ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ನೀಡಿದ ಸಂದರ್ಶನದಲ್ಲಿ, ಬೆಂಗಳೂರಿನ ಆರ್ ಆರ್ ನಗರದ ವಾಸ್ತು ಸರಿ ಇಲ್ಲದ ಕಾರಣ ಅಲ್ಲಿ ವಾಸಿಸುವವರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು. ಪ್ರಸ್ತುತ ಅದರಂತೆ ನಡೆಯುತ್ತಿದೆ ಎಂಬ ಚರ್ಚೆ ಜೋರಾಗಿದೆ.
ರಾಜ್ಯದಲ್ಲಿ ಈ ವರ್ಷ ಅತೀ ಹೆಚ್ಚು ಸುದ್ದಿಯಾಗಿದ್ದು ದರ್ಶನ್ ಸುದ್ದಿ ಮತ್ತು ಮುನಿರತ್ನ ಜೊತೆಗೆ ಹೆಚ್ ಡಿ ರೇವಣ್ಣ ಕುಟುಂಬದ ಸುದ್ದಿ. ಇದೀಗ ಈ ಸಂಬಂಧ ಈ ಎಲ್ಲಾ ಆರೋಪಗಳಲ್ಲಿರುವವರು ಸಂಕಷ್ಟದಲ್ಲಿದ್ದಾರೆ. ಆದರೆ ಈ ಸಂಬಂಧ ಈ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಹೇಳಿರುವ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.
ಖಾಸಗಿ ಕೀರ್ತಿ ಈಎನ್‌ಟಿ ಕ್ಲಿನಿಕ್ ಯೂಟ್ಯೂಬ್ ಗೆ 2024ರ ಫೆಬ್ರವರಿಯಲ್ಲಿ ಆರ್ಯವರ್ಧನ್ ಗುರೂಜಿ ನೀಡಿರುವ ಸಂದರ್ಶನ ಈಗ ವೈರಲ್ ಆಗುತ್ತಿದೆ. ಬೆಂಗಳೂರಿನ ಕುಬೇರ ಮೂಲೆ ಎಂದೇ ಖ್ಯಾತಿ ಪಡೆದಿರುವ ರಾಜರಾಜೇಶ್ವರಿ ನಗರದ ವಾಸ್ತು ಸರಿ ಇಲ್ಲ. ಅಲ್ಲಿ ಹೋದವರು ಒಂದಲ್ಲ ಒಂದು ರೀತಿಯಲ್ಲಿ ಕೇಸು ಹಾಕಿಸಿಕೊಳ್ಳುತ್ತಾರೆ. ಇಲ್ಲವೇ ವೈಯಕ್ತಿಕ ಸಮಸ್ಯೆಗಳು ಬರುತ್ತವೆ ಎಂದು ಆರ್ಯವರ್ಧನ್ ಹೇಳಿದ್ದು, ಅದರಂತೆ ಆರ್ ಆರ್ ನಗರದಲ್ಲಿ ವಾಸಿಸುತ್ತಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ಈಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿದ್ದಾರೆ.
undefined
ಇದಕ್ಕೆ ಕಾರಣವನ್ನೂ ನೀಡಿರುವ ಆರ್ಯವರ್ಧನ್ ಗುರೂಜಿ ಆರ್ ಆರ್ ನಗರಕ್ಕೆ ಎಂಟ್ರಿ ಆಗುವುದು ಈಶಾನ್ಯ ಮೂಲೆಯಿಂದ ಮೋರಿಯ ಮೇಲೆ ದಾಟುವುದು. ಈಶಾನ್ಯ ಮೂಲೆಯಲ್ಲಿ ಯಾವಾಗಲೂ ಬೆಂಕಿ ಬೀಳುತ್ತಲೇ ಇರುತ್ತದೆ. ಹಾಗಾಗಿ ಆ ನಗರಕ್ಕೆ ಹೋಗುವ ಪ್ರವೇಶ ಸರಿಯಾದ ದಿಕ್ಕಿನಲ್ಲಿ ಇಲ್ಲ. ಆರ್ ಆರ್ ನಗರ ಲೇಔಟ್ ಮಾಡಿದವರ ಮೇಲೂ ಕಂಪ್ಲೆಂಟ್ ಇದೆ. ಬೆಂಗಳೂರಿನಲ್ಲಿ ಜಯನಗರ ಸಖತ್ ವಾಸ್ತು ಇರುವ ಜಾಗ ಎಂದಿದ್ದಾರೆ.
