ಬ್ರಹ್ಮ ಮುಹೂರ್ತದಲ್ಲೆದ್ದು ಆರೋಗ್ಯದ ಜೊತೆ ಅದೃಷ್ಟ ಪಡೆದ್ಕೊಳ್ಳಿ

By Suvarna News  |  First Published Jan 19, 2023, 4:44 PM IST

ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳು. ಇದು ಈಗಿನ ಜನರ ಮಂತ್ರ. ಸೂರ್ಯ ನೆತ್ತಿಗೆ ಬಂದ್ರೂ ಅನೇಕರು ಹಾಸಿಗೆ ಬಿಟ್ಟಿರೋದಿಲ್ಲ. ಶಾಸ್ತ್ರಗಳ ಪ್ರಕಾರ, ಮನುಷ್ಯ ಯಶಸ್ವಿಯಾಗ್ಬೇಕೆಂದ್ರೆ ಸೂರ್ಯೋದಯಕ್ಕಿಂತ ಮೊದಲೇ ಏಳ್ಬೇಕು. 
 


ಬ್ರಹ್ಮ ಮುಹೂರ್ತ ಎಂಬುದನ್ನು ನಾವು ಕೇಳಿದ್ದೇವೆ. ಆದ್ರೆ ಈ ಸಮಯದಲ್ಲಿ ಏಳುವವರು ಬೆರಳೆಣಿಕೆಯಷ್ಟು ಜನರು ಮಾತ್ರ. ಈ ಬ್ರಹ್ಮ ಮುಹೂರ್ತವನ್ನು ಹಿಂದೂ ಧರ್ಮದ ವೇದಗಳು, ಪುರಾಣಗಳು ಮತ್ತು ಗ್ರಂಥಗಳಲ್ಲಿ ಬಹಳ ವಿಶೇಷ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ರಾತ್ರಿಯ ಕೊನೆಯ ಗಂಟೆಯ ನಂತರ ಮತ್ತು ಸೂರ್ಯೋದಯಕ್ಕೆ ಸ್ವಲ್ಪ ಮೊದಲ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಅಂದರೆ ಮುಂಜಾನೆ 4 ರಿಂದ 5 ಗಂಟೆ 30 ನಿಮಿಷದ  ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಬ್ರಹ್ಮ ಎಂದರೆ ದೇವರು ಮತ್ತು ಮುಹೂರ್ತ ಎಂದರೆ ಸಮಯ. ಒಟ್ಟಾರೆ ಇದು ದೇವರ ಸಮಯವಾಗಿದೆ.

ಈ ಮುಹೂರ್ತದ ವಿಶೇಷ ಮಹತ್ವವನ್ನು ನಮ್ಮ ಋಷಿಮುನಿ (Sage) ಗಳು ಹೇಳಿದ್ದಾರೆ. ಅವರ ಪ್ರಕಾರ, ನಿದ್ರೆ (Sleep) ಯಿಂದೆ ಎದ್ದೇಳಲು ಬ್ರಹ್ಮ (Brahma) ಮುಹೂರ್ತ(Muhurta) ದ ಸಮಯ ಉತ್ತಮವಾಗಿದೆ. ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸೌಂದರ್ಯ, ಶಕ್ತಿ, ಜ್ಞಾನ, ಬುದ್ಧಿವಂತಿಕೆ ಮತ್ತು ಆರೋಗ್ಯ ದೊರೆಯುತ್ತದೆ. 

Latest Videos

undefined

ವಾಲ್ಮೀಕಿ ರಾಮಾಯಣದಲ್ಲಿ ಬ್ರಹ್ಮ ಮುಹೂರ್ತದ ಬಗ್ಗೆ ಒಂದು ಕಥೆಯನ್ನು ಹೇಳಲಾಗಿದೆ. ಇದರ ಪ್ರಕಾರ, ಪವನಪುತ್ರ ಹನುಮಂತ ಬ್ರಹ್ಮ ಮುಹೂರ್ತದಲ್ಲಿಯೇ ಅಶೋಕ ವನವನ್ನು ತಲುಪಿದನಂತೆ. ಅಲ್ಲಿ ವೇದಮಂತ್ರಗಳನ್ನು ಪಠಿಸಿದನಂತೆ. ಮಾತೆ ಸೀತೆಯ ಮುಂದೆ ಮಂತ್ರ ಪಠಿಸಿದ ಎನ್ನಲಾಗುತ್ತದೆ. ಧರ್ಮ ಗ್ರಂಥಗಳಲ್ಲಿ ಇದ್ರ ಉಲ್ಲೇಖವಿದೆ.

ಬ್ರಹ್ಮ ಮುಹೂರ್ತಕ್ಕೂ ಪ್ರಕೃತಿಗೂ ಆಳವಾದ ಸಂಬಂಧವಿದೆ. ಈ ಸಮಯದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳು ಎಚ್ಚರಗೊಳ್ಳುತ್ತವೆ. ಅವರ ದಿನ ಆಗ ಶುರುವಾಗುತ್ತದೆ. ಕಮಲದ ಹೂವೂ ಅರಳುತ್ತದೆ. ಕೋಳಿಗಳು ಕೂಗಲು ಪ್ರಾರಂಭಿಸುತ್ತವೆ. ಬ್ರಹ್ಮ ಮುಹೂರ್ತದಲ್ಲಿ ಪ್ರಕೃತಿ ಜಾಗೃತವಾಗುತ್ತದೆ. ನಿದ್ದೆ ಬಿಟ್ಟು ಬ್ರಹ್ಮ ಮುಹೂರ್ತದಲ್ಲಿ ಎದ್ದು ನಿತ್ಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂಬ ಸಂದೇಶವನ್ನು ಪ್ರಕೃತಿ ನಮಗೆ ನೀಡುತ್ತದೆ.

