450 ವರ್ಷಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಭವಿಷ್ಯ ನುಡಿದಿದ್ದ ನಾಸ್ಟ್ರಾಡಾಮಸ್ 2025ರ ಬಗ್ಗೆ ಶಾಕಿಂಗ್ ಭವಿಷ್ಯ ಹೇಳಿದ್ದೇನು?
16 ನೇ ಶತಮಾನದ ಪ್ರಸಿದ್ಧ ಜ್ಯೋತಿಷಿ, ಫ್ರೆಂಚ್ ಪ್ರವಾದಿ ಮೈಕಲ್ ಡಿ ನಾಸ್ಟ್ರಡಾಮಸ್ ಭವಿಷ್ಯವನ್ನು ಇಂದಿಗೂ ವಿಶ್ವಾದ್ಯಂತ ನಂಬುತ್ತಾ ಬರಲಾಗಿದೆ. 1555ನೇ ಇಸವಿಯಲ್ಲಿ ಈತ ಹಲವಾರು ನೂರಾರು ವರ್ಷಗಳ ಭವಿಷ್ಯವನ್ನು ಬರೆದಿಟ್ಟಿದ್ದ ಎನ್ನಲಾಗಿದೆ. ಇದಾಗಲೇ ಈತ ಬರೆದಿಟ್ಟ ಭವಿಷ್ಯಗಳ ಪೈಕಿ ಬಹುತೇಕ ಸರಿಯಾಗಿರುವುದಾಗಿಯೂ ಅರ್ಥೈಸಲಾಗುತ್ತಿದೆ. ನರೇಂದ್ರ ಮೋದಿ ಅವರು 2014ರಲ್ಲಿ ಭಾರತದ ಪ್ರಧಾನಿಯಾಗಿ ವಿಶ್ವಖ್ಯಾತಿ ಗಳಿಸಲಿದ್ದಾರೆ ಎಂದು ನಾಸ್ಟ್ರಡಾಮಸ್ ಮೊದಲೇ ಹೇಳಿದ್ದರು ಎನ್ನಲಾಗುತ್ತಿದೆ. ಇವರು, ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಸುವರ್ಣ ಕಾಲ ತರಲಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ನಾಯಕನಾಗಿ ಮೆರೆಯುತ್ತದೆ. ಹಲವಾರು ದೇಶಗಳು ಭಾರತದಡಿ ಆಸರೆ ಪಡೆಯುತ್ತವೆ ಎಂದು ಹೇಳಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇವೆಲ್ಲವನ್ನೂ ನಾಸ್ಟ್ರಾಡಾಮಸ್ ‘ಲೆಸ್ ಪ್ರೊಫೆಸೀಸ್ (ದಿ ಪ್ರೊಫೆಸೀಸ್)’ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗುತ್ತಿದೆ.
2019ರ ಸುಮಾರಿಗೆ ಮಹಾಮಾರಿ ಸಾಂಕ್ರಾಮಿಕ ರೋಗ ವಿಶ್ವಾದ್ಯಂತ ಜನರ ಬದುಕನ್ನು ಹೈರಾನಗೊಳಿಸಲಿದೆ ಎಂದು ಕೂಡ ಈತ ಹೇಳಿದ್ದು, ಕೋವಿಡ್‌ನಿಂದ ಆಗಿರುವ ಅನಾಹುತಗಳು ಕಣ್ಣಮುಂದೆಯೇ ಇವೆ. ಅದೇ ರೀತಿ ಇದೀಗ 2025 ರ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. 2025ರಲ್ಲಿ ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸುವ ಸೂಚನೆ ಇದೆ. ಪ್ಲೇಗ್ ರೀತಿಯ ಸಾಂಕ್ರಾಮಿಕ ಮೊದಲು ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅದು ಇಡೀ ವಿಶ್ವವನ್ನು ವ್ಯಾಪಿಸಲಿದೆ ಎಂದು ಬರೆದಿದ್ದಾನೆ ಎನ್ನಲಾಗುತ್ತಿದೆ.
