ಸಾವಿನ ಸೂಚನೆ ಕೊಡ್ತಾಳೆ ಈ ನರ್ಸ್, ಹೇಗೆ ಗೊತ್ತಾಗುತ್ತೆ ಈಕೆಗೆ?

By Suvarna News  |  First Published Mar 18, 2024, 4:42 PM IST

ಸಾವು ಇನ್ನೂ ನಿಗೂಢ. ಸಾವಿನ ಬಗ್ಗೆ ಯಾರೂ ಸರಿಯಾದ ಮಾಹಿತಿ ನೀಡಲು ಸಾಧ್ಯವಿಲ್ಲ. ಈಗ ನರ್ಸ್ ಒಬ್ಬರು ಸಾವು ಭಯ ಎನ್ನುವವರಿಗೆ ನೆಮ್ಮದಿ ವಿಷ್ಯ ತಿಳಿಸಿದ್ದಾರೆ. ಸಾವಿನ ಬಗ್ಗೆ ಸುಂದರ ಮಾಹಿತಿ ನೀಡಿದ್ದಾರೆ.


ಹುಟ್ಟಿದ ಮೇಲೆ ಸಾವು ಖಚಿತ. ಸಾವಿಗೆ ಹೆದರುವವರು ಸಾಕಷ್ಟು ಮಂದಿ. ಎಂದೋ ಬರುವ ಸಾವಿಗೆ ಇಂದೇ ಭಯ ಬೀಳುವ ಜನರು, ಅದು ಭಯಾನಕವಾಗಿದ್ದರೆ, ಅದು ನೋವಿನಿಂದ ಕೂಡಿದ್ದರೆ ಎಂದೆಲ್ಲ ಆಲೋಚನೆ ಮಾಡಿ ಈ ಕ್ಷಣದ ಸುಖ ಹಾಳು ಮಾಡಿಕೊಳ್ತಾರೆ. ಸಾವು ಈ ದಿನ, ಈ ಕ್ಷಣ ಕೂಡ ಬರಬಹುದು. ಸಾವಿನ ಬಗ್ಗೆ ಯಾರಿಗೂ ತಿಳಿಯೋದಿಲ್ಲ. ಸಾವು ಯಾವಾಗ ಬರುತ್ತೆ ಎಂಬುದು ಗೊತ್ತಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ. ಸಾಮಾನ್ಯವಾಗಿ ಸಾಧು, ಸಂತರು ಮಾತ್ರ ಸಾವಿನ ಬಗ್ಗೆ ಮಾಹಿತಿ ಹೊಂದಿರುತ್ತಾರೆ. ತಮ್ಮ ಸಾವು ಹತ್ತಿರ ಬರುತ್ತಿದ್ದಂತೆ ಅದಕ್ಕೆ ತಯಾರಿ ನಡೆಸುವ ಜೊತೆಗೆ ಅದನ್ನು ಖುಷಿಯಿಂದ, ಸಂತೋಷದಿಂದ ಸ್ವೀಕರಿಸಲು ಸಿದ್ಧರಾಗ್ತಾರೆ. ಕೆಲ ಸಾಧುಗಳು ಸಾವಿಗೆ ಮೊದಲೇ ಸಮಾಧಿ ನಿರ್ಮಿಸಿಕೊಂಡು ಸಾವನ್ನು ಆಹ್ವಾನಿಸುತ್ತಾರೆ. ಅದು ಸಾಮಾನ್ಯ ಮನುಷ್ಯನಿಗೆ ಸಾಧ್ಯವಿಲ್ಲ.  

