
2026 ಶರನ್ನವರಾತ್ರಿ ಹಬ್ಬವು ಭಾನುವಾರ ಅಕ್ಟೋಬರ್ 11 ರಿಂದಲೇ ಸಡಗರದಿಂದ ಆರಂಭವಾಗಿದೆ. ಮೊದಲ ಮೂರು ದಿನಗಳು ದುರ್ಗಿಯಾಗಿಯೂ, ಮುಂದಿನ ಮೂರು ದಿನಗಳು ಮಹಾಲಕ್ಷ್ಮಿಯಾಗಿಯೂ ಕೊನೆಯ ಮೂರು ದಿನಗಳು ಸರಸ್ವತಿಯಾಗಿಯೂ ದೇವಿಯಾಗಿಯೂ ಪೂಜಿಸಲಾಗುತ್ತಿದೆ.
ಹೀಗಾಗಿ ನವರಾತ್ರಿಯ ಒಂಭತ್ತು ದಿನಗಳು ಹಿಂದೂಗಳ ಪಾಲಿಗೆ ವಿಶೇಷ ದಿನಗಳಾಗಿವೆ. ಪ್ರತಿ ದಿನವೂ ಬಣ್ಣದೊಂದಿಗೆ ಸಂಬಂಧ ಹೊಂದಿದೆ. ಹೀಗಾಗಿ ನೀವು ದುರ್ಗಾ ದೇವಿಗೆ ಅರ್ಪಿಸುವ ನೈವೇದ್ಯ ಪ್ರಸಾದಗಳಲ್ಲಿ ಏಕೆ ಬದಲಾವಣೆ ತರಬಾರದು. ಈ ಬಾರಿ ಪ್ರತಿವರ್ಷದಂತೆ ಅದೇ ತಿನಿಸು ಮಾಡೆ ವಿಶೇಷವಾಗಿ ಏನಾದರೂ ಮಾಡಲು ಬಯಸಿದ್ದರೆ. ಕೊಬ್ಬರಿ ಲಡ್ಡು(Coconut laddoos) ಮಾಡಿ. ಅದು ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ಸ್ಟೆಪ್ ಬೈ ಸ್ಟೆಪ್ ತಿಳಿಸಿದೆ.
ಕೊಬ್ಬರಿ ಲಡ್ಡು ಬೇಗನೇ ಕೆಲವು ನಿಮಿಷಗಳಲ್ಲೇ ತಯಾರಿಸಬಹುದು. ಇದಕ್ಕಾಗಿ ಅಡುಗೆ ಮನೆಯಲ್ಲೇ ತಾಸು ನಿಲ್ಲಬೇಕಾಗಿಲ್ಲ. ಇದು ಬೇಗ ತಯಾರಿಸಬಹುದಲ್ಲದೆ ಹೆಚ್ಚು ರುಚಿಯಾಗಿರುತ್ತದೆ. ಇದಕ್ಕಾಗಿ ಬೇಕಾದ ಪದಾರ್ಥಗಳೆಲ್ಲ ಬಹುಶಃ ನಿಮ್ಮ ಅಡುಗೆ ಮನೆಯಲ್ಲಿ ಈಗಾಗಲೇ ಇರಬಹುದು.
ಕೊಬ್ಬರಿ ಲಡ್ಡೂ ಹೇಗೆ ಮಾಡಬೇಕು ಎಂಬುದನ್ನು ಕಾಂಟೆಂಟ್ ಕ್ರಿಯೆಟರ್ ಸಾಕ್ಷಿ ದರ್ದಾ(@bingehousebysakshi) ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ.
• 2 ಕಪ್ ಒಣಗಿದ ತೆಂಗಿನಕಾಯಿ
• 1 ಕಪ್ ಹಾಲು
• 1/4 ಕಪ್ ಹಾಲಿನ ಪುಡಿ
• 1/4 ಟೀಸ್ಪೂನ್ ಏಲಕ್ಕಿ ಪುಡಿ
• 1/2 ಕಪ್ ಸಕ್ಕರೆ
• 1-2 ಚಮಚ ತುಪ್ಪ
ಬೇಕಾದ್ರೆ ತಿನ್ನಬಹುದಾದ ಬೆಳ್ಳಿ ವಾರ್ಕ್
ಮೊದಲಿಗೆ ತೆಂಗಿನಕಾಯಿಯನ್ನ ಚೆನ್ನಾಗಿ ಹುರಿಯಿರಿ. ತಾಳಭಾಗ ದಪ್ಪವಿರುವ ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಒಂದೆರಡು ಟೀ ಚಮಚ ತುಪ್ಪ ಸುರಿಯಿರಿ, ಅದನ್ನ ಕಡಿಮೆ ಉರಿಯಲ್ಲಿ ಹುರಿಯಿರಿ. ತುಪ್ಪ ಬಿಸಿಯಾದ ಬಳಿಕ 2 ಕಪ್ ಒಣಗಿದ ತೆಂಗಿನಕಾಯಿ ಸೇರಿಸಿ, ನಿಧಾನವಾಗಿ ಹುರಿಯಿರಿ.
