ಜನ್ಮರಾಶಿಗೆ ಅನುಗುಣವಾಗಿ ಶಿವ ದೇವರನ್ನು ಪೂಜಿಸಿದರೆ ಆಳವಾದ ಆಧ್ಯಾತ್ಮಿಕ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯೂ ವಿಭಿನ್ನವಾಗಿರುವುದರಿಂದ ಅದಕ್ಕೆ ತಕ್ಕಂತೆ ವಿಭಿನ್ನ ವಸ್ತುಗಳ ನೆರವಿಂದ ಶಿವರಾತ್ರಿಯಂದು ಪೂಜೆ, ನೈವೇದ್ಯ ಮಾಡುವುದು ಉತ್ತಮ.
ಆಧ್ಯಾತ್ಮಿಕ ಅನುಭೂತಿ ನೀಡುವ ಪವಿತ್ರ ಕಾಲ ಮಹಾಶಿವರಾತ್ರಿ. ಆಸ್ತಿಕರು, ಶಿವನ ಭಕ್ತರು ಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸುತ್ತಾರೆ. ಶಿವರಾತ್ರಿ ಹಬ್ಬವೆಂದರೆ, ಭೂರಿ ಭೋಜನದ ಹಬ್ಬವಲ್ಲ. ಉಪವಾಸ, ಜಾಗರಣೆಯಂತಹ ನಿಗ್ರಹಗಳನ್ನು ಹೊಂದುವ ಹಬ್ಬ. ಭಕ್ತಿಭಾವದಲ್ಲಿ ಮಿಂದೇಳುವ ಹಬ್ಬ. ಅಡುಗೆ ಮನೆಯ ಕಾರ್ಯಗಳಿಗೆ ವಿರಾಮ ನೀಡಿ, ಧ್ಯಾನದಲ್ಲಿ ಕಳೆಯಲು ಅನುಕೂಲ ಮಾಡಿಕೊಡುವ ಹಬ್ಬ. ಕೇವಲ ಒಂದು ತುಳಸಿದಳವನ್ನಿಟ್ಟು ಪೂಜಿಸುವ ಹಬ್ಬ. ಶಿವನಿಗೆ ಶುದ್ಧ ಜಲದ ಅಭಿಷೇಕ ಮಾಡಿ ಪರಮ ಪಾವನರಾಗುವ ಹಬ್ಬ. ಶಿವರಾತ್ರಿ ಎಲ್ಲರಿಗೂ ಒಂದೇ ಆಗಿದ್ದರೂ ಜನ್ಮರಾಶಿಗೆ ಅನುಗುಣವಾಗಿ ಪೂಜೆ ಮಾಡಿದರೆ ಆಂತರ್ಯದ ಶಕ್ತಿಯನ್ನು ಇನ್ನಷ್ಟು ಜಾಗೃತಗೊಳಿಸಿಕೊಳ್ಳುವ ಅವಕಾಶ ಹೆಚ್ಚುತ್ತದೆ. ಪ್ರತಿ ರಾಶಿಗೂ ಬ್ರಹ್ಮಾಂಡದೊಂದಿಗೆ ವಿಶಿಷ್ಟ ಸಂಬಂಧ ಇರುವ ಹಿನ್ನೆಲೆಯಲ್ಲಿ, ಜನ್ಮರಾಶಿಗೆ ಅನುಗುಣವಾಗಿ ಶಿವನಿಗೆ ನಿರ್ದಿಷ್ಟ ವಸ್ತುಗಳನ್ನು ಅರ್ಪಿಸುವ ಮೂಲಕ ಕೃತಾರ್ಥರಾಗಬಹುದು.