ಸಾವು (Death) ನಿಗೂಢವಾದದ್ದು. ಇದನ್ನು ಬಹುತೇಕ ಎಲ್ಲರೂ ಒಪ್ಪಿಕೊಳ್ತಾರೆ. ಇದ್ರ ಬಗ್ಗೆ ಸಾಕಷ್ಟು ಸಂಶೋಧನೆ (Research) ನಡೆದಿದ್ದರೂ ಅದ್ರ ಬಗ್ಗೆ ಸ್ಪಷ್ಟತೆ ಇನ್ನೂ ಹೊರಗೆ ಬಿದ್ದಿಲ್ಲ. ಸತ್ತ ನಂತ್ರ ವ್ಯಕ್ತಿ ಎಲ್ಲಿಗೆ ಹೋಗ್ತಾನೆ, ಆತ್ಮ (soul) ಏನಾಗುತ್ತದೆ, ಸಾವು ನಿಶ್ಚಯವಾಗೋದು ಹೇಗೆ ಹೀಗೆ ನಾನಾ ಪ್ರಶ್ನೆಗಳಿಗೆ ಈಗ್ಲೂ ಉತ್ತರ ಇಲ್ಲ. ಸಾಯುವ ವ್ಯಕ್ತಿ ಸಾವು ಹತ್ತಿರ ಬರ್ತಿದ್ದಂತೆ ವಿಪರೀತ ನೋವು (Pain) ಅನುಭವಿಸುತ್ತಾನೆ ಎನ್ನುವ ಮಾತೊಂದಿದೆ. ಆದ್ರೆ  ಸಾವನ್ನು ಹತ್ತಿರದಿಂದ ನೋಡಿರುವ ನರ್ಸ್ ಇದನ್ನು ಒಪ್ಪುತ್ತಿಲ್ಲ. ಸಾವಿನ ಬಗ್ಗೆ ಕುತೂಹಲಕಾರಿ ವಿಷ್ಯವನ್ನು ಅವರು ಹೊರ ಹಾಕಿದ್ದಾರೆ.

Tap to resize

Latest Videos

ಎಲಾನ್‌ ಮಸ್ಕ್ ಮಾಡೋ ಭಾರತೀಯ ಸಿದ್ಧಿ ಪರಂಪರೆಯ ಶಕ್ತಿ ಮುದ್ರೆ ನೀವೂ ಮಾಡಬಹುದು, ಇದರ ಪ್ರಯೋಜನವೇನು?

41 ವರ್ಷದ ಅಮೇರಿಕನ್ ನರ್ಸ್ ಜೂಲಿ ಮ್ಯಾಕ್‌ಫ್ಯಾಡೆನ್ ಅನೇಕರ ಸಾವನ್ನು ಹತ್ತಿರದಿಂದ ನೋಡಿದ್ದಾರೆ. ಸಾವಿನ ಬಗ್ಗೆ ಪ್ರತಿಯೊಬ್ಬ ವ್ಯಕ್ತಿ ಭಿನ್ನವಾಗಿ ವರ್ತಿಸುತ್ತಾನೆ ಎಂದು ಮ್ಯಾಕ್ ಫ್ಯಾಡೆನ್ ಹೇಳಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ವಾಸಿಸುವ ನರ್ಸ್ ಜೂಲಿ ಮ್ಯಾಕ್‌ಫ್ಯಾಡೆನ್ ಸಾವಿನ ಸಮಯದಲ್ಲಿ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜೂಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

