ದೆವ್ವ, ಭೂತ ಅನ್ನೋದೆಲ್ಲ ಇದೆಯಾ ಅನ್ನೋದು ಎಷ್ಟೋ ವರ್ಷಗಳಿಂದ ಜಿಜ್ಞಾಸೆ ಆಗುತ್ತಲೇ ಇರುವ ವಿಚಾರ. ಆಧ್ಯಾತ್ಮ ಶ್ರೀಗುರು ಸಕಲಮಾ ಈ ಹಿನ್ನೆಲೆಯಲ್ಲಿ ತಮ್ಮ ಇಂಟರೆಸ್ಟಿಂಗ್ ಅನುಭವ ಹಂಚಿಕೊಂಡಿದ್ದಾರೆ.
ಈ ಭೂತ ಪ್ರೇತಗಳ ಬಗ್ಗೆ ನಂಬಿಕೆ, ಅಪನಂಬಿಕೆಗಳು ಎಷ್ಟೋ ಕಾಲದಿಂದ ಹರಿದು ಬಂದಿವೆ. ಕೆಲವೊಂದಿಷ್ಟು ಮಂದಿ ಅದೆಲ್ಲ ಬುಲ್‌ಶಿಟ್ ಎನ್ನುತ್ತಾರೆ. ಇನ್ನೂ ಕೆಲವರು ಅದೆಲ್ಲ ಇದೆ ಅಂತ ಏನೇನೋ ಕಥೆ ಹೇಳ್ತಾರೆ. ಅದರೆ ಇವೆಲ್ಲ ಪ್ರೂವ್ ಮಾಡಲಾಗದ ಸತ್ಯಗಳು. ಅಧ್ಯಾತ್ಮ ಸಾಧಕಿ ಶ್ರೀಗುರು ಸಕಲಮಾ ಈ ಬಗ್ಗೆ ಇಂಟರೆಸ್ಟಿಂಗ್ ಆಗಿರುವ ವಿಚಾರ ಹೇಳಿದ್ದಾರೆ. ಜೊತೆಗೆ ಈ ಬಗೆಗಿನ ತಮ್ಮ ಅನುಭವವನ್ನ ಗೌರೀಶ್ ಅಕ್ಕಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿಕೊಂಡಿದ್ದಾರೆ. ಅವರ ಪ್ರಕಾರ ದೆವ್ವ, ಭೂತ ಅಂತ ಸಾಮಾನ್ಯ ಜನ ನಾಮಕರಣ ಮಾಡುವ ಸೂಕ್ಷ್ಮ ಶರೀರಗಳು ಇದ್ದಾವೆ. ಕರ್ಮದ ಹೊರೆ ಈ ಸೂಕ್ಷ್ಮ ಶರೀರಗಳನ್ನು ಮೇಲಿನ ಲೋಕಕ್ಕೆ ಹೋಗಲು ಬಿಡುವುದಿಲ್ಲ. ಹೀಗಾಗಿ ಅವು ಇಲ್ಲೇ ಸುತ್ತಾಡುತ್ತಾ ಇರುತ್ತವೆ.
ಸಕಲಮಾ ಅವರ ಪ್ರಕಾರ ಆತ್ಮವನ್ನು ಕವರ್ ಮಾಡಿರೋದು ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳು. ಈ ಅಂಶಗಳ ಲೇಯರ್‌ನಿಂದ ಆತ್ಮವನ್ನು ನಾವು ಸುತ್ತವರಿದಿರುತ್ತೇವೆ. ಆತ್ಮವನ್ನು ಕವರ್ ಮಾಡಿರುವ ಈ ಲೇಯರ್ ವ್ಯಕ್ತಿ ಸತ್ತಾಗ ಪೂರ್ತಿ ನಾಶ ಆಗಲ್ಲ. ಇದನ್ನ ಅವರು ಫ್ಲೈಟ್‌ನ ಬ್ಲಾಕ್ ಬಾಕ್ಸ್‌ಗೆ ಹೋಲಿಸುತ್ತಾರೆ. ಫ್ಲೈಟ್ ಹೊತ್ತಿ ಉರಿದರೂ ಆ ಬ್ಲಾಕ್ ಬಾಕ್ಸ್ ಹಾಗೇ ಉಳಿದು ಯಾಕೆ ಫ್ಲೈಟ್ ಕ್ರಾಶ್ ಆಯ್ತು ಅನ್ನೋ ನಿಗೂಡವನ್ನು ರಿವೀಲ್ ಮಾಡುತ್ತಲ್ಲ ಅದೇ ಥರ ಪ್ರತೀ ವ್ಯಕ್ತಿಗೂ ಈ ಥರ ಬ್ಲ್ಯಾಕ್ ಬಾಕ್ಸ್ ಇರುತ್ತೆ. ನಮ್ಮ ದೇಹ ನಾಶ ಆದಮೇಲೂ ಅದು ಇರುತ್ತೆ.
