದೆ.

ಗಣೇಶ ಚತುರ್ಥಿ 2022: ಪೂಜೆಯಲ್ಲಿ ವಿಘ್ನ ನಿವಾರಕನ 108 ಹೆಸರುಗಳನ್ನು ಜಪಿಸಿ

ಅಪಘಾತ ಗಣೇಶ ದೇವಸ್ಥಾನ(Accident Ganesha Temple)
ನರದ ಕಸ್ತೂರ್ಬಾ ರಸ್ತೆಯಲ್ಲಿರುವ ಆ್ಯಕ್ಸಿಡೆಂಟ್ ಗಣೇಶ ದೇವಾಲಯ 600 ವರ್ಷಗಳಷ್ಟು ಹಳೆಯದು. ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಈ ದೇವಾಲಯದಲ್ಲಿ ನಿಯಮಿತವಾಗಿ ಗಣೇಶನಿಗೆ ಗೌರವ ಸಲ್ಲಿಸುತ್ತಿದ್ದರು ಎಂಬ ಐತಿಹ್ಯವೂ ಇದೆ. ಚಾಮರಾಜ ಒಡೆಯರ್ ಗಣೇಶನ ಆಶೀರ್ವಾದ ಪಡೆಯಲು ತಮ್ಮ ಹೊಸ ಕಾರುಗಳನ್ನು ಇಲ್ಲಿಗೆ ತರುತ್ತಿದ್ದರು. ಇದು ಈಗ 'ಅಪಘಾತ ನಿರೋಧಕ' ದೇವಾಲಯವಾಗಿ ಮಾರ್ಪಟ್ಟಿದೆ. ಜನರು ತಾವು ಹೊಸದಾಗಿ ಖರೀದಿಸಿದ ವಾಹನಗಳನ್ನು ಇಲ್ಲಿ ತಂದು ಪೂಜೆ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ಆ ವಾಹನ ಅಪಗಾತಕ್ಕೀಡಾಗುವುದಿಲ್ಲ ಎಂಬ ನಂಬಿಕೆ ಇದೆ.

ಟೆಕ್ಕಿ ಗಣೇಶ ದೇವಸ್ಥಾನ(Techie Ganesha Temple)
ಈ ದೇವಸ್ಥಾನವನ್ನು ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಎಂದೂ ಕರೆಯುತ್ತಾರೆ, ಇದು ಐಟಿ ವೃತ್ತಿಪರರಲ್ಲಿ ಪ್ರಸಿದ್ಧವಾಗಿದೆ. ತಮ್ಮ ವೃತ್ತಿಜೀವನದಲ್ಲಿ ಉತ್ತೇಜನ ಬಯಸುವ ಜನರು ಆಶೀರ್ವಾದಕ್ಕಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವು ಟೆಕ್ಕಿಗಳೇ ಹೆಚ್ಚಿರುವ ಕೋರಮಂಗಲದಲ್ಲಿದೆ.

ಕಟ್ಟೆ ವಿನಾಯಕ ದೇವಸ್ಥಾನ
ಬೆಂಗಳೂರಿನ ಕೆಆರ್ ಪುರಂನಲ್ಲಿರುವ ಕಟ್ಟೆ ವಿನಾಯಕ ದೇವಾಲಯವು ನಗರದ ಜನಪ್ರಿಯ ಗಣೇಶ ದೇವಾಲಯಗಳಲ್ಲಿ ಒಂದಾಗಿದೆ.

ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ
ನಗರದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಮತ್ತೊಂದು ಪ್ರಸಿದ್ಧ ಗಣೇಶ ದೇವಸ್ಥಾನವೆಂದರೆ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ.  ಇದು ಬನಶಂಕರಿ 3ನೇ ಹಂತದಲ್ಲಿದೆ.

ಬಲಮುರಿ ಗಣೇಶ ದೇವಸ್ಥಾನ
ಬೆಂಗಳೂರಿನ ತಿಲಕನಗರದಲ್ಲಿರುವ ಬಲಮುರಿ ಗಣೇಶ ದೇವಸ್ಥಾನವು ಬೆಂಗಳೂರಿನ ಭಕ್ತರಿಗೆ ಮತ್ತೊಂದು ನೆಮ್ಮದಿಯ ತಾಣವಾಗಿದೆ. 

ಗಣೇಶ ಹಬ್ಬಕ್ಕೆ ಈ ಬಾರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಮೋದಕ ತಯಾರಿಸಿ

108 ಗಣೇಶ ದೇವಸ್ಥಾನ
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ 108 ಗಣೇಶನ ದೇವಾಲಯವಿದೆ. ಇದು ನಗರದ ದಕ್ಷಿಣ ಭಾಗದಲ್ಲಿರುವ ಮತ್ತೊಂದು ದೇವಾಲಯವಾಗಿದೆ.

ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ
ಈ ಪ್ರಸಿದ್ಧ ಗಣೇಶ ದೇವಾಲಯವು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿದೆ. ಇದು ಅತ್ಯಂತ ಮಂಗಳಕರ ದೇವಾಲಯವೆಂದು ಹೆಸರು ಪಡೆದಿದೆ. 
 

click me!