ದುಡ್ಡಿನ ಸಮಸ್ಯೆನಾ? ಮದ್ವೆ-ಮಕ್ಕಳು ಆಗ್ತಿಲ್ವಾ? ಹಾಗಿದ್ರೆ ಈ ನಂಬರ್​ ಬರೆದು ನೋಡಿ: ಸಂಖ್ಯಾ ಶಾಸ್ತ್ರಜ್ಞೆ ಹೇಳಿದ್ದೇನು?

By Suchethana D  |  First Published Nov 8, 2024, 5:11 PM IST

ದುಡ್ಡಿನ ಸಮಸ್ಯೆನಾ? ಮದ್ವೆ-ಮಕ್ಕಳು ಆಗ್ತಿಲ್ವಾ? ಹಾಗಿದ್ರೆ ಈ ನಂಬರ್​ ಬರೆದು ನೋಡಿ: ಸಂಖ್ಯಾ ಶಾಸ್ತ್ರಜ್ಞೆ  ಡಾ. ಅಕ್ಷತಾ ರಾವ್ ಹೇಳಿದ್ದೇನು ಕೇಳಿ.  
 


ಸಂಖ್ಯಾಶಾಸ್ತ್ರಕ್ಕೆ ಅದರದ್ದೇ ಆದ ಮಹತ್ವ ಇದೆ. ಪ್ರತಿಯೊಂದು ಸಂಖ್ಯೆಯಲ್ಲಿಯೂ ಒಂದೊಂದು ತೆರನಾದ ಶಕ್ತಿ ಇದೆ ಎನ್ನಲಾಗುತ್ತದೆ.  ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಪ್ರಪಂಚದ ಎಲ್ಲಾ ಕಾರ್ಯಗಳೂ ಸಂಖ್ಯೆಗಳನ್ನು ಅನುಸರಿಸಿಯೇ ಮುಂದುವರೆಯುತ್ತದೆ.  ಭವಿಷ್ಯವನ್ನು ತಿಳಿಸುವ ಮೂರು ಪ್ರಮುಖ ಶಾಸ್ತ್ರಗಳಲ್ಲಿ ಒಂದು ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಹಸ್ತರೇಖೆ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಇವುಗಳಿಗೆ ವೈಜ್ಞಾನಿಕ ಹಿನ್ನೆಲೆಯೂ ಇವೆ.  ಅಷ್ಟಕ್ಕೂ ಈ ಪ್ರಪಂಚ ನಡೆಯುವುದೇ ಸಂಖ್ಯೆಗಳ ಮೇಲೆ ಎನ್ನಲಾಗುತ್ತದೆ.  ಲೋಕದ ಸೃಷ್ಟಿ, ಸ್ಥಿತಿ, ಲಯಗಳನ್ನು ಅರಿಯಲು ಕೂಡ ಸಂಖ್ಯೆಗಳೇ ಮಹತ್ವದ ಪಾತ್ರ ವಹಿಸುವುದು ಇದೆ. ಅಷ್ಟೇ ಏಕೆ. ಕುತೂಹಲದ ಸಂಗತಿ ಎಂದರೆ ಕೃತಯುಗ, ತ್ರೇತಾಯುಗ, ದ್ವಾಪರ ಮತ್ತು  ಕಲಿಯುಗ ಎಂಬ ಕಲ್ಪನೆ ಬಂದಿರುವುದೂ ಸಂಖ್ಯಾಶಾಸ್ತ್ರದ ಆಧಾರದ ಮೇಲೆ.  

ಇದೇ ಕಾರಣಕ್ಕೆ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಸಮಸ್ಯೆಗಳಿಗೆ ಸಮಾಧಾನ ಹೇಳುವ ಸಂಖ್ಯಾಶಾಸ್ತ್ರಜ್ಞರು ಇದ್ದಾರೆ. ಇದೀಗ ಡಾ.ಅಕ್ಷತಾ ರಾವ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಕೆಲವೊಂದು ವಿಷಯಗಳನ್ನು ತಿಳಿಸಿದ್ದಾರೆ. ಅವರು ಹೇಳುವಂತೆ, ಪ್ರತಿಯೊಂದು ಸಂಖ್ಯೆಗೂ ಅದರದ್ದೇ ಆಗಿರುವ  ಶಕ್ತಿ ಇದೆ. ಇದೇ ಕಾರಣಕ್ಕೆ ಕೆಲವೊಂದು ಸಮಸ್ಯೆಗಳಿಗೆ ಸಂಖ್ಯೆಗಳಿಂದಲೇ ಪರಿಹಾರ ಸಾಧ್ಯ. ಕೆಲವೊಂದು ಸಂಖ್ಯೆಗಳನ್ನು ಕೈಮೇಲೆ ಬರೆದುಕೊಂಡರೆ, ಇಲ್ಲವೇ ಹಾಳೆಗಳ ಮೇಲೆ ಬರೆದು ಇಟ್ಟುಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ ಎಂದಿದ್ದಾರೆ. ಇದನ್ನು ಹಲವರು ನಂಬದೇ ಹೋಗಬಹುದು. ಆದರೆ ಇದು ನಿಜಕ್ಕೂ ಕೆಲಸ ಮಾಡುತ್ತದೆ ಎನ್ನುವುದು ಅವರ ಮಾತು. 

Tap to resize

Latest Videos

undefined

ನಿಮ್ಮ ಅದೃಷ್ಟದ ಬಾಗಿಲು ತೆರೆಯಲು ಹುಟ್ಟಿದ ದಿನಕ್ಕನುಸಾರವಾಗಿ ಇದೇ ಬಣ್ಣದ ಆಯ್ಕೆ ಇರಲಿ...

