ಯೂಟ್ಯೂಬಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾದ ಭಾರತದ ವಿಡಿಯೋ ಯಾವ್ದು ಗೊತ್ತಾ?

Published : Mar 14, 2023, 04:42 PM IST
ಯೂಟ್ಯೂಬಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾದ ಭಾರತದ ವಿಡಿಯೋ ಯಾವ್ದು ಗೊತ್ತಾ?

ಸಾರಾಂಶ

ಯೂಟ್ಯೂಬ್‌ನಲ್ಲಿ ವೈರಲ್ ಆದ ವಿಡಿಯೋಗಳೆಲ್ಲ ಹೆಚ್ಚು ವೀಕ್ಷಣೆಗೊಳಗಾಗುವುದಿಲ್ಲ. ಸಾಮಾನ್ಯವಾಗಿ ಚಲನಚಿತ್ರದ ಹಾಡುಗಳು, ದೃಶ್ಯಗಳು ಮತ್ತೆ ಮತ್ತೆ ಪ್ಲೇ ಆಗುತ್ತವೆ. ಬಿಟ್ಟರೆ ಪಡ್ಡೆಗಳಿಗಿಷ್ಟವಾಗುವ ವಿಡಿಯೋಗಳು ಓಡಬಹುದು. ಆದರೆ, ಅವೆಲ್ಲವುಗಳ ನಡುವೆಯೂ ಅತಿ ಹೆಚ್ಚು ಬಾರಿ ವೀಕ್ಷಣೆಗೊಳಗಾದ ವಿಡಿಯೋವಾಗಿ ಹೊರಹೊಮ್ಮಿದ್ದು ಒಂದು ಭಕ್ತಿ ಗೀತೆ ಎಂಬುದು ಅಚ್ಚರಿಯ ಹಾಗೂ ಅಷ್ಟೇ ಸಮಾಧಾನದ ಸಂಗತಿ.

ಯೂಟ್ಯೂಬೆಂಬುದು ದೊಡ್ಡ ಸಮುದ್ರ. ಅಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ಅಪ್‌ಲೋಡ್ ಆಗುತ್ತಲೇ ಇರುತ್ತವೆ. ಅದರಲ್ಲಿ ಕೆಲವು ವೈರಲ್ ಆಗುತ್ತವೆ. ಆದರೆ, ಅವುಗಳ ಆಯಸ್ಸು ಕಡಿಮೆಯೇ. ಕೆಲವೊಂದು ಮಾತ್ರ ಯಾವಾಗಲೂ ಪ್ಲೇ ಕಾಣುತ್ತಾ ಸಾರ್ವಕಾಲಿಕ ಜನಪ್ರಿಯತೆ ಹೊಂದಿರುತ್ತವೆ. 

ಸಾಮಾನ್ಯವಾಗಿ ಚಲನಚಿತ್ರದ ಹಾಡುಗಳು, ದೃಶ್ಯಗಳು ಮತ್ತೆ ಮತ್ತೆ ಪ್ಲೇ ಆಗುತ್ತವೆ. ಬಿಟ್ಟರೆ ಪಡ್ಡೆಗಳಿಗಿಷ್ಟವಾಗುವ ವಿಡಿಯೋಗಳು ಓಡಬಹುದು. ಇದಲ್ಲದೆ ಫನ್ನಿ ವಿಡಿಯೋಗಳು, ಅಡುಗೆ ರೆಸಿಪಿಗಳು ಇತ್ಯಾದಿ ಹೆಚ್ಚು ಪ್ಲೇ ಕಾಣುತ್ತಿರುತ್ತವೆ. ಆದರೆ, ಇಷ್ಟೆಲ್ಲರ ನಡುವೆ ಭಾರತದಲ್ಲಿ ಅತಿ ಹೆಚ್ಚು ಬಾರಿ ವೀಕ್ಷಣೆಗೊಳಗಾಗಿ ದಾಖಲೆ ಮಾಡಿದ ವಿಡಿಯೋ ಭಕ್ತಿ ಗೀತೆ ಎಂಬುದು ಎಷ್ಟು ಅಚ್ಚರಿಯ ವಿಷಯವೋ, ಅಷ್ಟೇ ಸಮಾಧಾನಕರ ಸಂಗತಿ ಕೂಡಾ.

ಹನುಮಾನ್ ಚಾಲೀಸಾ
ಹೌದು, ಗುಲ್ಶನ್ ಕುಮಾರ್ ಅವರ ‘ಶ್ರೀ ಹನುಮಾನ್ ಚಾಲೀಸಾ’ ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಪ್ಲೇ ಆಗುವ ಹಾಡಾಗಿದೆ. ಇದು  3 ಬಿಲಿಯನ್ ವೀಕ್ಷಣೆಗಳನ್ನು ದಾಟುವ ಮೂಲಕ ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದಿದೆ! ಈ ಮೂಲಕ ಯುಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಿಸಿದ ವೀಡಿಯೊ ಟಿ-ಸೀರೀಸ್‌ನ ಹನುಮಾನ್ ಚಾಲೀಸಾ ಆಗಿದೆ.

Baby Boy names: ಗಂಡು ಮಗುವಿಗೆ ಹೆಸರು ಹುಡುಕುತ್ತಿದ್ದೀರಾ? ಆಂಜನೇಯನ ಈ ಅನನ್ಯ ಹೆಸರಿಡಬಹುದು ನೋಡಿ..

