ಅಯ್ಯಪ್ಪ ದರ್ಶನಕ್ಕೆ ಬರುವ ಎಲ್ಲರಿಗೂ ಅವಕಾಶ: ಸ್ಪಾಟ್‌ ಬುಕ್ಕಿಂಗ್ ಇಲ್ಲ

By Anusha Kb  |  First Published Oct 14, 2024, 11:06 AM IST

ಶಬರಿಮಲೆ ಅಯ್ಯಪ್ಪ ಯಾತ್ರೆಗೆ ಬರುವವರಿಗೆ ಸ್ಥಳದಲ್ಲೇ ಟಿಕೆಟ್‌ ನೀಡುವ 'ಸ್ಪಾಟ್‌ ಬುಕಿಂಗ್‌'ಗೆ ಅವಕಾಶ ನೀಡುವುದಿಲ್ಲ ಎಂದು ಕೇರಳ ದೇಗುಲಗಳ ಸಚಿವರು ಹೇಳಿದ್ದಾರೆ.


ತಿರುವನಂತಪುರ:  ಶಬರಿಮಲೆ ಅಯ್ಯಪ್ಪ ಯಾತ್ರೆಗೆ ಬರುವವರಿಗೆ ಸ್ಥಳದಲ್ಲೇ ಟಿಕೆಟ್‌ ನೀಡುವ 'ಸ್ಪಾಟ್‌ ಬುಕಿಂಗ್‌'ಗೆ ಅವಕಾಶ ನೀಡುವುದಿಲ್ಲ ಎಂದು ಕೇರಳ ದೇಗುಲಗಳ ಸಚಿವರು ಹೇಳಿದ್ದಾರೆ. ಆದರೆ ಮಂಡಲಪೂಜೆ ಹಾಗೂ ಮಕರವಿಳಕ್ಕು ಯತ್ರಾ ಸಮಯದಲ್ಲಿ ಅಯ್ಯಪ್ಪ ದರ್ಶನ ಪಡೆಯಲು ಬರುವ ಎಲ್ಲರಿಗೂ ದರ್ಶನಾವಕಾಶ ನೀಡಲಾಗುವುದು ಎಂದು ಕೇರಳ ದೇಗುಲ ಸಚಿವ ವಿ.ಎನ್‌.ವಾಸವನ್‌ ಅವರು ಭಾನುವಾರ ಸ್ಪಷ್ಪಪಡಿಸಿದ್ದಾರೆ.

ಆನ್‌ಲೈನ್‌ ಮೂಲಕ ಟಿಕೆಟ್‌ ಕಾದಿರಿಸಿದರಷ್ಟೇ ಅವಕಾಶ ನೀಡುವ ಸರ್ಕಾರ ನೀತಿಯನ್ನು ಹಿಂಪಡೆಯದಿದ್ದರೆ ಹೋರಾಟ ನಡೆಸುವುದಾಗಿ ಬಿಜೆಪಿ ಹೇಳಿತ್ತು. ಅದರ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ. 'ಸ್ಪಾಟ್‌ ಬುಕಿಂಗ್‌'ಗೆ ಅವಕಾಶ ನೀಡುವುದಿಲ್ಲ. ಆದರೆ, ಯಾತ್ರಿಕರ ವಿಶ್ರಾಂತಿ ಹಾಗೂ ನಿರೀಕ್ಷಣೆಗಾಗಿ ತೆರೆಯಲಾಗುವ ಅಕ್ಷಯ ಕೇಂದ್ರಗಳಲ್ಲಿ ಅವರು ಟಿಕೆಟ್‌ ಕಾದಿರಿಸಲು ಅವಕಾಶ ನೀಡಲಾಗುವುದು. ಎಲ್ಲ ಸಂಪ್ರದಾಯ ಪಾಲಿಸಿ ಬರುವ ಯಾತ್ರಿಕರಿಗೆ ದರ್ಶನ ಅವಕಾಶ ನಿರಾಕರಿಸುವುದಿಲ್ಲ. ದಿನವೊಂದಕ್ಕೆ 80 ಸಾವಿರ ಮಂದಿಗಷ್ಟೇ ದರ್ಶನಾವಕಾಶವಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tap to resize

Latest Videos

undefined

ಸಂಕಷ್ಟಕ್ಕೆ ಸಿಲುಕಿದ್ದ ಶಬರಿಮಲೆ ಭಕ್ತರಿಗೆ ಆಶ್ರಯ; ಕೋಮು ಸೌಹಾರ್ದತೆಗೆ ಸಾಕ್ಷಿಯಾದ ತಿತಿಮತಿ ಜಾಮಾ ಮಸೀದಿ!

ಕಳೆದ ವರ್ಷ ಏಕಾಏಕಿ ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ ಮತ್ತು ಅದನ್ನು ನಿರ್ವಹಿಸಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿ ಕೊಂಡಿರದ ಕಾರಣ ಭಾರೀ ಅವ್ಯವಸ್ಥೆ ಉಂಟಾಗಿತ್ತು. ಹೀಗಾಗಿ ಪ್ರಸಿದ್ದ ಶಬರಿಮಲೆ ದೇಗುಲದ ವಾರ್ಷಿಕ ಮಂಡಲ೦- ಮಕರವಿಳಕ್ಕು ಯಾತ್ರೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ವರ್ಷ ಆನ್‌ಲೈನ್‌ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಶಬರಿಮಲೆಗೆ ಪ್ರವೇಶ ನೀಡಲು ಕೇರಳ ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಎಲ್ಲರಿಗೂ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.

18 ತಾಸು ಕ್ಯೂ ನಿಂತ್ರೂ ಅಯ್ಯಪ್ಪ ದರ್ಶನವಿಲ್ಲ: ಅವ್ಯವಸ್ಥೆಯಿಂದ ಭಕ್ತರ ಪರದಾಟ, ಕಾಡಿನಲ್ಲೇ ವಾಸ!

click me!