ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಪೆರ್ಲದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಎಲ್ಲರೂ ಅಚ್ಚರಿಪಡುವಂತಹ ಘಟನೆಯೊಂದು ನಡೆದಿದೆ.
ಮಂಗಳೂರು (ಡಿ.17): ಇಂದಿನ ಆಧುನಿಕ ಮತ್ತು ವೈಜ್ಞಾನಿಕ ಯುಗವು ದೇವರು, ಭವಿಷ್ಯ ಹಾಗೂ ಮೂಡನಂಬಿಕೆಗಳನ್ಜು ನಂಬದಿರುವ ಕಾಲವಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಪೆರ್ಲದಲ್ಲಿ ಘಟನೆ ದೇವರು ಹಾಗೂ ದೈವದ ನುಡಿಯು ಬಗ್ಗೆ ಎಲ್ಲರೂ ಅಚ್ಚರಿಪಡುವಂತಹ ಘಟನೆಯೊಂದು ನಡೆದಿದೆ. ಅಷ್ಟಮಂಗಲ ಪ್ರಶ್ನೆಗೆ ಉತ್ತರಿಸಿದ ದೈವ ಮಣ್ಣಿನ ಅಡಿಯಲ್ಲು ಪುರಾತನ ಶಿವನ ದೇವಾಲಯ ಇರುವುದನ್ನು ತಿಳಿಸಿದ್ದು, ಅದನ್ನು ಅಗೆದು ನೋಡಿದಾಗ ಅಲ್ಲಿ ದೇವಾಲಯ ಇರುವುದು ಕೂಡ ಕಂಡುಬಂದಿದೆ. ಘಟನೆ ವಿವರ ಇಲ್ಲಿದೆ ನೋಡಿ..
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಪೆರ್ಲದಲ್ಲಿ ನಡೆದ ಪವಾಡದ ಘಟನೆಯಾಗಿದೆ. ಗ್ರಾಮಸ್ಥರಿಂದ ಪುರಾತನ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ನವೀಕರಣಕ್ಕಾಗಿ ಅಷ್ಟಮಂಗಲ ಪ್ರಶ್ನೆ ಮಾಡಿದ್ದಾರೆ. ದೈವಜ್ಞರಾದ ನೆಲ್ಯಾಡಿ ಶ್ರೀಧರ ಗೋರೆ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಅಷ್ಟಮಂಗಲ ಪ್ರಶ್ನೆ ಮಾಡಲಾಗಿದೆ. ಈ ವೇಳೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಪರಿಸರದಲ್ಲಿ ಶಿವನ ಸಾನಿಧ್ಯ ಇದೆ ಎಂದು ಹೇಳಲಾಗಿದೆ. ಈ ದೈವದ ಸೂಚನೆಯ ಮೇರೆಗೆ ಅಲ್ಲಿನ ಜಾಗವನ್ನು ಅಗೆದಾಗ ಮಣ್ಣಿನ ಅಡಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ. ಇದು ವೈಜ್ಞಾನಿಕ ಜಗತ್ತಿನಲ್ಲಿ ದೇವರನ್ನೇ ನಂಬದ ವರ್ಗದವರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಅಬ್ಬಬ್ಬಾ, ಇದೆಂಥಾ ಪವಾಡ! ಕಣ್ಣು ಬಿಟ್ಟ ಶಿವಲಿಂಗ!