ದಿನನಿತ್ಯವೂ ಕೆಲಸ ಮಾಡಿ, ಆಯಾ ದಿನಗಳ ಆದಾಯ ಗಳಿಸುವವರು ತುಂಬಾ ಜನ ಇದ್ದಾರೆ. ಕ್ಯಾಬ್​, ಆಟೋ ಡ್ರೈವರ್​ರಿಂದ ಹಿಡಿದು ಇಂಥ ಕೆಲಸದಲ್ಲಿ ತೊಡಗಿರುವವರು ಇದ್ದಾರೆ. ಈ ಕ್ಷೇತ್ರಗಳಲ್ಲಿ ಕಾಂಪಿಟೇಷನ್​  ಕೂಡ ಹೆಚ್ಚಿರುವ ಕಾರಣ, ಆಯಾ ದಿನದ ಆದಾಯ ಗಳಿಸುವುದು ಕಷ್ಟವಾಗುತ್ತದೆ. ಅಂಥ ಸಂದರ್ಭದಲ್ಲಿ ಒಂದು ಸಂಖ್ಯೆ ನೆರವಿಗೆ ಬರುತ್ತದೆ ಎನ್ನುವುದು ಡಾ.ಅಕ್ಷತಾ ರಾವ್​ ಅವರ ಮಾತು. ಇವುಗಳಿಗೆ ಸ್ವಿಚ್​ ಕೋಡ್​ ಎನ್ನಲಾಗುತ್ತದೆ. ದಿನನಿತ್ಯದ ಹಣಕಾಸಿನ ಸಮಸ್ಯೆ ನಿವಾರಣೆಗೆ ಎಡಗೈ ನಾಡಿ ಮೇಲೆ 1741 ಎಂದು ಬರೆದುಕೊಳ್ಳಬೇಕು. ಇದರಿಂದ ಸಮಸ್ಯೆ ಪರಿಹಾರ ಆಗುತ್ತದೆ ಎನ್ನುವುದು ಅವರ ಮಾತು. 

ಅದೇ ರೀತಿ, ಪದೇ ಪದೇ ಹಣಕಾಸಿನ ತೊಂದರೆ ಅನುಭವಿಸುತ್ತಿರುವವರು,  808 520 741 ಕೈಮೇಲೆ ಬರೆದುಕೊಂಡು ಇಟ್ಟುಕೊಳ್ಳಬಹುದು. ಇಲ್ಲವೇ ಬಿಳಿಯ ಹಾಳೆಯ ಮೇಲೆ ಹಸಿರು ಇಂಕ್​ನಲ್ಲಿ ಬರೆದು ಅದನ್ನು ದಿಂಬಿನ ಕೆಳಗೆ, ಬ್ಯಾಗ್​ನಲ್ಲಿ ಇಲ್ಲವೇ ಮನೆಯ ಯಾವುದಾದರೂ ಕಡೆ ಇಟ್ಟುಕೊಳ್ಳಬೇಕು. ಪದೇ ಪದೇ ಈ ಸಂಖ್ಯೆಯನ್ನು ಹೇಳುತ್ತಿರುವುದರಿಂದಲೂ ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎನ್ನುತ್ತಾರೆ  ಡಾ.ಅಕ್ಷತಾ ರಾವ್​. ನಿದ್ದೆ ಬರದೇ ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಿರುವವರು ಎಡಗೈ ನಾಡಿಯ ಮೇಲೆ  2.5 ಎಂದು ಬರೆದುಕೊಂಡು ನೋಡಿ ಎಂದಿದ್ದಾರೆ.  ಮದುವೆಯಾಗುತ್ತಿಲ್ಲ ಎಂದರೆ REACH ಬರೆಯಬೇಕು. ಲವ್​ ಮ್ಯಾರೇಜ್​ ಆಗಬೇಕು ಎಂದಿದ್ದರೆ REACH CHARM ಎಂದೂ ಮನೆಯಲ್ಲಿ ಹುಡುಗ ಅಥವಾ ಹುಡುಗಿಯನ್ನು ನೋಡುತ್ತಿದ್ದರೆ ಅಂದರೆ ಅರೇಂಜ್​ ಮ್ಯಾರೇಜ್​ ಆಗಿದ್ದರೆ, TOGETHER REACH SMART BOY ಅಥ್ವಾ GIRL ಎಂದು ಬರೆದುಕೊಳ್ಳಬೇಕು. ಇದನ್ನು ಬೆಡ್​ರೂಮ್​ನಲ್ಲಿ ಅಂಟಿಸುವುದರಿಂದ, ಇಲ್ಲವೇ ಬಿಳಿ ಹಾಳೆಯ ಮೇಲೆ ಹಸಿರು ಬಣ್ಣದಲ್ಲಿ ಬರೆದು ಇಡಬೇಕು. ಮಕ್ಕಳು ಆಗಬೇಕು ಎಂದರೆ COPY ಎಂದು ಬರೆಯಬೇಕು. ಅದನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು. ಕೈ ಮೇಲೆ ಬರೆದುಕೊಳ್ಳಬಹುದು. ನೆನಪು ಆದಾಗ COPY COPY COPY ಎನ್ನುತ್ತಿರಬೇಕು ಎನ್ನುತ್ತಾರೆ ಅವರು. 

ಯಾವ ತಾರೀಖಿನಂದು ಹುಟ್ಟಿದ ವ್ಯಕ್ತಿ ನಿಮ್ಮ ಸಂಗಾತಿಯಾಗಬಹುದು? ಸುಖ ಸಂಸಾರಕ್ಕೆ ಸಂಖ್ಯಾಶಾಸ್ತ್ರ ಸೂತ್ರ...

click me!