Pitru Paksha : ಪಿತೃಪಕ್ಷದಲ್ಲಿ ಈ ಲೋಹ ದಾನ ಮಾಡೋದು ಮಹಾಪಾಪ ! ದಾರಿದ್ರ್ಯ ಬರೋದು ನಿಶ್ಚಿತ

Published : Sep 30, 2026, 06:49 PM IST
Pinda Daan

ಸಾರಾಂಶ

Pitru Paksha: ಪಿತೃ ಪಕ್ಷದಲ್ಲಿ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳಿವೆ. ಅದ್ರಲ್ಲಿ ಲೋಹ ಬಳಕೆ ಕೂಡ ಒಂದು. ಕಬ್ಬಿಣವನ್ನು ಪಿತೃಪಕ್ಷದಲ್ಲಿ ಬಳಸ್ಬೇಕಾ ಬೇಡ್ವಾ?

ಸದ್ಯ ಪಿತೃಪಕ್ಷ ನಡೆಯುತ್ತಿದೆ. ಈ ದಿನಗಳಲ್ಲಿ ಪಿತೃಗಳಿಗೆ ಪಿಂಡಪ್ರದಾನ, ತರ್ಪಣ ಮತ್ತು ಶ್ರಾದ್ಧ ಕರ್ಮಗಳನ್ನು ಮಾಡಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸಮಯದಲ್ಲಿ ಮಾಡುವ ಪ್ರತಿಯೊಂದು ಕಾರ್ಯಕ್ಕೂ ವಿಶೇಷ ಮಹತ್ವವಿದೆ. ಹಾಗಾಗಿ ಪಿತೃಕರ್ಮ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.

ಪಿತೃಪಕ್ಷದಲ್ಲಿ ಕಬ್ಬಿಣವನ್ನು ಬಳಸಬಾರದೇ?

ಪಿತೃಪಕ್ಷದಲ್ಲಿ ಪ್ರತಿಯೊಂದು ಕೆಲಸವನ್ನೂ ಶ್ರದ್ಧೆಯಿಂದ ಮಾಡಬೇಕು. ಶ್ರಾದ್ಧ ಮಾಡುವಾಗ ಶಾಂತವಾಗಿ ಮಾಡಿದಲ್ಲಿ ಮಾತ್ರ ಪಿತೃಗಳ ಆಶೀರ್ವಾದ ಸಿಗುತ್ತದೆ. ಅದೇ ರೀತಿ ಶ್ರಾದ್ಧ, ತರ್ಪಣ ನೀಡುವ ಮುನ್ನ ಕೆಲ ನಿಯಮಗಳನ್ನು ಪಾಲಿಸಬೇಕು. ಕೆಲ ಆಹಾರ ಸೇವನೆ ಮಾಡಬಾರದು, ಕೆಲ ವಸ್ತುಗಳನ್ನು ಬಳಸಬಾರದು.

ಶಾಸ್ತ್ರಗಳಲ್ಲಿ ಹೇಳಿರುವಂತೆ, ಪಿತೃಪಕ್ಷದ ಸಂದರ್ಭದಲ್ಲಿ ಶ್ರಾದ್ಧ, ಪಿಂಡಪ್ರದಾನ ಮತ್ತು ತರ್ಪಣದಂತಹ ಧಾರ್ಮಿಕ ಕಾರ್ಯಗಳಿಗೆ ಕಬ್ಬಿಣದ ಪಾತ್ರೆಗಳನ್ನು ಬಳಸುವುದನ್ನು ತಪ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಕಬ್ಬಿಣವನ್ನು ಶನಿ ಮತ್ತು ರಾಹುವಿಗೆ ಸಂಬಂಧಿಸಿದ ಲೋಹವೆಂದು ಪರಿಗಣಿಸಲಾಗುತ್ತದೆ. ಇದನ್ನು ತಾಮಸಿಕ ಗುಣ ಮತ್ತು ನಕಾರಾತ್ಮಕ ಶಕ್ತಿಯೊಂದಿಗೆ ಹೋಲಿಸಲಾಗುತ್ತದೆ. ಪಿತೃಕರ್ಮವನ್ನು ಅತ್ಯಂತ ಪವಿತ್ರವಾದ ಕಾರ್ಯವೆಂದು ಪರಿಗಣಿಸುವುದರಿಂದ, ಈ ಸಂದರ್ಭದಲ್ಲಿ ಕಬ್ಬಿಣದ ವಸ್ತುಗಳನ್ನು ಬಳಸಬಾರದು ಎಂದು ಕೆಲವು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಕಬ್ಬಿಣದ ಪಾತ್ರೆಯಲ್ಲಿ ಅಡುಗೆ

ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿತೃಕರ್ಮಕ್ಕಾಗಿ ತಯಾರಿಸುವ ಆಹಾರವನ್ನು ಕಬ್ಬಿಣದ ಪಾತ್ರೆಯಲ್ಲಿ ಬೇಯಿಸುವುದು ಅಥವಾ ಕಬ್ಬಿಣದ ಪಾತ್ರೆಯಲ್ಲಿ ಬಡಿಸಬಾರದು ಎನ್ನುವ ನಂಬಿಕೆ ಇದೆ. ಅದೇ ರೀತಿ ಪಿತೃಪಕ್ಷದ ಸಂದರ್ಭದಲ್ಲಿ ಕಬ್ಬಿಣದ ಪಾತ್ರೆ ಅಥವಾ ಕಬ್ಬಿಣದಿಂದ ತಯಾರಿಸಿದ ವಸ್ತುಗಳನ್ನು ದಾನ ಮಾಡಬಾರದು ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಪಿತೃಕರ್ಮದ ಫಲ ಕಡಿಮೆಯಾಗುತ್ತದೆ. ಪಿತೃಗಳ ಅಸಮಾಧಾನಕ್ಕೆ ಕಾರಣವಾಗಬಹುದು.ಇದನ್ನು ಮಹಾಪಾಪ ಎನ್ನಲಾಗುತ್ತದೆ. ಪಿತೃಗಳ ಶಾಪದಿಂದ ದಾರಿದ್ರ್ಯ ಬರುತ್ತದೆ ಎಂದು ನಂಬಲಾಗುತ್ತದೆ.

ಯಾವ ಲೋಹದ ಪಾತ್ರೆ ಬಳಸಬೇಕು?

ಶಾಸ್ತ್ರಗಳಲ್ಲಿ ಹೇಳಿರುವಂತೆ, ಪಿತೃಕರ್ಮಕ್ಕೆ ತಾಮ್ರ, ಹಿತ್ತಾಳೆ, ಬೆಳ್ಳಿ ಮತ್ತು ಕಂಚಿನ ಪಾತ್ರೆಗಳನ್ನು ಬಳಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ಲೋಹಗಳಿಂದ ತಯಾರಿಸಿದ ಪಾತ್ರೆಗಳಲ್ಲಿ ತರ್ಪಣ, ಪಿಂಡಪ್ರದಾನ ಮತ್ತು ಇತರ ಪಿತೃಕರ್ಮಗಳನ್ನು ಮಾಡುವುದರಿಂದ ಪೂರ್ವಜರಿಗೆ ತೃಪ್ತಿ ದೊರೆಯುತ್ತದೆ ಹಾಗೂ ಪುಣ್ಯಫಲ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

PREV
Read more Articles on
click me!

Recommended Stories

ಮಂಗಳ-ಗುರು ಸಂಯೋಗ: ಅಕ್ಟೋಬರ್‌ನಲ್ಲಿ ಈ 3 ರಾಶಿಗೆ ಸುವರ್ಣಕಾಲ; ವೃತ್ತಿ, ಹಣಕಾಸಿನಲ್ಲಿ ಭರ್ಜರಿ ಪ್ರಗತಿ!
ಅಕ್ಟೋಬರ್ 3ಕ್ಕೆ ಕೇತು ನಕ್ಷತ್ರ ಬದಲಾವಣೆ; ಈ 3 ರಾಶಿಯವರು ಎಚ್ಚರಿಕೆಯಿಂದಿರಬೇಕು, ಜಾಗ್ರತೆ ಅಗತ್ಯ