
ನಾಡಿನ ದೊಡ್ಡ ಹಬ್ಬ ಅಂತಾನೇ ನಾಗರ ಪಂಚಮಿ (Nagara Panchami) ಪ್ರಸಿದ್ಧಿ ಪಡೆದಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿ ಆಚರಿಸಲಾಗುತ್ತದೆ. ನಾಳೆ ಅಂದ್ರೆ ಜುಲೈ 29 ರಂದು ನಾಡಿನಾದ್ಯಂತ ನಾಗರ ಪಂಚಮಿ ಆಚರಣೆ ಮಾಡಲಾಗ್ತಿದೆ. ಇಂದಿನಿಂದಲೇ ಪೂಜೆ, ತಯಾರಿ ಶುರುವಾಗಿದೆ. ನಾಗರ ಕಲ್ಲಿಗೆ ಹಾಲೆರೆದು, ವಿಶೇಷ ಅಡುಗೆ ಮಾಡಿ, ಪೂಜೆ ಮಾಡಲಾಗುತ್ತದೆ. ಪ್ರತಿಯೊಂದು ಪ್ರದೇಶದಲ್ಲೂ ನಾಗರ ಪಂಚಮಿಯನ್ನು ಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ನಾಗರ ಪಂಚಮಿಯಂದು ನಿಮಗೆ ಪೂಜೆಯ ಸಂಪೂರ್ಣ ಫಲ ಬೇಕು ಅಂದ್ರೆ ಕೆಲ ವಸ್ತುಗಳನ್ನು ಬಳಸಬಾರದು.
ನಾಗರ ಪಂಚಮಿ ದಿನ ಈ ವಸ್ತು ಬಳಸಬೇಡಿ : ಶತಮಾನಗಳಿಂದಲೂ ಪಾಲಿಸಿಕೊಂಡು ಬರ್ತಿರುವ ಪದ್ದತಿಗಳಲ್ಲಿ ಇದೂ ಒಂದು. ನೀವು ನಾಗರ ಪಂಚಮಿ ದಿನ ಕಬ್ಬಿಣ (Iron) ಹಾಗೂ ಕಬ್ಬಿಣದ ವಸ್ತುಗಳನ್ನು ಬಳಸ್ಬಾರದು. ತವಾ, ಚಾಕು, ಕತ್ತರಿ ಮತ್ತು ಕಬ್ಬಿಣದ ಪಾತ್ರೆಗಳನ್ನು ಅಶುಭ ಎಂಬ ನಂಬಲಾಗಿದೆ. ಧಾರ್ಮಿಕ ಮತ್ತು ಜ್ಯೋತಿಷ್ಯ ಕಾರಣಗಳು ಇದಕ್ಕಿವೆ. ಕಬ್ಬಿಣ ರಾಹು ಗ್ರಹಕ್ಕೆ ಸಂಬಂಧಿಸಿದೆ. ರಾಹುವಿನ ದುಷ್ಪರಿಣಾಮಗಳ ಹೆಚ್ಚಳದಿಂದಾಗಿ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ರಾಹು ಹಾವಿನ ಸಂಕೇತವೆಂದು ಪರಿಗಣಿಸಲ್ಪಡುವ ಗ್ರಹವಾಗಿದೆ. ನಾಗಪಂಚಮಿಯ, ನಾಗ ದೇವರುಗಳ ದಿನವಾಗಿದ್ದು, ಈ ದಿನದಂದು ಜನರು ರಾಹು ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ಬಳಸಬಾರದು.
ನಾಗಪಂಚಮಿ ಧಾರ್ಮಿಕ ದೃಷ್ಟಿಯಿಂದ ಪವಿತ್ರವಾಗಿದೆ. ಜಾನಪದ ಸಂಪ್ರದಾಯಗಳ ಪ್ರಕಾರ, ಇದು ಶಾಂತಿಯ ದಿನ. ಈ ದಿನದಂದು ಜನರು ತಮ್ಮ ಜೀವನದ ಮೇಲೆ ಗ್ರಹಗಳ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಈ ಕಾರಣಕ್ಕಾಗಿಯೇ ಇಂದಿಗೂ ಅನೇಕ ಜನರು ನಾಗಪಂಚಮಿಯ ದಿನದಂದು ಕಬ್ಬಿಣದ ಬಾಣಲೆಯಲ್ಲಿ ರೊಟ್ಟಿ ಬೇಯಿಸುವುದಿಲ್ಲ. ಏಕೆಂದರೆ ಇದು ರಾಹುವಿಗೆ ಸಂಬಂಧಿಸಿದ ವಸ್ತುವಾಗಿದೆ. ಈ ದಿನ ಮಹಿಳೆಯರು ಕಬ್ಬಿಣದಿಂದ ಮಾಡಿದ ಯಾವುದೇ ವಸ್ತು ಬಳಸಬೇಡಿ. ಜೇಡಿಮಣ್ಣು ಅಥವಾ ತಾಮ್ರದಿಂದ ಮಾಡಿದ ವಸ್ತುಗಳಲ್ಲಿ ಅಡುಗೆ ಮಾಡಿ.
