ಶಬರಿಮಲೆ ಕಾಣಿಕೆ ಎಣಿಕೆಯಲ್ಲಿ ಲೋಪ: ವರದಿಗೆ ಹೈಕೋರ್ಟ್ ಸೂಚನೆ

By Kannadaprabha NewsFirst Published Jan 20, 2023, 11:12 AM IST
Highlights

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭಕ್ತರು ನೀಡಿರುವ ಕಾಣಿಕೆ ಮತ್ತು ಇತರೆ ದೇಣಿಗೆ ಪೊಟ್ಟಣ ಎಣಿಕೆಯಲ್ಲಿ ಏನಾದರೂ ಲೋಪವಾಗಿದೆಯೇ ಎಂಬುದನ್ನು ತನಿಖೆ ನಡೆಸಿ ವರದಿ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಯ ಗುಪ್ತಚರ ವಿಭಾಗಕ್ಕೆ ಹೈಕೋರ್ಟ್‌ ಸೂಚಿಸಿದೆ.

ಕೊಚ್ಚಿ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭಕ್ತರು ನೀಡಿರುವ ಕಾಣಿಕೆ ಮತ್ತು ಇತರೆ ದೇಣಿಗೆ ಪೊಟ್ಟಣ ಎಣಿಕೆಯಲ್ಲಿ ಏನಾದರೂ ಲೋಪವಾಗಿದೆಯೇ ಎಂಬುದನ್ನು ತನಿಖೆ ನಡೆಸಿ ವರದಿ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಯ ಗುಪ್ತಚರ ವಿಭಾಗಕ್ಕೆ ಹೈಕೋರ್ಟ್‌ ಸೂಚಿಸಿದೆ. ಕಾಣಿಕೆಯನ್ನು ಎಣಿಸುವಲ್ಲಿ ಆದ ಲೋಪದ ಕಾರಣ, ಕಾಣಿಕೆ ಹಾಕಿದ ನೋಟುಗಳು ಬಳಸಲಾಗದ ಸ್ಥಿತಿ ತಲುಪಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಸೂಚನೆ ನೀಡಿದೆ.

2 ತಿಂಗಳ ಯಾತ್ರೆಯ ಅವಧಿಯಲ್ಲಿ ದೇಗುಲಕ್ಕೆ 310 ಕೋಟಿ ರು. ಆದಾಯ ಹರಿದು ಬಂದಿದೆ ಎಂದು ಜ.13ರಂದು ದೇವಸ್ವಂ ಮಂಡಳಿ ಹೇಳಿತ್ತು. ಜೊತೆಗೆ ಜಾಗದ ಕೊರತೆಯಿಂದಾಗಿ ಕಾಣಿಕೆ ಹಣವನ್ನು ಕೆಲವೊಂದು ಕೊಠಡಿಗಳಲ್ಲಿ ಹಾಕಿಡಲಾಗಿದೆ. ಅದರ ಪೂರ್ಣ ಎಣಿಕೆಗೆ ಇನ್ನೂ ಹಲವಾರು ದಿನ ಬೇಕಾಗಲಿದೆ ಎಂದು ಮಾಹಿತಿ ನೀಡಿತ್ತು.

ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾದ ಗೃಹ ಸಚಿವ ಆರಗ ಜ್ಞಾನೇಂದ್ರ

ಭಕ್ತರ ಜೊತೆ ಅಸಭ್ಯ ವರ್ತನೆ

ಜನದಟ್ಟಣೆ ನಿರ್ವಹಣೆ ಹೆಸರಲ್ಲಿ ಶಬರಿಮಲೆ ದೇಗುಲದಲ್ಲಿ ಭಕ್ತರನ್ನು ಭದ್ರತಾ ಸಿಬ್ಬಂದಿ ಹಲ್ಲೆ ಮಾಡುವ ರೀತಿಯಲ್ಲಿ ತಳ್ಳಾಡಿದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ, ಅಂಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕೈಗೊಂಡು ತನಗೆ ವರದಿ ಸಲ್ಲಿಸುವಂತೆ ದೇಗುಲದ ಆಡಳಿತ ನಿರ್ವಹಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ಸೂಚಿಸಿದೆ. ಜ.14 ರಂದು ಭಕ್ತರನ್ನು ನಿಯಂತ್ರಿಸುತ್ತಿದ್ದ ಸಿಪಿಎಂನ ಅರುಣ್‌ ಎಂಬ ಸಿಬ್ಬಂದಿಯ ಕಾರ್ಯವೈಖರಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು ಭಕ್ತರ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ತಿಳಿಸಿದೆ.

ಶಬರಿಮಲೆಗೆ ಹದಿನೇಳೇ ದಿನದಲ್ಲಿ 310 ಕೋಟಿ ರೂ. ಆದಾಯ

click me!