ಹೊಸ ವರ್ಷ ಹೇಗಿರಲಿದೆ? ಸದ್ಯ ಎಲ್ಲರನ್ನು ಕಾಡ್ತಿರುವ ಪ್ರಶ್ನೆಗಳಲ್ಲಿ ಇದೂ ಒಂದು. ಸಂಖ್ಯಾಶಾಸ್ತ್ರಜ್ಞರು ಇದ್ರ ಬಗ್ಗೆ ಮಾಹಿತಿ ನೀಡಿದ್ದಾರೆ. ಜನ್ಮ ಸಂಖ್ಯೆ ಒಂದನ್ನು ಹೊಂದಿರುವವರ ಭವಿಷ್ಯ ಹೇಗಿರಲಿದೆ ಎಂಬುದನ್ನು ಹೇಳಿದ್ದಾರೆ.
2022ನೇ ವರ್ಷವನ್ನು ಮುಗಿಸಿ 2023ಕ್ಕೆ ಕಾಲಿಡುವ ದಿನ ಹತ್ತಿರವಾಗ್ತಿದೆ. ಹಿಂದಿನ ಎರಡು ವರ್ಷ ಕೊರೊನಾ ಭಯದಲ್ಲಿಯೇ ಕಾಲ ಕಳೆದ ಜನರು 2022ರಲ್ಲಿ ಸ್ವಲ್ಪ ಆತಂಕವಿಲ್ಲದ ಜೀವನ ನಡೆಸಿದ್ದರು. 2023ರಲ್ಲಿ ಇನ್ನೇನು ಸಮಸ್ಯೆ ಬರಲಿದೆ ಎಂಬ ಸಣ್ಣ ಭಯವಿದ್ದರೂ ಆತ್ಮವಿಶ್ವಾಸದೊಂದಿಗೆ, ಹೊಸ ಭರವಸೆಯೊಂದಿಗೆ ಹೊಸ ವರ್ಷವನ್ನು ಎದುರಿಸಲು ಜನರು ಸಿದ್ಧರಾಗ್ತಿದ್ದಾರೆ. 2023 ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷ್ಯ ಶಾಸ್ತ್ರಜ್ಞರು ಈಗಾಗಲೇ ಸಾಕಷ್ಟು ವಿಷ್ಯವನ್ನು ಹೇಳಿದ್ದಾರೆ. ಸಂಖ್ಯಾಶಾಸ್ತ್ರಜ್ಞರು ಕೂಡ ಅಂಕಿಗಳ ಆಧಾರದ ಮೇಲೆ ಹೊಸ ವರ್ಷ ಹೇಗಿರಲಿದೆ ಎನ್ನುವ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. ಈಗ ನಾವು ಜನ್ಮ ದಿನಾಂಕದ ಪ್ರಕಾರ ಒಂದು ಅಂಕಿ ಹೊಂದಿರುವ ಜನರು 2023ರಲ್ಲಿ ಹೇಗಿರಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತೇವೆ.
ಯಾರ ಸಂಖ್ಯೆ ಒಂದು ?: ನೀವು 1, 10, 19, 28 ನೇ ದಿನಾಂಕದಂದು ಜನಿಸಿದ್ದರೆ ನಿಮ್ಮ ಜನ್ಮ ಸಂಖ್ಯೆ ಒಂದು ಆಗಿರುತ್ತದೆ. ಈ ಒಂದು ಸಂಖ್ಯೆಯ ಅಧಿಪತಿ ಸೂರ್ಯ (Sun) ನಾಗಿರುತ್ತಾನೆ. ಬರ್ತಿರುವ ಹೊಸ ವರ್ಷ 2023ರ ಒಟ್ಟೂ ಸಂಖ್ಯೆ 7 ಆಗಿದ್ದು, ಅದು ಕೇತು (Ketu) ವಿನ ವರ್ಷವಾಗಿದೆ. ನಿಮಗೆಲ್ಲ ತಿಳಿದಂತೆ ಪ್ರಕೃತಿಯನ್ನು ನಿಯಂತ್ರಿಸುವ ಕೆಲಸವನ್ನು ಸೂರ್ಯ ಮಾಡ್ತಾನೆ. ಆದ್ರೆ ಅದಕ್ಕೆ ವಿರುದ್ಧವಾದ ಕೆಲಸವನ್ನು ಕೇತು ಮಾಡ್ತಾನೆ. ಅಂದ್ರೆ ಕೇತು ಸೋಮಾರಿ (Lazy).