• ಮೇಷ (Aries)
ಡೈನಮಿಕ್ ಎನರ್ಜಿಗೆ ಪ್ರತಿರೂಪವಾಗಿರುವ ಮೇಷ ರಾಶಿಯ ಜನ ದಟ್ಟವಾದ ಹೂವುಗಳನ್ನು (Flowers) ಶಿವನಿಗೆ ಅರ್ಪಿಸಬೇಕು. ಕೆಂಪು (Red) ಬಣ್ಣದ ದಾಸವಾಳ, ಗುಲಾಬಿ ಹೂವುಗಳಿಂದ ಪೂಜಿಸಬೇಕು. ಇದರಿಂದ ಈ ರಾಶಿಯ ಸ್ಫೂರ್ತಿಯನ್ನು ಪ್ರತಿಬಿಂಬಿಸಿದಂತಾಗುತ್ತದೆ.
MahaShivaratri: ಶಿವರಾತ್ರಿಯಂದು ಎಂತಹ ದಾನ ಮಾಡೋದ್ರಿಂದ ನಿಮ್ಮ ನೈಜ ಶಕ್ತಿ ಜಾಗೃತವಾಗುತ್ತೆ?
undefined
• ವೃಷಭ (Taurus)
ಪ್ರಾಯೋಗಿಕ ವೃಷಭ ರಾಶಿಯ ಜನ ತಾಜಾ ಹಣ್ಣುಗಳು (Fruits) ಮತ್ತು ಸಿಹಿಯನ್ನು (Sweets) ಶಿವನಿಗೆ ಅರ್ಪಿಸಬೇಕು. ದಾಳಿಂಬೆ ಮತ್ತು ಸಿಹಿ ತಿನಿಸುಗಳು ಉತ್ತಮ. ಇವು ಸಮೃದ್ಧಿ ಮತ್ತು ಸಂತಸವನ್ನು ಸೂಚಿಸುತ್ತವೆ.
• ಮಿಥುನ (Gemini)
ಮಿಥುನ ರಾಶಿಯ ಜನ ಪರಿಮಳಭರಿತ (Aromatic) ಗಂಧದ ಕಡ್ಡಿಗಳು ಮತ್ತು ಗಂಟೆಯ (Bell) ಸದ್ದಿನ ಮೂಲಕ ಶಿವನೊಂದಿಗೆ ಸಂಪರ್ಕ ಹೊಂದಬಹುದು. ಇವುಗಳನ್ನು ಅರ್ಪಿಸುವುದರಿಂದ ನಿಮ್ಮ ಆಧ್ಯಾತ್ಮಿಕ (Spiritual) ಸಂಪರ್ಕ ಉತ್ತಮವಾಗುತ್ತದೆ.
• ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನ ಹಾಲು (Milk) ಮತ್ತು ಅಕ್ಕಿ (Rice)ಯನ್ನು ಶಿವ ದೇವರಿಗೆ ನೈವೇದ್ಯ ಮಾಡುವ ಮೂಲಕ ಆಧ್ಯಾತ್ಮಿಕ ಅನುಭೂತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಇವು ಶುದ್ಧತೆ ಮತ್ತು ಆರೈಕೆಯನ್ನು ಬಿಂಬಿಸುವ ಜತೆಗೆ, ಈ ರಾಶಿಯವರ ಕಾಳಜಿ ಮಾಡುವ ಗುಣವನ್ನು ವ್ಯಕ್ತಪಡಿಸುತ್ತವೆ.
• ಸಿಂಹ (Leo)
ರಾಜಪ್ರಭುತ್ವದಂತಹ ನಡೆನುಡಿ ಹೊಂದಿರುವ ಸಿಂಹ ರಾಶಿಯ ಜನ ಶಿವನಿಗೆ ಸೂರ್ಯಕಾಂತಿ ಮತ್ತು ತುಪ್ಪವನ್ನು (Ghee) ಅರ್ಪಿಸಬೇಕು. ಇವು ಅಧಿಕಾರ (Power), ಉಲ್ಲಾಸವನ್ನು ಬಿಂಬಿಸುತ್ತವೆ.
• ತುಲಾ (Libra)
ತುಲಾ ರಾಶಿಯ ಜನ ತಾಜಾ ತುಳಸಿ, ಪುದೀನಾದಂತಹ ಔಷಧೀಯ ಸಸ್ಯಗಳನ್ನು (Herbs) ಅರ್ಪಿಸಬೇಕು. ಪರಿಮಳಯುಕ್ತ ಸಸ್ಯಗಳು ಹೀಲಿಂಗ್ (Healing), ಶುದ್ಧತೆಯನ್ನು (Purity) ಪ್ರತಿನಿಧಿಸುತ್ತವೆ.
