2500 ವರ್ಷಗಳ ಹಿಂದಿನ ಸಂಸ್ಕೃತದ ಒಗಟು ಬಿಡಿಸಿದ ಮುಂಬೈ ಯುವಕ!

By Suvarna News  |  First Published Dec 22, 2022, 12:31 PM IST

5ನೇ ಶತಮಾನದಿಂದಲೂ ಉತ್ತರವಿಲ್ಲದ ಒಗಟಾಗಿಯೇ ಉಳಿದಿದ್ದ ಸಂಸ್ಕೃತದ ಒಗಟೊಂದನ್ನು ಕಡೆಗೂ ಭಾರತೀಯ ಮೂಲದ ಕೇಂಬ್ರಿಡ್ಜ್ ವಿದ್ಯಾರ್ಥಿ ಬಿಡಿಸುವ ಮೂಲಕ ದಾಖಲೆ ಮಾಡಿದ್ದಾರೆ. 


ಕೇಂಬ್ರಿಡ್ಜ್‌ನ ಸೇಂಟ್ ಜಾನ್ಸ್ ಕಾಲೇಜಿನ ಪಿಎಚ್‌ಡಿ ವಿದ್ವಾಂಸ ರಿಷಿ ಅತುಲ್ ರಾಜ್‌ಪೋಪಟ್ (27), 5ನೇ ಶತಮಾನದ ವಿದ್ವಾಂಸ ಮತ್ತು ಭಾಷಾಶಾಸ್ತ್ರಜ್ಞ ಪಾಣಿನಿ ಬರೆದ ಪ್ರಾಚೀನ ಸಂಸ್ಕೃತ ಪಠ್ಯಗಳಲ್ಲಿನ 2,500 ವರ್ಷಗಳ ಹಳೆಯ ವ್ಯಾಕರಣ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಈಗ ಪಾಣಿನಿಯ ವ್ಯಾಕರಣವನ್ನು ನಡೆಸುವ ಅಲ್ಗಾರಿದಮ್ ಈ ವ್ಯಾಕರಣವನ್ನು ಕಂಪ್ಯೂಟರ್‌ಗಳಿಗೆ ಸಮರ್ಥವಾಗಿ ಕಲಿಸುತ್ತದೆ ಎಂಬುದು ಅವರ ಪ್ರಗತಿಯ ಪ್ರಮುಖ ಸೂಚನೆಯಾಗಿದೆ.

ಮುಂಬೈ ಮೂಲದ ರಾಜ್‌ಪೋಪಾಟ್ ಅವರ ಪಿಎಚ್‌ಡಿ ಪ್ರಬಂಧವು ಅಪೊಲೊ - ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ ರೆಪೊಸಿಟರಿಯಲ್ಲಿ ಪ್ರಕಟವಾಗಿದೆ ಮತ್ತು 'ಇನ್ ಪಾನಿನಿ ವಿ ಟ್ರಸ್ಟ್: ಡಿಸ್ಕವರಿಂಗ್ ದಿ ಅಲ್ಗಾರಿದಮ್ ಫಾರ್ ರೂಲ್ ಕಾನ್‌ಫ್ಲಿಕ್ಟ್ ರೆಸಲ್ಯೂಷನ್ ಇನ್ ದಿ ಅಷ್ಟಾಧ್ಯದಿ' ಎಂಬ ಶೀರ್ಷಿಕೆಯಡಿಯಲ್ಲಿ, ಎರಡೂವರೆ ಸಾವಿರ ವರ್ಷಗಳ ಹಿಂದಿನ ಒಗಟನ್ನು ಡಿಕೋಡ್ ಮಾಡಿದೆ. ಇದರಿಂದ ಮೊದಲ ಬಾರಿಗೆ ಪಾಣಿನಿಯ 'ಭಾಷಾ ಯಂತ್ರ'ವನ್ನು ಅವನ ಪ್ರಸಿದ್ಧ ಅಷ್ಟಾಧ್ಯಾಯಿಯಲ್ಲಿ ನಿಖರವಾಗಿ ಬಳಸಲು ಸಾಧ್ಯವಾಗಿಸಿದೆ.

