Navratri Rituals: ನವರಾತ್ರಿಯ 9 ದಿನ ಈ ಕೆಲ್ಸವನ್ನು ತಪ್ಪದೇ ಮಾಡಿ, ಎಂದೂ ಖಾಲಿಯಾಗಲ್ಲ ನಿಮ್ಮ ಬ್ಯಾಂಕ್ ಖಾತೆ

Published : Oct 01, 2026, 01:28 PM IST
Navaratri Tips

ಸಾರಾಂಶ

Navaratri Tips : ನವರಾತ್ರಿಯಂದು ತಾಯಿ ದುರ್ಗೆ ಪೂಜೆ ಮಾಡುತ್ತಾರೆ. ನವರಾತ್ರಿಯ 9 ದಿನ ನೀವು ಮಾಡುವ ಮೂರೇ ಮೂರು ಕೆಲ್ಸದಿಂದ ನೀವು ಶ್ರೀಮಂತರಾಗ್ಬಹುದು. ಹೇಗೆ ಗೊತ್ತಾ?

ಈ ವರ್ಷದ ಶರದಿಯ ನವರಾತ್ರಿ ಅಕ್ಟೋಬರ್ 11 ರಂದು ಪ್ರಾರಂಭವಾಗಿ ಅಕ್ಟೋಬರ್ 20 ರಂದು ಮುಕ್ತಾಯಗೊಳ್ತಿದೆ. ಹಿಂದೂ ಧರ್ಮದಲ್ಲಿ, ಶಕ್ತಿಯನ್ನು ಆರಾಧಿಸುವ ಮಹಾ ಹಬ್ಬವಾದ ಶರದಿಯ ನವರಾತ್ರಿಯನ್ನು ಆಚರಿಸಲಾಗುತ್ತದೆ. ಅಪಾರ ಶಕ್ತಿ, ಸಂತೋಷ ಮತ್ತು ಭಕ್ತಿಯ ಸಮಯವೆಂದು ಇದನ್ನು ಪರಿಗಣಿಸಲಾಗುತ್ತದೆ.

ಶರದಿಯ ನವರಾತ್ರಿಯಲ್ಲಿ ಭಕ್ತರು ತಾಯಿ ದುರ್ಗೆಯ ಪೂಜೆಯಲ್ಲಿ ತಲ್ಲೀನರಾಗ್ತಾರೆ. ಈ ಸಂದರ್ಭದಲ್ಲಿ ಕನ್ಯೆ ಪೂಜೆ ಕೂಡ ನಡೆಯುತ್ತದೆ. ನವರಾತ್ರಿಯಲ್ಲಿ ತಾಯಿ ನಿಮಗೆ ಆಶೀರ್ವಾದ ಮಾಡಬೇಕು, ನಿಮ್ಮಿಷ್ಟಗಳೆಲ್ಲ ಈಡೇರಬೇಕು. ಮನೆಯಲ್ಲಿ ಶಾಂತಿ, ಆರ್ಥಿಕ ವೃದ್ಧಿ ಆಗ್ಬೇಕು ಅಂದ್ರೆ ಕೆಲವೊಂದು ಮಹತ್ವದ ವಿಷ್ಯಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.

ನವರಾತ್ರಿಯಲ್ಲಿ ಈ ಕೆಲ್ಸ ಮಾಡಿ

ನವರಾತ್ರಿಯ 9 ದಿನಗಳ ಕಾಲ ಮನೆಯಲ್ಲಿರುವ ಮಗಳಿಗೆ ಪ್ರತಿ ದಿನ ಹಣವನ್ನು ನೀಡಬೇಕು. ನೀವು ನೂರು, ಇನ್ನೂರು, ಐದು ನೂರು ಸೇರಿದಂತೆ ನಿಮಗೆ ಸಾಧ್ಯವಾಗುವಷ್ಟು ಹಣವನ್ನು ನೀವು ನೀಡಬೇಕು. ಪ್ರತಿ ದಿನ ಒಂದೇ ಸಮಯದಲ್ಲಿ, ಕಚೇರಿಗೆ ಹೋಗುವ ಮೊದಲು ನಿಮ್ಮ ಮಗಳ ಕೈಗೆ ಹಣವನ್ನು ನೀಡಬೇಕು. ಇದರಿಂದ ನಿಮಗೆ ಎಂದೂ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಬ್ಯಾಂಕ್ ಖಾತೆಯಲ್ಲಿ ಎಂದೂ ಹಣ ಖಾಲಿಯಾಗುವುದಿಲ್ಲ.

ಅಷ್ಟಮಿ ದಿನ ಕನ್ಯಾ ಪೂಜೆ

ಹಾಗೆಯೇ ನವರಾತ್ರಿಯ 9ನೇ ದಿನ ಅಂದ್ರೆ ಅಷ್ಟಮಿ ದಿನ ಕನ್ಯೆಗೆ ಪೂಜೆ ಮಾಡುವುದನ್ನು ಮರೆಯಬಾರದು. ಕನ್ಯೆಯನ್ನು ದೇವರೆಂದು ನೋಡುವ ಈ ದಿನಗಳಲ್ಲಿ ಅಪ್ಪಿತಪ್ಪಿಯೂ ಮನೆಯಲ್ಲಿರುವ ಹೆಣ್ಣು ಮಕ್ಕಳ ಮೇಲೆ ಕೋಪಗೊಳ್ಳಬಾರದು. ಅವರ ಮೇಲೆ ರೇಗಾಡಬಾರದು. ಅವರು ಕಣ್ಣೀರಿಡದಂತೆ ನೋಡಿಕೊಳ್ಳಬೇಕು. ಅವರಿಗೆ ಕೆಟ್ಟ ಶಬ್ಧದಿಂದ ಬೈಯ್ಯುವ ಕೆಲಸ ಮಾಡಬೇಡಿ. ನವರಾತ್ರಿಯಲ್ಲಿ ಮಕ್ಕಳು ಕಣ್ಣೀರಿಡುವುದು ಉತ್ತಮವಲ್ಲ.

ನವರಾತ್ರಿ ದಿನ ಬರೀ ದುರ್ಗೆ ಪೂಜೆ ಮಾತ್ರವಲ್ಲ ಕನ್ಯೆಯರ ಪೂಜೆ ಮಾಡುವ ಜೊತೆಗೆ ಮಕ್ಕಳು ಸದಾ ಖುಷಿಯಾಗಿರುವಂತೆ ನೋಡಿಕೊಳ್ಳುವುದರಿಂದ ತಾಯಿಯ ಆಶೀರ್ವಾದ ಸಿಗುತ್ತದೆ. ಯಾವುದೇ ಹಣಕಾಸಿನ ಸಮಸ್ಯೆ ಕಾಡುವುದಿಲ್ಲ.

PREV
Read more Articles on
click me!

Recommended Stories

ಬುಧ-ಮಂಗಳ ಕೇಂದ್ರ ದೃಷ್ಟಿ ಯೋಗ: ನಾಳೆ ಅಕ್ಟೋಬರ್ 2ರಿಂದ ಈ 4 ರಾಶಿಗೆ ಶುಭಫಲ; ಹಣ, ಉದ್ಯೋಗದಲ್ಲಿ ಪ್ರಗತಿ
Pitru Paksha : ಪಿತೃಪಕ್ಷದಲ್ಲಿ ಈ ಲೋಹ ದಾನ ಮಾಡೋದು ಮಹಾಪಾಪ ! ದಾರಿದ್ರ್ಯ ಬರೋದು ನಿಶ್ಚಿತ