Powerful Zodiac Signs: ಕನ್ನಡತಿಯ ಭುವಿ ಪಾತ್ರದಂತೋರು ಯಾವ ರಾಶಿಯಲ್ಲಿ ಹುಟ್ಟಿರುತ್ತಾರೆ ಗೊತ್ತಾ?

By Suvarna NewsFirst Published Feb 27, 2022, 12:55 PM IST
Highlights

ಕೆಲವು ರಾಶಿಯವರ ವ್ಯಕ್ತಿತ್ವ ಅವರು ಹುಟ್ಟಿರುವ ರಾಶಿ, ನಕ್ಷತ್ರಗಳ ಮೇಲೆ ಡಿಪೆಂಡ್ ಆಗಿರುತ್ತೆ ಅಂತ ಎಲ್ಲರಿಗೂ ಗೊತ್ತು. ಅವರು ಮುಖದಲ್ಲಿ ವರ್ಚಸ್ಸು, ತೋರುವ ವಿಶ್ವಾಸ ಎಲ್ಲವೂ ಎಂಥವರನ್ನೂ ಆಕರ್ಷಿಸಿ ಬಿಡುತ್ತದೆ. ಆ ವಿಶ್ವಾಸವೇ ಅವರು ಇಡುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಪ್ರತಿಫಲಿತವಾಗುತ್ತದೆ. ಅಷ್ಟೇ ಅಲ್ಲ, ಮಾಡುವ ಪ್ರತಿಯೊಂದೂ ಕೆಲಸದಲ್ಲಿಯೂ ಯಶಸ್ಸು ಅವರದ್ದಾಗಿರುತ್ತದೆ. ಅಷ್ಟಕ್ಕೂ ಯಾವ ರಾಶಿಯವರಿಗೆ ಇಂಥ ಗುಣವಿರುತ್ತದೆ? 

ಕೆಲವರಿಗೆ ಸಿಟ್ಟು (Anger), ಮತ್ತೆ ಕೆಲವರು ಎಂಥದ್ದೇ ಸಂದರ್ಭ ಬಂದರೂ ತಾಳ್ಮೆ (Patience) ಕಳೆದು ಕೊಳ್ಳುವುದಿಲ್ಲ. ವಿನಮ್ರತೆ, ದಯಾ (Compassion) ಗುಣಗಳು ಕೆಲವರಿಗೆ ಹುಟ್ಟಿನಿಂದಲೇ ಬಂದಿರುತ್ತೆ. ಅವರೆಲ್ಲಾ ಒಂಥರಾ ಸೀರಿಯಲ್‌ಗಳಲ್ಲಿ ತೋರಿಸುವ ಕೆಲವು ಪಾತ್ರಗಳಂತೆ. ಎಂಥದ್ದೇ ದೊಡ್ಡ ಸ್ಥಾನಕ್ಕೇರಿದರೂ ತಮ್ಮ ಸರಳತೆಯನ್ನು (Simplicity) ಬಿಟ್ಟು ಕೊಡುವುದಿಲ್ಲ. ಎಲ್ಲರನ್ನೂ ಗೌರವಿಸುತ್ತಾರೆ. ವಿನಮ್ರರಾಗಿಯೇ ಇರುತ್ತಾರೆ. ಮತ್ತೆ ಕೆಲವರಿಗೆ ಪರ್ಸನಾಲಟಿ ಡೆವಲಪ್ ಕೋರ್ಸ್ (Personality Development Course), ಅದು ಇದೂ ಅಂತ ತಿಪ್ಪರಲಾಗ ಹಾಕಿದರೂ ಆ ಗುಣಗಳು ಒಲಿಯೋದಿಲ್ಲ. ಆಗೆಲ್ಲ ದೊಡ್ಡವರು ಹೇಳುತ್ತಾರೆ, ಎಲ್ಲವನ್ನೂ ಪಡೆದುಕೊಂಡು ಬರಬೇಕು ಅಂತ. ಹೌದು, ರಾಶಿ, ನಕ್ಷತ್ರಗಳು ಮನುಷ್ಯನ ವ್ಯಕ್ತಿತ್ವದ ಮೇಲೆ ವಿಪರೀಪ ಪ್ರಭಾವ ಬೀರುತ್ತವೆ. ಕೆಲವರಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತೆ. ಅವರೆಡೆ ಜನರಿಗೆ ಏನೋ ಆಕರ್ಷಣೆ. ಅಷ್ಟಕ್ಕೂ ಅಂಥವರ ಸಾಮಾನ್ಯವಾಗಿ ಯಾವ ರಾಶಿಯಲ್ಲಿ ಹುಟ್ಟಿರುತ್ತಾರೆ? 