ಕಣ್ಣು ಬಿಟ್ಟಿದ್ದ ಶಿವಲಿಂಗ: ಇದಕ್ಕೊಂದು ಅಪವಾದವೆಂಬಂಥ, ಎಲ್ಲ ಭಕ್ತರ ಅಚ್ಚರಿಗೆ ಕಾರಣವಾಗುವಂಥ ಘಟನೆಯೊಂದು ಬೆಂಗಳೂರು ಸಮೀಪದ ಮಾಗಡಿಯ ಶಿವ ದೇವಾಲಯದಲ್ಲಿ ನಡೆದಿದೆ. ಕಲಿಗಾಲದ ಅಂತ್ಯಕ್ಕೆ ಶಿವ ಕಣ್ಣು ಬಿಟ್ಟಿದ್ದಾನೆಂಬ ಸುದ್ದಿ ಹಬ್ಬಿರುವ ಹಿನ್ನೆಲೆ ಮಾಗಡಿ ಪಟ್ಟಣದಲ್ಲಿ ಶುಕ್ರವಾರ ಶಿವಲಿಂಗ ನೋಡಲು ಜನಸಾಗರವೇ ಹರಿದು ಬಂದಿತ್ತು. ಶಿವ ಕಣ್ಣು ಬಿಟ್ಟಿರುವ ಫೋಟೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದಂತೆ ದೇವಾಲಯಕ್ಕೆ ಭಕ್ತರ ದಂಡು ಹೆಚ್ಚಾಗಿದೆ. ಅಕ್ಕಪಕ್ಕದ ಊರುಗಳಿಂದ ಜನ ಅಚ್ಚರಿ ನೋಡಲು ಬಂದಿದ್ದರು. ಈ ದೇವಾಲಯದ ಶಿವಲಿಂಗ ಸಂಜೆ ಹೊತ್ತಿಗೆ ಕೊಂಚ ಹೊತ್ತು ಕಣ್ಣು ತೆರೆದು, ಕೊಂಚ ಸಮಯದ ಬಳಿಕ ಕಣ್ಣು ಮುಚ್ಚಿಕೊಂಡಿರುವ ಪವಾಡ ನಡೆದಿದೆ.
‘ಕಾಂತಾರ 2’ ಸಿನಿಮಾಗೆ ಬೇಕು ವೀರೇಂದ್ರ ಹೆಗ್ಗಡೆ ಅನುಮತಿ: ಈ ಕುರಿತು ದೈವ ಹೇಳಿದ್ದೇನು?
ದೈವದ ನುಡಿ ಮೇಲೆ ನಂಬಿಕೆ: ಇನ್ನು ನಮ್ಮ ದೇಶದಲ್ಲಿ ದೇವರ ನಾಡು ಎಂದು ಕೇರಳ ರಾಜ್ಯವನ್ನು ಕರೆಯುತ್ತೇವೆ. ಆದರೆ, ನಮ್ಮ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರಾವಳಿ ಪ್ರದೇಶವೇ ದೈವದ ನಾಡಾಗಿದೆ. ದೇವರನ್ನು ಕುರಿತಂತ ಆಚಾರ, ವಿಚಾರ, ಸಂಪ್ರದಾಯ ಮತ್ತು ಆಚರಣೆಗಳು ಅತ್ಯಂತ ವಿಶೇಷವವಾಗಿರುತ್ತವೆ. ಹೆಚ್ಚು ಶಿಷ್ಟಾಚಾರ ಪಾಲನೆಯೂ ಕೂಡ ಇಲ್ಲಿರುತ್ತದೆ. ಅದೇ ರೀತಿ ದೈವದ ಕುರಿತಾದ ಚಿತ್ರವನ್ನು ಮಾಡಲಾದ ಕಾಂತಾರ ಸಿನಿಮಾ ಕೂಡ ದೈವದ ಅನುಮತಿ ಮೇರೆಗೆ ಸಿದ್ಧಪಡಿಸಲಾದ ಚಿತ್ರವಾಗಿದೆ. ಈಗ ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಅತ್ಯಂತ ಪ್ರಸಿದ್ಧಿಯನ್ನೂ ಪಡೆದುಕೊಂಡಿದ್ದು, ಕಾಂತಾರ ಪಾರ್ಟ್-2 ಮಾಡಲು ತಯಾರಿ ನಡೆಸುತ್ತಿದ್ದಾರೆ. ರಿಷಬ್ ಶೆಟ್ಟಿ ಮತ್ತು ತಂಡ ಕಾಂತಾರ-2 ಮಾಡಲು ದೈವದ ಅನುಮತಿಯನ್ನು ಕೇಳಿದ್ದಾರೆ. ದೈವ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. ಇದು ವೈಜ್ಞಾನಿಕ ಕಾಲದಲ್ಲಿಯೂ ದೈವವನ್ನು ನಂಬುವಂತಹ ಘಟನೆಗೆ ಸಾಕ್ಷಿಯಾಗಿದೆ.