ಪ್ರಸಿದ್ಧ ನಾಟ್ಯಗುರು ಹಿಮಾಲಯ ಪರಂಪರೆಯ ಶ್ರೀವಿದ್ಯಾ ಗುರುಗಳಾದದ್ದು ಹೇಗೆ? ಗುರು ಸಕಲಮಾ ಬಗ್ಗೆ ಒಂದಿಷ್ಟು..
ಆ ಮೆಮೊರಿ ಹೆಚ್ಚಿದರೆ ಆ ಭಾರಕ್ಕೆ ಆತ್ಮ ಮೇಲಿನ ಲೋಕಕ್ಕೆ ಹೋಗುವುದು ಕಷ್ಟ. ಹೀಗಾಗಿ ಅದು ಇಲ್ಲೇ ಸುತ್ತುತ್ತಾ ಇರುತ್ತದೆ. ಸ್ವಾಮಿ ರಾಮರನ್ನು ಒಬ್ಬ ಹೆಣ್ಣುಮಗಳು ಆಕೆ ಡೆತ್ ಬೆಡ್ ನಲ್ಲಿದ್ದಾಗ ನೋಡಲು ಇಷ್ಟ ಪಡುತ್ತಾರೆ. ಸ್ವಾಮಿ ರಾಮರು, 'ಒಂದು ಸಲ ಇಷ್ಟದೇವರ ಹೆಸರು ಹೇಳು ಒಮ್ಮೆ..' ಎಂದು ಆಕೆಯಲ್ಲಿ ಕೇಳುತ್ತಾರೆ. ಆದರೆ ಆಕೆ ಮಾತ್ರ, ಈ ಶರೀರದಲ್ಲಿ ನೋವು, ಕಾಯಿಲೆ ಎಲ್ಲ ಇದೆ. ಹೇಗೆ ದೇವರ ಹೆಸರನ್ನು ಕರೀಲಿ ಎಂದು ಸುಮ್ಮನೆ ಗೋಳಾಡುತ್ತಾರೆ. ಕೊನೆಗೂ ಆಕೆಗೆ ದೇವರ ಹೆಸರು ಹೇಳಲು ಸಾಧ್ಯವಾಗದೇ ಸಾಯುತ್ತಾರೆ.
