ಚಾಮರಾಜನಗರದ 7 ಹಳ್ಳಿಗಳಲ್ಲಿ ದೀಪಾವಳಿ ಆಚರಣೆಯೇ ಇಲ್ಲ..!

By Kannadaprabha NewsFirst Published Nov 12, 2023, 11:18 AM IST
Highlights

ನೇನೇಕಟ್ಟೆ ಗ್ರಾಮದ ಸೇರಿದಂತೆ ಏಳೂರು ಎಂದು ಕರೆಯಲ್ಪಡುವ ಮಳವಳ್ಳಿ, ಬನ್ನಿತಾಳಪುರ, ಇಂಗಲವಾಡಿ, ಬೆಂಡಗಳ್ಳಿ, ವೀರನಪುರ ಹಾಗೂ ನಲ್ಲೂರಲ್ಲಿ ಬುಧವಾರ ದೀಪಾವಳಿ ಬಂದರೆ ಮಾತ್ರ ಹಬ್ಬದ ಸಡಗರ, ಸಂಭ್ರಮ ಕಾಣಲಿದೆ.

ರಂಗೂಪುರ ಶಿವಕುಮಾರ್‌

ಗುಂಡ್ಲುಪೇಟೆ(ನ.11): ದೀಪಾವಳಿ ಹಬ್ಬ ದೇಶದೆಲ್ಲೆಡೆ ಸಂಭ್ರಮ,ಸಡಗರಿಂದ ಆಚರಣೆಯಲ್ಲಿ ಸಿದ್ದವಾಗುತ್ತಿದ್ದರೆ, ತಾಲೂಕಿನ ನೇನೇಕಟ್ಟೆ ಸುತ್ತ-ಮುತ್ತಲ 7 ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಮಂಗಳವಾರ ಆಚರಿಸುವುದಿಲ್ಲ. ದೀಪಾವಳಿ ಹಬ್ಬ ಬುಧವಾರ ಬಂದರೆ ಮಾತ್ರ ಎಲ್ಲರಂತೆ ಈ 7 ಗ್ರಾಮಗಳ ಜನರು ಹಬ್ಬ ಮಾಡಲಿದ್ದಾರೆ. ಈ ಸಾಲಿನಲ್ಲಿ ದೀಪಾವಳಿ ಹಬ್ಬ ಮಂಗಳವಾರ ಬಂದಿರುವುದರಿಂದ ಹಬ್ಬದ ಕುರುಹು ಈ ಗ್ರಾಮದಲ್ಲಿ ಕಂಡು ಬಂದಿಲ್ಲ.

ನೇನೇಕಟ್ಟೆ ಗ್ರಾಮದ ಸೇರಿದಂತೆ ಏಳೂರು ಎಂದು ಕರೆಯಲ್ಪಡುವ ಮಳವಳ್ಳಿ, ಬನ್ನಿತಾಳಪುರ, ಇಂಗಲವಾಡಿ, ಬೆಂಡಗಳ್ಳಿ, ವೀರನಪುರ ಹಾಗೂ ನಲ್ಲೂರಲ್ಲಿ ಬುಧವಾರ ದೀಪಾವಳಿ ಬಂದರೆ ಮಾತ್ರ ಹಬ್ಬದ ಸಡಗರ, ಸಂಭ್ರಮ ಕಾಣಲಿದೆ.
ದೇಶದಲ್ಲೆಡೆ ಯಾವ ದಿನವಾದರೂ ದೀಪಾವಳಿ ಹಬ್ಬ ಮಾಡಲಿದ್ದಾರೆ. ಆದರೆ ಈ ೭ ಹಳ್ಳಿಗಳಲ್ಲಿ ಮಾತ್ರ ಬುಧವಾರ ಹೊರೆತು ಪಡಿಸಿ ಹಬ್ಬ ಮಾಡಿದರೆ ಏನಾದರೂ ಅನಾಹುತ ಸಂಭವಿಸಲಿದೆ ಎಂಬ ಹಿರಿಯ ವಾಡಿಕೆಯಂತೆ ಹಬ್ಬ ಮಾಡುವುದಿಲ್ಲ ಎಂದು ನೇನೇಕಟ್ಟೆ ಗ್ರಾಮದ ಮುಖಂಡ ಎನ್.ಎಂ.ಗಂಗಾಧರಪ್ಪ ಹೇಳುತ್ತಾರೆ.

ತಿರುಪತಿ ತಿಮ್ಮಪ್ಪನ 2.25 ಲಕ್ಷ ಟಿಕೆಟ್ 20 ನಿಮಿಷದಲ್ಲೇ ಬಿಕರಿ: ದಾಖಲೆ ಬರೆದ ಗೋವಿಂದ

ಹಾಗಾಗಿ ಮುಂದಿನ ಬುಧವಾರ ನ.15 ರಂದು ಮೇಲ್ಕಂಡ ಎಲ್ಲಾ ಹಳ್ಳಿಯಲ್ಲೂ ದೇಶದಲ್ಲಿ ನಡೆಯುವಂತೆ ದೀಪಾವಳಿ ಹಬ್ಬದಾಚರಣೆಯ ಜೊತೆಗೆ ಜಾನುವಾರುಗಳಿಗೆ ಪೂಜೆ ನಡೆಸಿ ಮೆರವಣಿಗೆ ನಡೆಸಲಾಗುತ್ತದೆ ಎಂದರು.

ಇದೊಂದೆ ಹಬ್ಬವಲ್ಲ !

ದೀಪಾವಳಿ ಹಬ್ಬ ಆಚರಣೆಗೆ ಬುಧವಾರ ಆಗಬೇಕು. ಆದರೆ ಯುಗಾದಿಗೆ ಶುಕ್ರವಾರ ಆಗಬೇಕು, ದೀಪಾವಳಿ ಹಾಗೂ ಯುಗಾದಿ ಹಬ್ಬದ ವಾರದ ದಿನ ಬಿಟ್ಟು ಬೇರೆ ದಿನಗಳಲ್ಲಿ ಎರಡು ಹಬ್ಬದ ಆಚರಣೆ ಕೂಡ ಇಲ್ಲವಂತೆ ಏಳೂರಲ್ಲಿ !.

click me!