Happy navratri 2026: ಸರ್ವರಿಗೂ 2026ರ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

Published : Oct 10, 2026, 04:17 PM IST
Navratri 2026 Wishes in kannada Happy Dasara

ಸಾರಾಂಶ

ನವರಾತ್ರಿ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ದುರ್ಗಾದೇವಿಯ ಆರಾಧನೆ, ಭಕ್ತಿ, ಪೂಜೆ ಹಾಗೂ ಸಂಭ್ರಮದೊಂದಿಗೆ ಆಚರಿಸುವ ಈ ಹಬ್ಬವು ದೇಶಾದ್ಯಂತ ವಿಶೇಷ ಮಹತ್ವ ಪಡೆದಿದೆ. 2026ರ ನವರಾತ್ರಿ ಅಕ್ಟೋಬರ್‌ 11ರಂದು ಅಂದರೆ ನಾಳೆಯಿಂದ ಆರಂಭವಾಗಲಿದೆ.

ನವರಾತ್ರಿ ಹಬ್ಬದ ಶುಭಾಶಯ ಸಂದೇಶಗಳು

1. ದುರ್ಗಾದೇವಿಯ ಕೃಪೆ ನಿಮ್ಮ ಜೀವನದಲ್ಲಿ ಸದಾ ಇರಲಿ. ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ. ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು!

2. ದುರ್ಗಾದೇವಿಯ ಒಂಬತ್ತು ರೂಪಗಳು ನಿಮ್ಮ ಬದುಕಿಗೆ ಹೊಸ ಶಕ್ತಿ ನೀಡಲಿ. ನಿಮ್ಮ ಎಲ್ಲ ಕನಸುಗಳು ನನಸಾಗಲಿ, ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸು ನಿಮ್ಮದಾಗಲಿ. ಶುಭ ನವರಾತ್ರಿ!

3. ತಾಯಿಯ ಆಶೀರ್ವಾದ ನಿಮ್ಮ ಬದುಕಿನ ಎಲ್ಲ ಕಷ್ಟಗಳನ್ನು ದೂರ ಮಾಡಲಿ. ಸಂತೋಷ ಮತ್ತು ಸಕಾರಾತ್ಮಕತೆಯಿಂದ ನಿಮ್ಮ ಜೀವನ ತುಂಬಿರಲಿ.

4. ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸುವ ತಾಯಿ ದುರ್ಗೆಯ ಕೃಪೆ ನಿಮ್ಮ ಕುಟುಂಬದ ಮೇಲಿರಲಿ. ನಿಮ್ಮ ಬದುಕಿನಲ್ಲಿ ಸದಾ ಸಂತೋಷದ ಬೆಳಕು ಹರಡಲಿ. ನವರಾತ್ರಿ ಹಬ್ಬದ ಶುಭಾಶಯಗಳು!

5. ದುರ್ಗಾದೇವಿಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿರುವ ಪ್ರತಿಯೊಂದು ಸಂಕಷ್ಟವೂ ದೂರವಾಗಲಿ. ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನಿಮ್ಮದಾಗಲಿ. ಎಲ್ಲರಿಗೂ ಶುಭ ನವರಾತ್ರಿ!

6. ಭಕ್ತಿ ನಿಮ್ಮ ಮನಸ್ಸಿನಲ್ಲಿ ತುಂಬಿರಲಿ, ಶಕ್ತಿ ನಿಮ್ಮ ಹೆಜ್ಜೆಗಳಿಗೆ ಜೊತೆಯಾಗಿರಲಿ, ತಾಯಿ ದುರ್ಗೆಯ ಆಶೀರ್ವಾದ ನಿಮ್ಮ ಬದುಕಿಗೆ ಬೆಳಕಾಗಿರಲಿ. ನವರಾತ್ರಿಯ ಶುಭಾಶಯಗಳು!

7. ತಾಯಿ ದುರ್ಗೆಯ ಪಾದಗಳಲ್ಲಿ ಭಕ್ತಿ, ಮನದಲ್ಲಿ ಪ್ರೀತಿ, ಬದುಕಿನಲ್ಲಿ ಸಂತೋಷ ಸದಾ ನೆಲೆಸಿರಲಿ. ನಿಮ್ಮ ಎಲ್ಲ ಆಸೆಗಳು ಈಡೇರಲಿ.

8. ಈ ನವರಾತ್ರಿ ನಿಮ್ಮ ಜೀವನದ ಹೊಸ ಆರಂಭವಾಗಲಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿ, ವೃತ್ತಿಜೀವನದಲ್ಲಿ ಪ್ರಗತಿ ದೊರೆಯಲಿ. ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು!