ಗುಲ್ಶನ್ ಕುಮಾರ್ ಅವರ ಹನುಮಾನ್ ಚಾಲೀಸಾ ಯೂಟ್ಯೂಬ್‌ನಲ್ಲಿ 3 ಬಿಲಿಯನ್ ವೀಕ್ಷಣೆಗಳನ್ನು ದಾಟಿದ ಮೊದಲ ಭಾರತೀಯ ವೀಡಿಯೊವಾಗಿದೆ! ಈ ಹಿಂದೆ ಅಕ್ಟೋಬರ್ 2021ರಲ್ಲಿ, ಗುಲ್ಶನ್ ಕುಮಾರ್ ಅವರ ಹನುಮಾನ್ ಚಾಲೀಸಾ ಯೂಟ್ಯೂಬ್‌ನಲ್ಲಿ 2 ಬಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. ಅದನ್ನೇ ಕೊಂಡಾಡಿದ ನಿರ್ಮಾಪಕರು ಭೂಷಣ್ ಕುಮಾರ್ ಅವರ ತಾಯಿ, ಕ್ರಿಶನ್ ಕುಮಾರ್, ತುಳಸಿ ಕುಮಾರ್ ಮತ್ತು ಖುಶಾಲಿ ಕುಮಾರ್ ಅವರೊಂದಿಗೆ ಔತಣಕೂಟ  ಆಯೋಜಿಸಿದ್ದರು. 

2021 ರಲ್ಲಿ, ಟಿ-ಸೀರೀಸ್‌ನ ಅಧ್ಯಕ್ಷರು ಮತ್ತು ಎಂಡಿ ಅವರು ತಮ್ಮ ತಂದೆಯ ಹನುಮಾನ್ ಚಾಲೀಸಾ 2 ಬಿಲಿಯನ್ ವೀಕ್ಷಣೆಯ ಗಡಿಯನ್ನು ದಾಟಿದ ಗೌರವಾರ್ಥವಾಗಿ ಆರತಿಯನ್ನು ಆಯೋಜಿಸಿದರು. ಅದರ ನಂತರ ಅವರ ನಿರ್ಮಾಪಕ ಮತ್ತು ನಿರ್ದೇಶಕ ಸ್ನೇಹಿತರು ಮತ್ತು ಇಡೀ ಟಿ-ಸೀರೀಸ್ ಕುಟುಂಬಕ್ಕಾಗಿ ಔತಣಕೂಟ ಆಯೋಜಿಸಲಾಗಿತ್ತು. 

3 ಶತಕೋಟಿ ದಾಟಿದ ವೀಕ್ಷಣೆ
ಇದೀಗ ಈ ಮ್ಯೂಸಿಕ್ ವೀಡಿಯೊ ಯೂಟ್ಯೂಬ್‌ನಲ್ಲಿ 3 ಬಿಲಿಯನ್ ವೀಕ್ಷಣೆಗಳನ್ನು ದಾಟಿದೆ, ಇದು ಯೂಟ್ಯೂಬ್‌ನಲ್ಲಿ ಭಾರತದ ಅತಿ ಹೆಚ್ಚು ವೀಕ್ಷಣೆಗಳ ವೀಡಿಯೊವಾಗಿದೆ! ಈ ವಿಡಿಯೋದಲ್ಲಿ ಗಾಯಕ ಹರಿಹರನ್ ಅವರ ಮಧುರ ಕಂಠವಿದೆ. 9:41 ನಿಮಿಷಗಳ ವೀಡಿಯೊ ತುಳಸಿದಾಸರ ಹಿಂದೂ ಭಕ್ತಿ ಗೀತೆಯ ಅತ್ಯಂತ ಜನಪ್ರಿಯ ಆವೃತ್ತಿಯಾಗಿದೆ, ಇದು ಪ್ರಪಂಚದಾದ್ಯಂತದ ಭಕ್ತರಿಗೆ ಪರಿಚಿತವಾಗಿರುವ ಭಗವಾನ್ ಹನುಮಂತನಿಗೆ ಸಮರ್ಪಿತವಾಗಿದೆ.

ಆಂಜನೇಯನ ಅವತಾರ ನೀಮ್ ಕರೋಲಿ ಬಾಬಾ ಕುರಿತ ಆಸಕ್ತಿಕರ ಸಂಗತಿಗಳು..

ಈ ಬಗ್ಗೆ ಟಿ-ಸೀರೀಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಲಾಗಿದೆ. 'ಹನುಮಾನ್ ಚಾಲೀಸಾದ ಭಕ್ತಿ ಸಂಗೀತವು 3 ಬಿಲಿಯನ್ ಹೃದಯಗಳಲ್ಲಿ ಮನೆ ಮಾಡಿದ್ದರಿಂದ ಸಂಭ್ರಮಾಚರಣೆಗಳು ಪ್ರಾರಂಭವಾಗಿವೆ. ಯೂಟ್ಯೂಬ್‌ನಲ್ಲಿ 3 ಬಿಲಿಯನ್+ ವೀಕ್ಷಣೆಗಳನ್ನು ಗಳಿಸಿದ ಮೊದಲ ಭಾರತೀಯ ವೀಡಿಯೊವನ್ನಾಗಿ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು!' ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಭಾರತದಲ್ಲಿ, 3.3 ಬಿಲಿಯನ್ ವೀಕ್ಷಣೆಗಳೊಂದಿಗೆ ಶಿಶು ಗೀತೆ 'ಲಕಡಿ ಕಿ ಕಾಟಿ' ಎರಡನೇ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊವಾಗಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?