Tap to resize

Latest Videos

ಪಾಣಿನಿಯ ಅಷ್ಟಾಧ್ಯಾಯಿಯು ಸಂಸ್ಕೃತದ ರಚನೆಯನ್ನು ವಿವರಿಸುವ ಸುಮಾರು 4,000 ನಿಯಮಗಳನ್ನು (ಸೂತ್ರಗಳು) ಹೊಂದಿದೆ. ಸಾಮಾನ್ಯವಾಗಿ, ಪಾಣಿನಿಯ ಎರಡು ಅಥವಾ ಹೆಚ್ಚಿನ ನಿಯಮಗಳು ಒಂದೇ ಹಂತದಲ್ಲಿ ಏಕಕಾಲದಲ್ಲಿ ಅನ್ವಯಿಸುತ್ತವೆ, ವಿದ್ವಾಂಸರು ಯಾವುದನ್ನು ಆಯ್ಕೆ ಮಾಡಬೇಕೆಂದು ಸಂಕಟಪಡುತ್ತಾರೆ. ಇದಕ್ಕೆ ಇದುವರೆಗೂ ವ್ಯಾಕರಣವನ್ನು ತಪ್ಪಾಗಿ ಅರ್ಥೈಸುತ್ತಿದ್ದುದೇ ಕಾರಣವಾಗಿತ್ತು.

Vastu Tips: ಈ ಸಸ್ಯ ಮನೆಗೆ ತಂದ್ರೆ ವರ್ಷಗಳಿಂದ ಆಗದ ಮದುವೆ ಕೂಡಾ ಸೆಟಲ್ ಆಗುತ್ತೆ!

ಆದರೆ ಇದೀಗ ಅತುಲ್ ಅವರು 2500 ವರ್ಷಗಳ ಹಿಂದಿನ ಒಗಟು ಬಿಡಿಸಿರುವುದರಿಂದ 'ನಿಯಮ ಸಂಘರ್ಷ'ದ ಸಂದರ್ಭದಲ್ಲಿ ಯಾವ ನಿಯಮವನ್ನು ಅನ್ವಯಿಸಬೇಕು ಎಂಬುದನ್ನು ನಿರ್ಧರಿಸಲು ಸಹಾಯವಾಗುತ್ತದೆ. ರಾಜ್‌ಪೋಪಾಟ್‌ರ ಸಂಶೋಧನೆಯಿಂದಾಗಿ ಈಗ ಪಾಣಿನಿಯ ವ್ಯಾಕರಣವನ್ನು ಮೊದಲ ಬಾರಿಗೆ ಕಂಪ್ಯೂಟರ್‌ಗಳಿಗೆ ಅನ್ವಯಿಸಬಹುದಾಗಿದೆ. 

5ನೇ ಶತಮಾನದಿಂದಲೂ ಹಲವಾರು ಭಾಷಾ ವಿದ್ವಾಂಸರು ಪಾಣಿನಿಯ ಈ ಪಠ್ಯಗಳಲ್ಲಿನ ವ್ಯಾಕರಣ ಒಗಟು ಬಿಡಿಸಲು ಇನ್ನಿಲ್ಲದಷ್ಟು ಒದ್ದಾಡಿ ಸೋಲೊಪ್ಪಿಕೊಂಡಿದ್ದರು. ಆದರೆ, ಇದೀಗ ಎಲ್ಲೆಡೆ ಸಂಸ್ಕೃತ ಎಂಬುದು ಪಳೆಯುಳಿಕೆಯಂತಾಗಿರುವ ಸಂದರ್ಭದಲ್ಲಿ ಭಾರತೀಯ ಯುವ ವಿದ್ಯಾರ್ಥಿಯೊಬ್ಬರು ಈ ಕ್ಲಿಷ್ಟ ಒಗಟನ್ನು ಬಿಡಿಸಿರುವುದು ಬಹು ದೊಡ್ಡ ಸಾಧನೆಯಾಗಿದೆ. 

Vastu Tips : ಕ್ರಿಸ್ಮಸ್ ಹಬ್ಬದಲ್ಲಿ ಅದೃಷ್ಟ ತರುವ ಈ ಉಡುಗೊರೆ ನೀಡಿ

ರಾಜ್‌ಪೋಪಾಟ್‌ನ ಆವಿಷ್ಕಾರವು ಪಾಣಿನಿಯ ಪೂಜ್ಯ ಭಾಷಾ ಯಂತ್ರವನ್ನು ಬಳಸಿ, ಲಕ್ಷಾಂತರ ವ್ಯಾಕರಣದ ಸರಿಯಾದ ಪದಗಳನ್ನು ಪಡೆಯಲು ಸಾಧ್ಯವಾಗಿಸುತ್ತದೆ. ಇದನ್ನು ಇತಿಹಾಸದಲ್ಲಿ ಶ್ರೇಷ್ಠ ಬೌದ್ಧಿಕ ಸಾಧನೆಗಳಲ್ಲಿ ಒಂದೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

click me!