ಮೂಕಾಂಬಿಕೆ ದರ್ಶನ ಬಳಿಕ ಪಕ್ಷ ಸ್ಥಾಪಿಸಿ ಸಿಎಂ ಆಗಿದ್ದ ಎಂಜಿಆರ್, AIADMK ಚಿಹ್ನೆಗೂ ಇದೆ ಕೊಲ್ಲೂರು ನಂಟು

Published : Jun 12, 2026, 09:17 PM IST
Untold Story of MGR Mookambika Temple

ಸಾರಾಂಶ

ಸಿಎಂ ವಿಜಯ್ ಮೂಕಾಂಬಿಕೆ ದರ್ಶನ ಇದೀಗ ತಮಿಳುನಾಡು ಹಾಗೂ ಕೊಲ್ಲೂರು ನಡುವಿನ ಸಂಬಂಧ, ದೇವಿ ಶಕ್ತಿ ಕುರಿತು ಹಲವು ಇಂಟ್ರೆಸ್ಟಿಂಗ್ ಮಾಹಿತಿ ಬಯಲಾಗಿದೆ. ದೇವಸ್ಥಾನದ ಅರ್ಚಕ ಪೂರೋಹಿತರು ಮಾಹಿತಿ ನೀಡಿದ್ದಾರೆ. 

ಉಡುಪಿ (ಜೂ.12) ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊಸೆಫ್ ಕೊಲ್ಲೂರು ಮೂಕಾಂಬಿಗೆ ದೇವಿ ದರ್ಶನ ಪಡೆದಿದ್ದಾರೆ. ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ವಿಜಯ್ ಭಕ್ತಿಯ ಕಾಣಿಕೆಯಾಗಿ ಬೆಳ್ಳಿ ಖಡ್ಗ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದೇವಿ ಆಶೀರ್ವಾದದಿಂದ ತಮಿಳುನಾಡಿನಲ್ಲಿ ಪಕ್ಷ ಸ್ಥಾಪಿಸಿ, ಮುಖ್ಯಮಂತ್ರಿಯಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ತಮಿಳುನಾಡಿನ ಮುಖ್ಯಮಂತ್ರಿ ಎಂಜಿಆರ್ ಹಿಂದೆ ಇದೇ ಮೂಕಾಂಬಿಗೆ ಶಕ್ತಿ ಅಡಗಿದೆ. ವಿಶೇಷ ಅಂದರೆ ಎಂಜಿಆರ್ ಪಕ್ಷ ಸ್ಥಾಪನೆ ಮಾಡಿದ್ದು ಮೂಕಾಂಬಿಕೆ ದರ್ಶನ ಪಡೆದ ಬಳಿಕ, ಇಷ್ಟೇ ಅಲ್ಲ ಪಕ್ಷದ ಚಿಹ್ನೆ ಹಿಂದೆ ಮೂಕಾಂಬಿಕೆ ಪವಾಡ ಆಡಗಿದೆ.

ಎಂಜಿಆರ್ ಸಿಎಂ ಆದ ಹಿಂದೆ ಮೂಕಾಂಬಿಕೆ ಶಕ್ತಿ

ಕೊಲ್ಲೂರು ಮೂಕಾಂಬಿಕೆ ದೇಗುಲದ ಪುರೋಹಿತರಾದ ಸುರೇಶ್ ಭಟ್ ಕೆಲ ರೋಚಕ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾಯದಲ್ಲಿ ಜನಪ್ರಿಯ ನಟನಾಗಿ ಭಾರಿ ಪ್ರಭಾವ ಹೊಂದಿದ್ದ ಎಂಜಿಆರ್ ಶೂಟಿಂಗ್‌ಗಾಗಿ ಮಣಿಪಾಲಕ್ಕೆ ಆಗಮಿಸಿದ್ದರು. ಮಣಿಪಾಲದಲ್ಲೇ ತಂಗಿದ್ದ ಎಂಜಿಆರ್, ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಆಗಮಿಸಿದ್ದರು. ದರ್ಶನ ಪಡೆದ ಎಂಜಿಆರ್ ಯಶಸ್ವಿಯಾಗಿ ಶೂಟಿಂಗ್ ಮುಗಿಸಿದ್ದರು.

ಎಂಜಿಆರ್ ಸ್ಥಾಪಿಸಿದ ಎಐಎಡಿಎಂಕೆ ಪಕ್ಷದ ಚಿಹ್ನೆ

ಶೂಟಿಂಗ್ ಮುಗಿಸಿ ಮರಳುವಾಗ ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸಿತ್ತು. ತಮಿಳುನಾಡಿಗೆ ಮರಳಿದ ಎಂಜಿಆರ್ ಮೂಕಾಂಬಿಕೆ ಆಶೀರ್ವಾದಿಂದ ದೃಢ ಸಂಕಲ್ಪ ಮಾಡಿ ಎಐಎಡಿಎಂಕೆ ಪಕ್ಷ ಸ್ಥಾಪಿಸಿದ್ದರು. ಮೂಕಾಂಬಿಕೆ ದರ್ಶನದ ವೇಳೆ ಎಂಜಿಆರ್ ಗೋಪುರದ ಮೇಲಿನ ಚಿಹ್ನೆ ಗಮನಿಸಿದ್ದರು. ದೇಗುಲದ ಗೋಪುರದ ಮೇಲೆ ಎರಡು ಎಲೆಯ ಚಿಹ್ನೆ ಇದೆ. ಇದನ್ನೇ ಪಕ್ಷದ ಚಿಹ್ನೆಯಾಗಿ ಮಾಡಿದ್ದರು. ಬಳಿಕ ಪವಾಡವೇ ನಡೆದಿತ್ತು. ಎಂಜಿಆರ್ ಅಭೂತಪೂರ್ವ ಗೆಲುವು ದಾಖಲಿಸಿದ್ದರು. ಎಂಜಿಆರ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಕೊಲ್ಲೂರು ಮೂಕಾಂಬಿಕೆಗೆ ಆಗಮಿಸಿ ಚಿನ್ನದ ಖಡ್ಗ ಕಾಣಿಕೆಯಾಗಿ ಅರ್ಪಿಸಿದ್ದರು ಎಂದು ಸುರೇಶ್ ಭಟ್ ಮಾಹಿತಿ ನೀಡಿದ್ದಾರೆ.

