ತಿರುಪತಿ ಲಡ್ಡು ಪ್ರಸಾದದಲ್ಲಿ ಬೀಫ್ ಟ್ಯಾಲೋ, ಸದ್ಗುರು ಜಗ್ಗಿ ವಾಸುದೇವ್ ಆಕ್ರೋಶ

By Sushma HegdeFirst Published Sep 22, 2024, 4:43 PM IST
Highlights

ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಲಡ್ಡು ಪ್ರಸಾದದ ಕಲಬೆರಕೆ ಕುರಿತು ಸದ್ಗುರು ಜಗ್ಗಿ ವಾಸುದೇವ್ ದೇವಾಲಯದ ನಿರ್ವಹಣೆಯನ್ನು ಭಕ್ತರಿಗೆ ಹಸ್ತಾಂತರಿಸಬೇಕೆಂದು ಹೇಳಿದ್ದಾರೆ.
 

ಆಂಧ್ರಪ್ರದೇಶದಲ್ಲಿ ತಿರುಪತಿ ಲಡ್ಡು ಲಡಾಯಿ ಕಿಚ್ಚು ಜೋರಾಗಿದೆ. ತಿರುಪತಿ ಲಡ್ಡು ಪ್ರಸಾದ ವಿವಾದದಿಂದ ದೇಶದ ರಾಜಕೀಯ ವಾತಾವರಣ ಬಿಸಿಯಾಗಿದೆ. ಹಿಂದಿನ ಸರ್ಕಾರದಲ್ಲಿ ತಿರುಪತಿ ದೇವಸ್ಥಾನದಲ್ಲಿ ಸಿಗುವ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬುಧವಾರ ಹೇಳಿದರು.ರಾಜಕೀಯ ವಾಗ್ವಾದಕ್ಕೆ ತಿರುಪತಿ ತಿಮ್ಮಪ್ಪನ ಲಡ್ಡು ಕಾರಣವಾಗಿದೆ. ಲ್ಯಾಬ್‌ ಪರೀಕ್ಷೆಯಲ್ಲೂ ‘ತಿರುಪತಿ ಪ್ರಸಾದ’ದ ರಹಸ್ಯ ಸಾಬೀತಾಗಿದೆ.

ಜಗನ್ ಸರ್ಕಾರವಿದ್ದಾಗ ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವುದು ನಿಜ ಎನ್ನಲಾಗಿದೆ. ಆಂಧ್ರ ಸಿಎಂ ಚಂದ್ರಬಾಬು ಮಾತಿಗೆ ಲ್ಯಾಬ್ ರಿಪೋರ್ಟ್‌ ಸಾಕ್ಷ್ಯವನ್ನೂ ನೀಡಲಾಗಿದೆ. ಲ್ಯಾಬ್ ರಿಪೋರ್ಟ್‌ನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಪತ್ತೆಯಾಗಿದೆ.ಈ ಕುರಿತು ಪ್ರಯೋಗಾಲಯದ ವರದಿಯನ್ನೂ ನೀಡುದ್ದರೂ.

Latest Videos

ಇದೇ ವೇಳೆ ಇದೀಗ ಈ ವಿವಾದದ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್ ಹೇಳಿಕೆ ಕೂಡ ಹೊರಬಿದ್ದಿದೆ. ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬನ್ನು ಕಾಣುವುದು ಅತ್ಯಂತ ಅಸಹ್ಯಕರವಾಗಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಹಿಂದೂ ದೇವಾಲಯಗಳನ್ನು ಭಕ್ತರಿಂದ ನಡೆಸಬೇಕು ಮತ್ತು ಸರ್ಕಾರದ ಆಡಳಿತದಿಂದ ಅಲ್ಲ ಎಂದು ಹೇಳಿದ್ದಾರೆ.

ತಿರುಪತಿ ಲಡ್ಡು ಪ್ರಸಾದ ವಿವಾದದ ಕುರಿತು ಸದ್ಗುರು ಜಗ್ಗಿ ವಾಸುದೇವ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ, "ದೇವಸ್ಥಾನದ ಪ್ರಸಾದದಲ್ಲಿ ಭಕ್ತರು ಗೋಮಾಂಸ ಸೇವಿಸುವುದು ಅಸಹ್ಯಕರವಾಗಿದೆ. ಅದಕ್ಕಾಗಿಯೇ ದೇವಾಲಯಗಳನ್ನು ಭಕ್ತರು ನಡೆಸಬೇಕೇ ಹೊರತು ಸರ್ಕಾರದ ಆಡಳಿತದಿಂದಲ್ಲ. ಭಕ್ತಿ ಇಲ್ಲದಿದ್ದಲ್ಲಿ  ಶುದ್ಧತೆ ಇರುವುದಿಲ್ಲ, ಈಗ ಹಿಂದೂ ದೇವಾಲಯಗಳನ್ನು  ಧರ್ಮನಿಷ್ಠ ಹಿಂದೂಗಳು ನಡೆಸಬೇಕಾದ ಸಮಯ ಬಂದಿದೆ ಎಂದಿದ್ದಾರೆ.
 

click me!