ಇದರ ಜೊತೆಗೆ ಆರ್ ಆರ್ ನಗರದ ಶಾಸಕ , ಮಾಜಿ ಸಚಿವ ಜಾತಿ ನಿಂದನೆ, ಬೆದರಿಕೆ ಮತ್ತು ರಾಜಕೀಯ ಎದುರಾಳಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಯತ್ನ ಸೇರಿದಂತೆ ಅನೇಕ ಆರೋಪಗಳನ್ನು ಎದುರಿಸುತ್ತಿದ್ದು ಸದ್ಯ ಒಂದು ಕೇಸ್ ನಲ್ಲಿ ಬೇಲ್ ಆಗಿದೆ. ಮಿಕ್ಕಿರುವ ಕೇಸ್ ನಲ್ಲಿ ಬೇಲ್ ಆಗದಿರುವ ಕಾರಣ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶ ದರ್ಶನ್, ಪವಿತ್ರಾ ಗೌಡ, ಮುನಿರತ್ನ ಈ ಮೂವರು ಕೂಡ ಆರ್ ಆರ್ ನಗರದಲ್ಲೇ ವಾಸಿಸುತ್ತಿದ್ದಾರೆ. ಜೊತೆಗೆ ಇಬ್ಬರು ಕೂಡ ಹೆಣ್ಣಿನ ವಿಚಾರದಲ್ಲೇ ಜೈಲುಪಾಲಾಗಿರುವುದು ಎಂಬುದು ಗಮನಾರ್ಹ ಸಂಗತಿಯಾಗಿದೆ.
ದೇವಸ್ಥಾನ ಕಟ್ಟುವುದು ಕೂಡ ಒಂದೊಂದು ಸಾರಿ ನೆಗೆಟಿವ್ ಆಗಿ ಬಿಡುತ್ತೆ ಎಂದು ಇದೇ ಸಂದರ್ಶನದಲ್ಲಿ ಗುರೂಜಿ ಹೇಳಿದ್ದರು. ಹಾಗೇ ನೋಡಿದರೆ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ಕಟ್ಟಿದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅಯೋಧ್ಯೆಯಲ್ಲಿ ಸೋಲಾಯ್ತು. ಇನ್ನು ಜನವರಿ 22ರಂದು ನಡೆದ 'ಬಾಲ ರಾಮ'ನ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಸಾದವಾಗಿ ತಿರುಪತಿಯ ಲಾಡುಗಳನ್ನು ಸಹ ಅಯೋಧ್ಯೆಯಲ್ಲಿ ವಿತರಿಸಲಾಗಿತ್ತು. ಈಗ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಮತ್ತು ಮೀನಿನ ಕೊಬ್ಬು ಅಂಶವಿರುವುದು ಪತ್ತೆಯಾಗಿದ್ದು, ಈ ವಿವಾದದ ಬೆನ್ನಲ್ಲೇ ಇಡೀ ತಿರುಪತಿ ತಿರುಮಲ ದೇವಾಲಯದ ಶುದ್ಧಿಗೆ ಟಿಟಿಡಿ ಮುಂದಾಗಿದೆ.
ಇನ್ನು ಈ ವರ್ಷ ಟಿ20 ವಿಶ್ವಕಪ್ ಫೈನಲ್ ಅನ್ನು ಭಾನುವಾರ ಇಡದಿದ್ದರೆ ಭಾರತ ಗೆಲ್ಲುತ್ತೆ ಎಂದು ಗುರೂಜಿ ಹೇಳಿದ್ದರು. ಅದರಂತೆ ಜೂನ್ 29ರ ಶನಿವಾರ ಮ್ಯಾಚ್ ಇಡಲಾಗಿತ್ತು. ಮತ್ತು ಭಾರತ ವಿಶ್ವಕಪ್ ಗೆದ್ದಿತ್ತು.
ಇಸ್ರೋ ನೇಮಕಾತಿ 2024: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿಯಾದವರಿಗೂ ಅವಕಾಶ!