ಮೃತ ವ್ಯಕ್ತಿ ಜೀವಂತ ಆಗುವುದ್ಯಾಕೆ? ದೇಹದಲ್ಲಿರೋ ಧನಂಜಯ ಯಾರು? ರಾಮಚಂದ್ರ ಗುರೂಜಿ ರಿವೀಲ್
ಕಳೆದ ಎರಡೂವರೆ ವರ್ಷಗಳಿದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಮುಗಿಯುವ ಸೂಚನೆ ಇದೆ ಎನ್ನುವುದುದ ಅವರ ಭವಿಷ್ಯ ವಾಣಿಯಿಂದ ತಿಳಿದು ಬಂದಿದೆ. 2023-24ರ ಅವಧಿಯಲ್ಲಿ ಜಗತ್ತಿನಲ್ಲಿ ಹಲವು ಯುದ್ಧಗಳು ನಡೆಯುತ್ತವೆ ಎಂದು ಭವಿಷ್ಯ ನುಡಿದಿದ್ದ ಅವರು, 2025ರಲ್ಲಿ ದೀರ್ಘಾವಧಿಯ ಯುದ್ಧವೊಂದು ಕೊನೆಯಾಗಲಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅದು ರಷ್ಯಾ-ಉಕ್ರೇನ್ ಯುದ್ಧ ಎಂದು ನಂಬಲಾಗಿದೆ. ಸುದೀರ್ಘ ಯುದ್ಧದಿಂದ ಎರಡೂ ಕಡೆಯ ಸೈನ್ಯಗಳು ಬಳಲಿದ್ದಾರೆ. ಎರಡೂ ದೇಶಗಳು ಆರ್ಥಿಕ ಹೊರೆಯಿಂದ ಬಳಲುತ್ತವೆ. ಈ ಹಿನ್ನೆಲೆಯಲ್ಲಿ ಯುದ್ಧ ನಿಲ್ಲುತ್ತದೆ ಎಂದಿದ್ದಾರೆ.
ಆದರೆ ಮುಂದಿನ ವರ್ಷ ಅಂದರೆ 2025 ಪ್ಲೇಗ್ ಮತ್ತು ಯುದ್ಧದ ಭೀತಿ ಯುರೋಪಿಯನ್ ರಾಷ್ಟ್ರಗಳನ್ನು ಆವರಿಸಿಕೊಳ್ಳಲಿದೆ. ಹೊಸ ವರ್ಷ ಇಂಗ್ಲೆಂಡ್‌ಗೆ ಹೆಚ್ಚಿನ ಅಪಾಯ ಉಂಟುಮಾಡಲಿದೆ. ಸಾಂಕ್ರಾಮಿಕ, ಯುದ್ಧ ಭೀತಿಯ ಜೊತೆಗೆ ಭೂಮಿಗೆ ಕ್ಷುದ್ರಗ್ರಹದಿಂದ ಕೂಡ ಅಪಾಯ ಉಂಟಾಗಲಿದೆ ಎಂದಿದ್ದಾರೆ. ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಬಹುದು ಅಥವಾ ಅಪಾಯಕಾರಿ ಮಟ್ಟದಲ್ಲಿ ಭೂಮಿಯ ಸಮೀಪ ಬರಬಹುದು ಎಂದು ಹೇಳಲಾಗಿದೆ. ಕ್ಷುದ್ರಗ್ರಹಗಳು ಭೂಮಿಯ ಸಮೀಪದಲ್ಲಿ ಹಾದುಹೋಗುವುದು ಪ್ರತಿ ವರ್ಷ ನಡೆಯುತ್ತದೆ. ಆದರೆ ದೊಡ್ಡ ಕ್ಷುದ್ರಗ್ರಹಗಳು ಭೂಮಿಯ ಸಮೀಪ ಬರುವುದು ಅಪಾಯಕಾರಿ. ಆದರೆ ಅದು ಸಂಭವಿಸಲಿದೆ ಎನ್ನುವುದು ಇವರ ಮಾತು. ಬ್ರೆಜಿಲ್‌ನಲ್ಲಿ ನೈಸರ್ಗಿಕ ವಿಕೋಪ ದಕ್ಷಿಣ ಅಮೆರಿಕದ ಬ್ರೆಜಿಲ್ ದೇಶದಲ್ಲಿ ಹವಾಮಾನ ಬದಲಾವಣೆ ಸಂಭವಿಸುವ ಸಾಧ್ಯತೆ ಇದ್ದು. ಪ್ರವಾಹ ಮತ್ತು ಜ್ವಾಲಾಮುಖಿ ಸ್ಫೋಟಗೊಳ್ಳಬಹುದು ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ.
ಪಾಲಕರೇ ಎಚ್ಚರ... ಎಚ್ಚರ... ನಿಮ್ ಮಕ್ಕಳು ಹೀಗೂ ಕಿಡ್ನಾಪ್ ಆಗ್ಬೋದು: ಶಾಕಿಂಗ್ ವಿಡಿಯೋ ವೈರಲ್