ಜೂಲಿ ಮ್ಯಾಕ್‌ಫ್ಯಾಡೆನ್ ಪ್ರಕಾರ, ಸಾವಿನ ಅಂಚಿನಲ್ಲಿರುವ ಜನರು ತಮ್ಮ ಸಾವನ್ನು ಕಾಣುತ್ತಾರೆ. ಸುಮ್ಮನೇ ನೋಡುತ್ತಿರುವ ವ್ಯಕ್ತಿ ಮುಂದೆ ನೀವು ಕೈ ಅಡ್ಡಿ ಹಿಡಿದ್ರೂ ಆತ ಪ್ರತಿಕ್ರಿಯೆ ನೀಡೋದಿಲ್ಲ. ಆತನಿಗೆ ಸಾವನ್ನು ಬಿಟ್ಟರೆ ಮತ್ತೇನೂ ಕಾಣೋದಿಲ್ಲ. ಆಗ ಅವರು ತುಂಬಾ ಶಾಂತವಾಗಿರುತ್ತಾರೆ ಇಲ್ಲವೆ ಯಾವುದೇ ಕ್ರಿಯೆ ಇಲ್ಲದೆ ಸುಮ್ಮನೆ ನೋಡುತ್ತಿರುತ್ತಾರೆ ಎನ್ನುತ್ತಾರೆ ಜೂಲಿ ಮ್ಯಾಕ್‌ಫ್ಯಾಡೆನ್. ಎಲ್ಲರಿಗೂ ಸಾವು ಭಯಾನಕವಾಗಿರುತ್ತದೆ ಎಂದು ನಾನು ಹೇಳುವುದಿಲ್ಲ. ಅನೇಕರು ಸಾವನ್ನು ತುಂಬಾ ಖುಷಿಯಿಂದ, ನಗುಮುಖದಿಂದ ಸ್ವೀಕರಿಸುತ್ತಾರೆ ಎನ್ನುತ್ತಾರೆ ಜೂಲಿ. ಸಾವಿನ ಬಗ್ಗೆ ಅವರಿಗೆ ಭಯ ಇರೋದಿಲ್ಲ. ಅದನ್ನು ಸುಂದರವಾಗಿ ಹಾಗೂ ಶಾಂತವಾಗಿ ಕಾಣುತ್ತಾರೆ. ಒಂದು ವಾರದ ಮೊದಲೇ ಅವರು ಸಾವು ನೋಡ್ತಿದ್ದಾರೆ ಎಂಬುದನ್ನು ಪತ್ತೆ ಮಾಡಬಹುದು ಎನ್ನುತ್ತಾರೆ ಜೂಲಿ.

ಕೂದಲ ಹಾನಿ ನಿಯಂತ್ರಣಕ್ಕಾಗಿ ಅತ್ಯಂತ ಪರಿಣಾಮಕಾರಿ ಕೊರಿಯನ್ ಹೇರ್‌ ಕೇರ್‌ ಟಿಪ್ಸ್‌!

ಜೂಲಿ ಪ್ರಕಾರ, ಕೆಲವರು ಸಾವಿನ ಜೊತೆ ಮಾತನಾಡುತ್ತಾರೆ. ಇನ್ನು ಕೆಲವರು ಸಾವನ್ನಪ್ಪಿದ ತಮ್ಮ ಆಪ್ತರ ಜೊತೆ ಮಾತನಾಡುತ್ತಾರೆ ಎಂದು ಜೂಲಿ ಹೇಳುತ್ತಾರೆ. ಪ್ರತಿಯೊಬ್ಬ ಸಾವನ್ನಪ್ಪುವ ವ್ಯಕ್ತಿಯಲ್ಲಿ ಶಕ್ತಿಯ ಸಣ್ಣ ಸ್ಫೋಟವಾಗುತ್ತದೆ. ಅದನ್ನು ಟರ್ಮಿನಲ್ ಆಮ್ಲತೆ ಎಂದು ಕರೆಯಲಾಗುತ್ತದೆ. ಆದ್ರೆ ಇದು ನಿಗೂಢ ಎನ್ನುತ್ತಾರೆ ಜೂಲಿ. ಡೆತ್ ರೀಚ್ ಬಗ್ಗೆಯೂ ಜೂಲಿ ಹೇಳಿದ್ದಾರೆ. ಸಾಯುವ ಮೊದಲೇ ಕೆಲವರು ಈ ಹಂತಕ್ಕೆ ತಲುಪುತ್ತಾರೆ. ಅವರು ಸಾಯುವ ಮೊದಲೇ ಮೇಲೆ ತೇಲಾಡಿದ ಅನುಭವ ಪಡೆಯುತ್ತಾರೆ ಎನ್ನುತ್ತಾರೆ ಜೂಲಿ. 

click me!