ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ‘ನೆನಪುಗಳಿಗೆ ಜೀವ ತುಂಬ‘ ಎನ್ನುವ ವಿಶೇಷ ವಿಡಿಯೋ ರಿಲೀಸ್ ಮಾಡಿದೆ.
ಇಂದು ಎಲ್ಲೆಡೆ, ಮಕರ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಮೆಟ್ರೋ ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ನೆನಪುಗಳಿಗೆ ಜೀವ ತುಂಬಿ, ನೆನಪಿನ ಹಾದಿಯಲ್ಲಿ ನಮ್ಮೊಂದಿಗೆ ಪ್ರಯಾಣಿಸಿ.... ಮಕರ ಸಂಕ್ರಾಂತಿಯ ಶುಭಾಶಯಗಳು ಎನ್ನುವ ಶೀರ್ಷಿಕೆಯೊಂದಿಗೆ ಮೆಟ್ರೋ ಈ ವಿಡಿಯೋ ರಿಲೀಸ್ ಮಾಡಿದೆ. ಇದರಲ್ಲಿ ವಯಸ್ಸಾದ ದಂಪತಿ ಮೆಟ್ರೋ ಒಳಗೆ ಹೋಗುವುದನ್ನು ನೋಡಬಹುದು. ಇದು 2025ನೇ ಇಸ್ವಿ. ಆ ಬಳಿಕ ಫ್ಲಾಷ್‌ಬ್ಯಾಕ್ ತೆರೆದುಕೊಳ್ಳುತ್ತದೆ. ಇದೇ ದಂಪತಿ 1980ರಲ್ಲಿ ಹೇಗಿದ್ದರು ಎನ್ನುವ ಫ್ಲಾಷ್‌ಬ್ಯಾಕ್ ಅದು.
ಬೆಂಗಳೂರಿನ ಮಾರುಕಟ್ಟೆಯಲ್ಲಿ ಸಂಕ್ರಾಂತಿ ದಿನ ಶಾಪಿಂಗ್ ಮಾಡುವ ಈ ನವ ಜೋಡಿ, ಅಲ್ಲಿಯೇ ಸಂಕ್ರಮಣದ ವಿಶೇಷ ಕಬ್ಬನ್ನು ಸವಿಯುವುದನ್ನು ನೋಡಬಹುದು. ಆಗ ಮೆಟ್ರೋ ಎನ್ನುವ ಕಲ್ಪನೆಯೂ ಕರ್ನಾಟಕದವರಿಗೆ ಇದ್ದಿರಲಿಲ್ಲ. ಇದರ ಅಗತ್ಯವೂ ಇರಲಿಲ್ಲ. ಏಕೆಂದರೆ ಟ್ರಾಫಿಕ್ಕೇ ಇರಲಿಲ್ಲ. ಮಾರುಕಟ್ಟೆಯಾದರೂ ಅಲ್ಲಿ ಜನಸಂಖ್ಯೆಯೂ ತೀರಾ ವಿರಳ. ಆದ್ದರಿಂದ ಈ ದಂಪತಿ ಯಾವುದೇ ಜನ ದಟ್ಟಣಿ ಇಲ್ಲದೆಯೇ ಸಲೀಸಾಗಿ ರಸ್ತೆಯ ಮೇಲೆ ಹಬ್ಬದ ಸವಿಯನ್ನು ಸವಿಯುವುದನ್ನು ನೋಡಬಹುದು. ಆದರೆ ಈಗ ಹಾಗಲ್ಲವಲ್ಲ. ವಯಸ್ಸಾದವರಷ್ಟೇ ಅಲ್ಲ, ಯುವಕರು ಕೂಡ ರಸ್ತೆಯ ಮೇಲೆ ಓಡಾಡುವುದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಮಕರ ಸಂಕ್ರಾಂತಿ 2025: ಮೇಷಕ್ಕೆ ಕೀರ್ತಿ, ಮಿಥುನಕ್ಕೆ ಲಾಭ, 12 ರಾಶಿಗಳ ಫಲಾಫಲ ಹೇಗಿದೆ?
ಇದನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು, ಅಂದು ಯೌವನದ ದಿನಗಳನ್ನು ಮೆಟ್ರೋದಲ್ಲಿಯೇ ನೆನೆಯಿರಿ ಎನ್ನುವ ರೀತಿಯಲ್ಲಿ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಜನಜಂಗುಳಿಯ ನಡುವೆ ಸುಸ್ತಾಗುವುದನ್ನು ತಪ್ಪಿಸಿ, ಯೌವನದ ಆ ದಿನಗಳನ್ನು ಮೆಟ್ರೋ ಹತ್ತಿ ನೆನಪು ಮಾಡಿಕೊಳ್ಳಿ ಎಂದು ಇದರಲ್ಲಿ ವಿವರಿಸಲಾಗಿದೆ.
ಈ ವಿಡಿಯೋಗೆ ಹಲವು ಕಮೆಂಟ್ಸ್ ಬರುತ್ತಿದ್ದರೂ, ವಯಸ್ಸಾದ ವ್ಯಕ್ತಿ ಮೆಟ್ರೋ ಹೊರಗೆ ಇರುವ ಮೆಟ್ಟಿಲನ್ನು ಏರಲು ಕಷ್ಟಪಡುತ್ತಿರುವ ಬಗ್ಗೆ ಹಲವರು ಪಾಯಿಂಟ್ ಮಾಡಿದ್ದಾರೆ. ವಯಸ್ಸಾದವರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ಮೆಟ್ಟಿಲು ಅನನುಕೂಲ ಆಗುತ್ತಿದೆ. ಆದ್ದರಿಂದ ಮೆಟ್ರೋದವರು ದಯವಿಟ್ಟು ಈ ಬಗ್ಗೆ ಗಮನ ಹರಿಸಿ, ಈ ವಿಡಿಯೋದಲ್ಲಿ ಆ ವ್ಯಕ್ತಿಗೆ ಮೊಣಕಾಲಿನ ಸಮಸ್ಯೆ ಇರುವ ರೀತಿ ಕಾಣಿಸುತ್ತಿದೆ. ಅವರು ತುಂಬಾ ಶ್ರಮ ಪಡುತ್ತಿದ್ದಾರೆ ಎನ್ನುತ್ತಿದ್ದಾರೆ.
Take a trip down the memory lane with us.
Experience the festive season like it’s meant to be.
Happy Makara Sankranti
ನೆನಪುಗಳಿಗೆ ಜೀವ ತುಂಬಿ, ನೆನಪಿನ ಹಾದಿಯಲ್ಲಿ ನಮ್ಮೊಂದಿಗೆ ಪ್ರಯಾಣಿಸಿ. ಮಕರ ಸಂಕ್ರಾಂತಿಯ ಶುಭಾಶಯಗಳು pic.twitter.com/y3uvQHHviz