ನವರಾತ್ರಿ ಪುಣ್ಯಕಾಲದಲ್ಲಿ ಯಾವ ಆಹಾರ ಸೂಕ್ತ? ಯಾವ ಕೆಲಸವನ್ನೆಲ್ಲ ಮಾಡ್ಲೇಬಾರ್ದು ಗೊತ್ತಾ?

By Suvarna News  |  First Published Oct 5, 2023, 12:31 PM IST

ನವರಾತ್ರಿಯ ಪುಣ್ಯಕಾಲದಲ್ಲಿ ಕೆಲವು ಅಂಶಗಳಿಗೆ ಗಮನ ನೀಡಬೇಕು. ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಚೆನ್ನಾಗಿರಬೇಕಾದರೆ ಉತ್ತಮ ಆಹಾರದ ಬಗ್ಗೆ ಗಮನ ಹರಿಸುವ ಜತೆಗೆ, ಮಿತವಾಗಿ ಸೇವನೆ ಮಾಡಬೇಕು. 
 


ಕೆಲವೇ ದಿನಗಳಲ್ಲಿ ನವರಾತ್ರಿಯ ಸಂಭ್ರಮ ಆರಂಭವಾಗಲಿದೆ. ಒಂಭತ್ತು ದಿನಗಳ ಕಾಲ ಆಚರಿಸುವ ನವರಾತ್ರಿಯ ಸಮಯದಲ್ಲಿ ಹಲವರಿಗೆ ಆಹಾರದ್ದೇ ಬಹುದೊಡ್ಡ ಚಿಂತೆಯಾಗುತ್ತದೆ. ಏಕೆಂದರೆ, ಪೂಜೆ ಮಾಡುವವರು ಉಪವಾಸ ವ್ರತ ಮಾಡಬೇಕಾಗುತ್ತದೆ. ಉಪವಾಸ ಎಂದರೆ, ರಾತ್ರಿ ಊಟದ ಬದಲು ಏನಾದರೂ ತಿಂಡಿ ಸೇವನೆ ಮಾಡುತ್ತಾರೆ. ಎಲ್ಲ ಮನೆಗಳಲ್ಲೂ ಒಂಭತ್ತು ದಿನಗಳ ಕಾಲ ಪೂಜೆ ಮಾಡದಿದ್ದರೂ ಮೂರು ದಿನಗಳ ಕಾಲವಾದರೂ ಮಾಡಿಯೇ ಮಾಡುತ್ತಾರೆ. ಉಪವಾಸದ ಸಮಯದಲ್ಲಿ ಸಾಮಾನ್ಯವಾಗಿ ಅವಲಕ್ಕಿ, ಗೋಧಿಯ ತಿನಿಸುಗಳನ್ನೇ ಹೆಚ್ಚಾಗಿ ಸೇವಿಸುವುದು ಕಂಡುಬರುತ್ತದೆ. ಹೀಗಾಗಿ, ಬಹಳಷ್ಟು ಜನ ಆಸಿಡಿಟಿ, ಗ್ಯಾಸ್ಟ್ರಿಕ್‌, ಮಲಬದ್ಧತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಾರೆ. ಆರೋಗ್ಯದ ಮೇಲಾಗುವ ಪರಿಣಾಮಗಳ ಭಯದಿಂದಲೇ ಸಾಕಷ್ಟು ಜನ ಉಪವಾಸ ವ್ರತದಿಂದ ದೂರ ಉಳಿದುಬಿಡುತ್ತಾರೆ. ಆದರೆ, ಆಹಾರದ ಬಗ್ಗೆ ಕಾಳಜಿ ವಹಿಸಿದರೆ ಸಆರೋಗ್ಯವನ್ನು ಚೆನ್ನಾಗಿ ಸಾಧ್ಯ. ನಮ್ಮ ದೇಹಕ್ಕೆ ಯಾವ ಆಹಾರ ಒಗ್ಗುವುದಿಲ್ಲವೋ ಅದನ್ನು ಈ ಸಮಯದಲ್ಲಿ ಸೇವನೆ ಮಾಡಲೇಬಾರದು. ಜತೆಗೆ, ದೇಹಕ್ಕೆ ಒಗ್ಗುತ್ತದೆಯೆಂದು ಒಂದೇ ರೀತಿಯ ಆಹಾರವನ್ನು ಹೆಚ್ಚು ತಿನ್ನಲೂಬಾರದು. ಹಬ್ಬದ ಊಟವೆಂದರೆ, ಸಿಹಿ ತಿನಿಸುಗಳು, ಕರಿದ ತಿಂಡಿಗಳು ಇರುವುದು ಸಹ ಸಾಮಾನ್ಯ. ಅವುಗಳನ್ನೂ ಮಿತವಾಗಿ ಸೇವನೆ ಮಾಡುವುದು ಒಳಿತು. ಹೀಗಾಗಿ, ಈ ಸಮಯದಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. 