ರಾಹುವಿನ ಜೊತೆಗೆ ಕಬ್ಬಿಣ ಶನಿ ಜೊತೆಯೂ ಸಂಬಂಧ ಹೊಂದಿದೆ. ರಾಹು ಶನಿಯ ಪ್ರಭಾವದಲ್ಲಿದ್ದಾಗ, ಅದು ಅನೇಕ ರೀತಿಯ ಸಮಸ್ಯೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಶುದ್ಧತೆ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು, ಜನರು ನಾಗಪಂಚಮಿಯಂದು ಕಬ್ಬಿಣವನ್ನು ಬಳಸುವುದಿಲ್ಲ.
ತಪ್ಪಾಗಿ ಕಬ್ಬಿಣದ ವಸ್ತು ಬಳಸಿದ್ರೆ ಏನು ಮಾಡಬೇಕು? : ಕೆಲವರು ಗೊತ್ತಿಲ್ಲದೆ ಮತ್ತೆ ಕೆಲವರು ಅನಿವಾರ್ಯ ಕಾರಣಕ್ಕೆ ಕಬ್ಬಿಣದ ವಸ್ತುಗಳನ್ನು ಬಳಸಿರುತ್ತಾರೆ. ಒಂದ್ವೇಳೆ ನೀವೂ ಕಬ್ಬಿಣದ ವಸ್ತು ಬಳಕೆ ಮಾಡಿದ್ದರೆ ನಾಗರಾಜನ ಕ್ಷಮೆ ಕೇಳಬೇಕು. ಸಂಜೆ ನಾಗ ಸ್ತೋತ್ರ ಅಥವಾ ಓಂ ನಮಃ ನಾಗದೇವತಾಯ ಮಂತ್ರವನ್ನು ನೀವು ಪಠಿಸಬೇಕು. ಇದ್ರಿಂದ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ನಾಗರ ಪಂಚಮಿ ದಿನ ಈ ಕೆಲ್ಸವನ್ನೂ ಮಾಡ್ಬೇಡಿ :
• ನಾಗರ ಪಂಚಮಿ ದಿನ ಭೂಮಿ ಹೂಳುವ ಅಥವಾ ಅಗೆಯುವ ಕೆಲ್ಸ ಮಾಡಬೇಡಿ. ಭೂಮಿ ಅಡಿಯಲ್ಲಿ ಹಾವು ಆಶ್ರಯ ಪಡೆದಿರುತ್ತದೆ. ನೀವು ಅಗೆದಾಗ ಅಥವಾ ನೇಗಿಲು ಬಳಸಿದಾಗ ಅದಕ್ಕೆ ಗಾಯವಾಗುವ ಸಾಧ್ಯತೆ ಇರುತ್ತದೆ.
• ಈ ದಿನ ಹಾವಿನ ಯಾವುದೇ ರೂಪಕ್ಕೆ ನೀವು ತೊಂದ್ರೆ ನೀಡ್ಬಾರದು. ಇದ್ರಿಂದ ನಾಗದೋಷ ನಿಮಗೆ ಕಾಡಬಹುದು.
• ಈ ದಿನ ಚೂಪಾದ ವಸ್ತುಗಳನ್ನು ಕೂಡ ಬಳಸಬೇಡಿ. ಹೊಲಿಗೆ, ನೆಯ್ಗೆಯಂತ ಕೆಲ್ಸವನ್ನು ಮಾಡಬಾರದು.
ನಾಗರ ಪಂಚಮಿ ದಿನ ಪೂಜೆ : ಬೆಳಿಗ್ಗೆ ಬೇಗ ಎದ್ದು, ನಿತ್ಯ ಕರ್ಮ ಮುಗಿಸಿ, ಸ್ನಾನ ಮಾಡಿ ನಾಗ ದೇವರಿಗೆ ಪೂಜೆ ಮಾಡಬೇಕು. ಹೂ, ಹಾಲಿನ ಅಭಿಷೇಕ ಮಾಡಿ, ಸಿಹಿಯನ್ನು ಅರ್ಪಿಸಬೇಕು. ಕಾಲಸರ್ಪ ದೋಷ ಇರುವವರು ನಾಗ ದೇವರ ಪೂಜೆಯನ್ನು ಅವಶ್ಯಕವಾಗಿ ಮಾಡ್ಬೇಕು.