ಎಂಥದ್ದೇ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಳ್ಳದೆ, ಎಲ್ಲ ಸಂದರ್ಭಗಳನ್ನೂ ಆತ್ಮವಿಶ್ವಾಸದಿಂದ ಎದುರಿಸುವ, ಮುಖದಲ್ಲಿ ಸದಾ ವರ್ಚಸ್ಸು (Charming) ಇರೋ, ಬಡವರು, ದೀನ ದಲಿತರು ಎಂದು ದಯೆ ತೋರುವ ಕೆಲವೇ ಕೆಲವರು ನೋಡಲು ಸಿಗುತ್ತಾರೆ. ತೋರ್ಪಡಿಕೆಗೆ ಇವರು ಹೀಗಿರೋಲ್ಲ. ಇವರ ರಕ್ತದಲ್ಲಿಯೇ ಇಂಥ ಗುಣಗಳು ಜನ್ಮದತ್ತವಾಗಿ ಬಂದಿರುತ್ತವೆ. ಸದಾ ಪಾಸಿಟಿವ್ ಆಗಿ ಥಿಂಕ್ (Positive Thinking) ಮಾಡೋ ಇವರ ಸುತ್ತ ಒಂದು ಪಾಸಿಟಿವ್ ಪ್ರಭಾವಲಯವೇ ಕ್ರಿಯೇಟ್ ಆಗಿfರುತ್ತೆ. ಅಪರೂಪಕ್ಕೊಮ್ಮೆ ಕಾಣ ಸಿಗುವ ಇಂಥ ವ್ಯಕ್ತಿಗಳ ಯಾವ ರಾಶಿಯಲ್ಲಿ ಹುಟ್ಟಿರ್ತಾರೆ ಗೊತ್ತಾ? 

Latest Videos

​ಸಿಂಹ (Leo)
ಕೆಲವರನ್ನು ಗಮನಿಸಿದ್ದೀರಾ? ದೊಡ್ಡ ವಾಯ್ಸ್, ಒಂದು ರೀತಿ ಡಾಮಿನೇಟ್ ಮಾಡುತ್ತಿದ್ದಾರೆ ಅನಿಸುತ್ತೆ. ಆದರೆ, ಅಷ್ಟೇ ಕೇರಿಂಗ್ ಆಗಿರುತ್ತಾರೆ. ಸಿಂಹದಂತೆಯೇ ಬದುಕುತ್ತಾರೆ. ಆದರೆ, ಹಸುವಿನಂಥ ಮಾತೃ ಹೃದಯಿಗಳಾಗಿರುತ್ತಾರೆ. ಅಂಥವರು ನಿಮ್ಮ ನಡುವೆ ಇದ್ದರೆ ಅವರು ಪಕ್ಕಾ ಸಿಂಹ ರಾಶಿಯವರೆಂದರ್ಥ. ನೋಡಲು ಅಹಂಕಾರವೇ ತುಂಬಿ ತುಳುಕುತ್ತಿದೆ ಎಂದೆನಿಸಿದರೂ, ಹೃದಯದಲ್ಲಿ ಸದಾ ತಮ್ಮವರಿಗೆ ಮಿಡಿಯುವ ಮೃದು ಮನಸ್ಸಿನವರು ಇವರು. ನಾಯಕತ್ವ ಗುಣ ಹೊಂದಿರೋ ಇವರು ಹಿಡಿದ ಕೆಲಸವನ್ನು ಜವಾಬ್ದಾರಿಯಿಂದ (Responsibility) ಮಾಡಿ ಮುಗಿಸುತ್ತಾರೆ. ಜೀವನದಲ್ಲಿ ಪದೆ ಪದೇ ಎಡವಿ ಬಿದ್ದರೂ, ಕೊಡವಿಕೊಂಡು ಮೇಲೇಳುತ್ತಾರೆ. ಅಷ್ಟೇ ಅಲ್ಲ, ತಡವಾಗಿಯಾದರೂ ಯಶಸ್ಸಿನ ಕುದುರೆ ಏರುವಲ್ಲಿ ಯಶಸ್ವಿಯಾಗೋದು ಗ್ಯಾರಂಟಿ. ಹಾಗಂತ ದುಡ್ಡು (Money),ಅಧಿಕಾರ (Power)ದ ಮದ ಇವರ ನೆತ್ತಿಗೇರಲ್ಲ. ಬದಲಾಗಿ, ಯಾವಾಗಲೂ ವಿನಮ್ರತೆ ಮತ್ತು ದಯೆಯಿಂದ ಇರುತ್ತಾರೆ. ಕೊಡುಗೈ ದಾನಿಗಳಾಗಿರುತ್ತಾರೆ. ಇನ್ನೊಬ್ಬರನ್ನು ಕೊಟ್ಟಿದ್ದನ್ನು ಜತನದಿಂದ ಕಾಪಾಡಿಕೊಳ್ಳುತ್ತಾರೆ. ಸಂಬಂಧವನ್ನು ಗಟ್ಟಿಯಾಗಿ ಕಾಪಾಡಿಕೊಳ್ಳುತ್ತಾರೆ. ಸಭ್ಯರು ಮತ್ತು ಮಾನವೀಯತೆ ಇವರಿಗೆ ಸಹಜವಾಗಿಯೇ ಒಲಿದಿರುತ್ತೆ. 