•    ಹಣ್ಣುಗಳು (Fruits), ಒಣಹಣ್ಣುಗಳು (Dry fruits) 
ಹಣ್ಣುಗಳು ಯಾವತ್ತೂ ಆರೋಗ್ಯಕ್ಕೆ (Health) ಪೂರಕ. ಈ ಸಮಯದಲ್ಲಿ ದೊರೆಯುವ ಎಲ್ಲ ಹಣ್ಣುಗಳನ್ನೂ ಸೇರಿಸಿಕೊಂಡು ಸೇವನೆ ಮಾಡುವುದು ಉತ್ತಮ. ಸಂಜೆಯ ಸ್ನ್ಯಾಕ್ಸ್‌ (Snacks), ರಾತ್ರಿಯ (Night) ತಿಂಡಿ ಸಮಯದಲ್ಲಿ ಹಣ್ಣುಗಳನ್ನು ಬಳಕೆ ಮಾಡಬಹುದು. ಆದರೆ, ಮಧುಮೇಹಿಗಳು ಯಾವ ಹಣ್ಣನ್ನು ತಿನ್ನಬಹುದು ಎಂದು ವಿಚಾರಿಸಿಕೊಂಡು ಮಿತವಾಗಿ ಸೇವನೆ ಮಾಡುವುದು ಉತ್ತಮ. ನವರಾತ್ರಿಯ (Navaratri) ಉಪವಾಸಕ್ಕೆ ಮೂಸಂಬಿ, ಸೇಬು, ಸೀಬೆ, ಒಣಹಣ್ಣುಗಳು ಉಪಯುಕ್ತ. 

Navaratri 2023: ನವರಾತ್ರಿ ದಿನಾಂಕ, ಕಲಶ ಸ್ಥಾಪನಾ ಮುಹೂರ್ತ ಇಲ್ಲಿದೆ..

Tap to resize

Latest Videos

•    ಗೋಧಿ, ಅವಲಕ್ಕಿ ಬೇಡ 
ಸಾಮಾನ್ಯವಾಗಿ ಉಪವಾಸವೆಂದರೆ, ಗೋಧಿಯ (Wheat) ಚಪಾತಿ, ಅವಲಕ್ಕಿಯನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದರೆ, ಆರೋಗ್ಯದ ಹಿತದೃಷ್ಟಿಯಿಂದ ಇವುಗಳನ್ನು ಪ್ರತಿದಿನವೂ ಬಳಸಬೇಡಿ. ಪೂಜೆ, ಪುನಸ್ಕಾರ, ಓಡಾಟದ ಸಮಯದಲ್ಲಿ ದೇಹ ಉಷ್ಣವಾಗುವುದು ಹೆಚ್ಚು. ದೇಹಕ್ಕೆ ತಂಪು (Cool) ದೊರೆಯಲು ಶಾಬಕ್ಕಿ ಬಳಸಬಹುದು. ದಿನಕ್ಕೊಮ್ಮೆ ಇಸಾಬ್‌ ಗೋಲ್‌ ನೆನೆಸಿಟ್ಟುಕೊಂಡು ಕುಡಿಯಬಹುದು. ನೀರುಮಜ್ಜಿಗೆ ಕುಡಿಯಿರಿ.