1977ರ ವರಗೆ ಖಡ್ಗ ಕೊಟ್ಟ ಇತಿಹಾಸ ಇಲ್ಲ

1977ನೇ ಇಸವಿಯ ವರೆಗೆ ಕೊಲ್ಲೂರೂ ಮೂಕಾಂಬಿಕೆಗೆ ಯಾರು ಕೂಡ ಖಡ್ಗ ಕೊಟ್ಟ ಇತಿಹಾಸ ಇಲ್ಲ. ಎಂಜಿಆರ್ ಸಿಎಂ ಆಗುವ ಪೂರ್ವದಲ್ಲಿ ಅವರಿಗೆ ಅಭಿಮಾನಿಗಳು ಖಡ್ಗ ನೀಡಿದ್ದರು. ಮಧುರೈ ವೀರನ್ ನಾಡೋಡಿ ಮಣ್ಣನ್ ಚಿತ್ರದಲ್ಲಿ ನಟಿಸಿದ್ದಕ್ಕೆ ಅಭಿಮಾನಿಗಳು ಕಾಣಿಕೆ ನೀಡಿದ್ದರು. ಇಲ್ಲಿ ಖಡ್ಗಕೊಟ್ಟ ನಂತರ ಅವರು ಸಿಎಂ ಆದರು. ಆಮೇಲೆ ಸುಮಾರು ನೂರು ಬೆಳ್ಳಿಯ ಖಡ್ಗಗಳು ಇಲ್ಲಿಗೆ ಕಾಣಿಕೆಯಾಗಿ ಬಂದಿದೆ. ಮೂರು ಚಿನ್ನದ ಖಡ್ಗಗಳು ಬಂದಿವೆ. ಖಡ್ಗ ನೀಡುವುದು ವಿಜಯದ ಸಂಕೇತ ಇರಬಹುದು. ರಾಜಕಾರಣಿಯಾದ ಕಾರಣ ಶತ್ರು ಸಂಹಾರದ ಸಂಕಲ್ಪ ಮಾಡಿಯೂ ಕೊಟ್ಟಿರಬಹುದು ಎಂದು ಸುರೇಶ್ ಭಟ್ ಹೇಳಿದ್ದಾರೆ.

ವಿಜಯ್ ಕೈ ಗೆ ದಾರ ಕಟ್ಡಿದ್ದು ಯಾಕೆ?

ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದ ಬಳಿಕ ಜೊಸೆಫ್ ವಿಜಯ್ ಕೈಗೆ ದಾರ ಕಟ್ಟಿದ್ದರು. ಈ ಕುರಿತು ಸುರೇಶ್ ಭಟ್ ಮಾಹಿತಿ ನೀಡಿದ್ದಾರೆ. ರಾಜಕಾರಣಿಗಳು ಬಂದಾಗ ದಾರಕಟ್ಟುವ ಪದ್ಧತಿ ಇದೆ. ಎದುರಾಳಿಗಳ ದೃಷ್ಟಿ ಆಗದೆ ಶ್ರೀರಕ್ಷೆ ಸಿಗಲಿ ಎಂದು ದಾರ ಕಟ್ಟುತ್ತೇವೆ. ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎಲ್ಲರಿಗೂ ನಾವು ದಾರ ಕಟ್ಟಿದ್ದೇವೆ. ನಿಮಗೆ ದಾರ ಕಟ್ಟಬಹುದೇ ಎಂದು ವಿಜಯ್ ಬಳಿ ಕೇಳಿದ್ದೆ. ಇದಕ್ಕೆ ವಿಜಯ್ ಸಮ್ಮತಿಸಿದ್ದರು. ಹೀಗಾಗಿ ದಾರ ಕಟ್ಟಿದ್ದೇವೆ ಎಂದು ದೇಗುಲದ ಪುರೋಹಿತರಾದ ಸುರೇಶ್ ಭಟ್ ಹೇಳಿದ್ದಾರೆ.

 

PREV
Read more Articles on
click me!

Recommended Stories

ಸಾವಿನ ನಂತರ ಆತ್ಮದ 13 ದಿನಗಳ ನಿಗೂಢ ಪಯಣ ಹೇಗಿರುತ್ತೆ; ಗರುಡ ಪುರಾಣ ಏನು ಹೇಳುತ್ತೆ?
Mahalakshmi Yoga: ಕುಬೇರನ ಕೃಪೆಯಿಂದ ಮಹಾಲಕ್ಷ್ಮಿ ಯೋಗ, ಈ 4 ರಾಶಿಗಳಿಗೆ ದುಡ್ಡಿನ ಸುರಿಮಳೆ!