2023ರಲ್ಲಿ ಜನ್ಮ ಅಂಕಿ ಒಂದಾಗಿರುವವರ ವ್ಯಾಪಾರ (Business) ವಹಿವಾಟು ಹೇಗಿರುತ್ತದೆ ? : ಈ ವರ್ಷ ನಿಮ್ಮ ಸ್ವಭಾವ ಮುಖ್ಯವಾಗುತ್ತದೆ. ಸೂರ್ಯ ನಿಮ್ಮನ್ನು ಹೊಸ ಕೆಲಸ ಮಾಡಲು ಪ್ರೇರೇಪಿಸುತ್ತಾನೆ. ಆದ್ರೆ ಕೇತು, ಇದ್ದಂತೆ ಹೋಗ್ಲಿ ಎಂಬ ಮನಸ್ಥಿತಿ ತರುತ್ತಾನೆ. ಹಾಗಾಗಿ ನೀವು ನಿಮ್ಮ ಸ್ವಭಾವವನ್ನು ಮೊದಲು ನಿಯಂತ್ರಿಸಬೇಕು. ಸೋಮಾರಿತನವನ್ನು ನೀವು ಹೋಗಲಾಡಿಸಬೇಕು. ಹಾಗೆಯೇ ಮಾತಿನ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯವಾಗುತ್ತದೆ. ನೀವು ಮುಂದಿನ ವರ್ಷ ನಷ್ಟಕ್ಕೆ ಒಳಗಾದ್ರೆ ಅದು ನಿಮ್ಮ ಮಾತಿನಿಂದಲೇ ಸಂಭವಿಸಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ನೀವು ಮಾತನಾಡಿ ನಷ್ಟ ತಂದುಕೊಳ್ಳಬೇಡಿ.
ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. 2023ರಲ್ಲಿ ನಿಮ್ಮ ವ್ಯವಹಾರದಲ್ಲಿ ಲಾಭವನ್ನು ನೀವು ಕಾಣ್ತಿರಿ. ಹಾಗೆಯೇ ಕೋರ್ಟ್ ಕೇಸ್ ನಲ್ಲಿ ಜಯ ಸಿಗಲಿದೆ. ಪೂರ್ವಜರ ಆಸ್ತಿ ವಿಷ್ಯದಲ್ಲೂ ನಿಮ್ಮದೇ ಮೇಲುಗೈ ಆಗಲಿದೆ. ಜನವರಿ, ಫೆಬ್ರವರಿ, ಮಾರ್ಚ್ ಈ ಮೂರು ತಿಂಗಳು ವ್ಯಾಪಾರಕ್ಕೆ ಒಳ್ಳೆಯದಲ್ಲ. ಈ ವರ್ಷ ಯಾವುದೇ ಹೂಡಿಕೆ ಮಾಡಲು ಬಯಸಿದರೆ ಈ ಮೂರು ತಿಂಗಳು ಮಾಡಬೇಡಿ.ಆರಂಭಿಕ ಮೂರು ತಿಂಗಳು ಹೆಚ್ಚು ಸಮಸ್ಯೆ ಕಾಡಬಹುದು. ಹಾಗಾಗಿ ಹೂಡಿಕೆ ಮಾಡುವ ಮೊದಲು ಆಲೋಚನೆ ಮಾಡಿ. ತಜ್ಞರನ್ನು ಸಂಪರ್ಕಿಸಿ ನಂತ್ರ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು. ಜನ್ಮ ಅಂಕಿ ಒಂದನ್ನು ಹೊಂದಿರುವವರಿಗೆ ಮುಂದಿನ ವರ್ಷದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
New Year 2023: ಹೊಸ ವರ್ಷಾರಂಭದ ದಿನ ಕೂಡಿ ಬರುತ್ತಿವೆ ಶುಭ ಯೋಗಗಳು!
ಪ್ರೀತಿ ಸಂಬಂಧ : 2023ರಲ್ಲಿ ನಿಮ್ಮ ಆಪ್ತರನ್ನು ನೀವು ಪರೀಕ್ಷಿಸುವ ಸಮಯವಾಗಲಿದೆ. ನಿಮ್ಮ ಜೊತೆ ಯಾರಿದ್ದಾರೆ, ಯಾರಿಲ್ಲ ಎಂಬುದು ಗೊತ್ತಾಗುತ್ತದೆ. ಪ್ರೀತಿ ವಿಷ್ಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಈಗಾಗಲೇ ಸಂಗಾತಿ ಮಧ್ಯೆ ಗಲಾಟೆಯಿದ್ರೆ ಅದು ಮುಂದುವರೆಯುವ ಸಾಧ್ಯತೆಯಿದೆ. ಹೊಸ ವರ್ಷ ಯಾವುದೇ ಅನಗತ್ಯ ವಿವಾದದಲ್ಲಿ ಸಿಲುಕಬೇಡಿ.
New Year 2023: ಹೊಸ ವರ್ಷ ಹೆಚ್ಚಿರಲಿದೆ ಸಂಖ್ಯೆ 7ರ ಪ್ರಭಾವ
ಹೊಸ ವರ್ಷ ಆರೋಗ್ಯ : ಮಾನಸಿಕ ಸಮಸ್ಯೆಗಳು ಹೆಚ್ಚಾಗುವ ಲಕ್ಷಣಗಳಿವೆ. ಸೂರ್ಯ ಮತ್ತು ಕೇತು ಕಾರಣದಿಂದಾಗಿ ನೀವು ಗೊಂದಲವನ್ನು ಅನುಭವಿಸುವ ಸಾಧ್ಯತೆಯಿದೆ. ಆದ್ರೆ ಸೂರ್ಯ ನಿಮ್ಮ ಜೊತೆಗಿರುವ ಕಾರಣ ನೀವು ಸುಲಭವಾಗಿ ಈ ಸ್ಥಿತಿಯಿಂದ ಹೊರಗೆ ಬರಬಹುದು. ನಿಮ್ಮ ಮೇಲೆ ವಿಶ್ವಾಸವಿಟ್ಟುಕೊಳ್ಳುವುದು ಮುಖ್ಯ.