•    ಹಾಲು (Milk) ಮತ್ತು ಹಾಲಿನ ಉತ್ಪನ್ನ (Milk Product)
ನವರಾತ್ರಿಯ ಉಪವಾಸದ ಸಮಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಗತ್ಯವಾಗಿ ಬಳಸಬೇಕು. ದಿನವೂ ಬೆಳಗ್ಗೆ, ಸಂಜೆ ಹಾಲು ಕುಡಿಯುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಮೊಸರು, ಮಜ್ಜಿಗೆಗಳನ್ನೂ ಬಳಸಬೇಕು.

ಯಾವ ಆಹಾರ (Food) ಬೇಡ?
ನವರಾತ್ರಿಯ ಸಮಯದಲ್ಲಿ ಈರುಳ್ಳಿ (Onion), ಬೆಳ್ಳುಳ್ಳಿ (Garlic), ಮೊಟ್ಟೆ (Egg), ಮಾಂಸದಂತಹ ತಾಮಸ ಆಹಾರಗಳನ್ನು ಸೇವನೆ ಮಾಡಬಾರದು. ಫಾಸ್ಟ್‌ ಫುಡ್‌, ಸಂಸ್ಕರಿತ ಆಹಾರ, ಪ್ಯಾಕೆಟ್‌ ಆಹಾರದಿಂದ ದೂರವಿರಿ. ಹಾಗೆಯೇ, ಆಲ್ಕೋಹಾಲ್‌ ಸೇವನೆಯನ್ನೂ ಈ ಸಮಯದಲ್ಲಿ ಮಾಡಬಾರದು. ಬಿಳಿ ಉಪ್ಪನ್ನು ಬಳಸುವುದು ಸರಿಯಲ್ಲ. ಬದಲಿಗೆ, ಕಲ್ಲುಪ್ಪು ಅಥವಾ ಸೈಂಧವ ಲವಣವನ್ನು ಬಳಕೆ ಮಾಡಬಹುದು.

ಓಂ ಎಂದರೆ ಯೌವನ ಹೆಚ್ಚಾಗುವುದಂತೆ..! ಓಂ ಮಂತ್ರದ ಪ್ರಯೋಜನಗಳಾವುವು..?

ಇದನ್ನೆಲ್ಲ ಮಾಡ್ಬೇಡಿ
•    ನವರಾತ್ರಿಯ ದಿನಗಳೆಂದರೆ ಪವಿತ್ರ ಕ್ಷಣಗಳು. ಈ ಸಮಯದಲ್ಲಿ ಉಗುರು ಕತ್ತರಿಸುವುದು (Nail Cutting), ಕ್ಷೌರ (Hair Cut) ಸೇರಿದಂತೆ ಹಲವು ಕಾರ್ಯಗಳನ್ನು ಮಾಡಬಾರದು. ಉಗುರು ಕತ್ತರಿಸುವುದು ಮತ್ತು ಕ್ಷೌರಗಳನ್ನು ಅಮಂಗಲ ಎಂದು ಪರಿಗಣಿಸಲಾಗುತ್ತದೆ.
•    ಬ್ರಹ್ಮಚರ್ಯ (Celibacy) ಪಾಲನೆ ಮಾಡುವುದು ಅಗತ್ಯ. ನವರಾತ್ರಿಯ ದಿನಗಳಲ್ಲಿ ಪೂಜೆ ಕೈಗೊಳ್ಳುವವರು ಬ್ರಹ್ಮಚರ್ಯ ಪಾಲನೆ ಮಾಡುವುದರಿಂದ ಏಕಾಗ್ರತೆ ಸಾಧ್ಯವಾಗುತ್ತದೆ.  

click me!