Navratri 2026: ನವರಾತ್ರಿಯಲ್ಲಿ ದುರ್ಗಾದೇವಿಯ ಕೃಪೆ ಪಡೆಯಲು 108 ಅಕ್ಕಿ ಕಾಳುಗಳಿಂದ ಮಾಡುವ ವಿಶೇಷ ಪರಿಹಾರ ಯಾವುದು? ವಿಶೇಷ ಮಂತ್ರ ಜಪಿಸುವ ವಿಧಾನ, ದೀಪ ಹಚ್ಚುವ ಕ್ರಮ ಹಾಗೂ ಈ ಧಾರ್ಮಿಕ ಆಚರಣೆಯ ಮಹತ್ವವನ್ನು ಇಲ್ಲಿ ತಿಳಿಯಿರಿ.
ನವರಾತ್ರಿಯಲ್ಲಿ ವಿಶೇಷ ಪರಿಹಾರ
ಸನಾತನ ಧರ್ಮದಲ್ಲಿ ಶಾರದೀಯ ನವರಾತ್ರಿಗೆ ವಿಶೇಷ ಮಹತ್ವವಿದೆ. ಈ ಹಬ್ಬವು ದುರ್ಗಾದೇವಿಯ ಆರಾಧನೆ ಮತ್ತು ಶಕ್ತಿಯ ಉಪಾಸನೆಗೆ ಅತ್ಯಂತ ಶುಭಕರ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾದೇವಿಯ ಒಂಬತ್ತು ಸ್ವರೂಪಗಳನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಭಕ್ತರು ತಾಯಿ ದುರ್ಗೆಯ ಆಶೀರ್ವಾದ ಪಡೆಯಲು ಉಪವಾಸ ಮಾಡುತ್ತಾರೆ, ಪೂಜೆ-ಪುನಸ್ಕಾರಗಳನ್ನು ನೆರವೇರಿಸುತ್ತಾರೆ ಹಾಗೂ ತಮ್ಮ ಮನದ ಇಷ್ಟಾರ್ಥಗಳು ಈಡೇರಲೆಂದು ವಿಶೇಷ ಪರಿಹಾರಗಳನ್ನೂ ಮಾಡುತ್ತಾರೆ. ಈ ದಿನಗಳಲ್ಲಿ ನೀವು 108 ಅಕ್ಕಿ ಕಾಳುಗಳಿಂದ ಮಾಡುವ ವಿಶೇಷ ಪರಿಹಾರ ಮಾಡೋದ್ರಿಂದ ನಿಮ್ಮ ಮನೋಕಾಮನೆಗಳು ಈಡೇರುತ್ತೆ.
ನವರಾತ್ರಿಯಲ್ಲಿ ಅಕ್ಕಿಯಿಂದ ಮಾಡುವ ವಿಶೇಷ ಪರಿಹಾರ
ನವರಾತ್ರಿಯಲ್ಲಿ ತಾಯಿ ದುರ್ಗೆಯ ಕೃಪೆ ಪಡೆಯಲು ಅಕ್ಕಿಗೆ ಸಂಬಂಧಿಸಿದ ವಿಶೇಷ ಪರಿಹಾರ ಇಲ್ಲಿದೆ., ಈ ಪರಿಹಾರವನ್ನು ಸಂಪೂರ್ಣ ಶ್ರದ್ಧೆ, ಏಕಾಗ್ರತೆ ಮತ್ತು ನಿಯಮಾನುಸಾರವಾಗಿ ಮಾಡುವುದರಿಂದ ಭಕ್ತರು ತಮ್ಮ ಮನದ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಈ ಪರಿಹಾರಕ್ಕಾಗಿ ಮುರಿಯದ ಸಂಪೂರ್ಣ 108 ಅಕ್ಕಿ ಕಾಳುಗಳನ್ನು ಬಳಸಲಾಗುತ್ತದೆ. ಪೂಜೆಯ ಸಮಯದಲ್ಲಿ ದುರ್ಗಾದೇವಿಯ ಮಂತ್ರವನ್ನು ಜಪಿಸುತ್ತಾ, ತಮ್ಮ ಮನದ ಇಷ್ಟಾರ್ಥವನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಬೇಕು.