Vastu Tips : ಖಾಲಿಯಿದೆ ಅಂತಾ ಡೈನಿಂಗ್ ಟೇಬಲ್ ತುಂಬಿಸಿಡ್ಬೇಡಿ

ಬ್ರಹ್ಮ ಮುಹೂರ್ತದಲ್ಲಿ ಏಳುವುದ್ರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೆ ಅದೃಷ್ಟ ಕೂಡ ಬದಲಾಗುತ್ತದೆ ಎಂದು ನಂಬಲಾಗಿದೆ. ಬ್ರಹ್ಮ ಮುಹೂರ್ತದಲ್ಲಿ ಪ್ರತಿದಿನ ಏಳುವ ಜನರು ಯಶಸ್ಸನ್ನು ಸಾಧಿಸುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ವಾಸ್ತು ಪ್ರಕಾರ, ಈ ಸಮಯದಲ್ಲಿ ಇಡೀ ಪರಿಸರವು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ನಾವು ಬೆಳಿಗ್ಗೆ ಎದ್ದಾಗ, ಈ ಶಕ್ತಿಯು ನಮ್ಮ ಆಂತರಿಕ ಶಕ್ತಿಯನ್ನು ಸೇರುತ್ತದೆ. ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. ಮನಸ್ಸು ಉತ್ಸಾಹಗೊಳ್ಳುತ್ತದೆ. ಈ ಸಕಾರಾತ್ಮಕ ಶಕ್ತಿಯಿಂದ ನಾವು ಯಾವುದೇ ಕೆಲಸವನ್ನು ಮಾಡಿದ್ರೂ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಸ್ಥಿರತೆ ಬರುತ್ತದೆ.

ಈ ಸಮಯದಲ್ಲಿ ಏಳುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ತೂಕ ಹೆಚ್ಚಾಗುವ ಸಾಧ್ಯತೆ ತುಂಬಾ ಕಡಿಮೆ. ಹಾಗೆ ನೀವು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುವ ಅಪಾಯ ಕೂಡ ಕಡಿಮೆ. 

ಹೆಚ್ಚಿನ ಅಂಕ ಗಳಿಸಬೇಕು, ಬುದ್ಧಿವಂತರಾಗಬೇಕು ಎನ್ನುವ ಮಕ್ಕಳು ಬ್ರಹ್ಮ ಮುಹೂರ್ತದಲ್ಲಿ ಓದುವುದು ಒಳ್ಳೆಯದು. ರಾತ್ರಿಯ ವಿಶ್ರಾಂತಿಯ ನಂತರ ನಾವು ಬೆಳಿಗ್ಗೆ ಎದ್ದಾಗ ದೇಹ ಮತ್ತು ಮನಸ್ಸು ಶಕ್ತಿಯುತ ಮತ್ತು ತಾಜಾವಾಗಿರುತ್ತದೆ. ಇದು ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಅಧ್ಯಯನ ಮಾಡಿದ್ರೆ ಆ ವಿಷ್ಯವನ್ನು ನೀವು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳಬಹುದು.

ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಬ್ರಹ್ಮ ಮುಹೂರ್ತದಲ್ಲಿ ಏಳುವುದು ಅತ್ಯುತ್ತಮ. ಈ ಸಮಯದಲ್ಲಿ ಎದ್ದು ಓಂ ಉಚ್ಚರಿಸಬೇಕು. ಇದು ಮನಸ್ಸಿನ ಅಸ್ವಸ್ಥತೆಗಳನ್ನು ನಿವಾರಿಸುತ್ತದೆ. ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ, ಬ್ರಹ್ಮ ಮುಹೂರ್ತದಲ್ಲಿ ಎದ್ದು ನಡೆಯುವುದರಿಂದ ದೇಹದಲ್ಲಿ ಸಂಜೀವನಿ ಶಕ್ತಿಯ ಸಂವಹನವಾಗುತ್ತದೆ. ಹಾಗಾಗಿಯೇ ಈ ಸಮಯದಲ್ಲಿ ಬೀಸುವ ಗಾಳಿಯನ್ನು ಅಮೃತ ಎನ್ನುತ್ತಾರೆ.

ಪತ್ನಿಗೆ ಮೋಸ ಮಾಡಿ ಬೇರೆಯವರೊಟ್ಟಿಗೆ ಸಂಬಂಧ ಬೆಳೆಸೋರು ಮುಂದಿನ ಜನ್ಮದಲ್ಲಿ ಏನಾಗ್ತಾರೆ?

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದರಿಂದ ಸೌಂದರ್ಯ ಹೆಚ್ಚುತ್ತದೆ. ತಾಜಾತನ ದೇಹದಲ್ಲಿರುತ್ತದೆ. ಬೆಳಿಗ್ಗೆ ತಡವಾಗಿ ಎದ್ದು, ಕೆಲಸ ಮಾಡಲು ಸಮಯವಿಲ್ಲ ಎನ್ನುವವರು ಬ್ರಹ್ಮ ಮುಹೂರ್ತದಲ್ಲಿ ಏಳುವ ಅಭ್ಯಾಸ ಮಾಡಿಕೊಳ್ಳಿ. 

click me!