ಇರಲಿ, ದೆವ್ವ ಅಂತ ಕರಿಯೋ ಸೂಕ್ಷ್ಮ ಶರೀರದ ಅನುಭವ ನನಗೂ ಒಮ್ಮೆ ಆಗಿತ್ತು ಎಂದು ಹೇಳುವ ಗುರು ಸಕಲಮಾ ಆ ಇಂಟರೆಸ್ಟಿಂಗ್ ಕಥೆಯನ್ನು ಹೇಳೋದು ಹೀಗೆ; 'ಆಗ ನಾನು ಮತ್ತು ನನ್ನ ಪತಿ ಯೋಗಾಚಾರ್ಯ ಪಟ್ಟಾಭಿರಾಂ ಗುರೂಜಿ ನ್ಯೂಯಾರ್ಕ್ ನಲ್ಲಿ ಸ್ವಾಮಿ ರಾಮರ ಸಂದೇಶಗಳನ್ನು ಜನರಲ್ಲಿ ಪಸರಿಸುವ ಕೆಲಸ ಮಾಡುತ್ತಿದ್ದೆವು. ಸ್ನೇಹಿತರ ಮನೆಯಲ್ಲಿ ತಂಗಿದ್ದೆವು. ರಾತ್ರಿ ಊಟ ಮಾಡಿ ವಾಕಿಂಗ್ ಹೋಗಿ ಬಂದು ೧೦ ಗಂಟೆಗೆ ಮಲಗಲು ಹೋದೆವು. ಹಾಗೆ ಮಲಗಿದ್ದಾಗ ಒಂದು ಹೊತ್ತಲ್ಲಿ ಎಚ್ಚರ ಆಯ್ತು. ಸ್ಟ್ರೀಟ್ ಲೈಟ್ ಮನೆಯ ಒಳಗೆ ಬರುತ್ತಿತ್ತು. ತೆರೆದ ಕಿಟಕಿಯ ಬಳಿ ಒಂದು ನೆರಳು ಕಾಣಿಸಿತು. ಅದು ಬೆಳಕಿನ ಶರೀರವಾಗಿತ್ತು. ನನಗೆ ಮೊದಲ ನೋಟಕ್ಕೆ ಗಾಬರಿ ಆಗಲಿಲ್ಲ. ಆಮೇಲೆ ಅದು ಮೌನದಲ್ಲಿ ನನ್ನ ಜೊತೆ ಸಂವಾದ ಮಾಡಿತು.
ಕನಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದೆಯೇ? ಹಾಗಿದ್ರೆ ಎಚ್ಚರ
ಒಂದು ಹಂತದಲ್ಲಿ 'ನಂಗೆ ನಿಮ್ಮ ಬಾಡಿ ಒಳಗೆ ಬರಬೇಕು' ಅಂದುಬಿಟ್ಟಿತು. ತಕ್ಷಣ ಸಿಕ್ಕಾಪಟ್ಟೆ ಭಯವಾಯ್ತು. ಬೇರೆ ದಾರಿ ಕಾಣದೇ ಗಾಯತ್ರಿ ಮಂತ್ರ ಹೇಳಲು ಶುರುವಾಗಿದೆ. ಡಿಸಾಲ್ವ್ ಆಗಿ ಹೊರಟು ಹೋಯ್ತು. ಆಮೇಲೆ ಪತಿ ಪಟ್ಟಾಭಿರಾಂ ಅವರನ್ನು ಎಬ್ಬಿಸಿ ವಿಚಾರ ತಿಳಿಸಿದೆ. ಅವರು ನನ್ನನ್ನು ಸಮಾಧಾನಿಸಿ ಮಲಗಿಸಿದರು.
ಮರುದಿನ ಆ ಮನೆಯವರಿಗೆ ಒಂದು ನಿರ್ದಿಷ್ಟ ಮರದ ಬಳಿ ಆ ಸೂಕ್ಷ್ಮ ಶರೀರಕ್ಕೆ ಆಹಾರ ನೀಡಲು ಹೇಳಿದರು. ಆ ಬಳಿಕ ಅವರು ಹೇಳಿದ್ದು, ಆ ಸೂಕ್ಷ್ಮ ಶರೀರ ನನ್ನ ಬಳಿಕ ಅವರ ಬಳಿ ಹೋಗಿದೆ. ತನ್ನ ದಾರುಣ ಕಥೆಯನ್ನು, ಹಸಿವನ್ನು ತೋಡಿಕೊಂಡಿದೆ. ಅದರ ಹಸಿವು ನಿವಾರಿಸುವ ಆಶ್ವಾಸನೆಯನ್ನು ಗುರೂಜಿ ನೀಡಿದ ಬಳಿಕ ಹೊರಟು ಹೋಗಿದೆ.
ಆ ಬಳಿಕ ನಾವು ಆ ಜಾಗದಿಂದ ಹೊರಟ ಕಾರಣ ಮುಂದೇನಾಯ್ತೋ ತಿಳಿಯಲಿಲ್ಲ ಎನ್ನುತ್ತಾರೆ ಗುರು ಸಕಲಮಾ.