
ಪ್ರಯಾಗ್‌ರಾಜ್(ಫೆ.02) ಮಹಾಕುಂಭ ಮೇಳಕ್ಕೆ ತೆರಳುವ ಭಕ್ತರ ಸಂಖ್ಯೆ ದಿನೇ ದಿನ ಹೆಚ್ಚಾಗುತ್ತಿದೆ. ಇದೀಗ ಬಸಂತ ಪಂಚಮಿ ವಿಶೇಷ ದಿನ ಪುಣ್ಯ ಸ್ನಾನ ಮಾಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಗರಾಜ್‌ಗೆ ತೆರಳುತ್ತಿದ್ದಾರೆ. ಇತ್ತ ಭಾರತೀಯ ರೈಲ್ವೇ ವಿಶೇಷ ರೈಲುಗಳನ್ನು ಘೋಷಿಸಿದೆ. ಇದರ ನಡುವೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರಿ ಮಹತ್ವದ ಘೋಷಣೆ ಮಾಡಿದೆ. ಮಹಾಕುಂಭ ಮೇಳ ಭಕ್ತರಿಗೆ ಉಚಿತ ಪ್ರಯಾಣ, ಉಚಿತ ಊಟ ಹಾಗೂ ಉಚಿತ ಔಷಧಿಗಳ ತೀರ್ಥ ಯಾತ್ರಿ ಸೇವಾ ಯೋಜನೆ ಘೋಷಣೆ ಮಾಡಿದೆ. ಈ ಯೋಜನೆ ಈಗಾಗಲೇ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಆರಂಭಗೊಂಡಿದೆ.
ರಿಲಯನ್ಸ್ ಕಂಪನಿಯ ವಿ ಕೇರ್ ಪರಿಕಲ್ಪನೆಯ ಅಡಿಯಲ್ಲಿ ಇದೀಗ ಮಹಾಕುಂಭ ಮೇಳದ ಭಕ್ತರಿಗೆ ಸೇವೆ ನೀಡಲು ರಿಲಯನ್ಸ್ ಮುಂದಾಗಿದೆ. ಈ ಕುರಿತು ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರಿ ನಿರ್ದೇಶಕ ಅನಂತ್ ಅಂಬಾನಿ, ಮಹಾಕುಂಭ ಮೇಳದಲ್ಲಿ ಭಕ್ತರಿಗೆ ಸಣ್ಣ ಸೇವೆ ನೀಡುವ ಅವಕಾಶ ಒದಗಿ ಬಂದಿರುವುದು ನಮ್ಮ ಸೌಭಾಗ್ಯ ಎಂದಿದ್ದಾರೆ. ಭಕ್ತರ ಆಧ್ಯಾತ್ಮಿಕತೆಯಲ್ಲಿ ರಿಲಯನ್ಸ್ ಸಣ್ಣ ಕೊಡುಗೆ ನೀಡುತ್ತಿದೆ. ಮಹಾಕುಂಭ ಮೇಳದ ಆಶೀರ್ವಾದದೊಂದಿಗೆ ಈ ಸೇವೆ ಆರಂಭಿಸಲಾಗಿದೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.
ಕುಂಭಮೇಳದ ವೈರಲ್ ಬೆಡಗಿ ಮೊನಾಲಿಸಾ ಮೊದಲ ಬಾಲಿವುಡ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು?
ಮಹಾಕುಂಭ ಮೇಳ ಅತೀ ದೊಡ್ಡ ಹಿಂದೂ ಧರ್ಮದ ಆಧ್ಯಾತ್ಮಿಕ ಹಬ್ಬ. ಈ ಪುಣ್ಯ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರಿ, ಇಲ್ಲಿಗೆ ಆಗಮಿಸುತ್ತಿರುವ ಕೋಟ್ಯಾಂತರ ಭಕ್ತರ ಆರೋಗ್ಯ, ಸುರಕ್ಷತೆ, ಪ್ರಯಾಣ, ಆಹಾರ ಕುರಿತು ಕಾಳಜಿ ವಹಿಸಲಿದೆ. ಈ ಮೂಲಕ ಭಕ್ತರ ಆಧ್ಯಾತ್ಮಿಕ ಪ್ರಯಾಣ ಸುಗಮವಾಗಿಸಲು ರಿಲಯನ್ಸ್ ನೆರವಾಗಲಿದೆ ಎಂದಿದ್ದಾರೆ.