ಹುರಿಯುತ್ತಿದ್ದಂತೆ ತೆಂಗಿನಕಾಯಿಗೆ ಘಮ ಬರುತ್ತದೆ. ಬರುವವರೆಗೆ ಹುರಿಯಿರಿ. ಕೊಬ್ಬರಿ ಬಿಸಿಯಾಗಲಿ ಆದರೆ ಕರುಕಾಗದಂತೆ ಎಚ್ಚರಿಕೆವಹಿಸಿ.
ಹಾಲಿನ ಪುಡಿಯನ್ನು ಸೇರಿಸಿ:
ಈ ಹಾಲಿನ ಪುಡಿಯನ್ನು ಬಾಣಲೆಗೆ ಸೇರಿಸಿ. ಅದನ್ನು ಹುರಿದ ತೆಂಗಿನಕಾಯಿಯೊಂದಿಗೆ ಮಿಕ್ಸ್ ಮಾಡಿ. ಈಗ ಸ್ವಲ್ಪ ಉರಿಯನ್ನು ಕಡಿಮೆ ಮಾಡಿ, ಕೆಲವು ಸೆಕೆಂಡುಗಳ ಕಾಲ ಮಿಸ್ಕ್ ಮಾಡಿ ಅಥವಾ ಕಲಕಿ. ನಂತರ ಹಾಲಿನ ಪುಡಿ ಸಮವಾಗಿ ಮಿಕ್ಸ್ ಆಗುತ್ತದೆ. ನಂತರ ಈಗ ಹಾಲು ಸೇರಿಸಿ. ನಿಧಾನವಾಗಿ ಕಲುಕುತ್ತಾ ಇರಿ.
ಈಗ ಮುಂದಿನ ಹಂತ ಸಿಹಿಯಾಗಲು ಸ್ವಲ್ಪ ಸಕ್ಕರೆ, ಏಲಕ್ಕಿ ಪುಡಿಯನ್ನ ಸೇರಿಸಿ. ಏಲಕ್ಕಿ ಪುಡಿ ಸೇರಿಸುವುದರರಿಂದ ಕೊಬ್ಬರಿ ಲಡ್ಡೂಗೆ ಒಂದು ವಿಶೇಷ ಘಮ ಅಥವಾ ಸುವಾಸನೆ ಬರುತ್ತದೆ.
ಎಲ್ಲ ಮಿಶ್ರಣವಾಗಿ ಹುರಿಯಿಂದಾಗಿ ಒಣಗಿ ಪೌಡರ್‌ನಂತಅಗುತ್ತದೆ. ಅದನ್ನ ಬೇಯಿಸಬೇಡಿ.
ಸ್ವಲ್ಪ ತಣ್ಣಗಾಗಿಸಿ:
ಉರಿಯನ್ನು ಆಫ್ ಮಾಡಿ ಎಲ್ಲ ಮಿಶ್ರಣವನ್ನು ಬಟ್ಟಲು ಅಥವಾ ತಟ್ಟೆಗೆ ಹಾಕಿಕೊಳ್ಳಿ. ನಂತರ ಅದನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಆದರೆ ಪೂರ್ತಿ ತಣ್ಣಗಾಗುವರೆಗೆ ಅಲ್ಲ. ಸ್ವಲ್ಪ ಬಿಸಿಯಾಗಿರುವಾಗಲೇ ಲಡ್ಡೂಗಳ ಆಕಾರ ನೀಡಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಲಡ್ಡು ಆಕಾರ ಕೊಟ್ಟರೆ ತುಂಬಾ ಚೆನ್ನಾಗಿರುತ್ತೆ.
ಇನ್ನು ಒಣಗಿದ ತೆಂಗಿನಕಾಯಿ ಉಳಿದಿದ್ದರೆ ಅದನ್ನ ಒಂದು ತಟ್ಟೆಯಲ್ಲಿಡಿ ಬೇಕಾದಾಗ ಉಪಯೋಗಿಸಹುದು. ಈಗ ಪ್ರತಿ ಲಡ್ಡೂ ಮೇಲೆ ಖಾದ್ಯ ಬೆಳ್ಳಿಯ ವಾರ್ಕ್‌ನ ಸಣ್ಣ ತುಂಡುನ್ನು ನಿಧಾನವಾಗಿ ಇರಿಸಿ.
ಈಗ ಕೊಬ್ಬರಿ ಲಡ್ಡೂ ರೆಡಿ! ಎಲ್ಲವನ್ನು ಒಂದು ಗಾಳಿಯಾಡದ ಗಾಜಿನ ಡಬ್ಬಿಯಲ್ಲಿ ಇಟ್ಟರೆ ಬಹಳದಿನಗಳವರೆಗೂ ತಾಜಾವಾಗಿರುತ್ತದೆ. ಬೇಕಾದಾಗ ತಿನ್ನಬಹುದು.