9. ತಾಯಿ ದುರ್ಗೆಯ ಕೃಪೆಯಿಂದ ನಿಮ್ಮ ಬದುಕಿನ ಕತ್ತಲೆ ದೂರವಾಗಿ ಯಶಸ್ಸಿನ ಬೆಳಕು ಮೂಡಲಿ. ನಿಮ್ಮ ಪ್ರತಿಯೊಂದು ದಿನವೂ ಮಂಗಳಕರವಾಗಿರಲಿ. ಶುಭ ನವರಾತ್ರಿ!

10. ದುರ್ಗಾದೇವಿಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಅನ್ನ, ಧನ ಹಾಗೂ ಸಂತೋಷಕ್ಕೆ ಕೊರತೆಯಾಗದಿರಲಿ. ಕುಟುಂಬದ ಎಲ್ಲ ಸದಸ್ಯರು ಆರೋಗ್ಯದಿಂದ, ನೆಮ್ಮದಿಯಿಂದ ಇರಲಿ. ನವರಾತ್ರಿ ಶುಭಾಶಯಗಳು!

11. ನವರಾತ್ರಿಯ ಒಂಬತ್ತು ದಿನಗಳು ನಿಮ್ಮ ಬದುಕಿಗೆ ಒಂಬತ್ತು ಪಟ್ಟು ಸಂತೋಷ ತರಲಿ. ತಾಯಿ ದುರ್ಗೆಯ ಅನುಗ್ರಹದಿಂದ ನಿಮ್ಮ ಎಲ್ಲ ಪ್ರಯತ್ನಗಳಿಗೂ ಯಶಸ್ಸು ಸಿಗಲಿ!

12. ತಾಯಿ ಅಂಬೆಯ ಆಶೀರ್ವಾದ ನಿಮ್ಮ ಕುಟುಂಬವನ್ನು ಸದಾ ಕಾಪಾಡಲಿ. ಪ್ರೀತಿ, ವಿಶ್ವಾಸ ಮತ್ತು ಸಂತೋಷ ನಿಮ್ಮ ಮನೆಯಲ್ಲಿ ತುಂಬಿರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ನವರಾತ್ರಿ ಹಬ್ಬದ ಶುಭಾಶಯಗಳು!

13. ದುರ್ಗಾದೇವಿಯ ಭಕ್ತಿ ನಿಮ್ಮ ಮನಸ್ಸಿಗೆ ಶಾಂತಿ ನೀಡಲಿ. ನಿಮ್ಮ ಬದುಕಿನ ಪ್ರತಿಯೊಂದು ತಿರುವಿನಲ್ಲೂ ಸರಿಯಾದ ದಾರಿ ಸಿಗಲಿ.

14. ಸರ್ವಮಂಗಳ ಮಾಂಗಲ್ಯೇ, ಶಿವೇ ಸರ್ವಾರ್ಥ ಸಾಧಿಕೇ; ಶರಣ್ಯೇ ತ್ರ್ಯಂಬಕೇ ಗೌರಿ, ನಾರಾಯಣಿ ನಮೋಸ್ತುತೇ. ತಾಯಿ ದುರ್ಗೆಯ ಆಶೀರ್ವಾದ ಎಲ್ಲರ ಮೇಲಿರಲಿ. ಶುಭ ನವರಾತ್ರಿ!

15. ಅಂಬೆ ತಾಯಿಯ ನಾಮಸ್ಮರಣೆಯಿಂದ ಮನಸ್ಸಿಗೆ ಶಾಂತಿ ಸಿಗಲಿ. ಆಕೆಯ ಕೃಪೆಯಿಂದ ಎಲ್ಲರ ಬದುಕಿನಲ್ಲೂ ಸಂತೋಷ ಮತ್ತು ಸಮೃದ್ಧಿ ನೆಲೆಸಲಿ.

PREV
Read more Articles on
click me!

Recommended Stories

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಾರ ಪೂರ್ತಿ ದಸರಾ ಸಂಭ್ರಮ, ಪ್ರಸಿದ್ಧ ಬಾಣಸಿಗನ ಊಟ ಸವೆಯುವ ಅವಕಾಶ!
ಇಂದಿನ ಜಾತಕ: ಮೇಷ, ಮಿಥುನ ಮತ್ತು ಕರ್ಕಾಟಕ ರಾಶಿಗೆ ದಿನ ಉತ್ತಮ, ಉದ್ಯೋಗ ಮತ್ತು ವ್ಯವಹಾರದಿಂದ ಭಾರಿ ಲಾಭ