ಬ್ರಹ್ಮಮುಹೂರ್ತದಲ್ಲಿ ಎದ್ದು ಈ ಕೆಲಸ ಮಾಡಿ… ನಿಮ್ಮ ಜೀವನ ಬದಲಾಗುತ್ತೆ!

Published : Jun 08, 2026, 10:46 PM IST
Brahma Muhurtham

ಸಾರಾಂಶ

ಬೆಳಿಗ್ಗೆ ಎದ್ದ ತಕ್ಷಣ ಅಂಗೈಗಳನ್ನು ನೋಡುವ ಸಂಪ್ರದಾಯವನ್ನು ಇನ್ನೂ ಅನೇಕ ಮನೆಗಳಲ್ಲಿ ಅನುಸರಿಸಲಾಗುತ್ತಿದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಅಂಗೈಗಳನ್ನು ನೋಡುವುದರಿಂದ ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. 

ಬ್ರಹ್ಮಮುಹೂರ್ತದಲ್ಲಿ ಎದ್ದು ಈ ಕೆಲಸ ಮಾಡಿ

ಅನೇಕ ಜನರು ಬೆಳಿಗ್ಗೆ ಎದ್ದಾಗ ಮೊದಲು ತಮ್ಮ ಅಂಗೈಗಳನ್ನು ನೋಡುತ್ತಾರೆ. ಈ ಸಂಪ್ರದಾಯವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಿರಿಯರು ಮಕ್ಕಳು ಎದ್ದ ತಕ್ಷಣ ತಮ್ಮ ಅಂಗೈಗಳನ್ನು ನೋಡುವಂತೆ ಸಲಹೆ ನೀಡುತ್ತಾರೆ. ಇದು ದಿನಕ್ಕೆ ಶುಭ ಆರಂಭ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಜ್ಯೋತಿಷಿಗಳು ಹೇಳುವಂತೆ ಬೆಳಿಗ್ಗೆ ಎದ್ದ ತಕ್ಷಣ, ಮೊದಲು ಎರಡೂ ಕೈಗಳನ್ನು ಒಟ್ಟಿಗೆ ಉಜ್ಜಬೇಕು, ನಂತರ ಅಂಗೈಗಳನ್ನು ನೋಡಬೇಕು. ನಾವು ನಮ್ಮ ಅಂಗೈಗಳನ್ನು ನೋಡಿದಾಗ, ಲಕ್ಷ್ಮಿ, ಸರಸ್ವತಿ ಮತ್ತು ಹಾಗೂ ಎಲ್ಲಾ ದೇವರ ರೂಪಗಳನ್ನು ನೆನಪಿಸಿಕೊಳ್ಳುತ್ತೇವೆ. ಇದು ಸಕಾರಾತ್ಮಕ ಆಲೋಚನೆಗಳೊಂದಿಗೆ ದಿನವನ್ನು ಪ್ರಾರಂಭಿಸುವಂತೆ ಮಾಡುತ್ತದೆ. ಇದರಿಂದ ನಿಮ್ಮ ದಿನವಿಡೀ ಅದ್ಭುತವಾಗಿರುತ್ತದೆ.

ಬೆಳಿಗ್ಗೆ ಎದ್ದ ನಂತರ ಮೊದಲು ಏನು ಮಾಡಬೇಕು?

ನಿಮ್ಮ ಕೈಗಳನ್ನು ಒಟ್ಟಿಗೆ ಉಜ್ಜಿಕೊಂಡು ನಿಮ್ಮ ಅಂಗೈಗಳನ್ನು ನೋಡಬೇಕು.

ಈ ಮಂತ್ರವನ್ನು ಪಠಿಸಿ

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ ।ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಮ್ ॥

ನಿಮ್ಮ ಅಂಗೈಗಳನ್ನು ನೋಡುವುದರಿಂದ ಏನು ಪ್ರಯೋಜನ?