Disease And Planets: ಯಾವ ಗ್ರಹದಿಂದ ಯಾವ ರೋಗ, ನಿಮಗಿದೆಯಾ ಬಿಪಿ, ಆ್ಯಸಿಡಿಟಿ?

​ತುಲಾ (Libra)
ಈ ರಾಶಿಯವರು ಸ್ವತಃ ನಾಯಕತ್ವ (Leadership Skill) ಗುಣ ಹೊಂದಿರುವುದು ಅಷ್ಟೇ ಅಲ್ಲ, ಇನ್ನೊಬ್ಬರನ್ನೂ ನಾಯಕರನ್ನಾಗಿ ಮಾಡುವಂಥವರು. ಸೌಮ್ಯ ಸ್ವಭಾವ. ಹಾಗಂಥ ತಮ್ಮ ಮೇಲೆ ಮತ್ತೊಬ್ಬರು ದಾಳಿ ಮಾಡಿದರೂ, ಅದನ್ನು ಜಾಣ್ಮೆಯಿಂದ ಎದುರಿಸುತ್ತಾರೆ. ಒಂದು ರೀತಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗೋ ಕನ್ನಡತಿಯ (Kannadathi) ಭುವಿ ಕ್ಯಾರೆಕ್ಟರ್ ಇವರದ್ದು. ತಾವೂ ಕಲಿತು, ಬೆಳೆಯುತ್ತಾರೆ. ಮತ್ತೊಬ್ಬರನ್ನೂ ಬೆಳೆಸುತ್ತಾರೆ. ತಮ್ಮ ಸೆಲ್ಫ್ ಎಸ್ಟೀಮ್ ಕಾಪಾಡಿಕೊಳ್ಳುವುದರ ಜೊತೆಗೆ, ಮತ್ತೊಬ್ಬರ ಗೌರವವನ್ನೂ ಕಾಪಾಡುವಲ್ಲಿ ಇವರದ್ದು ಎತ್ತಿದ ಕೈ. ಸಹಾನುಭೂತಿ ಮತ್ತು ದಯೆಯಲ್ಲಿ ಎತ್ತಿದ ಕೈ. ಪ್ರಾಮಾಣಿಕರು. ಇನ್ನೊಬ್ಬರನ್ನು ಮೆಚ್ಚಿಸಲು ತಮ್ಮತನವನ್ನು ಬಲಿ ಕೊಡುವುದಿಲ್ಲ. ಹಾಗಂತೆ ಇನ್ನೊಬ್ಬರನ್ನು ಗೌರವ ಧಕ್ಕೆ ಬರದಂತೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಿಸ್ಸೀಮರು. 

Kaal Sarp Dosh: ಕಾಳ ಸರ್ಪ ದೋಷದಿಂದ ಶುಭ ಫಲ ಪ್ರಾಪ್ತಿಯೂ ಸಾಧ್ಯ!

