
ಕಂಕಣ ಕೂಡಿ ಬಂದಾಗ ಮಾತ್ರ ಮದುವೆ ಆಗೋದು ಎಂಬ ನಂಬಿಕೆ ನಮ್ಮಲ್ಲಿದೆ. ಕಂಕಣ ಕೂಡಿ ಬರೋದೇ ಕಷ್ಟ ಎನ್ನುವ ಸ್ಥಿತಿ ಈಗಿದೆ. ಕೈ ತುಂಬ ಸಂಬಳ, ಆಸ್ತಿ, ಒಳ್ಳೆ ಕೆಲ್ಸವಿದ್ರೂ ಅನೇಕರಿಗೆ ಮದುವೆ ಭಾಗ್ಯವಿಲ್ಲ. ವಯಸ್ಸು 38ರ ಗಡಿ ದಾಟುತ್ತಿದ್ದರೂ ಸಂಗಾತಿ ಸಿಗ್ತಿಲ್ಲ ಎನ್ನುವವರೇ ಈಗಿನ ದಿನಗಳಲ್ಲಿ ಹೆಚ್ಚು. ಮದುವೆಯಲ್ಲಿ ತೊಂದ್ರೆ ಆಗ್ತಿದೆ, ಅಂತಿಮ ಹಂತಕ್ಕೆ ಬಂದ ಮಾತುಕತೆ ನಿಲ್ತಿದೆ ಅಂದ್ರೆ ಅದಕ್ಕೆ ಅನೇಕ ಕಾರಣ ಇದೆ. ಜ್ಯೋತಿಷ್ಯದ ಪ್ರಕಾರ, ನಿಮ್ಮ ಜಾತಕದಲ್ಲಿ ದುರ್ಬಲ ಗುರುವಿನ ಉಪಸ್ಥಿತಿಯು ಇದಕ್ಕೆ ಕಾರಣವಾಗ್ಬಹುದು. ರತ್ನಶಾಸ್ತ್ರ (Gemology)ದ ಪ್ರಕಾರ, ಶೀಘ್ರ ಮದುವೆಗೆ ಕೆಲ ಪರಿಹಾರ ಇದೆ. ಅದ್ರಲ್ಲಿ ನೀಲಮಣಿ ರತ್ನ ಕೂಡ ಒಂದು. ಇದರ ಶಕ್ತಿ ನಿಮ್ಮ ಆಯ್ಕೆಯ ಜೀವನ ಸಂಗಾತಿಯನ್ನು ಹುಡುಕಲು ಸಹಾಯ ಮಾಡುತ್ತದೆ.
ನೀಲಮಣಿ (Sapphire) ರತ್ನ ಧರಿಸುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ. ಶೀಘ್ರ ನೀವು ಹಸೆಮಣೆ ಏರುತ್ತೀರಿ. ಸಂತೋಷದ ದಾಂಪತ್ಯ ನಿಮ್ಮದಾಗುತ್ತದೆ. ಗಂಡ ಮತ್ತು ಹೆಂಡತಿ ನಡುವಿನ ಬಾಂಧವ್ಯ ಸುಧಾರಿಸುತ್ತದೆ. ಬರೀ ದಾಂಪತ್ಯ ಜೀವನ ಮಾತ್ರವಲ್ಲ ಶೈಕ್ಷಣಿಕ ಪ್ರಗತಿಗೆ ಇದು ಉತ್ತಮ. ಈ ರತ್ನ ಆರ್ಥಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಡಿಸೆಂಬರ್‌ನಲ್ಲಿ ಹಲವಾರು ಗ್ರಹಗಳ ಸಂಚಾರ, ಮೇಷ ಸೇರಿದಂತೆ 5 ರಾಶಿಗೆ ಮುಂದಿನ ತಿಂಗಳು ಸಂಪತ್ತು
ನೀಲಮಣಿಯ ಸಂಪೂರ್ಣ ಪ್ರಯೋಜನ ಪಡೆಯಲು ನೀವು ಅದನ್ನು ಹೇಗೆ ಧರಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ನೀಲಮಣಿಯನ್ನು ನೀವು ಧರಿಸಲು ಉತ್ತಮ ದಿನ ಗುರುವಾರ. ಇದನ್ನು ಸೂರ್ಯೋದಯದ ಸಮಯದಲ್ಲಿ ಧರಿಸಬೇಕು. ಅದನ್ನು ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ಹೊಂದಿಸಿ ನಿಮ್ಮ ಬಲಗೈಯ ತೋರು ಬೆರಳಿಗೆ ಧರಿಸಬೇಕು. ರತ್ನವನ್ನು ಧರಿಸುವ ಮೊದಲು, ಅದನ್ನು ಶುದ್ಧೀಕರಿಸಬೇಕು. ರತ್ನವನ್ನು ಅರಿಶಿನದಲ್ಲಿ ಬೆರೆಸಿ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು. ಮರುದಿನ ಅದನ್ನು ಧರಿಸುವ ಮೊದಲು, ವಿಷ್ಣುವಿನ ಮಂತ್ರ "ಓಂ ಬೃಂ ಬೃಹಸ್ಪತೇಯ ನಮಃ" ಎಂಬ ಮಂತ್ರವನ್ನು 108 ಬಾರಿ ಪಠಿಸಬೇಕು.
