Astrology Tips : ನರಕ ಚತುರ್ದಶಿ ದಿನ ಈ ಉಪಾಯ ಮಾಡಿ ಚಮತ್ಕಾರ ನೋಡಿ

By Contributor AsianetFirst Published Oct 11, 2022, 5:24 PM IST
Highlights

ನೋಡ್ತಾ ನೋಡ್ತಾ ದೀಪಾವಳಿ ಬಂದೆಬಿಡ್ತು. ದೀಪಗಳ ಅಲಂಕಾರ ಈಗಾಗಲೇ ಶುರುವಾಗಿದೆ. ಹಾಗೆ ನರಕ ಚತುದರ್ಶಿ ಆಚರಣೆಗೂ ಜನರು ಸಿದ್ಧರಾಗ್ತಿದ್ದಾರೆ. ನಕಾರಾತ್ಮಕ ಶಕ್ತಿ ಓಡಿಸಬೇಕೆಂದ್ರೆ ನರಕಚತುದರ್ಶಿ ಒಳ್ಳೆಯ ದಿನ. 
 

ದೀಪಾವಳಿ ಐದು ದಿನಗಳ ಹಬ್ಬ. ಅದ್ರಲ್ಲಿ ನರಕ ಚತುರ್ದಶಿ ಹಬ್ಬ ಕೂಡ ಒಂದು. ಈ ಬಾರಿ ಸೋಮವಾರ ಅಕ್ಟೋಬರ್ 24ರಂದು ನರಕ ಚತುರ್ದಶಿ ಆಚರಣೆ ಮಾಡಲಾಗ್ತಿದೆ. ನರಕ ಚತುರ್ದಶಿಯಂದು ಎಣ್ಣೆ ಸ್ನಾನಕ್ಕೆ ವಿಶೇಷ ಮಹತ್ವವಿದೆ. ನರಕಾಸುರನ ವಧೆಯಾದ ದಿನವನ್ನು ನರಕ ಚತುರ್ದಶಿಯಾಗಿ ಆಚರಣೆ ಮಾಡಲಾಗುತ್ತದೆ.  ಹಿಂದು ಧರ್ಮದಲ್ಲಿ ನರಕ ಚತುರ್ದಶಿಗೆ ಮಹತ್ವದ ಸ್ಥಾನವಿದೆ. ನರಕ ಚತುರ್ದಶಿಯಂದು ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ ಎಂದು ನಂಬಲಾಗಿದೆ. ನಕಾರಾತ್ಮಕ ಶಕ್ತಿಯಿಂದಾಗುವ ಹಾನಿಯನ್ನು ತಡೆಯಲು ನರಕ ಚತುರ್ದಶಿ ದಿನದಂದು ಕೆಲ ಕ್ರಮಗಳನ್ನು ಅನುಸರಿಸಬೇಕು. ನರಕ ಚತುರ್ದಶಿಯಂದು ಮಾಡುವ ಕೆಲ ಕೆಲಸಗಳು ನಮಗೆ ಮಂಗಳವನ್ನು ನೀಡುತ್ತವೆ ಎಂದು ನಂಬಲಾಗಿದೆ.

ನರಕ ಚತುರ್ದಶಿ (Naraka Chaturdashi) ದಿನದಂದು ತಪ್ಪದೆ ಮಾಡಿ ಈ ಕೆಲಸ :

Latest Videos

ನಾಲ್ಕು ಮುಖವಿರುವ ದೀಪ (lamp)ವನ್ನು ಬೆಳಗಿ : ನರಕ ಚತುರ್ದಶಿ ದಿನದಂದು ಮನೆಯಲ್ಲಿ ದೀಪ ಬೆಳಗಬೇಕು. ಮನೆಯ ಪೂರ್ವ ದಿಕ್ಕಿಗೆ ನಾಲ್ಕು ಮುಖದ ದೀಪವನ್ನು ಹಚ್ಚಬೇಕು. ಈ ದೀಪವು ಯಮನಿಗೆ ಮೀಸಲು ಎನ್ನಲಾಗುತ್ತದೆ. ನರಕ ಚತುರ್ದಶಿ ದಿನದಂದು ಯಮನಿಗೆ  ದೀಪವನ್ನು ಬೆಳಗಬೇಕು. ಇದರಿಂದ ವ್ಯಕ್ತಿ ನರಕಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳಬಹುದು.  

ಮನೆಯ ಪೂರ್ವ (East) ದಿಕ್ಕಿನಲ್ಲಿ ಯಮನಿಗಾಗಿ ಹಚ್ಚುವ ನಾಲ್ಕು ಮುಖದ ದೀಪವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವರು ನರಕ ಚತುರ್ದಶಿ ದಿನದಂದು ಮನೆಯ ಚರಂಡಿಯ ಬಳಿ ಹಸಿ ದೀಪದಲ್ಲಿ ಸಾಸಿವೆ ಎಣ್ಣೆ (Mustard oil) ಯನ್ನು ಹಾಕಿ, ದೀಪ ಬೆಳಗುತ್ತಾರೆ. ಇದು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಾಶಮಾಡುತ್ತದೆ ಎಂದು ನಂಬಲಾಗಿದೆ. ನರಕ ಚತುರ್ದಶಿ ದಿನದಂದು ಹಿಟ್ಟಿನಿಂದ ಚತುರ್ಮುಖ ದೀಪವನ್ನು ಮಾಡಿ ಹಚ್ಚಬೇಕು. ಇದು ಕೂಡ ಮಂಗಳಕರವೆಂದು ನಂಬಲಾಗಿದೆ.