ಕುಂಭ (Aquarius)
ಇನ್ನೊಬ್ಬರ ಕಾರ್ಯವನ್ನು ಶ್ಲಾಘಿಸುತ್ತಾರೆ, ಅವರ ಕೈ ಹಿಡಿದು ತಾವು ಬೆಳೆಯುವ ಜಾಯಮಾನವದವರು ಇವರು. ಯಾರನ್ನೂ ತುಳಿಯಲು ಇಚ್ಛಿಸುವುದಿಲ್ಲ. ತಮ್ಮ ಮೇಲೆ ಸಿಕ್ಕಾಪಟ್ಟೆ ವಿಶ್ವಾಸ ಇರುವ ಇವರು, ಇನ್ನೊಬ್ಬರ ಮೇಲೂ ಅಷ್ಟೇ ನಂಬಿಕೆ ಇಡುತ್ತಾರೆ. ಆದರೆ, ನಂಬಿಕೆಗೆ ಅರ್ಹರಲ್ಲ ಎಂದೆನಿಸಿದರೆ ಕಟ್ಟಿ ಹಾಕುವುದರಲ್ಲಿ ಇವರು ನಿಸ್ಸೀಮರು. ಮತ್ತೊಬ್ಬರ ಮನಸ್ಸು ನೋಯಿಸುವುದು ಇವರಿಗೆ ಆಗಿ ಬರೋಲ್ಲ. ಇನ್ನೊಬ್ಬರಿಗಾಗಿ ತಮ್ಮ ಸುಖವನ್ನು (Comfort Zone) ಬಲಿ ಕೊಡಲೂ ಹಿಂದು ಮುಂದು ನೋಡುವುದಿಲ್ಲ. ಒಮ್ಮೊಮ್ಮೆ ಇವರ ಪ್ರಾಮಾಣಿಕತೆ (Honesty) ಇನ್ನೊಬ್ಬರಿಗೆ ನಾಟಕ ಎನಿಸಿದರೂ ಎನಿಸಬಹುದು. ತಾವು ಇನ್ನೊಬ್ಬರಿಗೆ ಏನಾದರೂ ಕೊಟ್ಟರೆ, ಮತ್ತೊಂದು ಕೈಗೆ ಗೊತ್ತಾಗಬಾರದು ಎಂದು ಕೊಳ್ಳುತ್ತಾರೆ. ಕದ್ದು ಮುಚ್ಚಿ ಸಹಾಯ ಮಾಡುವುದೇ ಇವರಿಗೆ ಖುಷಿ. ಸದಾ ಆತ್ಮ ಸಂತೋಷಕ್ಕಾಗಿ ತುಡಿಯುವ ಮನಸ್ಸು ಇರೋರು ಇವರು. 

ಮೀನ ರಾಶಿ (Pisces)
ದೊಡ್ಡ ಅಧಿಕಾರ, ಹುದ್ದೆ ಅಲಂಕರಿಸಿದ ನಂತರವೂ ಇವರು ಸಿಂಪ್ಲಿಸಿಟಿ (Simplicity) ಬಿಡೋಲ್ಲ. ಒಂದು ರೀತಿ ಇನ್ಫೋಸಿಸ್ (Infosys) ಸಂಸ್ಥಾಪಕಿ ಸುಧಾ ಮೂರ್ತಿ (Sudha Murthy) ಯವರಂತೆ ಸ್ವಭಾವದವರು ಈ ರಾಶಿಯಲ್ಲಿ ಹುಟ್ಟಿರುತ್ತಾರೆ. ಸದಾ ಜನರ ನೋವಿಗೆ ಸ್ಪಂದಿಸುತ್ತಾರೆ. ದೊಡ್ಡವರಿಗೆ ಶಿರ ಭಾಗಿ ವಂದಿಸಲು ಹಿಂದೇಟು ಹಾಕುವುದಿಲ್ಲ. ಅಹಂಕಾರ ಇವರ ಹತ್ತಿರ ಸುಳಿಯೋದು ಸ್ವಲ್ಪ ಕಡಿಮೆಯೇ. ಇನ್ನೊಬ್ಬರು ಹೊಗಳೋದು ಇವರಿಗೆ ಇಷ್ಟವಾಗೋಲ್ಲ. ಜನರು, ಚಪ್ಪಾಳೆ (Claps) ಎಂದರೆ ಅಷ್ಟಕ್ಕಷ್ಟೇ. ಆ ಸರಳ ವ್ಯಕ್ತಿತ್ವದಿಂದಲೇ ಇವರು ಮತ್ತಷ್ಟು ಜನರು ತಮ್ಮ ಸುತ್ತು ಇರುವಂತೆ ನೋಡಿಕೊಳ್ಳುತ್ತಾರೆ. ದುಡ್ಡೇ ದೊಡ್ಡಪ್ಪ ಅನ್ನೋರಲ್ಲ, ವಿನಯ (Humble) ದುಡ್ಡಿನ ಅಪ್ಪ ಅನ್ನೋರು. ಅದಕ್ಕೆ ಈ ರಾಶಿಯವರ ಮುಖದಲ್ಲಿ ನಗುವಿನ ಭೂಷಣ ಸದಾ ರಾರಾಜಿಸಿರುತ್ತದೆ. ಜನರಿಗೆ ಹತ್ತಿರವಾಗಿಯೇ ಇರುತ್ತಾರೆ.

click me!