ನೀಲಮಣಿ ರತ್ನ ಧರಿಸುವ ಮುನ್ನ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು? :
ನೀಲಮಣಿ ಧರಿಸುವ ಮೊದಲು ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಯಾವಾಗಲೂ ನಿಜವಾದ ಮತ್ತು ಪ್ರಮಾಣೀಕೃತ ನೀಲಮಣಿ ಧರಿಸಿ. ಅರ್ಹ ಜ್ಯೋತಿಷಿಯನ್ನು ಸಂಪರ್ಕಿಸದೆ ಎಂದಿಗೂ ನೀಲಮಣಿ ಧರಿಸಬಾರದು. ಪ್ರತಿಯೊಬ್ಬರ ಜಾತಕ ಮತ್ತು ಗ್ರಹಗಳು ಭಿನ್ನವಾಗಿರುತ್ತವೆ. ಗುರು ನಿಮ್ಮ ಜಾತಕದಲ್ಲಿ ಈಗಾಗಲೇ ಉತ್ತಮ ಸ್ಥಾನದಲ್ಲಿದ್ದರೆ, ಹಳದಿ ನೀಲಮಣಿ ಧರಿಸುವುದು ಹಾನಿಕಾರಕ. ತಪ್ಪು ರತ್ನವನ್ನು ಧರಿಸುವುದು ಅಥವಾ ತಪ್ಪು ವಿಧಾನವನ್ನು ಬಳಸುವುದು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.
Lucky zodiac sign: ಡಿಸೆಂಬರ್’ನಲ್ಲಿ ರಾತ್ರೋ ರಾತ್ರಿ ಈ ಐದು ರಾಶಿಗಳ ಅದೃಷ್ಟ ಬದಲಾಗುತ್ತೆ
ದಾಂಪತ್ಯದಲ್ಲಿನ ಸಮಸ್ಯೆಯನ್ನು ಇದು ಹೋಗಲಾಡಿಸುತ್ತದೆ. ಗಂಡ ಮತ್ತು ಹೆಂಡತಿಯ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಅಧ್ಯಯನದಲ್ಲಿ ಪ್ರಗತಿಯನ್ನು ಉತ್ತೇಜಿಸುತ್ತದೆ. ಈ ರತ್ನವು ಆರ್ಥಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನೀಲಮಣಿ ಅಥವಾ ನೀಲಿ ನೀಲಮಣಿ ಶನಿಯ ರತ್ನವಾಗಿದೆ. ಜಾತಕದಲ್ಲಿ ಶನಿ ಬಲವಾಗಿಲ್ಲದವರಿಗೆ ಇದು ಶುಭ. ನೀಲಮಣಿ ಧರಿಸುವುದರಿಂದ ಶನಿಯ ಆಶೀರ್ವಾದ ದೊರೆಯುತ್ತದೆ. ಜೀವನದ ಕಷ್ಟಗಳನ್ನು ನಿವಾರಿಸುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀಲಮಣಿ ಬಹಳ ಶಕ್ತಿಶಾಲಿ ರತ್ನವಾಗಿದೆ.
ಇದಲ್ಲದೆ ನೀವು ಮಾಣಿಕ್ಯ, ಮುತ್ತು ಹೆಸ್ಸೂನೈಟ್ ಕೂಡ ಧರಿಸಬಹುದು. ಗ್ರಹಗತಿಗಳ ಮೇಲೆ ಇದು ನಿರ್ಧಾರವಾಗುತ್ತದೆ. ವಿವಾಹದ ನಿರೀಕ್ಷೆಗಳು ದುರ್ಬಲವಾಗಿದ್ದರೆ, ಮಾಣಿಕ್ಯ ಧರಿಸುವುದರಿಂದ ಸಂಬಂಧಗಳು ಬಲಗೊಳ್ಳುತ್ತವೆ. ರತ್ನವು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.