• ವೃಶ್ಚಿಕ (Scorpio)
ಆಳವಾದ ಎನರ್ಜಿಯ ವೃಶ್ಚಿಕ ರಾಶಿಯ ಜನ ಗಾಢ ಕೆಂಪು ಬಣ್ಣದ ಹಣ್ಣುಗಳನ್ನು ದೇವರಿಗೆ ಅರ್ಪಿಸಬೇಕು. ದಾಳಿಂಬೆ, ಸೇಬು (Apple) ಹಣ್ಣುಗಳು ಸೂಕ್ತ. ಇವು ಪರಿವರ್ತನೆ, ತೀವ್ರತೆಯನ್ನು ಪ್ರತಿನಿಧಿಸುತ್ತವೆ.
ಶಿವನ ಕುತ್ತಿಗೆಯಲ್ಲಿ ಹಾವು, ತಲೆಯಲ್ಲಿ ಚಂದ್ರ ಯಾಕೆ? ಇಲ್ಲಿದೆ Interesting Facts
• ಧನು (Sagittarius)
ಆಶಾವಾದಿಯಾಗಿರುವ ಧನು ರಾಶಿಯ ಜನ ಹಳದಿ (Yellow) ಬಣ್ಣದ ಹೂವುಗಳನ್ನು ಅರ್ಪಿಸುವ ಮೂಲಕ ಅಥವಾ ಹಳದಿ ಬಣ್ಣದ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡುವ ಮೂಲಕ ದೇವರ ಸಂಪರ್ಕ (Connect) ಹೊಂದಲು ಸಾಧ್ಯ. ಇವು ಧನಾತ್ಮಕತೆ ಮತ್ತು ಅರಿವನ್ನು ಸೂಚಿಸುತ್ತವೆ.
• ಮಕರ (Capricorn)
ಶಿಸ್ತಿಗೆ ಹೆಸರಾಗಿರುವ ಮಕರ ರಾಶಿಯ ಜನ ಕರಿಎಳ್ಳು (Sesame) ಮತ್ತು ಕಪ್ಪು ಧಾನ್ಯಗಳನ್ನು ದೇವರಿಗೆ ಅರ್ಪಿಸಬೇಕು. ಇವು ಪರಿಶ್ರಮ ಮತ್ತು ಪ್ರಗತಿಯನ್ನು ಸೂಚಿಸುತ್ತವೆ.
• ಕುಂಭ (Aquarius)
ಅನ್ವೇಷಣಾ ಬುದ್ಧಿಯ (Innovative Ideas) ಕುಂಭ ರಾಶಿಯ ಜನ ನೀಲಿ (Blue) ಹೂವುಗಳನ್ನು ದೇವರಿಗೆ ಅರ್ಪಿಸಬೇಕು. ನೀಲಿ ಶಂಖಪುಷ್ಪ, ನೀಲಿ ಆರ್ಕಿಡ್ ಗಳನ್ನು ನೀಡಬೇಕು. ಇವು ಸ್ಫೂರ್ತಿ ಮತ್ತು ಕ್ರಿಯಾಶೀಲತೆಯನ್ನು ಬಿಂಬಿಸುತ್ತವೆ.
• ಮೀನ (Piesces)
ಮೀನ ರಾಶಿಯ ಜನ ಶುದ್ಧವಾದ ಪವಿತ್ರ ಜಲ (Water) ಮತ್ತು ಬಿಳಿ (White) ಹೂವುಗಳನ್ನು ಅರ್ಪಿಸುವ ಮೂಲಕ ಶಿವ ದೇವರೊಂದಿಗೆ ಆಳವಾದ ಅನುಭೂತಿ ಹೊಂದಲು ಸಾಧ್ಯ. ಇವು ಶುದ್ಧತೆಯ ಪ್ರತಿಬಿಂಬ.