ಮಹಾಕುಂಭ ಮೇಳಕ್ಕೆ ಆಗಮಿಸವ ಭಕ್ತರಿಗೆ ಪ್ರಯಾಣದ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಮಹಾಕುಂಭ ಮೇಳದ ಭಕ್ತರಿಗೆ ಬಿಸಿ ಬಿಸಿ ಊಟ, ನೀರು ನೀಡುತ್ತಿದೆ. ರಿಲಯನ್ಸ್ ಅನ್ನ ಸೇವಾ ಯೋಜನೆಯಡಿ ಈ ಸೌಲಭ್ಯ ಒದಗಿಸಲಾಗಿದೆ. ರಿಲಯನ್ಸ್ ಸ್ವಯಂ ಸೇವಕರು ಮಹಾಕುಂಭ ಮೇಳದಲ್ಲಿ ಅಖರ, ಸಾಧು ಸಂತರು, ಭಕ್ತರಿಗೆ ಉಚಿತ ಆಹಾರ ತಲುಪಿಸುತ್ತಿದ್ದಾರೆ. ಇತ್ತ ರಿಲಯನ್ಸ್ ಆರೋಗ್ಯ ಸುವಿಧಾ ಯೋಜನೆ ಮೂಲಕ ಉಚಿತ ಆರೋಗ್ಯ ಕಾಳಜಿ ವಹಿಸುತ್ತಿದೆ. ಪುರುಷ ಹಾಗೂ ಮಹಿಳಾ ಪ್ರತ್ಯೇಕ ಒಪಿಡಿ ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ವೇಳೆ ಮಹಿಳಾ ಭಕ್ತರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ಸ್ ಸೇರಿದಂತೆ ಹಲವು ಸೌಲಭ್ಯ ನೀಡಲಾಗುತ್ತಿದೆ.
ವಿದೇಶಿ ಭಕ್ತರಿಂದ ಮೆಚ್ಚುಗೆ
ಮಹಾಕುಂಭ 2025ರ ಅದ್ದೂರಿತನ ಮತ್ತು ಅಚ್ಚುಕಟ್ಟಾದ ನಿರ್ವಹಣೆ ವಿದೇಶಿ ಯಾತ್ರಿಕರನ್ನು ಬೆರಗುಗೊಳಿಸಿದೆ. ಉತ್ತರ ಪ್ರದೇಶದ ಯೋಗಿ ಸರ್ಕಾರ ಮಾಡಿದ ಅನುಕರಣೀಯ ವ್ಯವಸ್ಥೆಗಳು ವ್ಯಾಪಕ ಮೆಚ್ಚುಗೆಯನ್ನು ಪಡೆದಿವೆ. ಪವಿತ್ರ ಸಂಗಮದಲ್ಲಿ ಅಂತರರಾಷ್ಟ್ರೀಯ ಭಕ್ತರು ಉತ್ತಮವಾಗಿ ಯೋಜಿತ ಮೂಲಸೌಕರ್ಯ ಮತ್ತು ಅಚ್ಚುಕಟ್ಟಾದ ಜನಸಂದಣಿ ನಿರ್ವಹಣೆಯನ್ನು ಶ್ಲಾಘಿಸಿದ್ದಾರೆ. ಅಮೆರಿಕದ ಹವಾಯಿಯ ಯಾತ್ರಿಕರೊಬ್ಬರು, "ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಈ ಆಧ್ಯಾತ್ಮಿಕ ಸಂಗಮಕ್ಕೆ ಒಟ್ಟುಗೂಡಿರುವುದು ಊಹೆಗೂ ಮೀರಿದ್ದು. ಅಪಾರ ಸಂಖ್ಯೆಯ ಜನರು ಮತ್ತು ಮೂಲಸೌಕರ್ಯಗಳನ್ನು ನೋಡಿದರೆ, ಸರ್ಕಾರ ಎಲ್ಲವನ್ನೂ ಎಷ್ಟು ಸುಗಮವಾಗಿ ನಿರ್ವಹಿಸುತ್ತಿದೆ ಎಂಬುದು ಅದ್ಭುತ" ಎಂದು ಹೇಳಿದರು. ಭಕ್ತರಲ್ಲಿನ ಸಹಕಾರ ಮನೋಭಾವವು ಈ ಕಾರ್ಯಕ್ರಮದ ಗಮನಾರ್ಹ ಲಕ್ಷಣವಾಗಿದೆ, ಜನರು ಪರಸ್ಪರ ಸಕ್ರಿಯವಾಗಿ ಸಹಾಯ ಮಾಡುತ್ತಿದ್ದಾರೆ. ಅಮೆರಿಕದ ಫ್ಲೋರಿಡಾದ ಮರಿಯಾ, 12 ವರ್ಷಗಳ ಹಿಂದೆ ಕುಂಭಮೇಳಕ್ಕೆ ಭೇಟಿ ನೀಡಿದ್ದರು, ಮತ್ತು ಆ ಅನುಭವ ಅವರ ಮೇಲೆ ಎಷ್ಟು ಆಳವಾದ ಪ್ರಭಾವ ಬೀರಿತು ಎಂದರೆ ಅವರು ಮತ್ತೆ ಅದನ್ನು ನೋಡಲು ಬಂದಿದ್ದಾರೆ. "ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ಅನುಭವ. ನಾನು ಕಳೆದ 26 ವರ್ಷಗಳಿಂದ ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ, ಮತ್ತು ನಾನು ಅದರ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಪೊಲೀಸರು ಜನಸಂದಣಿಯನ್ನು ನಿರ್ವಹಿಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ" ಎಂದು ಅವರು ಹೇಳಿದರು.
ಮಹಾಕುಂಭಮೇಳ: ಬಡವರಿಗೆ ಭಕ್ತಿಯಂತೆ, ಶ್ರೀಮಂತರಿಗೆ ಮುಕ್ತಿಯ ಚಿಂತೆ..!