ನಕಾರಾತ್ಮಕತೆ ದೂರ ಮಾಡುತ್ತೆ ಹರಳೆಣ್ಣೆ : ಹರಳೆಣ್ಣೆ ನಕಾರಾತ್ಮಕ ಶಕ್ತಿ ನಾಶಪಡಿಸಲು ನೆರವಾಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ನರಕ ಚತುದರ್ಶಿ ದಿನದಂದು ಹರಳೆಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕು ಎಂದು ಹೇಳಲಾಗುತ್ತದೆ. ಈ ದಿನ ಎಣ್ಣೆ ಸ್ನಾನ ಮಾಡದಿದ್ದರೆ ದೇಹಕ್ಕೆ ಅಂಟಿಕೊಂಡಿರುವ ಕೊಳೆ ಹೋಗುವುದಿಲ್ಲ. ನಿಮ್ಮೊಳಗೆ ನಕಾರಾತ್ಮಕತೆ ಹೆಚ್ಚುತ್ತದೆ ಎಂದು ನಂಬಲಾಗಿದೆ. 

ನರಕ ಚತುದರ್ಶಿ ದಿನದಂದು ಹರಳೆಣ್ಣೆ ಹಚ್ಚಿ, ನೀರಿನಿಂದ ಸ್ನಾನ ಮಾಡಿದರೆ ಅನೇಕ ಲಾಭವಿದೆ. ಇಷ್ಟೇ ಅಲ್ಲ ಬಾತ್ ರೂಮಿನಲ್ಲಿ ಹರಳೆಣ್ಣೆ ಇಡಬೇಕು ಎನ್ನಲಾಗುತ್ತದೆ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ನೆರವಾಗುತ್ತದೆ ಎಂದು ನಂಬಲಾಗಿದೆ. 

Diwali 2022 : ಇವರಿಗೆಲ್ಲಾ ಏನಾದರೂ ಉಡುಗೊರೆ ಕೊಡೋದ ಮರೀಬೇಡಿ

ಕರ್ಪೂರದಲ್ಲಿದೆ ಅಪಾರ ಶಕ್ತಿ : ಕರ್ಪೂರ ಧನಾತ್ಮಕ ಶಕ್ತಿಯ ಉತ್ತಮ ಮೂಲವಾಗಿದೆ. ತಾಯಿ ಲಕ್ಷ್ಮಿಗೆ ಪ್ರಿಯವಾದ ವಸ್ತುಗಳಲ್ಲಿ ಕರ್ಪೂರ ಕೂಡ ಒಂದು. ನರಕ ಚತುದರ್ಶಿ ದಿನದಂದು ಕಾಳಿ ದೇವಿಯನ್ನು ಪೂಜೆ ಮಾಡಲಾಗುತ್ತದೆ. ಕಾಳಿಗೆ ಕರ್ಪೂರ ದೀಪವನ್ನು ಬೆಳಗಬೇಕು. ಕರ್ಪೂರದ ಆರತಿ ಮಾಡಿದ್ರೆ ಜೀವನದ ಎಲ್ಲಾ ಸಮಸ್ಯೆ  ಕೊನೆಗೊಳ್ಳುತ್ತವೆ. ಕರ್ಪೂರವು ನಿಮ್ಮ ಮನೆಯ ಪರಿಸರವನ್ನು ಶುದ್ಧಗೊಳಿಸುತ್ತದೆ. ಮನೆಯಲ್ಲಿರುವ ಎಲ್ಲಾ ಕೊಳೆಯನ್ನು ತೆಗೆದುಹಾಕುತ್ತದೆ.

ZODIAC OUTFITS: ದೀಪಾವಳಿಗೆ ನಿಮ್ಮ ರಾಶಿಗೆ ಹೊಂದುವ ಈ ಬಟ್ಟೆ ಧರಿಸಿ

ಪೊರಕೆ ಬಳಕೆ ಹೀಗಿರಲಿ : ದೀಪಾವಳಿ ಸಂದರ್ಭದಲ್ಲಿ ಎಲ್ಲರೂ ಮನೆಯನ್ನು ಸ್ವಚ್ಛಗೊಳಿಸ್ತಾರೆ. ಬರೀ ಮನೆ ಸ್ವಚ್ಛಗೊಳಿಸಿದ್ರೆ ಸಾಲದು. ಮನೆಯಲ್ಲಿರುವ ಹಳೆ ಪೊರಕೆಯನ್ನ ಕೂಡ ಬದಲಿಸಬೇಕು. ನರದ ಚತುದರ್ಶಿ ದಿನದಂದು ನೀವು ಹಳೆ ಪೊರಕೆಯನ್ನು ಬದಲಿಸಿ. ಮನೆಗೆ ಹೊಸ ಪೊರಕೆಯನ್ನು ತೆಗೆದುಕೊಂಡು ಬನ್ನಿ. ಪೊರಕೆಯನ್ನು ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಹೊಸ ಪೊರಕೆ ತಂದ್ರೆ ಮನೆಗೆ ಲಕ್ಷ್ಮಿ ಬಂದಂತೆ ಎಂದು ನಂಬಲಾಗಿದೆ. 

click me!