ಇದರಿಂದ ನಿಮ್ಮ ದಿನವಿಡೀ ಶುಭವಾಗಿರುತ್ತದೆ ಮತ್ತು ಮನಸ್ಸಿಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ.

ಬ್ರಹ್ಮಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳುವುದು ಏಕೆ ಉತ್ತಮ?

ಶಾಸ್ತ್ರಗಳ ಪ್ರಕಾರ, ಬ್ರಹ್ಮಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳುವುದು ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯಕರವಾಗಿರಿಸುತ್ತದೆ.

ಬ್ರಹ್ಮಮುಹೂರ್ತದಲ್ಲಿ ಎಚ್ಚರಗೊಳ್ಳಲು ಸಾಧ್ಯವಾಗದವರು ಏನು ಮಾಡಬೇಕು?

ಬ್ರಹ್ಮಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳುವುದು ತುಂಬಾನೆ ಉತ್ತಮ. ಆದರೆ, ಕೆಲವು ಕಾರಣಗಳಿಂದ ಬ್ರಹ್ಮಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳಲು ಸಾಧ್ಯವಾಗದವರು ಸೂರ್ಯೋದಯಕ್ಕೆ ಮುಂಚಿತವಾಗಿ ಎಚ್ಚರಗೊಳ್ಳಲು ಶ್ರಮಿಸಬೇಕು. ಸೂರ್ಯೋದಯದ ನಂತರ ದೀರ್ಘಕಾಲ ಮಲಗುವುದು ಸೂಕ್ತವಲ್ಲ. ಶಾಸ್ತ್ರದ ಪ್ರಕಾರ ಇದು ಅಶುಭವಾಗಿದೆ. ಇದರಿಂದ ಜೀವನದಲ್ಲಿ ನೀವು ಹಿಂದಿ ಬೀಳುತ್ತೀರಿ. ಜೀವನದಲ್ಲಿ ಯಾವುದೇ ರೀತಿಯ ಪ್ರಗತಿ ಸಾಧ್ಯವಿಲ್ಲ. ಇದಲ್ಲದೇ ನೀವು ಬೆಳಿಗ್ಗೆ ಎದ್ದ ತಕ್ಷಣ ಅಂಗೈಯನ್ನು ನೋಡಿದ ಬಳಿಕ ಭೂಮಿ ತಾಯಿಗೆ ನಮಸ್ಕರಿಸಬೇಕು. ಹಿಂದೆ ಶ್ರೀರಾಮನು ಕೂಡ ಇದನ್ನೆ ಮಾಡುತ್ತಿದ್ದನು ಎನ್ನಲಾಗಿದೆ. ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ಶಿಸ್ತಿನ ಜೀವನವನ್ನು ನಡೆಸಲು ನಮ್ಮ ಧರ್ಮ ಗ್ರಂಥಗಳಲ್ಲಿ ಹಲವಾರು ಉದಾಹರಣೆಗಳು ಸಹ ಇವೆ. ಇವುಗಳನ್ನು ನೀವು ನಿಮ್ಮ ಜೀವನದಲ್ಲಿ ಪಾಲಿಸಿದ್ದೇ ಆದರೆ, ಜೀವನ ಸಂಪೂರ್ಣವಾಗಿ ಬದಲಾಗುತ್ತದೆ.

PREV
Read more Articles on
click me!

Recommended Stories

ಕನಸಿನಲ್ಲಿ ನೋಟಿನ ಮಳೆಯಾಗೋದನ್ನು ನೋಡಿದ್ರಾ? ಹಾಗಿದ್ರೆ ಇರಲಿ ಎಚ್ಚರ
ಕೆಲವೇ ನಿಮಿಷಗಳು ಬಾಕಿ, ಸಂಜೆ 5:47 ರಿಂದ ಈ ರಾಶಿಗೆ ದಾರಿದ್ರ್ಯ ಆರಂಭ, ಶುಕ್ರ ಸಂಚಾರದಿಂದ ಬಡತನ