ಈ ರೀತಿ ಪರಿಹಾರ ಮಾಡಿ
ಬೆಳಗ್ಗೆ ಅಥವಾ ಸಂಜೆ ಸ್ನಾನ ಮಾಡಿ ಶುಚಿಯಾದ ಬಟ್ಟೆಗಳನ್ನು ಧರಿಸಿ. ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ದುರ್ಗಾದೇವಿಯ ವಿಗ್ರಹ ಅಥವಾ ಭಾವಚಿತ್ರದ ಮುಂದೆ ಕುಳಿತುಕೊಳ್ಳಿ.
ಸಂಪೂರ್ಣವಾಗಿರುವ ಬಾಸುಮತಿ ಅಕ್ಕಿ ಕಾಳುಗಳನ್ನು ತೆಗೆದುಕೊಳ್ಳಿ. ಈಗ ಒಂದು ಸ್ವಚ್ಛವಾದ ಬಟ್ಟಲು ತಾಯಿ ದುರ್ಗೆಯ ವಿಗ್ರಹದ ಮುಂದೆ ಇಡಿ. ಅದರಲ್ಲಿ 108 ಸಂಪೂರ್ಣ ಅಕ್ಕಿ ಕಾಳುಗಳನ್ನು ಮಂತ್ರದ ಜೊತೆಗೆ ಎಣಿಸಿ ಹಾಕಬಹುದು.
ತಾಯಿ ಭಗವತಿಯ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಮತ್ತು ಬಲಭಾಗದಲ್ಲಿ ತುಪ್ಪದ ದೀಪವನ್ನು ಹಚ್ಚಿ. ದೀಪಗಳನ್ನು ಬೆಳಗಿಸುವಾಗ ದುರ್ಗಾದೇವಿಯನ್ನು ಮನಸ್ಸಿನಲ್ಲಿ ಧ್ಯಾನಿಸಿ, ನಿಮ್ಮ ಮನದ ಇಷ್ಟಾರ್ಥವನ್ನು ಸ್ಮರಿಸಿಕೊಳ್ಳಿ.
ಈ ಮಂತ್ರವನ್ನು ಜಪಿಸಿ
ಈಗ ಒಂದೊಂದು ಅಕ್ಕಿ ಕಾಳನ್ನು ಕೈಗೆ ತೆಗೆದುಕೊಂಡು ‘ಓಂ ದುಂ ದುರ್ಗಾಯೈ ನಮಃ’ ಎಂಬ ಮಂತ್ರವನ್ನು ಜಪಿಸಬೇಕು.
ಪ್ರತಿಯೊಂದು ಅಕ್ಕಿ ಕಾಳನ್ನು ತೆಗೆದುಕೊಳ್ಳುವಾಗಲೂ ನಿಮ್ಮ ಮನದ ಇಷ್ಟಾರ್ಥವನ್ನು ಸ್ಮರಿಸಿಕೊಂಡು ಅದನ್ನು ಬಟ್ಟಲಿನಲ್ಲಿ ಹಾಕುತ್ತಾ ಹೋಗಿ. ಈ ಸಂದರ್ಭದಲ್ಲಿ ಮನಸ್ಸನ್ನು ಶಾಂತವಾಗಿಟ್ಟುಕೊಂಡು ದುರ್ಗಾದೇವಿಯ ಮೇಲಿನ ಭಕ್ತಿ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳಿ.
108 ಬಾರಿ ಮಂತ್ರವನ್ನು ಪಠಿಸುತ್ತಾ, 108 ಅಕ್ಕಿ ಕಾಳನ್ನು ಹಾಕಿ, ನಿಮ್ಮ ಬೇಡಿಕೆಯನ್ನು ದೇವಿಯ ಮುಂದೆ ಹೇಳಬೇಕು.
ನವರಾತ್ರಿಯಲ್ಲಿ ಈ ರೀತಿಯ ಪರಿಹಾರ ಮಾಡುವುದರಿಂದ ತಾಯಿ ದುರ್ಗೆಯ ವಿಶೇಷ ಕೃಪೆ ದೊರೆಯುತ್ತದೆ ಮತ್ತು ಜೀವನದಲ್ಲಿ ಪ್ರಗತಿಯ ಹಾದಿ ಸುಗಮವಾಗುತ್ತದೆ.