ಸ್ವಾತಿ ನಕ್ಷತ್ರದವರಿಗೆ ಈ ವರ್ಷ ತೊಂದರೆ ಇದೆ ಎಂದಿದ್ದರು. ಕೆಎಲ್ ರಾಹುಲ್ ಸ್ವಾತಿ ನಕ್ಷತ್ರ ಅವರು ಇಂಜೂರಿ ಆಗ್ತಾರೆ ಎಂದಿದ್ದರು. ಅದರಂತೆ ಅವರು ಈ ಬಾರಿ ಟಿ20 ವಿಶ್ವಕಪ್ ಗೆ ಸೆಲೆಕ್ಟ್ ಆಗಿರಲಿಲ್ಲ. ಹೆಚ್ ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸ್ವಾತಿ ನಕ್ಷತ್ರ ಡಿಸ್ಟರ್ಬ್ ಆಗ್ತಾರೆ ಅಂದಿದ್ದರು. ಅದರಂತೆ ಅವರ ಇಡೀ ಕುಟುಂಬ ಈ ಬಾರಿ ಲೈಂಗಿಕ ದೌರ್ಜನ್ಯ ಮತ್ತು ಕಿಡ್ನಾಪ್ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಹೆಚ್ ಡಿ ರೇವಣ್ಣ, ಪುತ್ರ ಸೂರಜ್ ರೇವಣ್ಣ ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾಗಿದ್ದರೆ. ಪ್ರಜ್ವಲ್ ರೇವಣ್ಣ ಇನ್ನೂ ಕೂಡ ಜೈಲಿನಲ್ಲಿದ್ದಾರೆ. ಪತ್ನಿ ಕೂಡ ಕಿಡ್ನಾಪ್ ಪ್ರಕರಣ ಸಂಬಂಧ ಬೇಲ್ ನಲ್ಲಿ ಹೊರಗಡೆ ಇದ್ದಾರೆ.
ಇಷ್ಟು ಮಾತ್ರವಲ್ಲ ಆರ್ ಆರ್ ನಗರದಲ್ಲಿ ವಾಸಿಸುತ್ತಿರುವ ನಟಿ ರಚಿತಾ ರಾಮ್ ಕಳೆದ ವರ್ಷ 2023ರ ಆಗಸ್ಟ್ ನಲ್ಲಿ ಲಾಲ್‌ಬಾಗ್‌ನ ಫ್ಲವರ್ ಶೋಗೆ ವಿಶೇಷ ಅತಿಥಿಯಾಗಿ ಬಂದಿದ್ದಾಗ ಸ್ವಚ್ಛತಾ ಕಾರ್ಮಿಕನಿಗೆ ಅವರ ಕಾರು ಗುದ್ದಿ ದೊಡ್ಡ ಸುದ್ದಿಯಾಗಿತ್ತು. ಮರುದಿನ ಕಾರ್ಮಿಕನನ್ನು ಮನೆಗೆ ಕರೆಸಿದ ನಟಿ ಕ್ಷಮೆ ಕೇಳಿ ಕಳುಹಿಸಿಕೊಟ್ಟಿದ್ದರು.
ಇನ್ನು ಆರ್‌ಆರ್ ನಗರದಲ್ಲಿ ವಾಸಿಸುತ್ತಿರುವ ನಟ, ಪರಂವಃ ಸ್ಟಡಿಯೋಸ್‌ನ ಮಾಲೀಕ ರಕ್ಷಿತ್ ಶೆಟ್ಟಿ 'ಬ್ಯಾಚುಲರ್ ಪಾರ್ಟಿ' ಸಿನೆಮಾ ನಿರ್ಮಾಣ ಮಾಡಿ ಹಾಡಿನ ಕೃತಿ ಚೌರ್ಯ ಮಾಡಿದ್ದಾರೆಂದು ಎಂ ಆರ್ ಟಿ ಸಂಸ್ಥೆ ಪೊಲೀಸ್ ಠಾಣೆಯಲ್ಲಿ FIR ಆಗಿ ನ್ಯಾಯಾಲಯದ ಮೆಟ್ಟಲೇರಿದ ಘಟನೆ ಎಲ್ಲರಿಗೂ ಗೊತ್ತೇ ಇದೆ.